Thursday, November 27, 2014

Daily Crime Reported As On 27/11/2014 At 07:00Hrs

ಅಸ್ವಾಭಾವಿಕ ಮರಣ ಪ್ರಕರಣ
  • ಉಡುಪಿ: ಪಿರ್ಯಾದಿದಾರರಾದ ಹರಿಶ್ಚಂದ್ರ ಪಿ ಸಾಲ್ಯಾನ್ ತಂದೆ ಎ ಕೋಟ್ಯಾನ್, ವಾಸ ಬಪ್ಪತೋಟ ಮನೆ ಕೊಳಚೆ ಕಂಬ್ಲ ಅಂಚೆ ಮೂಲ್ಕಿ ದ.ಕ ಜಿಲ್ಲೆ ಇವರು ದಿನಾಂಕ 15/11/2014ರಂದು ಬೆಳಿಗ್ಗೆ 10:00ಗಂಟೆಗೆ ಉಡುಪಿ ಸಮಾಜ ಸೇವಕರಾದ ನಿತ್ಯಾನಂದ ಒಳಕಾಡುರವರು ಉಡುಪಿ ಅಲಂಕಾರ್‌ ಥಿಯೇಟರ್‌ ಬಳಿ ಕುಡಿದು ಬಿದ್ದದ್ದ ವಸಂತ ಆರ್‌ ಸಾಲಿಯಾನ್‌‌ (38)ರವರನ್ನು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ತಂದು ದಾಖಲಿಸಿದ್ದು ಅವರು ಚಿಕಿತ್ಸೆ  ಫಲಕಾರಿ ಯಾಗದೇ ದಿನಾಂಕ 26/11/2014ರಂದು ಸುಮಾರು ಬೆಳಿಗ್ಗೆ 5:00ಗಂಟೆಗೆ ಮೃತ ಪಟ್ಟಿರುವುದಾಗಿ ಪೋನ್‌ ಮುಖಾಂತರ ತಿಳಿಸಿದ್ದು ಪಿರ್ಯಾದಿದಾರರು ಬಂದು ನೋಡಲಾಗಿ ಮೃತ ದೇಹ ವಸಂತ ಆರ್‌ ಸಾಲಿಯಾನ್‌ರವರದ್ದಾಗಿರುತ್ತದೆ ಎಂಬುದಾಗಿ ಹರಿಶ್ಚಂದ್ರ ಪಿ ಸಾಲ್ಯಾನ್ ಇವರು ನೀಡಿದ ದೂರಿನಂತೆ ಉಡುಪಿ ನಗರ ಠಾಣಾ ಅಪರಾಧ ಕ್ರಮಾಂಕ 68/14 ಕಲಂ 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
ಇತರ ಪ್ರಕರಣ
  • ಉಡುಪಿ: ಪಿರ್ಯಾದಿದಾರರಾದ ಸಂದೀಪ, ತಂದೆ ಕೊಗ್ಗ ಪೂಜಾರಿ, ವಾಸ ಕಲ್ಸಂಕ ಶಿವಳ್ಳಿ ಗ್ರಾಮ ಉಡುಪಿ ತಾಲೂಕು ಇವರು ದಿನಾಂಕ 26/11/14ರಂದು 18:15 ಗಂಟೆಗೆ ಠಾಣೆಗೆ ಬಂದು ನೀಡಿದ ಸಾರಂಶವೇನೆಂದರೆ ಶಿವಳ್ಳಿ ಗ್ರಾಮದ ಕೊರಗ ಪೂಜಾರಿ ಎಂಬವರ ಜಾಗದ ಸರ್ವೇ ನಂಬ್ರ 88/28ರಲ್ಲಿ ಆರೋಪಿತರುಗಳಾದ ರಂಜನ್ ಕಲ್ಕೂರ, ಅಶೋಕ್ ಸುವರ್ಣ, ಎಮ್ ಡಿ ಶ್ರೀಧರ್ ಎಂಬವರು ಸುಮಾರು 20-25 ಜನ ಗೂಂಡಾಗಳ ಜೊತೆಯಲ್ಲಿ ಕೆಲವಾರು ಲಾರಿ ಹಾಗೂ ಮಣ್ಣು ತೆಗೆಯುವ ಹಿಟಾಚಿಯೊಂದಿಗೆ ಬಲತ್ಕಾರದಿಂದ ಅಕ್ರಮವಾಗಿ, ಕಾನೂನುಬಾಹಿರವಾಗಿ ರಸ್ತೆ ಮಾಡಿರುತ್ತಾರೆ. ಮತ್ತು ಅಲ್ಲಿ ಮೊದಲಿದ್ದ ಕಂಬಗಳನ್ನು ಬಿಸಾಡಿ ನಷ್ಟ ಉಂಟುಮಾಡಿದ್ದು, ಹಾಗೂ ಅಕ್ರಮವಾಗಿ ಕಟ್ಟಡಗಳನ್ನು ಕಟ್ಟಿರುವುದಾಗಿದೆ ಎಂಬುದಾಗಿ ಸಂದೀಪ ಇವರು ನೀಡಿದ ದೂರಿನಂತೆ ಉಡುಪಿ ನಗರ ಠಾಣಾ ಅಪರಾಧ ಕ್ರಮಾಂಕ 337/14 ಕಲಂ 143, 147, 447, 427 ಜೊತೆಗೆ 149 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
ಅಪಘಾತ ಪ್ರಕರಣ
  • ಶಿರ್ವಾ: ಪಿರ್ಯಾದಿದಾರರಾದ ಶ್ರೀ ಭರತ್ ರಾಜ್ (24), ತಂದೆ ಕರುಣಾಕರ ಪೂಜಾರಿ, ವಾಸ ಭಂಡಾ ಶಾಲೆ ಮನೆ ಶೆಟ್ಟಿ ಬೆಟ್ಟು, ಹೆರ್ಗಾ ಗ್ರಾಮ ಪರ್ಕಳ ಇವರು ದಿನಾಂಕ 26/11/2014 ರಂದು ತನ್ನ ಸ್ನೇಹಿತ ಗಣೇಶನ ಜೊತೆಗೆ ಕೆಎ 20 ಬಿ 1141ನೇ ಮೋಟಾರು ಸೈಕಲ್ ನಲ್ಲಿ ಸಹಸವಾರನಾಗಿ ಶಿರ್ವಾ ಬೆಳ್ಮಣ್ ರಸ್ತೆಯಾಗಿ ಕಾರ್ಕಳ ಕಡೆಗೆ ಹೋಗುವಾಗ ಪಿಲಾರು ಗುಂಡು ಪಾದೆ ಬಳಿ ಸಮಯ 16:00 ಗಂಟೆಗೆ ತಲುಪುವಾಗ ಬೆಳ್ಮಣ್ ಕಡೆಯಿಂದ ಕೆಎ 20 ಎ 134ನೇ ಟೆಂಪೋ ಚಾಲಕ ಫೆಡ್ರಿಕ್ ಮಾಥಾಯಸ್ ರವರು ತನ್ನ ಟೆಂಪೋವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಮೋಟಾರು ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್ ಚಲಾಯಿಸುತ್ತಿದ್ದ ಗಣೇಶ ಈತನಿಗೆ ಹಣೆಗೆ ತೀವ್ರ ತರಹದ ರಕ್ತಗಾಯ ಹಾಗೂ ಬಲಕೈಗೆ ಎಲುಬು ಮುರಿತದ ಗಾಯ ಮತ್ತು ಪಿರ್ಯಾದಿದಾರರಿಗೆ ಎಡಕಾಲಿನ ಕೋಲುಕಾಲಿಗೆ ರಕ್ತ ಗಾಯ, ಕಿರುಬೆರಳಿಗೆ ಗುದ್ದಿದ ಗಾಯ ಬಲಗಂಟಿನ ಮೊಣಗಂಟಿಗೆ ಗುದ್ದಿದ ಗಾಯ ಆಗಿರುತ್ತದೆ. ಟೆಂಪೋ ಚಾಲಕನು ತನ್ನ ಬಾಬ್ತು ಟೆಂಪೋವನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿದ್ದೇ ಈ ಘಟನೆಗೆ ಕಾರವಾಗಿದ್ದು ಎಂಬುದಾಗಿ ಶ್ರೀ ಭರತ್ ರಾಜ್ ಇವರು ನೀಡಿದ ದೂರಿನಂತೆ ಶಿರ್ವಾ ಠಾಣಾ ಅಪರಾಧ ಕ್ರಮಾಂಕ 164/2014 ಕಲಂ 279, 337, 338 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.

No comments: