Tuesday, November 25, 2014

Daily Crime Reported As On 25/11/2014 At 17:00 Hrs

ಅಪಘಾತ ಪ್ರಕರಣಗಳು
  • ಬೈಂದೂರು:ಪಿರ್ಯಾದಿದಾರರಾದ ಕೃಷ್ಣ ಪೂಜಾರಿ (21) ತಂದೆ:ಮುತ್ತಾ ಪೂಜಾರಿ ವಾಸ:ಕೋನೆಕೋಡು ರಾಗಿ ಹಕ್ಲು ಹೇರೂರು ಗ್ರಾಮ ಕುಂದಾಪುರ ತಾಲೂಕುರವರು ದಿನಾಂಕ:24/11/2014 ರಂದು ಮಧ್ಯಾಹ್ನ ಸುಮಾರು 12:30 ಗಂಟೆಗೆ ಕೆಂಜಿ ಭೀಮನ ಪಾರಿ ಬಸ್ ನಿಲ್ದಾಣದ ಬಳಿ ರಸ್ತೆಯ ಎಡಬದಿಯ ಮಣ್ಣು ರಸ್ತೆಯಲ್ಲಿ ನೆಡೆದುಕೊಂಡು ಹೋಗುತ್ತಿರುವಾಗ ಎಲ್ಲೂರು ಕಡೆಯಿಂದ ಕೆಎ 47 ಜೆ 3039 ಮೋಟಾರು ಸೈಕಲ್ ಸವಾರ ಮಹೇಶ ಕೊಠಾರಿ ಎಂಬವನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಕೃಷ್ಣ ಪೂಜಾರಿರವರಿಗೆ ಢಿಕ್ಕಿ ಹೊಡೆದ ಪರಿಣಾಮ, ಕೃಷ್ಣ ಪೂಜಾರಿರವರ ಬಲಕಾಲಿನ ಮೊಣಗಂಟಿನ ಮೂಳೆ ಹಾಗೂ ಪಾದದ ಗಂಟಿಗೆ ಪೆಟ್ಟಾಗಿರುತ್ತದೆ. ಸದ್ರಿ ಅಪಘಾತಕ್ಕೆ ಕೆಎ 47 ಜೆ 3039 ಮೋಟಾರು ಸೈಕಲ್ ಸವಾರನ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ. ಈ ಬಗ್ಗೆ ಕೃಷ್ಣ ಪೂಜಾರಿರವರು ನೀಡಿದ ದೂರಿನಂತೆ ಬೈಂದೂರು ಠಾಣಾ ಅಪರಾಧ ಕ್ರಮಾಂಕ 237/2014 ಕಲಂ:279 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಬ್ರಹ್ಮಾವರ:ದಿನಾಂಕ:24/11/2014 ರಂದು 17:00 ಗಂಟೆಗೆ ಉಡುಪಿ ತಾಲೂಕು ಚೇರ್ಕಾಡಿ ಗ್ರಾಮದ ಚೇರ್ಕಾಡಿ ಕ್ರಾಸ್ ಎಂಬಲ್ಲಿ ಪಿರ್ಯಾದಿದಾರರಾದ ರವಿರಾಜ (21) ತಂದೆ:ನಾರಾಯಣ ಪೂಜಾರಿ, ವಾಸ:ರಮ್ಯ ನಿಲಯ, ಬಡಾಬೆಟ್ಟು, ಚೇರ್ಕಾಡಿ ಗ್ರಾಮ, ಉಡುಪಿ ತಾಲೂಕುರವರ ತಂದೆ ಬಸ್ಸಿನಲ್ಲಿ ಸೀಟು ಇಲ್ಲದ ಕಾರಣ ಬಸ್ಸಿನ ಮುಂದಿನ ಬಾಗಿಲಿನ ಬಳಿ ನಿಂತು ಪ್ರಯಾಣಿಸುತ್ತಿರುವಾಗ ಬಸ್ಸನ್ನು ಚಾಲಕ ಅತೀ ವೇಗವಾಗಿ ಚಲಾಯಿಸುತ್ತ  ಬಂದು ನಿರ್ಲಕ್ಷತನದಿಂದ ಅದೇ ವೇಗದಲ್ಲಿ ಒಮ್ಮೇಲೆ ಎಳ್ಳಂಪಳ್ಳಿ ರಸ್ತೆ ಕಡೆಗೆ ಬಸ್ಸನ್ನು ತಿರುಗಿಸಿ ಚಲಾಯಿಸಿದ ಪರಿಣಾಮ ಬಾಗಿಲಿಲ್ಲದ ಬಸ್ಸಿನ ಮುಂದಿನ ಬಾಗಿಲಿನಲ್ಲಿದ್ದ ರವಿರಾಜರವರ ತಂದೆ ಸುಮಾರು 70 ವರ್ಷದ  ನಾರಾಯಣರವರು ಆಯ ತಪ್ಪಿ ರಸ್ತೆಗೆ ಬಿದ್ದ ಪರಿಣಾಮ ತಲೆಗೆ ತೀವ್ರ ತರದ ಗಾಯವಾಗಿದ್ದು, ಅವರನ್ನು ಮಹೇಶ್ ಆಸ್ಪತ್ರೆಗೆ ದಾಖಲಿಸಿದ್ದು ಹೆಚ್ಚಿನ ಚಿಕಿತ್ಸೆ ಬಗ್ಗೆ ಆದರ್ಶ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆಯಲ್ಲಿರುವಾಗ ಚಿಕಿತ್ಸೆಗೆ ಸ್ಪಂದಿಸದೆ ರಾತ್ರಿ 9:05 ಗಂಟೆಗೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ರವಿರಾಜರವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣಾ ಅಪರಾಧ ಕ್ರಮಾಂಕ 217/2014 ಕಲಂ:279, 304 (ಎ) ಐಪಿಸಿ ಹಾಗೂ 134 (ಎ) & (ಬಿ) ಐ.ಎಮ್‌.ವಿ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಕಾರ್ಕಳ ನಗರ:ದಿನಾಂಕ:24/11/2014 ರಂದು ಬೆಳಿಗ್ಗೆ 11:20 ಗಂಟೆಗೆ ಕಾರ್ಕಳ ತಾಲೂಕು ಕಾರ್ಕಳ ಕಸಬಾ ಗ್ರಾಮದ ಕಾಳಬೈರವ ಫರ್ನೀಚರ್‌ ಅಂಗಡಿ ಎದುರುಗಡೆ ಆರೋಪಿ ಕೆ.ಎ 20 ಬಿ 8138 ನೇ ಬಸ್‌ ಚಾಲಕ ಸದಾಶಿವ ಪೂಜಾರಿ ಎಂಬವರು ಬಸ್ಸನ್ನು ಆನೆಕರೆ ಕಡೆಯಿಂದ ಕಾರ್ಕಳ ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ತಿರುವು ರಸ್ತೆಯಲ್ಲಿ ಒಮ್ಮೆಲೆ ಬ್ರೇಕ್‌ ಹಾಕಿದ ಹಾಗೂ ಬಸ್ಸಿನ ನಿರ್ವಾಹಕ ಶೀನ ಗೌಡ ಸರಿಯಾದ ಸೂಚನೆ ನೀಡದೆ ನಿರ್ಲಕ್ಷ್ಯತನ ವಹಿಸಿದ  ಪರಿಣಾಮ ಬಸ್ಸಿನ ಒಳಗಡೆ ಇದ್ದ ಮೋಹನ್ ಎಂಬವರು ಬಸ್ಸಿನ ಮುಂಭಾಗದ ಎಡಭಾಗದ ಬಾಗಿನಿಲಿನಿಂದ ಹೊರಗೆ ಕಳಗಡೆ ಡಾಮರು ರಸ್ತೆಗೆ ಬಿದ್ದು, ಬಸ್ಸಿನ ಹಿಂಭಾಗದ ಎಡಬದಿಯ ಚಕ್ರ ಮೋಹನ್‌ ಮೇಲೆ ಹರಿದು ತೀವೃ ತರಹದ ಗಾಯಗೊಂಡು ಚಿಕಿತ್ಸೆ ಬಗ್ಗೆ ಮಂಗಳೂರು ಎ.ಜೆ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಂಜೆ 6:20 ಗಂಟೆಗೆ ಮೃತಪಟ್ಟಿರುವುದಾಗಿದೆ.ಈ ಬಗ್ಗೆ ಪಿರ್ಯಾದಿದಾರರಾದ ಮಹಾಬಲ ಪೂಜಾರಿ (35) ತಂದೆ:ಶಿವಪ್ಪ ಪೂಜಾರಿ ವಾಸ: ದುಗ್ಗೊಟ್ಟು ಹೌಸ್, ಸಚ್ಚರಿಪೇಟೆ, ಮುಂಡ್ಕೂರು ಗ್ರಾಮ, ಕಾರ್ಕಳ ತಾಲೂಕುರವರು ನೀಡಿದ ದೂರಿನಂತೆ ಕಾರ್ಕಳ ನಗರ ಠಾಣಾ ಅಪರಾಧ ಕ್ರಮಾಂಕ 196/2014 ಕಲಂ 279, 304 (ಎ) ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕಳವು ಪ್ರಕರಣ
  • ಮಲ್ಪೆ:ಪಿರ್ಯಾದಿದಾರರಾದ ಶ್ರೀಮತಿ ಲೀಲಾವತಿ ಎಸ್ ಅಮೀನ್ ಗಂಡ:ದಿವಂಗತ ಶೇಖರ ಅಮೀನ್, ಸರಕಾರಿ ಪದವಿಪೂರ್ವ ಕಾಲೇಜು ಹತ್ತಿರ ಮೂಡುತೋನ್ಸೆ ಗ್ರಾಮರವರು ದಿನಾಂಕ:23/11/14 ರಂದು ರಾತ್ರಿ ಮನೆಯಲ್ಲಿ ಮಲಗಿದ್ದು ರಾತ್ರಿ 01:45 ಗಂಟೆಗೆ ಯಾರೋ ಕಳ್ಳರು ಕಿಟಕಿಯಿಂದ ಕೈ ಹಾಕಿ ಲೀಲಾವತಿ ಎಸ್ ಅಮೀನ್‌ರವರ ಕುತ್ತಿಗೆಯಲ್ಲಿರುವ ಚಿನ್ನದ ಸರವನ್ನು ಎಳೆದುಕೊಂಡು ಹೋಗಿದ್ದು, ಸದ್ರಿ ಚೈನು 14 ಗ್ರಾಂ ಆಗಿದ್ದು ಅಂದಾಜು ಮೌಲ್ಯ 20,000 ರೂಪಾಯಿ ಆಗಿರುತ್ತದೆ. ಈ ಬಗ್ಗೆ ಲೀಲಾವತಿ ಎಸ್ ಅಮೀನ್‌ರವರು ನೀಡಿದ ದೂರಿನಂತೆ ಮಲ್ಪೆ ಠಾಣಾ ಅಪರಾಧ ಕ್ರಮಾಂಕ 152/2014 ಕಲಂ:380 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: