Thursday, November 27, 2014

Daily Crimes Reported as On 27/11/2014 at 17:00 Hrs


ಅಸ್ವಾಭಾವಿಕ ಮರಣ ಪ್ರಕರಣ
  • ಗಂಗೊಳ್ಳಿ:ಪಿರ್ಯಾದಿದಾರರಾದ ಮಹಾಬಲ (53) ತಂದೆ:ಗುಡ್ಡಿ ಶೇಷು ಮರಕಾಲ, ವಾಸ:ಲಿಂಗಜ್ಜನ ಮನೆ, ಗೊಪಾಡಿ ಗ್ರಾಮ, ಕುಂದಾಪುರ ತಾಲೂಕುರವರ ಮಗ ಮಂಜುನಾಥ (25) ಎಂಬವನು “ಅನುಕೇಶವ” ಎಂಬ ಮೀನುಗಾರಿಕೆ ಬೋಟ್‌ನಲ್ಲಿ ಮೀನುಗಾರಿಕೆಯ ಕೆಲಸ ಮಾಡುತ್ತಿದ್ದು, ದಿನಾಂಕ:25/11/2014  ರಂದು ರಾತ್ರಿ 10:00 ಗಂಟೆಗೆ ಗಂಗೊಳ್ಳಿಯ ಬಂದರಿನಲ್ಲಿ ಮೀನು ಖಾಲಿ ಮಾಡುತ್ತಿರುವ ಸಮಯ ಮಂಜುನಾಥನು ಮೀನು ಖಾಲಿ ಮಾಡುತ್ತಿದ್ದ ಬೋಟಿನಿಂದ ಇನ್ನೊಂದು ಬೋಟಿಗೆ ಹೋಗುವರೇ ಪ್ರಯತ್ನಿಸುತ್ತಿರುವ ವೇಳೆ ಆಕಸ್ಮಿಕವಾಗಿ  ಕಾಲು ಜಾರಿ ಸಮುದ್ರಕ್ಕೆ ಬಿದ್ದು ಹುಡುಕಾಡಿದಲ್ಲಿ ಪತ್ತೆಯಾಗಿರಲಿಲ್ಲ. ನಂತರ ಗಂಗೊಳ್ಳಿ ಠಾಣಾ ಅಪರಾಧ ಕ್ರಮಾಂಕ 193/2014 ಕಲಂ ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಾಗಿದ್ದು, ಮಂಜುನಾಥನ ಪತ್ತೆಯ ಕಾರ್ಯ ಮುಂದುವರಿಸಿ ಹುಡುಕಾಡುತ್ತಿರುವಾಗ ಈ ದಿನ ದಿನಾಂಕ 27/11/2014 ರಂದು ಬೆಳಿಗ್ಗೆ ಗಂಗೊಳ್ಳಿ ಕಛೇರಿ ಕಡು ಎಂಬಲ್ಲಿ ಗಂಗೊಳ್ಳಿ ಹೊಳೆಯಲ್ಲಿ ಮಂಜುನಾಥನ ಮೃತದೇಹ ಪತ್ತೆಯಾಗಿರುತ್ತದೆ. ಈ ಬಗ್ಗೆ ಮಹಾಬಲರವರು ನೀಡಿದ ದೂರಿನಂತೆ ಗಂಗೊಳ್ಳಿ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 24/2014 ಕಲಂ 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಪಘಾತ ಪ್ರಕರಣ
  • ಕುಂದಾಪುರ ಸಂಚಾರ:ದಿನಾಂಕ:27/11/2014 ರಂದು ಬೆಳಿಗ್ಗೆ ಸುಮಾರು 07:45 ಗಂಟೆಗೆ ಕುಂದಾಪುರ ತಾಲೂಕು ವಡೇರ ಹೋಬಳಿ ಗ್ರಾಮದ ಹುಣ್ಸೆಕಟ್ಟೆ ಸೇತುವೆ ಬಳಿ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಆಪಾದಿತ ಇಮ್ರಾನ್ ಎಂಬವರು ಅವರ KA-19 B-5681ನೇ ಲಾರಿಯನ್ನು ಬಸ್ರೂರು ಕಡೆಯಿಂದ ಕುಂದಾಪುರ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ಬಲಬದಿಗೆ ಬಂದು, ಬಳಿಕ ಒಮ್ಮೆಲೇ ರಸ್ತೆಯ ಎಡಬದಿಗೆ ಚಲಾಯಿಸಿ ಕುಂದಾಪುರದಿಂದ ಮೂಡ್ಲಕಟ್ಟೆ ಕಡೆಗೆ ಪಿರ್ಯಾದಿದಾರರಾದ ಸುದರ್ಶನ್ ಆಚಾರಿ (18) ತಂದೆ:ಮಂಜುನಾಥ ಆಚಾರಿ, ವಾಸ:ಸರಕಾರಿ ಶಾಲೆಯ ಬಳಿ, ಹುಣ್ಸೆಮಕ್ಕಿ, ಹೊಂಬಾಡಿ ಮುಂಡಾಡಿ ಗ್ರಾಮ, ಕುಂದಾಪುರ  ತಾಲೂಕುರವರು ಹರ್ಷ ಆಚಾರಿಯವರನ್ನು ಸಹಸವಾರರಾಗಿ ಕುಳ್ಳಿರಿಸಿಕೊಂಡು ಸವಾರಿ ಮಾಡಿಕೊಂಡು ಹೋಗುತ್ತಿದ್ದ KA-20 EC-3677ನೇ ಮೋಟಾರ್ ಸೈಕಲ್‌ಗೆ ಎದುರುಗಡೆಯಿಂದ ಹೊಡೆದ ಪರಿಣಾಮ ಸುದರ್ಶನ್ ಆಚಾರಿ ಹಾಗೂ ಸಹ ಸವಾರ ಹರ್ಷ ಆಚಾರಿ ಬೈಕ್ ಸಮೇತ ರಸ್ತೆಗೆ ಬಿದ್ದು ಸುದರ್ಶನ್ ಆಚಾರಿರವರಿಗೆ ಎಡ ಕಾಲಿನ ಪಾದದ ಮೇಲೆ ತರಚಿದ ಗಾಯ ಹಾಗೂ ಸಹಸವಾರನಿಗೆ ತಲೆಗೆ ಹಾಗೂ ಕೈ ಕಾಲುಗಳಿಗೆ ಒಳ ನೋವು ಹಾಗೂ ರಕ್ತ ಗಾಯವಾಗಿ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುತ್ತಾರೆ.ಈ ಬಗ್ಗೆ ಸುದರ್ಶನ್ ಆಚಾರಿರವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಠಾಣಾ ಅಪರಾಧ ಕ್ರಮಾಂಕ 145/2014 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: