Saturday, November 01, 2014

Daily Crime Reports as on 01/11/2014 at 07:00 Hrs

ಹಲ್ಲೆ ಪ್ರಕರಣ

  • ಕಾರ್ಕಳ : ದಿನಾಂಕ: 30/10/2014 ರಂದು ಸಂಜೆ 5-00 ಗಂಟೆ ಸುಮಾರಿಗೆ ನಲ್ಲೂರು ಗ್ರಾಮದ ನಲ್ಲೂರು ಎಂಬಲ್ಲಿ ಭಾಗಿ ನಿವಾಸ ಎಂಬ ಹೆಸರಿನ ಮನೆಯಲ್ಲಿ ಫಿರ್ಯಾದಿ ಮುದ್ದು ರವರು ನೆಲದಲ್ಲಿ ಕುಳಿತುಕೊಂಡಿದ್ದಾಗ ಆರೋಪಿ ಹರೀಶ್ ನಲ್ಲೂರು ಫಿರ್ಯಾದಿದಾರರ ಮನೆಯೊಳಗೆ ಏಕಾಏಕಿ ಆಕ್ರಮ ಪ್ರವೇಶ ಮಾಡಿ ಅವರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಮನೆಯೊಳಗಿದ್ದ ಕಟ್ಟಿಗೆ ರಾಶಿಯಿಂದ ಒಂದು ಮರದ ಸೋಂಟೆಯನ್ನು ತೆಗೆದು ತಲೆಯ ಎಡಭಾಗಕ್ಕೆ ಮತ್ತು ಬೆನ್ನಿಗೆ ಸೋಂಟೆಯಿಂದ ಹೊಡೆದು ಸಾಮಾನ್ಯ ಸ್ವರೂಪದ ಗಾಯ ಮಾಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 126/2014 ಕಲಂ: 448, 504, 324 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.


ಇತರೇ ಪ್ರಕರಣ

  • ಉಡುಪಿ: ದಿನಾಂಕ:31/10/2014 ರಂದು ಸಂಜೆ 3:00 ಗಂಟೆಗೆ ಗಣೇಶ ಮಾರ್ಬ್‌ಲ್‌ ಅಂಗಡಿಯ ಮೇನೇಜರ್‌‌ ಮೋಹನ ಎಂಬುವರು ಅಂಗಡಿಯಲ್ಲಿ ಗ್ರಾನೈಟ್‌‌ ಅನ್‌ಲೊಡಿಂಗ್‌ ಕೆಲಸ ಇದೆ ಎಂಬುದಾಗಿ ಫಿರ್ಯಾದಿ ಆಶೋಕ ಸಹಾನಿರವರನ್ನು ಕರೆದಿದ್ದು  ಫಿರ್ಯಾದಿದರಾರರು ಅವರ ಜೊತೆ ಅವರ ಊರಿನ ರಾಜೇಶ ಕುಮಾರ ಸಹಾನಿ  (26) ಹಾಗೂ ಇತರರನ್ನು ಕೂಲಿ ಕೆಲಸಕ್ಕೆ ಸಂಜೆ ಸುಮಾರು 3:30 ಗಂಟೆಗೆ ಗಣೇಶ ಮಾರ್ಬ್ ಬಲ್‌ ಅಂಗಡಿಯಲ್ಲಿ ಗ್ರಾನೈಟ್‌‌ ಅನ್‌ಲೊಂಡಿಗ್‌ ಕೆಲಸಕ್ಕೆ ಬಂದಿದ್ದು ಲಾರಿಯಿಂದ ಗ್ರಾನೈಟನ್ನು ಕೆಳಗೆ ಇಳಿಸಿ ಸಾಗಿಸಲು ಕ್ರೈನ್‌‌  ತರುವಂತೆ ಹೇಳಿದರು  ಅದಕ್ಕೆ  ಮೋಹನರವರು ಎನು ಆಗುವುದಿಲ್ಲ  ನಾನು ಇದ್ದೇನೆ ಮಾಡಿ ಎಂದು ಹೇಳಿದ್ದು ಅದರಂತೆ ಲಾರಿಯಿಂದ  ಗ್ರಾನೈಟ್‌ನ್ನು ಕಳೆಗೆ ಇಳಿಸಿ ಗೋಡನ್‌ ಕಡೆಗೆ ಸಾಗಿಸುತ್ತಿರುವಾಗ ಸದ್ರಿ ಗ್ರಾನೈಟ್‌ ರಾಜೇಶ್‌ನ  ಮೇಲೆ ಬಿದ್ದು ಅವರಿಗೆ  ಗಂಭೀರ  ಸ್ವರೂಪದ ಗಾಯವಾಗಿರುತ್ತದೆ ಕೂಡಲೇ ಚಿಕಿತ್ಸೆಯ ಬಗ್ಗೆ ಕೆಎಂಸಿ ಮಣಿಪಾಲಗೆ ಕರೆದು ಕೊಂಡು ಹೋದಾಗ ವೈದ್ಯರು ಪರೀಕ್ಷಿಸಿ ಮೃತ  ಪಟ್ಟಿರುವುದಾಗಿ ತಿಳಿಸಿದರು. ಈ ಘಟನೆಗೆ ಮೋಹನರವರು ಗ್ರಾನೈಟ್‌ ಅನ್‌ ಲೋಡಿಂಗ್‌ ಮಾಡುವಾಗ ಯಾವುದೇ ಮುಂಜಾಗರೂಕತನ ಕ್ರಮ ಹಾಗೂ ಸುರಕ್ಷತಾ ಕ್ರಮ ವಹಿಸದೇ ನಿರ್ಲಕ್ಷತನದಿಂದ ಕೆಲಸ ಮಾಡಿಸಿದ್ದರಿಂದಲೇ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 316/14 PÀ®A: 304()  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ

  • ಕಾರ್ಕಳ: ದಿನಾಂಕ 31.10.2014 ರಂದು ಸಂಜೆ ಸುಮಾರು 4:15 ಗಂಟೆಗೆ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಬಾಳೆಹಿತ್ಲು ಬಜಕಳ  ಕಡೆಯಿಂದ ಶಿಶುಮಂದಿರ ಕಡೆಗೆ ರಸ್ತೆಯಲ್ಲಿ ಕೆ.20 ಬಿ 8479 ನೇ ನಂಬ್ರದ ಟಿಪ್ಪರ್ ಲಾರಿಯನ್ನು ಅದರ ಚಾಲಕ ಅಯ್ಯಪ್ಪ ಸ್ವಾಮಿ ಎಂಬುವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಶಿಶುಮಂದಿರ ರಸ್ತೆ  ಕಡೆಯಿಂದ ಬಾಳೆಹಿತ್ಲು ಬಜಕಳ ರಸ್ತೆ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ಕೆ.20 ಕ್ಸ್  3246 ನೇ ನಂಬ್ರದ ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್ ಸವಾರ ಸುನೀಲ್ ಮತ್ತು ಸಹ ಸವಾರ ಶೈಲೇಶ್ ಎಂಬುವರಿಗೆ ಸಾಮಾನ್ಯ ಹಾಗೂ ತೀವೃ ಸ್ವರೂಪದ ರಕ್ತ ಗಾಯವಾಗಿರುತ್ತದೆ. ಈ ಅಫಘಾತಕ್ಕೆ ಕೆ.20 ಬಿ 8479 ನೇ ನಂಬ್ರದ ಟಿಪ್ಪರ್ ಚಾಲಕನ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 127/2014, ಕಲಂ  279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: