Wednesday, October 22, 2014

Daily Crimes Reported as On 22/10/2014 17:00 Hrs


ಕಳವು ಪ್ರಕರಣ
  • ಕುಂದಾಪುರ:ಪಿರ್ಯಾದಿದಾರರಾದ ಶಿವಾನಂದ ಬಸವರಾಜ ಬೆಡಸೂರ (21) ತಂದೆ:ಬಿ.ಎನ್‌ ಬೆಡಸೂರು ವಾಸ:ರೂಮ್‌ ನಂಬ್ರ:205, ಎಂ.ಐ.ಟಿ ಹಾಸ್ಟೆಲ್‌, ಮೂಡ್ಲಕಟ್ಟೆ, ಕುಂದಾಪುರ, ಖಾಯಂ ವಾಸ:ರಾಮಪುರ ಬಡಾವಣೆ, ಸವದತ್ತಿ ತಾಲೂಕು, ಬೆಳಗಾಮ್‌ರವರು ಮೂಡ್ಲಕಟ್ಟೆ ಎಂ.ಐ.ಟಿ ಕಾಲೇಜಿನಲ್ಲಿ 3 ನೆ ವರ್ಷದ ಬಿ.ಇ ವಿದ್ಯಾಭ್ಯಾಸ ಮಾಡುತ್ತಿದ್ದು, ಕುಂದಾಪುರ ತಾಲೂಕು ಕಂದಾವರ ಗ್ರಾಮದ ಮೂಡ್ಲಕಟ್ಟೆ ಎಂ.ಐ.ಟಿ ಕಾಲೇಜ್‌ ಹಾಸ್ಟೆಲ್‌ನ 2ನೇ ಮಹಡಿಯ ರೂಮ್‌ ನಂಬ್ರ:205 ರಲ್ಲಿ ವಾಸ್ತವ್ಯವಿದ್ದು, ದಿನಾಂಕ:16/10/2014 ರಂದು ಮಧ್ಯಾಹ್ನ 1:30 ಗಂಟೆಯಿಂದ ಸಂಜೆ 5:00 ಗಂಟೆ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಶಿವಾನಂದ ಬಸವರಾಜ ಬೆಡಸೂರರವರು ತನ್ನ ರೂಮಿನಲ್ಲಿ ಇರಿಸಿದ್ದ ಲೆನೆವೊ ಲ್ಯಾಪ್‌ಟಾಪನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಲ್ಯಾಪ್‌ಟಾಪ್‌ನ ಅಂದಾಜು ಮೌಲ್ಯ ರೂಪಾಯಿ 25,000/- ಆಗಬಹುದು ಎಂಬುದಾಗಿ ಶಿವಾನಂದ ಬಸವರಾಜ ಬೆಡಸೂರರವರು ನೀಡಿದ ದೂರಿನಂತೆ ಕುಂದಾಪುರ ಠಾಣಾ ಅಪರಾಧ ಕ್ರಮಾಂಕ:344/2014  ಕಲಂ:454, 380 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ವರದಕ್ಷಿಣೆ ಕಿರುಕುಳ ಪ್ರಕರಣ
  • ಕುಂದಾಪುರ:ಪಿರ್ಯಾದಿದಾರರಾದ ಶ್ರೀಮತಿ ಮಾಲಾಶ್ರಿ ಗಣೇಶ್‌ ಕುಂದಾಪುರಕರ್‌ (32) ಗಂಡ:ಗಣೇಶ್‌ ವಿಜಯ ಕುಂದಾಪುರಕರ್‌ ವಾಸ: ಗಿರಿಜ ಸದನ, ಕೋಡಿ ರಸ್ತೆ, ಕಸಬ ಗ್ರಾಮ, ಕುಂದಾಪುರ ತಾಲೂಕುರವರು ಆರೋಪಿ ಗಣೇಶ್‌ ವಿಜಯ ಕುಂದಾಪುರಕರ್‌ರವರನ್ನು ದಿನಾಂಕ:06/05/2009 ರಂದು ಕುಂದಾಪುರ ತಾಲೂಕು ಕುಂಭಾಶಿ ಗ್ರಾಮದ ಜಗನ್ನಾಥ ಸಭಾಗ್ರಹದಲ್ಲಿ ಸಂಪ್ರದಾಯದಂತೆ ಮದುವೆಯಾಗಿದ್ದು, ಮದುವೆ ಬಳಿಕ ಮಾಲಾಶ್ರಿ ಗಣೇಶ್‌ ಕುಂದಾಪುರಕರ್‌ರವರು ಬೆಳಗಾಂ ಮಾರುತಿ ನಗರದ ಸಾಂಬ್ರಾರಸ್ತೆ 3ನೇ ಕ್ರಾಸ್ ನಲ್ಲಿ ಆರೋಪಿ ಜೊತೆ ವಾಸ್ತವ್ಯವಿದ್ದು, ಆರೋಪಿಗಳಾದ 1)ಗಣೇಶ್‌ ವಿಜಯ ಕುಂದಾಪುರಕರ್‌ 2)ರೇಣುಕಾ ಕುಂದಾಪುರಕರ್‌ 3) ಶ್ರೀಮತಿ ದೀಪಾ ಹವಾಲಿ 4) ಮಹಾಂತೇಶ ಹವಾಲಿ ಇವರುಗಳು ಮಾಲಾಶ್ರಿ ಗಣೇಶ್‌ ಕುಂದಾಪುರಕರ್‌ರವರ ತಾಯಿ ಶ್ರೀಮತಿ ಲಲಿತರವರಿಂದ ರೂಪಾಯಿ 50,000 ವರದಕ್ಷಿಣೆಯಾಗಿ ಪಡೆದಿದ್ದು 2 ತಿಂಗಳ ಬಳಿಕ ಆರೋಪಿಗಳು ಪುನಃ ಮಾಲಾಶ್ರಿ ಗಣೇಶ್‌ ಕುಂದಾಪುರಕರ್‌ರವರ ತಾಯಿಯಿಂದ 50,000/- ವರದಕ್ಷಿಣೆ ಹೆಚ್ಚಿಗೆಯಾಗಿ ಬೇಡಿಕೆ ಇಟ್ಟು, ಮಾಲಾಶ್ರಿ ಗಣೇಶ್‌ ಕುಂದಾಪುರಕರ್‌ರವರಿಗೆ ಮಾನಸಿಕ ಹಾಗೂ ದೈಹಿಕ  ಹಿಂಸೆ ನೀಡಿರುತ್ತಾರೆ. ಅಲ್ಲದೇ ಮಾಲಾಶ್ರಿ ಗಣೇಶ್‌ ಕುಂದಾಪುರಕರ್‌ರವರ ತಾಯಿ ಆರೋಪಿ ಗಣೇಶ್‌ ವಿಜಯ ಕುಂದಾಪುರಕರ್‌ರವರಿಗೆ  70,000/- ಹೆಚ್ಚಿಗೆ ವರದಕ್ಷಿಣೆ ಪಾವತಿಸಿದ್ದಲ್ಲದೇ, ಆರೋಪಿ ಗಣೇಶ್‌ ವಿಜಯ ಕುಂದಾಪುರಕರ್‌, ಮಾಲಾಶ್ರಿ ಗಣೇಶ್‌ ಕುಂದಾಪುರಕರ್‌ರವರ 15 ಪವನ್ ಚಿನ್ನವನ್ನು ತೆಗೆದುಕೊಂಡು ವಾಪಾಸ್ಸು ನೀಡಿರುವುದಿಲ್ಲ.ಈ ಬಗ್ಗೆ ಮಾಲಾಶ್ರಿ ಗಣೇಶ್‌ ಕುಂದಾಪುರಕರ್‌ರವರು ನೀಡಿದ ದೂರಿನಂತೆ ಕುಂದಾಪುರ ಠಾಣಾ ಅಪರಾಧ ಕ್ರಮಾಂಕ 345/2014  ಕಲಂ:323, 498 (ಎ), 504, 506 ಜೊತೆಗೆ 34 ಐ.ಪಿ.ಸಿ ಕಲಂ:3, 4, 6 ಡಿ.ಪಿ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅಪಘಾತ ಪ್ರಕರಣ 
  • ಬ್ರಹ್ಮಾವರ: ದಿನಾಂಕ 22/10/2014 ರಂದು 09:30 ಗಂಟೆಗೆ ಉಡುಪಿ ತಾಲೂಕು ನೀಲಾವರ ಗ್ರಾಮದ ರಾಜೇಶ್ ಎಂಬವರ ದಿನಸಿ ಅಂಗಡಿಯ ಬಳಿ ಆರೋಪಿ ಕೃಷ್ಣ  ಎಂಬವರು ತನ್ನ ಮಾರುತಿ ಒಮಿನಿ ಕಾರು ನಂಬ್ರ ಕೆಎ-19-ಸಿ-4616 ನೇ ಯದನ್ನು ಹೆಬ್ರಿ ಕಡೆಯಿಂದ ಬ್ರಹ್ಮಾವರ ಕಡೆಗೆ ಹಾದು ಹೋಗುವ ಸಾರ್ವಜನಿಕ ರಸ್ತೆಯಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲ ಭಾಗದಿಂದ ಚಲಾಯಿಸಿಕೊಂಡು ಬಂದು ಬ್ರಹ್ಮಾವರ ಕಡೆಯಿಂದ ಹೆಬ್ರಿ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೋಟಾರು ಸೈಕಲ್ ನಂಬ್ರ ಕೆಎ-20-ಇಸಿ-9389 ನೇ ಯದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್ ಸವಾರನಾದ ಮಥನ್ ಎಂಬವನು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು ಬಲ ಕಾಲು ಮತ್ತು ಸೊಂಟಕ್ಕೆ ತೀವ್ರ ಜಖಂಗೊಂಡವನನ್ನು ಚಿಕಿತ್ಸೆಯ ಬಗ್ಗೆ  ಮೊದಲು ಬ್ರಹ್ಮಾವರದ ಮಹೇಶ್ ಆಸ್ಪತ್ರೆಗೆ ದಾಖಲಿಸಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಆಸ್ಪತ್ರೆಗೆ ತಲುಪುವಾಗ ಮೃತಪಟ್ಟಿರುವುದಾಗಿರುತ್ತದೆ ಎಂಬುದಾಗಿ ರಾಜೀವ ಕುಲಾಲ (40) ತಂದೆ; ಶೀನ ಕುಲಾಲ್ ವಾಸ: ಶ್ರೇಯಸ್ ಮೇಲಡ್ಪು, ಆರೂರು ಗ್ರಾಮ ಉಡುಪಿ ತಾಲೂಕು ರವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 194/2014 ಕಲಂ: 279, 304 (ಎ) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: