Saturday, November 22, 2014

Daily Crime Reported As On 22/11/2014 At 19:30 Hrs



ಅಪಘಾತ ಪ್ರಕರಣ

  • ಕಾರ್ಕಳ: ದಿನಾಂಕ: 22/11/2014 ರಂದು ಬೆಳಿಗ್ಗೆ 10:00 ಗಂಟೆಗೆ ಪಿರ್ಯಾದಿದಾರರಾದ ಯೋಗೀಶ್ ಎಂ (30), ತಂದೆ ವಾಸುದೇವ ಕಾಮತ್, ವಾಸ ಸೆಂಟಿಯಾರ್ ಜಂಕ್ಷನ್, ಪುತ್ತೂರು ತಾಲೂಕು ದಕ ಜಿಲ್ಲೆಇವರುಮೋಟಾರ್ ಸೈಕಲ್ ನಂಬ್ರ KA 21 R 6087 ನೇಯದರಲ್ಲಿ  ಮುರಳೀಧರ ನಾಯಕ್ ಎಂಬವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಬೈಪಾಸ್ ರಸ್ತೆಯಾಗಿ ಕಾರ್ಕಳ ತಾಲೂಕು ಕಸಬಾ ಗ್ರಾಮದ ಅತ್ತೂರು ಚರ್ಚ್ ಗೋಪುರದ ಎದುರು ರಾಜ್ಯ ಹೆದ್ದಾರಿಯಲ್ಲಿ  ಬರುತ್ತಿರುವಾಸ್ಕೂಟರ್ ನಂಬ್ರ  KA 20 ED 0019  ನೇಯದನ್ನು ಅದರ ಸವಾರಶ್ಯಾಮ ಸಂದರ್ ರವರುಬಂಗ್ಲೆಗುಡ್ಡೆ ಕಡೆಯಿಂದ  ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಯಾವುದೇ ಸಂಜ್ಞೆ ನೀಡದೇ  ಅತ್ತೂರು  ಚರ್ಚ್‌ ರಸ್ತೆಗೆ ತಿರುಗಿಸಿ ಪಿರ್ಯಾಧಿದಾರರು ಸವಾರಿ ಮಾಡಿಕೊಂಡಿಕೊಂಡಿದ್ದ  ಮೋಟಾರ್ ಸೈಕಲಿಗೆ  ಡಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಸವಾರ ಮತ್ತು ಸಹಸವಾರಿಬ್ಬರಿಗೂ ಸಾದಾ ಸ್ವರೂಪದ ಗಾಯಗಳಾಗಿದ್ದು. ಸ್ಕೂಟರ್ ಸವಾರನಿಗೂ ತಲೆಗೆ ಹಾಗೂ ಇತರೆ ಕಡೆಗೆ ಗಾಯವಾಗಿರುತ್ತದೆ. ಗಾಯಾಳುಗಳು ಚಿಕಿತ್ಸೆ ಬಗ್ಗೆ ಕಾರ್ಕಳ ನರ್ಸಿಂಗ್ ಹೋಂನಲ್ಲಿ  ಒಳರೋಗಿಯಾಗಿ ದಾಖಲಾಗಿದ್ದಾಗಿದೆ ಎಂಬುದಾಗಿ ಯೋಗೀಶ್ ಎಂ ಇವರು ನೀಡಿದ ದೂರಿನಂತೆ ಕಾರ್ಕಳ ನಗರ ಠಾಣಾ ಅಪರಾಧ ಕ್ರಮಾಂಕ 194/2014  ಕಲಂ 279, 337 ಐ.ಪಿ.ಸಿ  ಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.

ಹಲ್ಲೆ ಪ್ರಕರಣ

  • ಶಂಕರನಾರಯಣ: ದಿನಾಂಕ 22.11.14 ರಂದು ಬೆಳಿಗ್ಗೆ ಸುಮಾರು 11:00  ಘಂಟೆ  ಗೆ  ಆರೋಪಿ ಶೇಖರ ಶೆಟ್ಟಿಇವರು ಕುಂದಾಪುರ ತಾಲೂಕಿನ  ಸಿದ್ದಾಪುರ ಗ್ರಾಮದ ಸಿದ್ದಾಪುರ ರಿಕ್ಷಾ ನಿಲ್ದಾಣದ  ಬಳಿ  ನೊಂದಣಿ ಆಗದ ಹೊಸ ಆಟೋರಿಕ್ಷಾವನ್ನು ಫಿರ್ಯಾದಿದಾರರಾದ ಸತೀಶ ಪೂಜಾರಿ (30) ತಂದೆ: ನಾರಾಯಣ ಪೂಜಾರಿ ವಾಸ: ಚೌಕುಳಮಕ್ಕಿ ಆಜ್ರಿ ಗ್ರಾಮ ಕುಂದಾಪುರ ತಾಲುಕುರವರ ಆಟೋರಿಕ್ಷಾಕ್ಕೆ  ಅಡ್ಡವಿಟ್ಟಿದ್ದು ಈ ಸಮಯ ಫಿರ್ಯಾದಿದಾರರು ಯಾಕೇ? ಅಡ್ಡ ಇಟ್ಟಿದ್ದು ಎಂದು ಕೇಳಿದಕ್ಕೆ ಅವಾಚ್ಯ ಶಬ್ದದಿಂದ ಬೈದು ಕಾಂಕ್ರಿಟ್‌ ಕಲ್ಲಿನಿಂದ ಹಲ್ಲೆ ಮಾಡಲು ಬಂದಿದ್ದು ಈ ಸಮಯ ಫಿರ್ಯಾದಿದಾರರು ಕೈ ಅಡ್ಡ ಹಿಡಿದಿದ್ದು ಇದರಿಂದ  ಫಿರ್ಯಾದಿದಾರರ ಬಲಕೈಯ  ಎರಡು ಬೆರಳಿಗೆ  ಹಾಗು  ಎಡಕೈಯ ಮಣಿಗಂಟಿನ ಬಳಿ  ರಕ್ತಗಾಯವಾಗಿರುತ್ತದೆ. ಹಾಗೂ ಈ ಸಮಯ ಗಲಾಟೆ ತಪ್ಪಿಸಲು  ಓಡಿ ಬಂದ ಗೋಪಾಲ ಪುಜಾರಿಯವರಿಗೆ ಸಹ ಆರೋಪಿಯು ಅವಾಚ್ಯ ಶಬ್ದದಿಂದ ಹಲ್ಲೆ ಮಾಡಿದ್ದು ಇದರಿಂದ ಅವರ ಹಣೆಗೆ  ಹಾಗೂ ಬಲಕೈಯ ಹಸ್ತದ ಮೇಲ್ಬಾಗ ರಕ್ತ ಗಾಯವಾಗಿರುತ್ತದೆ ಎಂಬುದಾಗಿ ಸತೀಶ ಪೂಜಾರಿ ಇವರು ನೀಡಿದ ದೂರಿನಂತೆ ಶಂಕರನಾರಯಣ ಠಾಣಾ ಅಪರಾಧ ಕ್ರಮಾಂಕ 178/14 ಕಲಂ 341 324 506  ಐ.ಪಿ.ಸಿ   ಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.

No comments: