Wednesday, October 22, 2014

Daily Crime Reports as on 22/10/2014 at 19:30 Hrs


ಕಳವು ಪ್ರಕರಣ
  • ಕುಂದಾಪುರ: ದಿನಾಂಕ 21/10/2014 ರಂದು ರಾತ್ರಿ ಪಿರ್ಯಾದಿದಾರರಾದ ಸುಬ್ರಹ್ಮಣ್ಯ ಜೋಶಿ (54) ತಂದೆ ಗೋಪಾಲ ಜೋಶಿ ವಾಸ: ನೇಸರ, ಗೋಪಾಡಿ, ಕುಂದಾಪುರ ತಾಲೂಕು ಎಂಬವರು ಹೊನ್ನಾವರಕ್ಕೆ ಹೋಗಿದ್ದು ದಿನಾಂಕ 22/10/2014 ರಂದು ಬೆಳಿಗ್ಗೆ ಮನೆಗೆ ಬಂದು ನೋಡಿದಾಗ ಮನೆಯ ಬಾಗಿಲ ಚಿಲಕ ಮುರಿದು ಯಾರೋ ಕಳ್ಳರು ಒಳ ನುಗ್ಗಿ ಕಪಾಟುಗಳ ಬಾಗಿಲು ಮುರಿದು 1) ನಗದು ಸುಮಾರು ರೂಪಾಯಿ 3500/- 2) ಬೆಳ್ಳಿಯ 5 ಗ್ರಾಂ ತೂಕದ ನಾಗ ಮತ್ತು 5 ಗ್ರಾಂ ತೂಕದ ಗಣಪತಿ ದೇವರ ವಿಗ್ರಹಗಳು 3) ಸುಮಾರು 35 ಗ್ರಾಂ ತೂಕದ ಬೆಳ್ಳಿಯ ಕಾಲು ಗೆಜ್ಜೆಯನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ ಎಂಬುದಾಗಿ ಸುಬ್ರಹ್ಮಣ್ಯ ಜೋಶಿ ರವರು ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 348/2014 ಕಲಂ: 457, 380  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
 ಅಪಘಾತ ಪ್ರಕರಣ

  • ಶಂಕರನಾರಾಯಣ: ದಿನಾಂಕ 20/10/2014 ರಂದು ಸಂಜೆ 5:00 ಗಂಟೆಗೆ ರವೀಂದ್ರ  ಎಂಬವರು ತನ್ನ KA 20 EF 2577 ನೇ ನಂಬ್ರದ ಮೋಟಾರ್ ಸೈಕಲ್‌ನ್ನು ಕುಂದಾಪುರ ತಾಲೂಕು ಅಲ್ಬಾಡಿ ಗ್ರಾಮದ ಅಲ್ಬಾಡಿ ಪೇಟೆಯಿಂದ ಸ್ವಲ್ಪ ದೂರದಲ್ಲಿ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ರಸ್ತೆಗೆ ಅಡ್ಡ ಬಂದ ನಾಯಿಯನ್ನು ತಪ್ಪಿಸಲು ಒಮ್ಮೇಲೆ ಬ್ರೇಕ್ ಹಾಕಿದ ಪರಿಣಾಮ ಬೈಕ್ ಸ್ಕಿಡ್ ಆಗಿ ರಸ್ತೆಗೆ ಬಿದ್ದಿದ್ದು ಈ ಅಪಘಾತದಿಂದ ಬೈಕಿನ ಸಹ ಸವಾರರಾಗಿದ್ದ ಪಿರ್ಯಾದಿದಾರರಾದ ರಾದಾ (23) ತಂದೆ: ಪುಟ್ಟ ನಾಯ್ಕ ವಾಸ ಮೂರು ಚೇರ್ಕಾಡಿ, ಹೆಂಗವಳ್ಳಿ ಗ್ರಾಮ, ಕುಂದಾಪುರ ತಾಲೂಕುರವರಿಗೆ ಎಡಕಾಲಿನ ಗಂಟಿಗೆ ಪೆಟ್ಟಾಗಿರುತ್ತದೆ ಎಂಬುದಾಗಿ  ರಾದಾ ರವರು ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 158/2014 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: