Wednesday, October 22, 2014

Daily Crime Reports as on 22/10/2014 at 07:00 Hrs

ಅಪಘಾತ ಪ್ರಕರಣಗಳು
  • ಕಾರ್ಕಳ ಗ್ರಾಮಾಂತರ:ಪಿರ್ಯಾದಿದಾರರಾದ ಮಹಾಬಲ ಪೂಜಾರಿ (55) ತಂದೆ: ಬಾಬು ಪೂಜಾರಿ, ವಾಸ: ಶ್ರೀ ಲಕ್ಷ್ಮಿ ನಿವಾಸ, ಮಂಜಲ್ಪಾಡಿ, ನಿಟ್ಟೆ ಗ್ರಾಮ.ಕಾರ್ಕ ತಾಲೂಕುರವರ ಮಗ ಮಣಿರಾಜ್ (23) ಎಂಬುವರು ದಿನಾಂಕ:20/10/2014 ರಂದು ಸಂಜೆ ಸುಮಾರು 19:00 ಗಂಟೆಗೆ ಬೆಳ್ಮಣ್ ಗ್ರಾಮದ ಜಂತ್ರಾಬಸ್ ತಂಗುದಾಣದ ಬಳಿ  ರಸ್ತೆಯಲ್ಲಿ ಬರುತ್ತಿರುವಾಗ  ಬೆಳ್ಮಣ್ ಕಡೆಯಿಂದ ಉಡುಪಿ ಕಡೆಗೆ ಕೆ.ಎ 20 ಎ 5771 ನೇ ಮಿನಿ ಟಿಪ್ಪರ್ ಚಾಲಕ ಮೊಹಮ್ಮದ್ ರಫಿಕ್ ತನ್ನ ಟಿಪ್ಪರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ ಅಂದರೆ  ಉಡುಪಿಯಿಂದ ಮಂಚಕಲ್ ಮಾರ್ಗವಾಗಿ ಬೆಳ್ಮಣ್‌  ಕಡೆಗೆ ಬರುತ್ತಿದ್ದ ಮಹಾಬಲ ಪೂಜಾರಿರವರ ಮಗನು ಚಲಾಯಿಸುತ್ತಿದ್ದ ಹೋಂಡಾ ಶೈನ್ (ರಿಜಿಸ್ಟ್ರೇಷನ್ ಆಗದ) ಬೈಕ್‌ಗೆ  ಡಿಕ್ಕಿ ಹೊಡೆದ ಪರಿಣಾಮ ಮಹಾಬಲ ಪೂಜಾರಿರವರ ಮಗ ಮಣಿರಾಜ್ ಇವರಿಗೆ ಮುಖ ಹಾಗೂ ಕಣ್ಣಿನ ಭಾಗಕ್ಕೆ ರಕ್ತ ಗಾಯ ಹಾಗೂ ತಲೆಯ ಹಿಂಬಾಗಕ್ಕೆ ಪೆಟ್ಟಾಗಿರುತ್ತದೆ. ಅಲ್ಲದೇ ಮಹಾಬಲ ಪೂಜಾರಿರವರ ಹೊಸ ಮೋಟಾರ್ ಸೈಕಲ್  ಜಖಂಗೊಂಡಿರುವುದಾಗಿದೆ.ಈ ಬಗ್ಗೆ ಮಹಾಬಲ ಪೂಜಾರಿರವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಠಾಣಾ ಅಪರಾಧ ಕ್ರಮಾಂಕ 121/2014 ಕಲಂ:279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಕೋಟ: ದಿನಾಂಕ 21/10/2014 ರಂದು ಮಧ್ಯಾಹ್ನ 2:30 ಗಂಟೆಗೆ ಪಿರ್ಯಾದಿದಾರರಾದ ಪಾರ್ವತಿ ಪೂಜಾರ್ತಿ (41) ತಂದೆ:ಶೇಖರ ಪೂಜಾರಿ ವಾಸ:ಮಾನಸ ನಿಲಯ, ಮಣೂರು ಗ್ರಾಮ ಉಡುಪಿ ತಾಲೂಕು ಎಂಬವರು ತನ್ನ ಮಗಳು ಶಶಿಕಲಾ (13)ಹಾಗೂ ನೆರೆಮನೆಯ ಜಲಜಾ ಆಚಾರ್ತಿ (58) ಎಂಬವರ ಜೊತೆ ಕೋಟ ವ್ಯವಸಾಯ ಸೇವಾ ಸಹಕಾರ ಸಂಘ ಮಣೂರು ಇಲ್ಲಿ ತಿಂಗಳ ರೇಷನ್ ತರಲು ಉಡುಪಿ ತಾಲೂಕು ಮಣೂರು ಗ್ರಾಮದ ಸುಧೀಂದ್ರ ಆಯಿಲ್ ಮಿಲ್‌ನ ಎದುರು ರಾಷ್ಟ್ರೀಯ ಹೆದ್ದಾರಿ 66ರ ಸರ್ವಿಸ್ ರಸ್ತೆಯ ಪಶ್ಚಿಮ ಬದಿಯಲ್ಲಿ ನೆಡದು ಕೊಂಡು ಹೋಗುತ್ತಿರುವಾಗ ಆರೋಪಿ ಕೆ.ಎ 19 ಪಿ 9590 ನೇ ನಂಬ್ರದ ಮಾರುತಿ ಓಮಿನಿ ಕಾರನ್ನು ಕೋಟ ಕಡೆಯಿಂದ ತೆಕ್ಕಟ್ಟೆ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸರ್ವಿಸ್ ರಸ್ತೆಗೆ ಒಮ್ಮೆಲೇ ತಿರುಗಿಸಿ ರಸ್ತೆಯ ಎಡ  ಬದಿಯಲ್ಲಿ ನೆಡೆದುಕೊಂಡು ಹೋಗುತ್ತಿದ್ದ, ಪಾರ್ವತಿ ಪೂಜಾರ್ತಿ, ಶಶಿಕಲಾ ಹಾಗೂ ಜಲಜಾ ಆಚಾರ್ತಿಯವರಿಗೆ ಡಿಕ್ಕಿ ಹೊಡೆದ ಪರಿಣಾಮ ಮೂಳೆ ಮುರಿತದ, ಹಾಗೂ ರಕ್ತಗಾಯಗೊಂಡು ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ದಾಖಲಾಗಿರುವುದಾಗಿದೆ ಅಲ್ಲದೆ ಅಪಘಾತವನ್ನುಂಟು ಮಾಡಿದ ಕಾರಿನ ಚಾಲಕನು ಸ್ಥಳದಿಂದ ಪರಾರಿಯಾಗಿರುತ್ತಾನೆ ಎಂಬುದಾಗಿ ಪಾರ್ವತಿ ಪೂಜಾರ್ತಿ ರವರು ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 208/2014 ಕಲಂ 279,337,338 ಐಪಿಸಿ, 134(ಎ)(ಬಿ) ಮೋಟಾರು ವಾಹನ ಕಾಯ್ದೆಯಂತೆ ಪ್ರಕರಣ ದಾಖಲಿಸಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣಗಳು
  • ಕಾರ್ಕಳ ಗ್ರಾಮಾಂತರ:ದಿನಾಂಕ:21/10/2014 ರಂದು ಪಿರ್ಯಾದಿದಾರರಾದ ಸುರೇಶ್ ದೇವಾಡಿಗ (27) ತಂದೆ:ಸುಂದರ ದೇವಾಡಿ, ವಾಸ:ಪಾದೆಮನೆ ಮಾ ಚೌಕಿ, ಮಾ ಗ್ರಾಮ,ಕಾರ್ಕಳ ತಾಲೂಕುರವರ ಅಜ್ಜಿ ಗಿರಿಜಾ (70) ಎಂವರು ಮಾಳ ಗ್ರಾಮದ ಪಾದೆ ಮನೆಯಲ್ಲಿ  ತಮ್ಮ ಮನೆಯ ತೋಟದಲ್ಲಿ ಹುಲ್ಲು ಕೊಯ್ಯುವಾಗ ಯಾವುದೋ ವಿಷದ ಹಾವು ಕಡಿದಿದ್ದು.ಈ ಬಗ್ಗೆ ಚಿಕಿತ್ಸೆಗಾಗಿ ಬಜಗೋಳಿ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆದು ವಾಪಸ್ಸು ಮನೆಗೆ ತೆರಳಿದ್ದು, ನಂತರ ಮಧ್ಯಾಹ್ನ ಸುಮಾರು 01:45ಗಂಟೆಗೆ ಕಣ್ಣು ಕತ್ತಲೆ ಆಗುತ್ತಿದೆ, ಸುಸ್ತಾಗುತ್ತಿದೆ ಎಂದು ಸುರೇಶ್ ದೇವಾಡಿಗರಿಗೆ ತಿಳಿಸಿದಾಗ, ಸುರೇಶ್ ದೇವಾಡಿಗ ಗಿರಿಜಾರನ್ನು ಚಿಕಿತ್ಸೆ ಬಗ್ಗೆ ಕಾರ್ಕಳ ಸಿಟಿ ಆಸ್ಪತ್ರೆಗೆ ಕರೆತಂದಿದ್ದು, ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ ಈ ಬಗ್ಗೆ ಸುರೇಶ್ ದೇವಾಡಿಗರವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 38/2014 ಕಲಂ 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಶಂಕರನಾರಾಯಣ:ದಿನಾಂಕ:21/10/2014 ರಂದು ಮದ್ಯಾಹ್ನ 1:00 ಗಂಟೆಯಿಂದ ಮದ್ಯಾಹ್ನ 3:00 ಗಂಟೆಯ ನಡುವಿನ ಅವಧಿಯಲ್ಲಿ ಪಿರ್ಯಾದಿದಾರರಾದ ಶಂಕರ ಆಚಾರ್ಯ (47) ತಂದೆ:ಅನಂತ ಆಚಾರ್ಯ ವಾಸ:ಹೊಯಿಗೆ ಬೆಳಾರ್, ಹಿಲಿಯಾಣ ಗ್ರಾಮ, ಉಡುಪಿ ತಾಲೂಕುರವರ ತಂದೆ ಆನಂತ ಆಚಾರ್ಯ (82) ಎಂಬವರು ಬೆನ್ನುನೋವು ಹಾಗು ತಲೆ ತಿರುಗುವ ಖಾಯಿಲೆಯಿಂದ  ಬಳಲುತ್ತಿದ್ದವರು ಜೀವನದಲ್ಲಿ ಜಿಗುಪ್ಸೆ ಹೊಂದಿ ಉಡುಪಿ ತಾಲೂಕು ಹಿಲಿಯಾಣ ಗ್ರಾಮದ ಹೊಯಿಗೆ ಬೆಳಾರ್ ಎಂಬಲ್ಲಿ ಶಂಕರ ಆಚಾರ್ಯರವರ ಮನೆಯ ಹತ್ತಿರದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.ಈ ಬಗ್ಗೆ ಶಂಕರ ಆಚಾರ್ಯರವರು ನೀಡಿದ ದೂರಿನಂತೆ  ಶಂಕರನಾರಾಯಣ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 27/2014 ಕಲಂ 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕೊಲೆ ಪ್ರಕರಣ
  • ಕೋಟ: ಪಿರ್ಯಾದಿದಾರರಾದ ಬಸವ ಕುಲಾಲ್ (45) ತಂದೆ ಅಣ್ಣಯ್ಯ ಕುಲಾಲ್ ವಾಸ: ಜಡ್ಡಿನ ಮನೆ ನಾಲ್ತೂರು,ಯಡಾಡಿ ಮತ್ಯಾಡಿ ಗ್ರಾಮ ಮತ್ತು ಕುಂದಾಪುರ ತಾಲೂಕು ಎಂಬವರ ತಾಯಿ ಸೀತಾ ಕುಲಾಲ್ತಿ (65) ಎಂಬವರು ದಿನಾಂಕ:21/10/2014 ರಂದು ಬೆಳಿಗ್ಗೆ 08:15 ಗಂಟೆಗೆ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಸಂಘದ ಹಣ ಕಟ್ಟಲು ಮನೆಯಿಂದ ಹೋಗಿದ್ದು ಹಣವನ್ನು ಕಟ್ಟಿ ವಾಪಾಸು ಮನೆಗೆ ಬರುವಾಗ ಯಾರೋ ಪರಿಚಯಸ್ಥರು ಯಾವುದೊ ದುರುದ್ದೇಶದಿಂದ ಸೀತಾ ಕುಲಾಲ್ತಿಯವರನ್ನು ಕುಂದಾಪುರ ತಾಲೂಕು ಹಾರ್ದಳ್ಳಿ ಮಂಡಳ್ಳಿ ಗ್ರಾಮದ ಬಿದ್ಕಲ್‌ಕಟ್ಟೆ ಎಂಬಲ್ಲಿರುವ ದಿವಂಗತ ಭುಜಂಗ ಶೆಟ್ಟಿಯವರ ಹಕ್ಕಲು ಹಾಡಿ ಜಾಗಕ್ಕೆ ಕೆರದುಕೊಂಡು ಹೋಗಿ ದಿನಾಂಕ:21/10/2014 ಬೆಳಿಗ್ಗೆ 09:30 ಗಂಟೆಯಿಂದ ಮಧ್ಯಾಹ್ನ 12:00 ಗಂಟೆಯ ಮಧ್ಯಾವಧಿಯಲ್ಲಿ ಸೀತಾ ಕುಲಾಲ್ತಿಯವರ ತಲೆಗೆ ಯಾವುದೋ ಆಯುಧದಿಂದ ಬಲವಾಗಿ ಹೊಡೆದು ತೀವ್ರ ಗಾಯಗೊಳಿಸಿ ಕೊಲೆ ಮಾಡಿರುವುದಾಗಿದೆ ಎಂಬುದಾಗಿ ಬಸವ ಕುಲಾಲ್‌ರವರು ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 207/2014 ಕಲಂ 302 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ನಡೆಸಿ ಜೀವ ಬೆದರಿಕೆ ನೀಡಿದ ಪ್ರಕರಣ
  • ಕುಂದಾಪುರ:ದಿನಾಂಕ 21/10/2014 ರಂದು ಬೆಳಿಗ್ಗೆ 10:00 ಗಂಟೆಗೆ ಪಿರ್ಯಾದಿದಾರರಾದ ಜಯಕುಮಾರ (26) ತಂದೆ:ಶೇಖರ ಕಾಂಚನ್ವಾಸ:ಕುದ್ರುಮನೆ, ಬಳ್ಕೂರು ಅಂಚೆ ಮತ್ತು ಗ್ರಾಮ, ಕುಂದಾಪುರ ತಾಲೂಕು ಎಂಬವರು ಕುಂದಾಪುರ ತಾಲೂಕು ಕೋಣಿ ಗ್ರಾಮದ ಕೋಣಿ ಪಂಚಾಯತ್ಬಳಿ ಇರುವ ತನ್ನ ಮೀನಿನ ಅಂಗಡಿಯಲ್ಲಿ ಇರುವಾಗ ಆಪಾದಿತರಾದ ನವೀನ ಮತ್ತು ರಾಜೇಶ ಎಂಬವರು ಒಂದು ಮೋಟಾರ್ಸೈಕಲ್ನಲ್ಲಿ ಬಂದು ಜಯಕುಮಾರರನ್ನು ತಡೆದು ನಿಲ್ಲಿಸಿ, ಇಬ್ಬರೂ ಆಪಾದಿತರು ಸೇರಿ ಕೈಗಳಿಂದ ಜಯಕುಮಾರ ಕೆನ್ನೆಗೆ ಹೊಡೆದು ಸೊಂಟಕ್ಕೆ ಕಾಲಿನಿಂದ ತುಳಿದದ್ದಲ್ಲದೆಅವಾಚ್ಯವಾಗಿ ಬೈದು, "ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ" ಎಂಬುದಾಗಿ ಜೀವ ಬೆದರಿಕೆ ಹಾಕಿರುವುದಾಗಿದೆ ಎಂಬುದಾಗಿ ಜಯಕುಮಾರರವರು ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 342/2014 ಕಲಂ 341, 323, 504, 506 ಜೊತೆಗೆ 34 .ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

No comments: