Thursday, December 18, 2014

Daily Crime Reports As on 18/12/2014 at 17:00 Hrs

ಅಪಘಾತ ಪ್ರಕರಣಗಳು
  • ಬೈಂದೂರು: ದಿನಾಂಕ 18-12-2014 ರಂದು ಬೆಳಿಗ್ಗೆ ಫಿರ್ಯಾದಿದಾರರಾದ ಫಯಾಜ್‌ ಆಲಿ (40) ತಂದೆ: ದಿ. ಹಾಜಿ ಅಬುಬಕ್ಕರ್‌ ವಾಸ: ಯೋಜನ ನಗರ ಬೈಂದೂರು ಉಪ್ಪುಂದ ಗ್ರಾಮ ಎಂಬವರು ತನ್ನ ಕಾರಿನಲ್ಲಿ ಶೀರೂರು ಕಡೆಯಿಂದ ಬೈಂದೂರು ಕಡೆಗೆ ಹೊರಟು 8:45 ಗಂಟೆಗೆ ಪಡುವರಿ ಗ್ರಾಮದ ಒತ್ತಿನೆಣೆ ಎಂಬಲ್ಲಿ ರಾ.ಹೆ 66 ನೇ ಡಾಮಾರು ರಸ್ತೆಯ ತಿರುವಿನಲ್ಲಿ ತಲುಪುವಾಗ ಫಿರ್ಯಾದಿದಾರರ ಮುಂದಿನಿಂದ ಬೈಂದೂರು ಕಡೆಗೆ ರಾ.ಹೆ 66 ರಲ್ಲಿ ಹೋಗುತ್ತಿದ್ದ ಕೆಎ 20 ಬಿ 1407 ನೇ HMMMS ಶಾಲಾ ವಾಹನ ರಸ್ತೆಯಲ್ಲಿ ಮಗುಚಿ ಬಿದ್ದಿದ್ದು ಸದ್ರಿ ವಾಹನದಲ್ಲಿದ್ದ 3 ಮಕ್ಕಳಿಗೆ ತೀವೃ ತರಹದ ರಕ್ತಗಾಯವಾಗಿದ್ದು ಒಂದು ಹುಡುಗಿಯ ಕೈತುಂಡಾಗಿರುತ್ತದೆ ಹಾಗೂ ಶಾಲಾ ವಾಹನದಲ್ಲಿದ್ದ ಇತರ ಸುಮಾರು 20 ಜನ ಮಕ್ಕಳಿಗೆ ಸಹ ರಕ್ತಗಾಯವಾಗಿರುತ್ತದೆ ಗಾಯಗೊಂಡ ಎಲ್ಲಾ ಮಕ್ಕಳನ್ನು ಅಂಬುಲೆನ್ಸ ವಾಹನದಲ್ಲಿ ಚುಕಿತ್ಸೆಯ ಬಗ್ಗೆ ಆಸ್ಪತ್ರೆಗೆ ಕಳುಹಿಸಲಾಗಿದೆ ಸದ್ರಿ ಅಪಘತಕ್ಕೆ ಕೆಎ 20 ಬಿ 1407 ನೇ HMMMS  ಶಾಲಾ ವಾಹನದ ಚಾಲಕನ ಅಜಾಗರೂಕತೆಯ ಚಾಲನೆ ಹಾಗೂ ಶಾಲಾ ಮಕ್ಕಳನ್ನು ಶಾಲಾ ವಾಹನದಲ್ಲಿ ಸುರಕ್ಷಿತವಾಗಿ ಕರೆದುಕೊಂಡು ಹೋಗುವ ಕುರಿತು ಸೂಕ್ತ ಮೇಲುಸ್ತುವಾರಿಯನ್ನು ಮಾಡದ ಶಾಲಾ ಆಡಳಿತ ಮಂಡಳಿಯ ಬೇಜವಬ್ದಾರಿಯು ಕಾರಣವಾಗಿದ್ದು ಸದ್ರಿ ವಾಹನದ ಚಾಲಕ ಹಾಗೂ HMMMS ಸ್ಕೂಲ್‌ನ ಆಡಳಿತ ಮಂಡಳಿಯ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಫಯಾಜ್‌ ಆಲಿ ರವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 252/2014 ಕಲಂ 279, 337, 338 ಜೊತೆಗೆ 34 ಐ.ಪಿ.ಸಿ, 177 ಮೋಟಾರು ವಾಹನ ಕಾಯ್ದೆಯಂತೆ ಪ್ರಕರಣ ದಾಖಲಿಸಲಾಗಿದೆ.
  • ಕಾರ್ಕಳ: ದಿನಾಂಕ 17/12/2014 ರಂದು 16:30 ಗಂಟೆಗೆ ಪಿರ್ಯಾದಿದಾರರಾದ ಮುನಿಯಪ್ಪ 35 ವರ್ಷ ತಂದೆ: ರಾಮಕೃಷ್ಣಪ್ಪ, ವಾಸ ಸಂಪೆಗೇರಿ, ಮಾಲೂರು ತಾಲೂಕು, ಕೋಲಾರ ಜಿಲ್ಲೆ ಎಂಬವರು ಕಾರ್ಕಳ ತಾಲೂಕಿನ ಬೈಲೂರು ಗ್ರಾಮದ ಬೈಲೂರು ಎಂಬಲ್ಲಿ ಕಾರ್ಕಳ ಕಡೆಯಿಂದ ಉಡುಪಿ ಕಡೆಗೆ ಕಾರ್ಕಳ-ಉಡುಪಿ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಬಸ್ಸು ನಂಬ್ರ ಕೆಎ.01.ಡಿ.3326 ನೇದನ್ನು ಚಲಾಯಿಸಿಕೊಂಡು ಹೋಗುವಾಗ ಉಡುಪಿ ಕಡೆಯಿಂದ ಕಾರ್ಕಳ ಕಡೆಗೆ ಮೋಟಾರು ಸೈಕಲ್ ನಂಬ್ರ ಕೆಎ.20.ಕ್ಯೂ6306 ನೇಯದರ ಸವಾರನು ತನ್ನ ಮೋಟಾರು ಸೈಕಲನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಯಲ್ಲಿ ಸವಾರಿ ಮಾಡಿಕೊಂಡು ಬಂದು, ಬಸ್ಸಿಗೆ ಢಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್ ಸವಾರ ಮೋಸಿನ್ ಎಂಬವರ ತಲೆಯ ಎಡಭಾಗಕ್ಕೆ ಹಾಗೂ ಮೈಕೈಗೆ ರಕ್ತ ಗಾಯವಾಗಿರುತ್ತದೆ ಎಂಬುದಾಗಿ ಮುನಿಯಪ್ಪ ರವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 208/2014 ಕಲಂ 279, 337 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಲಾಗಿದೆ.
ಕಳವು ಪ್ರಕರಣ
  • ಕಾರ್ಕಳ: ದಿನಾಂಕ 17/12/2014 ರಂದು 20:00 ಗಂಟೆಯಿಂದ 18/12/2014 ರ ಬೆಳಗ್ಗೆ 05:30 ಗಂಟೆಯ ಮಧ್ಯೆ ಕಾರ್ಕಳ ಕಸಬ ಗ್ರಾಮದ ಅನಂತಶಯನ ಬಳಿ ಇರುವ ಶ್ರೀ ವಿಶ್ವೇಶ್ವರ ವೇಣುಗೋಪಾಲ ದೇವಸ್ಥಾನದ ಮಾಡಿನ ಹೆಂಚು ಯಾರೋ ಕಳ್ಳರು ತೆಗೆದು ಹಗ್ಗದ ಸಹಾಯದಿಂದ ಒಳಗಿಳಿದು, ದೇವರ ಕೋಣೆಯ ಗರ್ಭಗುಡಿಯ ಬಾಗಿಲಿಗೆ  ಅಳವಡಿಸಿದ ಬೀಗವನ್ನು ಮುರಿದು ಒಳ ಪ್ರವೇಶಿಸಿ ಕಾಣಿಕೆ ಡಬ್ಬಿಯಲ್ಲಿದ್ದ ನಗದು ಸುಮಾರು ರೂ 25,000/- ಹಣ, 7 ಹೆಡೆಯ ನಾಗನ ಚಿನ್ನದ ಮೂರ್ತಿಯ ಬೆಳ್ಳಿಯ ಪ್ರಭಾವಳಿ ಸಹಿತ, ಬೆಳ್ಳಿಯ ದುರ್ಗಾದೇವಿಯ ಮೂರ್ತಿ ಹಾಗೂ ಒಂದು ಹೆಡೆಯ ನಾಗನ ಬೆಳ್ಳಿಯ ಮೂರ್ತಿ 8 ಬೆಳ್ಳಿಯ ಮೊಟ್ಟೆ ಸಹಿತ ಒಟ್ಟು 1,25,000/- ರೂಪಾಯಿ ಬೆಲೆ ಬಾಳುವ ಚಿನ್ನದ ಹಾಗೂ ಬೆಳ್ಳಿಯ ಸೊತ್ತುಗಳು ಸಹಿತ ಒಟ್ಟು 1,50,000/- ಮೌಲ್ಯದ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ ಎಂಬುದಾಗಿ ಪ್ರಸನ್ನ ರಘುನಾಥ ಕೈಲಾಜೆ, 50 ವರ್ಷ,ತಂದೆ: ದಿ. ಕೈಲಾಜೆ ರಘುನಾಥ ಭಟ್, ವಾಸ: ಶ್ರೀ ವಿಶ್ವೇಶ್ವರ ವೇಣುಗೋಪಾಲ ದೇವಸ್ಥಾನ, ಅನಂತಶಯನ, ಕಾರ್ಕಳ ರವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 207/2014 ಕಲಂ 457, 380 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಲಾಗಿದೆ.

No comments: