Friday, November 21, 2014

Daily Crime Reports as on 21/11/2014 at 19:30 Hrs



ಅಪಘಾತ ಪ್ರಕರಣಗಳು

  • ಮಲ್ಪೆ: ದಿನಾಂಕ: 20/11/2014 ರಂದು ಪಿರ್ಯಾದಿದಾರರಾದ ಸಂತೋಷ (27) ತಂದೆ: ವಾಸುದೇವ್ ನಾಯಕ್, ವಾಸ:ಶಾರದಾ ನಿವಾಸ,ಒಂತಿಬೆಟ್ಟು,ಅಂಜಾರು ಗ್ರಾಮ, ಉಡುಪಿ ತಾಲೂಕು ರವರು TVS STAR CITY ಹೊಸ ಮೋಟಾರು ಸೈಕಲಿನಲ್ಲಿ ಅವರ ಸಹದ್ಯೋಗಿ ಅಶ್ವತನೊಂದಿಗೆ ಸಹಸವಾರರಾಗಿ ಕಳಿತುಕೊಂಡು ಕಂಪ್ಯೂಟರ್‌ ರಿಪೇರಿಗೆ ಬಗ್ಗೆ ಹೋದವರು ರಿಪೇರಿ ಮುಗಿಸಿ ವಾಪಾಸು ಮಲ್ಪೆ ಕೆಡೆಯಿಂದ ಉಡುಪಿ ಕಡೆಗೆ ಹೋಗುತ್ತಿರುವಾಗ ಕಲ್ಮಾಡಿ ಜಂಕ್ಷನ್ ಬಳಿ ತಲುಪುವಾಗ ಸಮಯ ಸುಮಾರು 11:00 ಗಂಟೆಗೆ ಉಡುಪಿ ಕಡೆಯಿಂದ ಮಲ್ಪೆ ಕಡೆಗೆ ಒಂದು ವಾಹನ ಬರುವುದನ್ನು ನೋಡಿ ಮೋಟಾರ್‌ ಸೈಕಲ್‌ ಸವಾರ ಅಶ್ವತನು ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಒಮ್ಮೆಲೇ ಬ್ರೇಕ್‌ ಹಾಕಿದ ಪರಿಣಾಮ ಪಿರ್ಯಾದಿದಾರರು ಹಾಗೂ ಸವಾರ ಅಶ್ವತ್‌ ಮೋಟಾರ್‌ ಸೈಕಲ್‌ ಸಮೇತ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರ ಎಡಗೈಯ ಉಂಗುರ ಬೆರಳಿಗೆ ರಕ್ತ ಗಾಯ ಹಾಗೂ ಸವಾರರಿಗೆ ಸಣ್ಣ ಪುಟ್ಟ ಗಾಯವಾಗಿರುತ್ತದೆ ಎಂಬುದಾಗಿ ಸಂತೋಷ ರವರು ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 151/2014 ಕಲಂ 279,337, ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಕುಂದಾಪುರ: ದಿನಾಂಕ 20/11/2014 ರಂದು ರಾತ್ರಿ ಸಮಯ ಸುಮಾರು 10:15 ಗಂಟೆಗೆ ಕುಂದಾಪುರ ತಾಲೂಕು ಹೆಮ್ಮಾಡಿ  ಗ್ರಾಮದ ಜಾಲಾಡಿ ಬಳಿ ರಾ.ಹೆ 66 ರಸ್ತೆಯಲ್ಲಿ ಆಪಾದಿತ ರವಿರಾಜ್ ಎಂಬವರು KA20-W-2323 ನೇ ಬೈಕ್ ನಲ್ಲಿ ಪಿರ್ಯಾದಿದಾರರಾದ ಸಂದೀಪ (35) ತಂದೆ ದಿ.ಕಾಳ ನಾಯ್ಕ ವಾಸ: ಜ್ಯೋತಿ ನಿಲಯ, ಹೊಂಡದ ಮನೆ, ವಂಡ್ಸೆ ಗ್ರಾಮ & ಅಂಚೆ, ಕುಂದಾಪುರ ತಾಲೂಕು ಎಂಬವರನ್ನು ಸಹ ಸವಾರರಾಗಿ ಕುಳ್ಳಿರಿಸಿಕೊಂಡು ಕುಂದಾಪುರ ಕಡೆಯಿಂದ ತ್ರಾಸಿ ಕಡೆಗೆ ಅತೀವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಹೋಗಿ ಎದುರುಗಡೆಯಿಂದ ಬಂದ ವಾಹನ ನೋಡಿ  ಅಜಾಗರುಕತೆಯಿಂದ ರಸ್ತೆಯ ಅಂಚಿಗೆ  ಸವಾರಿ  ಮಾಡಿದ ಪರಿಣಾಮ  ಬೈಕ್‌ ಸ್ಕಿಡ್‌‌ ಆಗಿ ಪಿರ್ಯಾದಿದಾರರು ಬೈಕ್‌ ಸಮೇತ ರಸ್ತೆಯಲ್ಲಿ ಬಿದ್ದು ಗಾಯಗೊಂಡು ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಕುಂದಾಪುರ  ವಿನಯ  ಆಶ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವುದಾಗಿದೆ ಎಂಬುದಾಗಿ ಸಂದೀಪ ರವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 143/2014 ಕಲಂ 279,337, ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಹಲ್ಲೆ ಪ್ರಕರಣ

  • ಶಂಕರನಾರಾಯಣ: ಪಿರ್ಯಾದಿದಾರರಾದ ನವೀನ್‌ ಪ್ರಾಯ: 24 ವರ್ಷ, ತಂದೆ: ಬಾಸ್ಕರ್‌ ಗಾಣಿಗ, ವಾಸ: ಕರಣಿಕರಬೆಟ್ಟು, ಕಾವ್ರಾಡಿ ಗ್ರಾಮ ಮತ್ತು ಅಂಚೆ ಕುಂದಾಪುರ ತಾಲೂಕು ರವರು, ಸಂತೋಷ್‌, ಜಯಕರ ಮತ್ತು ಶ್ರೀದರ ರವರು ಕೆನರಾ ಕೈಂಬೈನ್‌ಡ್‌ ಟ್ರಾನ್ಸಪೋರ್ಟ್ ಕಂಪೆನಿಯಲ್ಲಿ ಚೆಕಿಂಗ್‌ ಇನ್ಸ್‌ ಪೆಕ್ಟರ್‌ ಆಗಿ ಕೆಲಸ ಮಾಡಿಕೊಂಡಿದ್ದು ಆರೋಪಿ ಸುರೇಂದ್ರ ಎಂಬವರು ದುರ್ಗಾಂಭ ಬಸ್‌ನಲ್ಲಿ ನಿರ್ವಾಹಕನಾಗಿ ಕೆಲಸ ಮಾಡಿಕೊಂಡಿರುತ್ತಾರೆ. ಸುಮಾರು 1 ವಾರದ ಹಿಂದೆ ಪಿರ್ಯಾದಿದಾರರಾದ ನವೀನ್‌ ಮತ್ತು  ಸಂತೋಷ್‌ ರವರು ಆರೋಪಿ ಸುರೇಂದ್ರ ರವರು ನಿರ್ವಾಹಕನಾಗಿ ಕೆಲಸ ಮಾಡಿಕೊಂಡಿದ್ದ ಬಸ್‌ನ್ನು ಚೆಕ್‌ಮಾಡಿ ಆರೋಪಿ ಬಸ್‌ನಲ್ಲಿ 4 ಸೀಟ್‌ ಎಕ್ಸೇಸ್‌ ಇಟ್ಟ ಬಗ್ಗೆ ಪಿರ್ಯಾದಿದಾರರಾದ ನವೀನ್‌ ಮತ್ತು  ಸಂತೋಷ್‌ ರವರು ದುರ್ಗಾಂಬ ಬಸ್‌ನ ಮಾಲಕರಿಗೆ ವರದಿ ನೀಡಿರುತ್ತಾರೆ. ಇದರಿಂದ ಆರೋಪಿ ಸುರೇಂದ್ರ ಸಿಟ್ಟುಗೊಂಡಿದ್ದು, ದಿನಾಂಕ 21-11-2104 ರಂದು ಬಸ್‌ ಚೆಕ್ಕಿಂಗ್‌ ಬಗ್ಗೆ ಚೆಕಿಂಗ್‌ ಇನ್ಸ್‌ ಪೆಕ್ಟರ್‌ ಗಳಾದ ಜಯಕರ ಮತ್ತು ಶ್ರೀದರ ರವರು ಬಸ್‌ನಲ್ಲಿದ್ದಾಗ ಆರೋಪಿಯು ಅವಾಚ್ಯ ಶಬ್ದಗಳಿಂದ ಬೈದಿದ್ದು, ಈ ವಿಚಾರವನ್ನು  ಜಯಕರ ಮತ್ತು ಶ್ರೀದರ ರವರು ನವೀನ್‌ ಮತ್ತು  ಸಂತೋಷ್‌ರವರಿಗೆ ತಿಳಿಸಿ  ಈ ವಿಚಾರದ ಬಗ್ಗೆ ದಿನಾಂಕ 21-11-2014 ರಂದು ಸಂಜೆ 6:15 ಗಂಟೆಗೆ ಸಿದ್ದಾಫುರ ಗ್ರಾಮದ ಸಿದ್ದಾಫುರ ಅಯ್ಯಂಗರ್‌ ಬೇಕರಿ ಎದುರು ಇದ್ದ ಆರೋಪಿ ಸುರೇಂದ್ರ ನಲ್ಲಿ  ನವೀನ್‌, ಸಂತೋಷ್‌, ಜಯಕರ ಮತ್ತು ಶ್ರೀದರ ರವರು ಕೇಳಿದಾಗ ಆರೋಪಿ ಸುರೆಂದ್ರ ಸಿಟ್ಟುಗೊಂಡು ಇತರ ನಾಲ್ಕು ಜನ ಆರೋಪಿತರೊಂದಿಗೆ ಸಮಾನ ಉದ್ದೇಶದಿಂದ ಸೇರಿ ನವೀನ್‌, ಸಂತೋಷ್‌, ಜಯಕರ ಮತ್ತು ಶ್ರೀದರ ರವರಿಗೆ ಹಲ್ಲೆ ನಡೆಸಿ ತಡೆದು ನಿಲ್ಲಿಸಿರುತ್ತಾರೆ ಎಂಬುದಾಗಿ ನವೀನ್‌ ರವರು ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 177/2014 ಕಲಂ 143, 504, 323, 341 ಜೊತೆಗೆ 149 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

No comments: