Saturday, November 01, 2014

Daily Crimes Reported as On 01/11/2014 at 17:00 Hrs


ಅಪಘಾತ ಪ್ರಕರಣ
  • ಅಮಾಸೆಬೈಲು:ಪಿರ್ಯಾದಿದಾರರಾದ ಮಹಮ್ಮದ್ ಅಬ್ಜಲ್ (19) ತಂದೆ:ದಾದಾಫೀರೆ  ವಾಸ:ತೃಪ್ತಿ ಕಂಪೌಂಡ್, ಹೊಸಂಗಡಿ ಗ್ರಾಮ ಕುಂದಾಪುರರವರು ದಿನಾಂಕ:28/10/2014 ರಂದು ಆಲಿ ಎಂಬವರ ಹೊಸ ಸ್ಕೂಟಿಯಲ್ಲಿ ಹೊಸಂಗಡಿ ಗೋಳಿಮರದ ಹತ್ತಿರದಿಂದ ಸಹಸವಾರರಾಗಿ ಕುಳಿತುಕೊಂಡು ಬರುತ್ತಿರುವಾಗ ಆಲಿಯವರು ವೇಗವಾಗಿ ಸ್ಕೂಟಿಯನ್ನು ಚಲಾಯಿಸಿಕೊಂಡು ಬರುತ್ತಿರುವಾಗ ಸುಮಾರು 7:30 ಗಂಟೆಗೆ ರಸ್ತಯಲ್ಲಿ ನಾಯಿ ಅಡ್ಡ ಓಡಿ ಬಂದಾಗ ಒಮ್ಮೆಲೇ ಬ್ರೇಕ್ ಹಾಕಿದಾಗ ಆಲಿಯವರ ಹತೋಟಿ ತಪ್ಪಿ ಸ್ಕೂಟಿ ಸಮೇತ ರಸ್ತಗೆ ಬಿದ್ದು ಮಹಮ್ಮದ್ ಅಬ್ಜಲ್‌ರಿಗೆ ಕೈಗೆ ಬೆನ್ನಿಗೆ ಎಡ ಹೊಟ್ಟೆಯ ಹಿಂಬದಿಗೆ ರಕ್ತಗಾಯವಾಗಿ ಎಡಕಾಲು ಪಾದಕ್ಕೆ ಮೂಳೆ ಮುರಿತದ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಕುಂದಾಪುರದ ವಿವೇಕ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿರುತ್ತಾರೆ.ಈ ಬಗ್ಗೆ ಮಹಮ್ಮದ್ ಅಬ್ಜಲ್‌ರವರು ನೀಡಿದ ದೂರಿನಂತೆ ಅಮಾಸೆಬೈಲು ಠಾಣಾ ಅಪರಾಧ ಕ್ರಮಾಂಕ 42/2014 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕಳವು ಪ್ರಕರಣ
  • ಕಾಪು:ದಿನಾಂಕ:31/10/2014 ರಂದು ಉಳಿಯಾರಗೋಳಿ ಗ್ರಾಮದ ಮುದ್ದಣ್ಣ ನರ್ಸರಿ ಎದುರುಗಡೆ ಇರುವ ಪಿರ್ಯಾದಿದಾರರಾದ ಪ್ರಭಾಕರ ಪೂಜಾರಿ (39) ತಂದೆ:ಶ್ರೀಧರ್ ಪೂಜಾರಿ ವಾಸ:ಬಟ ತೋಟ, ಕೈಪುಂಜಾಲು ಉಳಿಯಾರಗೋಳಿ ಗ್ರಾಮ, ಉಡುಪಿ ಜಿಲ್ಲೆರವರ ರೆಫ್ರಿಜರೇಷನ್ ವರ್ಕ್‌ ಅಂಗಡಿಯನ್ನು ರಾತ್ರಿ 9.00 ಗಂಟೆಗೆ ಬಂದ್ ಮಾಡಿ ಕಬ್ಬಿಣ ಸೊತ್ತುಗಳನ್ನು ಹೊರಗಡೆ ಇಟ್ಟು ಮನೆಗೆ  ಹೋಗಿದ್ದು, ದಿನಾಂಕ:01/11/2014 ರಂದು ಬೆಳಿಗ್ಗೆ 04:15 ಗಂಟೆಗೆ  ಆರೋಪಿ ಬಶೀರ್ ಎಂಬಾತನು ತನ್ನ ಕೆ ಎ 20 1030 ಟೆಂಪೋದಲ್ಲಿ ಪ್ರಭಾಕರ ಪೂಜಾರಿರವರ ಅಂಗಡಿಯ ಹೊರಗೆ ಇರಿಸಿದ್ದ ಕಬ್ಬಿಣದ ಪೈಪ್ ತುಂಡುಗಳು, ಹಳೆಯ ಡ್ರಮ್, ಶೀಟಿನ ತುಂಡುಗಳನ್ನು ತುಂಬಿಸಿ ಕಳವು ಮಾಡಿದ್ದು, ಕಳವಾದ ಸೊತ್ತುಗಳ ಅಂದಾಜು ಮೌಲ್ಯ ರೂಪಾಯಿ 30,000/- ಆಗಿರುತ್ತದೆ. ಈ ಬಗ್ಗೆ ಪ್ರಭಾಕರ ಪೂಜಾರಿರವರು ನೀಡಿದ ದೂರಿನಂತೆ ಕಾಪು ಠಾಣಾ ಅಪರಾಧ ಕ್ರಮಾಂಕ 210/2014 ಕಲಂ:379 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ
  • ಕಾರ್ಕಳ ನಗರ:ಕಾರ್ಕಳ ತಾಲೂಕು ಯರ್ಲಪಾಡಿ ಗ್ರಾಮದ ಜಾರ್ಕಳ ಬಳಿ ರಾಜೇಶ್ ಶೆಟ್ಟಿಯವರ ಪಾದೆಯಲ್ಲಿ ಕೆಲಸ ಮಾಡುತ್ತಿದ್ದ ಮೂಲತಃ ಕೊಪ್ಪಳ ಜಿಲ್ಲೆ ಗಂಗಾವತಿ ವಾಸಿ ಶ್ರೀಮತಿ ವೀರಮ್ಮ (60) ಇವರು ತನ್ನ ಗಂಡ ಮಕ್ಕಳಿಂದ ದೂರವಿದ್ದು, ಪಿರ್ಯಾದಿದಾರರಾದ ಶ್ರೀ ಕುಮಾರ್, ತಂದೆ: ಪೆರುಮಾಳ್, ವಾಸ:ಬಂಡಿಬಸಪ್ಪ ಕ್ಯಾಂಪ್, ಗಂಗಾವತಿ ತಾಲೂಕು ಕೊಪ್ಪಳ, ಪ್ರಸ್ತುತ ಯರ್ಲಪಾಡಿ ಗ್ರಾಮದ ಜಾರ್ಕಳ ಬಳಿ ರಾಜೇಶ್ ಶೆಟ್ಟಿಯವರ  ಪಾದೆ ಬಳಿಯ ಮನೆಯಲ್ಲಿ ವಾಸವಿದ್ದು ಇವರು ವಿಪರೀತ ಮದ್ಯಪಾನ ಮಾಡುವ ಚಟವುಳ್ಳವರಾಗಿದ್ದು, 3-4 ದಿನಗಳಿಂದ ಜ್ವರದಿಂದ ಬಳಲುತ್ತಿದ್ದು ತನ್ನ  ಅಸೌಖ್ಯದ ಬಗ್ಗೆ ಯಾವುದೇ ಚಿಕಿತ್ಸೆ ಪಡೆಯದೇ ಇದ್ದು, ಅಸೌಖ್ಯದ ಬಗ್ಗೆ ಚಿಕಿತ್ಸೆ ಕೊಡಿಸುವರೇ ಶ್ರೀ ಕುಮಾರ್‌ರವರ ತಾಯಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ  ವೈದ್ಯಾಧಿಕಾರಿಯವರು ಶ್ರೀಮತಿ ವೀರಮ್ಮರವರನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದಂತೆ, ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ವೈದ್ಯರು ಪರೀಕ್ಷಿಸಿ ವೀರಮ್ಮ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಮೃತ ವೀರಮ್ಮ ಇವರು ಚಿಕಿತ್ಸೆಗೆ ತೆರಳುತ್ತಾ  ದಿನಾಂಕ: 31/10/2014 ರಂದು ಮಧ್ಯಾಹ್ನ  ಸುಮಾರು 13:30 ಗಂಟೆಯಿಂದ 18:00 ಗಂಟೆಯ ಮದ್ಯಾವಧಿಯಲ್ಲಿ ಮೃತಪಟ್ಟಿರುತ್ತಾರೆ.ಈ ಬಗ್ಗೆ ಶ್ರೀ ಕುಮಾರ್‌ರವರು ನೀಡಿದ ದೂರಿನಂತೆ ಕಾರ್ಕಳ ನಗರ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 47/2014 ಕಲಂ 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: