Friday, November 21, 2014

Daily Crime Reported As On 21/11/2014 At 17:00 Hrs



ಹಲ್ಲೆ ನಡೆಸಿ ಜೀವ ಬೆದರಿಕೆ ಪ್ರಕರಣ

  • ಶಂಕರನಾಯಣ: ಪಿರ್ಯಾದಿದಾರರಾದ ಶ್ರೀ ಸುರೇಂದ್ರ ನಾಯಕ್‌ (30), ತಂದೆ ಸರ್ವೊತ್ತಮ ನಾಯಕ್‌, ವಾಸ ಶಂಕರನಾರಾಯಣ ಪಿ.ಯು ಕಾಲೇಜು ಹತ್ತಿರ, ಶಂಕರನಾರಾಯಣ ಗ್ರಾಮ ಇವರು ಬಸ್‌ ಕಂಡೆಕ್ಟರ್‌‌ ಆಗಿದ್ದು ದಿನಾಂಕ 20/11/2014 ರಂದು 18:15 ಗಂಟೆಯ ಸಮಯಕ್ಕೆ ಸಿದ್ದಾಪುರ ಪೇಟೆಯ ಅಯ್ಯಂಗಾರ್‌ ಬೇಕರಿ ಬಳಿ ಬಸ್ಸಿನ ಹತ್ತಿರ ನಿಂತುಕೊಂಡಿದ್ದಾಗ ಅರೋಪಿತರುಗಳಾದ ನವೀನ, ಸಂತೋಷ, ಜಯಕರ, ಶ್ರೀಧರ ಇವರುಗಳು ಸಮಾನ ಉದ್ದೇಶದಿಂದ ಈ ಹಿಂದಿನ ದ್ವೇಷದಿಂದ ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಕೈಯಿಂದ ನಂತರ ಚಪ್ಪಲಿಯಿಂದ ಪಿರ್ಯಾದಿದಾರರಿಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾಗಿದೆ. ಎಂಬುದಾಗಿ ಸುರೇಂದ್ರ ನಾಯಕ್‌ ಇವರು ನೀಡಿದ ದೂರಿನಂತೆ ಶಂಕರನಾರಯಣ ಠಾಣಾ ಅಪರಾಧ ಕ್ರಮಾಂಕ 176/14 ಕಲಂ 341, 323, 355, 506 ಜೊತೆಗೆ 34 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ. 

ಇತರ ಪ್ರಕರಣ 

  • ಉಡುಪಿ: ಪಿರ್ಯಾದಿದಾರರಾದ ಕೆ ರಂಜನ್ ಕಲ್ಕೂರ, ತಂದೆ ಗೋಪಾಲಕೃಷ್ಣ ಕಲ್ಕೂರ, ವಾಸ ಕಲ್ಕೂರ ಬಿಲ್ಡರ್ಸ್ ಮತ್ತು ಡೆವಲೋಪರ್ಸ್ ಉಡುಪಿ ತಾಲೂಕು ಇವರು ಕಲ್ಸಂಕ ಬಳಿ ಜಾಗ ತೆಗೆದುಕೊಂಡಿದ್ದು ದಿನಾಂಕ 21/11/2014ರಂದು ಬೆಳಗ್ಗೆ 9:45 ಗಂಟೆಗೆ ಸದ್ರಿ ಜಾಗವನ್ನು ಸಮತಟ್ಟುಗೊಳಿಸಲು ಹಿಟಾಚಿಯನ್ನು ನಗರ ಸಭೆಯ ರಸ್ತೆಯಲ್ಲಿ ತರುವಾಗ ಆರೋಪಿತ ಪ್ರಭಾಕರ ಪೂಜಾರಿ ಎಂಬವರು  ಶ್ರೀನಿಧಿ  ಹೋಮ್ಸ್ ಕಲ್ಸಂಕ ಉಡುಪಿ ತಾಲೂಕು ಇವರ ವಾಹನವನ್ನು ತಡೆದು ಫಿರ್ಯಾದಿದಾರರ ಜಾಗಕ್ಕೆ ಹೋಗದಂತೆ ತಡೆದು ಫಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ  ಬೈದು ನನಗೆ ಮುಂಬೈನಲ್ಲಿ ಜನ ಇದ್ದರೆ ನಿನ್ನನ್ನು ಮುಗಿಸುತ್ತೇನೆ. ಎಂದು ಜೀವ ಬೆದರಿಕೆ ಹಾಕಿದ್ದು,  ಮತ್ತು ಹಿಟಾಚಿಯ ಡ್ರೈವರ್‌ರವರಿಗೆ ಹಿಟಾಚಿಯನ್ನು ವಾಪಾಸು ತೆಗದುಕೊಂಡು  ಹೋಗುವಂತೆ ಜೋರು ಮಾಡಿರುತ್ತಾರೆ. ನಂತರ ಹಿಟಾಚಿ ತೆಗದುಕೊಂಡು ಹೋಗಿ ಕೆಲಸ ಮುಂದುವರೆಸಿದ್ದು ನಂತರ ಪುನಾಃ ಬಂದ ಆರೋಪಿತರು ನೀವು ಹೊರಗೆ ಹೇಗೆ ಹೊಗುತ್ತೀರಿ ನಾನು ನೋಡುತ್ತೇನೆ ಎಂದು ಹೇಳಿ ಕೆಂಪು ಬಣ್ಣದ ಕ್ವಾಲಿಸ್ ಅನ್ನು  ರಸ್ತೆಯಲ್ಲಿ  ಹಿಟಾಚಿಗೆ ಅಡ್ಡವಾಗಿ ಇಟ್ಟು ಹೊರಗೆ ಹೋಗದಂತೆ ದಿಗ್ಭಂದಿಸಿರುತ್ತಾರೆ ಎಂಬುದಾಗಿ ಕೆ ರಂಜನ್ ಕಲ್ಕೂರ ಇವರು ನೀಡಿದ ದೂರಿನಂತೆ ಉಡುಪಿ ನಗರ ಠಾಣಾ ಅಪರಾಧ ಕ್ರಮಾಂಕ 334/14 ಕಲಂ 341, 506, 504 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಮಣಿಪಾಲ: ದಿನಾಂಕ 20.11.14ರಂದು ರಾತ್ರಿ 1:05ಗಂಟೆಗೆ ತ್ರಿವೇಡ್ರಮ್‌ ನಿಂದ ಕುರ್ಲಾ ಕಡೆಗೆ ನೇತ್ರಾವತಿ ಎಕ್ಸ್‌ಪ್ರೆಸ್‌ ಸಂಚರಿಸುತ್ತಿದ್ದ ಸಮಯ ಇಂದ್ರಾಳಿ ರೈಲ್ವೆ ಬ್ರಿಡ್ಜ್‌ನ ಕೆಳಗೆ 690/8 ರಿಂದ 690/9ರ ಕಿ.ಮೀ ಟ್ಯಾಕ್‌‌ನ ಬಳಿ ಅನಾಥ ಗಂಡಸಿನ ಮೃತದೇಹವು ರೈಲ್ವೆ ಹಳ್ಳಿಯಲ್ಲಿ ಪತ್ತೆಯಾಗಿರುವುದಾಗಿದೆ ಪಿರ್ಯಾದಿದಾರರಾಧ ದಿನೇಶ್‌.ಪೈ, ಸ್ಟೇಷನ್‌ ಮಾಸ್ಟರ್‌, ಕೊಂಕಣ ರೈಲ್ವೇ ಕಾರ್ಪೋರೇಷನ್‌ ಲಿ ಉಡುಪಿ ಇವರು ನೀಡಿದ ದೂರಿನಂತೆ ಮಣಿಪಾಲ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 40/2014, ಕಲಂ 174 ಸಿ.ಆರ್‌.ಪಿ.ಸಿಯಂತೆ ಪ್ರಕ ರಣ ದಾಖಲಿಸಿ ತನಿಖೆಯಲ್ಲಿರುತ್ತದೆ.

ಅಪಘಾತ ಪ್ರಕರಣಗಳು  

  • ಮಣಿಪಾಲ: ದಿನಾಂಕ 13.11.14ರಂದು ಪಿರ್ಯಾದಿದಾರರಾದ ಜಿ.ರಾಘವೇಂದ್ರ ಭಟ್‌, ತಂದೆ ದಿ. ಲಕ್ಷ್ಮಿನಾರಯಣ ಭಟ್‌, ವಾಸ ಶರರ್ವ, ಮೂಡುಪೆರಂಪಳ್ಳಿ, ಕುಂಜಿಬೆಟ್ಟು ಅಂಚೆ, ಉಡುಪಿ ಇವರ ಹೆಂಡತಿ ತನ್ನ ಬಾಬ್ತು ಸ್ಕೂಟಿ ನಂಬ್ರ ಕೆಎ 20ಡಬ್ಲ್ಯೂ 8728ನೇದರಲ್ಲಿ ತನ್ನ ಮಗನನ್ನು ಕುಳ್ಳಿರಿಸಿಕೊಂಡು ಉಡುಪಿ ಮುಕುಂದಾ ಕೃಪಾ ಶಾಲೆಯಿಂದ ಮನೆಯ ಕಡೆಗೆ ಪೆರಂಪಳ್ಳಿ ಚರ್ಚ್ ಕಡೆಯಿಂದ ಬೊಬ್ಬರ್ಯ ಕಟ್ಟೆ ಕಡೆಗೆ ಸವಾರಿ ಮಾಡಿಕೊಂಡು ಹೋಗುವಾಗ ಮಧ್ಯಾಹ್ನ 12:45ಗಂಟೆಗೆ ಹಳೆ ಬಸ್ಸು ನಿಲ್ದಾಣದ ಬಳಿ ತಲುಪುವಾಗ ಸ್ಕೂಟರ್‌ ಸ್ಕಿಡ್‌ ಆಗಿ ಬಿದ್ದು ಪಿರ್ಯಾದಿದಾರರ ಹೆಂಡತಿಯ ಬಲಕಾಲಿಗೆ ತೀವ್ರ ಗಾಯವಾಗಿದ್ದು, ಮಗನಿಗೆ ತರಚಿದ ಗಾಯವಾಗಿರುತ್ತದೆ. ಪಿರ್ಯಾದಿದಾರರು ಅಪಘಾತದ ವಿಚಾರ ತಿಳಿದು ಅಲ್ಲಿಗೆ ಹೋಗಿ ಹೆಂಡತಿಯನ್ನು ಚಿಕಿತ್ಸೆಯ ಬಗ್ಗೆ ಬಾಳಿಗಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹೆಚ್ಚಿನ ಚಿಕಿತ್ಸೆಯ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದಾಗಿದೆ. ಈ ಅಪಘಾತದಿಂದ ಸ್ಕೂಟಿ ಜಖಂಗೊಂಡಿರುತ್ತದೆ. ಈ ಅಪಘಾತವು ಪಿರ್ಯಾದಿದಾರರ ಹೆಂಡತಿಯ ನಿರ್ಲಕ್ಷ್ಯತನದಿಂದ ಸಂಭವಿಸಿದ್ದಾಗಿರುತ್ತದೆ. ಎಂಬುದಾಗಿ ಜಿ.ರಾಘವೇಂದ್ರ ಭಟ್‌ ಇವರು ನೀಡಿದ ದೂರಿನಂತೆ ಮಣಿಪಾಲ ಠಾಣಾ ಅಪರಾಧ ಕ್ರಮಾಂಕ 192/14 ಕಲಂ 279, 338 ಐಪಿಸಿ ಐ.ಪಿ.ಸಿ ಯಂತೆ ಪ್ರಕರಣದಾಖಲಿಸಿ ತನಿಖೆಯಲ್ಲಿರುತ್ತದೆ.

  • ಮಣಿಪಾಲ: ಪಿರ್ಯಾದಿದಾರರಾದ ಪ್ರಶಾಂತ್ ಶೆಟ್ಟಿ, ತಂದೆ ರಾಜು ಶೆಟ್ಟಿ, ವಾಸ: ಆರ್ಶಿವಾದ್‌, ಹಿರಿಯಡ್ಕ ಅಂಚೆ, ಅಂಜಾರು ಗ್ರಾಮ, ಉಡುಪಿ ತಾಲೂಕು ಇವರು ತಮ್ಮ ಸಂಸ್ಥೆಯ ಉದ್ಯೋಗಿ ಶಬರೀಶರವರೊಂದಿಗೆ ಸಂಸ್ಥೆಯ ಬೈಕ್‌ ಕೆಎ 21ಎಸ್‌ ‌1025ನೇದರಲ್ಲಿ ಸಹ ಸವಾರರಾಗಿ ಕುಳಿತುಕೊಂಡು ಉಡುಪಿ ಕಡೆಗೆ ಮಣಿಪಾಲ ಉಡುಪಿ ರಸ್ತೆಯಲ್ಲಿ ಹೋಗುತ್ತಿರುವಾಗ ಸಂಜೆ ಸುಮಾರು 6:45ಗಂಟೆಗೆ ಮಣಿಪಾಲದ INOX ಥಿಯೇಟರ್ ಬಳಿ ತಲುಪುವಾಗ ಎದುರಿನಿಂದ ಕೆಎ 20ವಿ 8698ನೇದರ ಬಜಾಜ್‌ ಪಲ್ಸರ್‌‌ನ ಸವಾರನು ತಾನು ಸವಾರಿ ಮಾಡಿಕೊಂಡು ಬರುತ್ತಿದ್ದ ಬೈಕನ್ನು ಅತೀ ವೇಗ ಮತ್ತು ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರು ಹೋಗುತ್ತಿದ್ದ ಮೋಟಾರ್ ಸೈಕಲ್‌ಗೆ ಢಿಕ್ಕಿ ಹೊಡೆದನು ಪರಿಣಾಮ ಪಿರ್ಯಾದಿದಾರರು ಸಹ ಸವಾರರಾಗಿ ಕುಳಿತ್ತಿದ್ದ ಮೋಟಾರ್‌ ಸೈಕಲ್‌ನ ಸವಾರ ಶಬರೀಶರವರಿಗೆ ಮುಖ ಹಾಗೂ ಕಾಲಿಗೆ ತೀವ್ರ ತರದ ಜಖಂ ಉಂಟಾಗಿದ್ದಾಗಿದೆ ಎಂಬುದಾಗಿ ಪ್ರಶಾಂತ್ ಶೆಟ್ಟಿ ಇವರು ನೀಡಿದ ದೂರಿನಂತೆ ಮಣಿಪಾಲ ಠಾಣಾ ಅಪರಾಧ ಕ್ರಮಾಂಕ 193/14 ಕಲಂ 279,337 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.

No comments: