Sunday, November 23, 2014

Daily Crime Reports as on 23/11/2014 at 17:00 Hrs

ಕೋಳಿ ಅಂಕಕ್ಕೆ ದಾಳಿ ಪ್ರಕರಣ
  • ಕಾರ್ಕಳ: ದಿನಾಂಕ 22/11/2014 ರಂದು 15:30 ಗಂಟೆಗೆ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ನಕ್ರೆ ಪದವು ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೋಳಿಗಳ ಕಾಲುಗಳಿಗೆ ಬಾಲುಗಳನ್ನು ಕಟ್ಟಿ ಕಾದಾಡಲು ಬಿಟ್ಟು  ಕೋಳಿಗಳ ಮೇಲೆ ಹಣವನ್ನು ಕಟ್ಟಿ ಜೂಜಾಟ ಆಡುತ್ತಿದ್ದವರನ್ನು ಕಾರ್ಕಳ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಶ್ರೀ ಕಬ್ಬಾಳ್‌‌ರಾಜ್, ಹೆಚ್.ಡಿ ರವರು ಸಿಬ್ಬಂದಿಯವರೊಂದಿಗೆ ಧಾಳಿ ನಡೆಸಿ ಆರೋಪಿಗಳಾದ 1) ಕೂಕ್ರ ಪ್ರಾಯ 65 ವರ್ಷ, ತಂದೆ: ದಿ;ನೋಣಯ್ಯ  ವಾಸ: ಕಾರೋಲುಗುಡ್ಡೆ, 5 ಸೆಂಟ್ಸ್, ಜೋಡುಕಟ್ಟೆ ಮಿಯ್ಯಾರ್ ಅಂಚೆ ಮತ್ತು ಗ್ರಾಮ, ಕಾರ್ಕಳ ತಾಲೂಕು, 2) ಭೋಜ ಪೂಜಾರಿ ಪ್ರಾಯ 70 ವರ್ಷ, ತಂದೆ: ತೋಪ ಪೂಜಾರಿ  ವಾಸ: ಕೊಡಂಗೇರಿ  ಮನೆ, ಮುನಿಯಾಲ್ ಚಟ್ಕಲ್ ಪಾದೆ ವರಂಗ  ಗ್ರಾಮ, ಕಾರ್ಕಳ ತಾಲೂಕು, 3) ಉದಯ  ಪ್ರಾಯ 23 ವರ್ಷ, ತಂದೆ: ಕೊರಗ ಶೆಟ್ಟಿ  ವಾಸ: ಬಂಗ್ಲೆಗುಡ್ಡೆ  ಕಾರ್ಕಳ ಕಸಬಾ  ಗ್ರಾಮ, ಕಾರ್ಕಳ ತಾಲೂಕು, 4) ಕೃಷ್ಣ ಶೆಟ್ಟಿ ಪ್ರಾಯ 62 ವರ್ಷ, ತಂದೆ: ದಿ ಐತಪ್ಪ ಶೆಟ್ಟಿ, ವಾಸ: ದೊಡ್ಡಮನೆ, ನಿಟ್ಟೆ ಗ್ರಾಮ ಕಾರ್ಕಳ ತಾಲೂಕು, 5) ವಸಂತ  ಪ್ರಾಯ 40 ವರ್ಷ, ತಂದೆ: ಚಂದಯ್ಯ  ವಾಸ: ಮಿತ್ತಬೆಟ್ಟು ಕಲ್ಯಾ  ಗ್ರಾಮ ಕಾರ್ಕಳ ತಾಲೂಕು, 6) ಪ್ರಶಾಂತ  ಪ್ರಾಯ 30 ವರ್ಷ, ತಂದೆ: ರಾಘು ಪೂಜಾರಿ ವಾಸ: ವರಲಕ್ಷ್ಮಿ ನಿವಾಸ, ರೆಂಜಾಳ ಗ್ರಾಮ, ಕಾರ್ಕಳ ತಾಲೂಕು, 7) ಉದಯ ಪ್ರಾಯ 38 ವರ್ಷ ತಂದೆ: ಸದಿಯ ಸಾಲಿಯಾನ್ ವಾಸ: ಆಯರಗುಡ್ಡೆ ದರ್ಖಾಸ್ ಕೈರಬೆಟ್ಟು ಕಲ್ಯಾ ಗ್ರಾಮ ಕಾರ್ಕಳ ತಾಲೂಕು, 8) ಜಗದೀಶ್ ಪ್ರಾಯ 44 ವರ್ಷ ತಂದೆ: ಅಚ್ಚುತ  ವಾಸ: ಕಲ್ಯಾ ಗರಡಿ ಬಳಿ, ಕಲ್ಯಾ ಗ್ರಾಮ, ಕಾರ್ಕಳ ತಾಲೂಕು, 9) ಗಣೇಶ್ ಪ್ರಾಯ 27 ವರ್ಷ ತಂದೆ; ಶ್ಯಾಮ ಶೆಟ್ಟಿ ವಾಸ; ರೆಂಜಾಳ ಗ್ರಾಮ, ಕಾರ್ಕಳ ತಾಲೂಕು ವರನ್ನು ವಶಕ್ಕೆ ತೆಗೆದುಕೊಂಡು, ಅವರುಗಳು ಜೂಜಾಟಕ್ಕೆ  ಉಪಯೋಗಿಸಿದ ಒಟ್ಟು 300/- ರೂಪಾಯಿ ನಗದು, 6 ಹುಂಜಗಳು, 2 ಬಾಳುಗಳನ್ನು ಮುಂದಿನ ಕಾನೂನು ಕ್ರಮದ ಬಗ್ಗೆ ಪಂಚರ ಸಮಕ್ಷಮ ಸ್ವಾಧೀನಪಡಿಸಿಕೊಂಡಿದ್ದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 195/2014 ಕಲಂ 87, 93 ಕರ್ನಾಟಕ ಪೊಲೀಸ್ ಕಾಯ್ದೆಯಂತೆ ಪ್ರಕರಣ ದಾಖಲಿಸಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣಗಳು
  • ಹಿರಿಯಡ್ಕ: ಪಿರ್ಯಾದಿದಾರರಾದ ನಾಗರಾಜ ನಾಯಕ್ ಪ್ರಾಯ: 45 ವರ್ಷ, ತಂದೆ: ಕೃಷ್ಣ ನಾಯಕ್, ವಾಪಮ್ಮುಂಜೆ ಮನೆ, ಕುಕ್ಕೆಹಳ್ಳಿ ಗ್ರಾಮ ಉಡುಪಿ ತಾಲೂಕು ಎಂಬವರ ಅಣ್ಣ ಮಂಜುನಾಥ ನಾಯಕ್ (51) ರವರು ಅವಿವಾಹಿತರಾಗಿದ್ದು, ಸದ್ರಿಯವರು ವಿಪರೀತ ಕುಡಿತದ ಚಟ ಹೊಂದಿದ್ದು ದಿನಾಂಕ 22/11/2014 ರಂದು ಕೂಲಿ ಕೆಲಸಕ್ಕೆ ಹೋದವರು ಕೆಲಸ ಮುಗಿಸಿ ಮನೆ ಕಡೆ ನಡೆದುಕೊಂಡು ಬರುತ್ತಿರುವಾಗ ಕುಕ್ಕೆಹಳ್ಳಿ ಸಮೀಪದ ಗದ್ದೆ ಬದಿಯ ತೋಡಿಗೆ ಆಕಸ್ಮಿಕವಾಗಿ ಕಾಲು ಜಾರಿ  ಬಿದ್ದು  ಮೃತಪಟ್ಟಿರುತ್ತಾರೆ ಎಂಬುದಾಗಿ ನಾಗರಾಜ ನಾಯಕ್ ರವರು ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ 23/2014 ಕಲಂ 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಲಾಗಿದೆ.
  • ಉಡುಪಿ: ಫಿರ್ಯಾದಿದಾರರಾದ ಕಮಲ (63) ಗಂಡ:ದಿ ಸುಂದರ ಕರ್ಕೆರ ವಾಸ: ಡೋರ್ ನಂ 2-26ಸಿ ಕಸ್ತೂರಿಬಾ ನಗರ ಚಿಟ್ಪಾಡಿ 76 ಬಡಗುಬೆಟ್ಟು ಉಡುಪಿ ತಾಲೂಕು ಎಂಬವರ ಮಗನಾದ ಪ್ರವೀಣ (32) ರವರು ಸುಮಾರು 1 ವರ್ಷಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು ಈ ಬಗ್ಗೆ ಬಾಳಿಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ. ದಿನಾಂಕ 22/11/2014 ರಂದು ರಾತ್ರಿ ಅತಿಯಾಗಿ ಶರಾಬು ಸೇವಿಸಿ ಊಟ ಮಾಡದೇ ಮಲಗಿದ್ದು ದಿನಾಂಕ 23/11/2014 ರಂದು ಬೆಳಗ್ಗೆ 06:15 ಗಂಟೆ ಸಮಯಕ್ಕೆ ಮನೆಯ ಹತ್ತಿರದ ಆವರಣ ಇಲ್ಲದ ಬಾವಿಗೆ ಹಾರಿದ್ದು, ಅವರ ಮಾವ ಅದನ್ನು ಗಮನಿಸಿ ಬೊಬ್ಬೆ ಹೊಡೆದಿದ್ದು, ಆ ಸಮಯ ಆಸು ಪಾಸಿನವರು ಬಂದು ಮೇಲೆತ್ತಲು ಪ್ರಯತ್ನಿಸಿದ್ದು ಆಗದೇ ಇದ್ದಾಗ ಅಗ್ನಿ  ಶಾಮಕ ದಳದವರು ಬಂದು ಮೇಲೆತ್ತಿ ಚಿಕಿತ್ಸೆಯ ಬಗ್ಗೆ ಉಡುಪಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಮೃತರು ಮಾನಸಿಕ ಕಾಯಿಲೆಯಿಂದಲೂ, ಅತಿಯಾದ ಶರಾಬು ಸೇವಿಸಿ ಆರೋಗ್ಯದ ಸಮಸ್ಯೆಯಿಂದಲೂ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಎಂಬುದಾಗಿ ಕಮಲ ರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ 64/2014 ಕಲಂ 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಲಾಗಿದೆ.

No comments: