Thursday, October 23, 2014

Daily Crime Reports as on 23/10/2014 at 07:00 Hrs.ಹಲ್ಲೆ ಪ್ರಕರಣ

  • ಕೋಟ : ರಾಘವೇಂದ್ರ ಗಾಣಿಗ ಪ್ರಾಯ: 42ವರ್ಷ ತಂದೆ:ಸೀತಾರಾಮ ಗಾಣಿಗ.ವಾಸ: “ಲಲಿತಾ ಲಕ್ಷ್ಮೀ”, ಪಾರಂಪಳ್ಳಿ  ಗ್ರಾಮ ಉಡುಪಿ ಇವರು  ಸಾಲಿಗ್ರಾಮ ಪಟ್ಟಣ ಪಂಚಾಯತ್‌ನ ಪಾರಂಪಳ್ಳಿ ಪಡುಕೆರೆ ವಾರ್ಡ್ ನಂಬ್ರ:1 ರ ಸದಸ್ಯರಾಗಿದ್ದು ಸದ್ರಿ ವಾರ್ಡ್‌ನಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಸಲು ಮಣೂರು ನಿವಾಸಿ ಎಂ.ಎಸ್.ಸಂಜೀವ ಎಂಬವರಿಗೆ ಟೆಂಡರ್ ಆಗಿದ್ದು ಸದ್ರಿಯವರು ಕಾಮಗಾರಿ ನೆಡೆಸುತ್ತಿರುವಾಗ ಸ್ಥಳೀಯ ನಿವಾಸಿಗಳಾದ ಆನಂದ(ಬೀಜೂರು) ಮತ್ತು ಸದಾನಂದ (ಬೀಜೂರು) ಎಂಬವರು ಕಾಮಗಾರಿ ನಿಲ್ಲಿಸುವಂತೆ ಗುತ್ತಿಗೆದಾರರಿಗೆ ತಡೆ ಒಡ್ಡಿದ್ದರಿಂದ, ಸದ್ರಿ ಕಾಮಗಾರಿಯ ಗುತ್ತಿಗೆದಾರರಾದ ಎಂ.ಎಸ್.ಸಂಜೀವರವರು ರಾಘವೇಂದ್ರ ಗಾಣಿಗರಿಗೆ ದಿನಾಂಕ:22/10/2014 ರಂದು ಸಂಜೆ 4:10 ಗಂಟೆಗೆ ದೂರವಾಣಿ ಕರೆಮಾಡಿ ವಿಷಯವನ್ನು ತಿಳಿಸಿದ್ದು, ರಾಘವೇಂದ್ರ ಗಾಣಿಗರು ಕಾಮಗಾರಿ ವೀಕ್ಷಣೆಗೆ ಹೋಗುವಾಗ ಆರೋಪಿಗಳಾದ ಆನಂದ(ಬೀಜೂರು) ಮತ್ತು ಸದಾನಂದ(ಬೀಜೂರು) ಎಂಬವೆರು ರಾಘವೇಂದ್ರ ಗಾಣಿಗರಿಗೆ ಕೈಯಿಂದ ಹಾಗೂ ದೊಣ್ಣೆಯಿಂದ ಹಲ್ಲೆ ನೆಡೆಸಿರುವುದಾಗಿದೆ ಎಂಬುದಾಗಿ ರಾಘವೇಂದ್ರ ಗಾಣಿಗರವರು ನೀಡಿದ ದೂರಿನಂತೆ ಕೋಟ ಠಾಣಾ ಅಪರಾಧ ಕ್ರಮಾಂಕ: 209/2014 ಕಲಂ 323,324,34 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅಪಘಾತ ಪ್ರಕರಣ

  • ಕಾರ್ಕಳ ನಗರ : ದಿನಾಂಕ 20/10/2014 ರಂದು 09:00 ಗಂಟೆಗೆ ಡೊಮಿನಿಕ್ ಡೇವಿಡ್ ಕ್ಯಾಸ್ತಲಿನೋ, ಪ್ರಾಯ 72 ವರ್ಷ, ತಂದೆ: ದಿವಂಗತ ಡೇವಿಡ್ ಕ್ಯಾಸ್ತಲಿನೋ, ವಾಸ: ಸೈಂಟ್ ಲೋರೆನ್ಸ್, ವಿವೇಕಾನಂದ ನಗರ, ನೆಲ್ಲಿಗುಡ್ಡೆ, ಕುಕ್ಕುಂದೂರು ಇವರು ಬಸ್ಸಿನಿಂದ ಇಳಿದು ಕೆಲಸದ ನಿಮಿತ್ತ ಹೋಗುವರೇ ಕಾರ್ಕಳ ಕಸ್ಬ ಗ್ರಾಮದ ಮಾರ್ಕೆಟ್ ರಸ್ತೆ ಸಮೀಪದ ಚೇತನಾ ಕ್ಲಿನಿಕ್ ಬಳಿ, ರಸ್ತೆಯ ಎಡಬದಿಯಿಂದ ರಸ್ತೆಯ ಬಲ ಬದಿಗೆ ನಡೆದುಕೊಂಡು ರಸ್ತೆ ದಾಟುತ್ತಿರುವಾಗ ಕಾರ್ಕಳದ ವೆಂಕಟರಮಣ ದೇವಸ್ಥಾನದ ಕಡೆಯಿಂದ ಕಾರ್ಕಳ ಪೇಟೆ ಕಡೆಗೆ ಓರ್ವ ಮಹಿಳೆಯು ತನ್ನ ಬಾಬ್ತು ದ್ವಿಚಕ್ರ ವಾಹನವನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬರುವಾಗ ದ್ವಿ ಚಕ್ರ ವಾಹನದ ಚಕ್ರ ಡೊಮಿನಿಕ್ ಡೇವಿಡ್ ಕ್ಯಾಸ್ತಲಿನೋರ ಬಲ ಕಾಲಿನ ಪಾದದ ಮೇಲೆ ಹಾದು ಹೋದ ಪರಿಣಾಮ, ಒಮ್ಮೆಲೇ ಮುಗ್ಗರಿಸಿ ರಸ್ತೆಗೆ ಬಿದ್ದುದರಿಂದ, ಬಲ ಕಾಲಿನ ಮೊಣಗಂಟಿನ ಬಳಿ ಗುದ್ದಿದ ರೀತಿಯ ಜಖಂ ಆಗಿದ್ದು, ಅಪಘಾತವನ್ನು ನಡೆಸಿದ ದ್ವಿಚಕ್ರ ವಾಹನ ಸವಾರಳು, ಗಾಯಾಳುವಿಗೆ ಯಾವುದೇ ಆರೈಕೆ ಮಾಡದೇ ಹಾಗೂ  ವಾಹನವನ್ನು ನಿಲ್ಲಿಸದೇ ಸ್ಥಳದಿಂದ ಪರಾರಿಯಾಗಿರುತ್ತಾಳೆ ಎಂಬುದಾಗಿ ನೀಡಿದ ದೂರಿನಂತೆ ಕಾರ್ಕಳ ನಗರ ಠಾಣಾ ಅಪರಾಧ ಕ್ರಮಾಂಕ : 184/14 ಕಲಂ. 279,337 ಐಪಿಸಿ ಮತ್ತು 134()(ಬಿ) ಐಎಮ್‌ವಿ ಕಾಯಿದೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

  • ಉಡುಪಿ ಸಂಚಾರ : ದಿನಾಂಕ 22.10.2014 ರಂದು ಬೆಳಿಗ್ಗೆ 8:45 ಗಂಟೆಗೆ ದಿನೇಶ್‌ಭಟ್‌(39) ತಂದೆ: ದಿ. ಗುರುರಾಜ್‌ ಭಟ್‌, ವಾಸ: .ನಂ. 5-1-77, ಕಿನ್ನಿಮುಲ್ಕಿ, ಉಡುಪಿ ಇವರು ತನ್ನ ಬಾಬ್ತು ಕಾರಿನಲ್ಲಿ ಕೊರಂಗ್ರಪಾಡಿ ಕಡೆಯಿಂದ ಕುಕ್ಕಿಕಟ್ಟೆ ಕಡೆಗೆ ಹೋಗುತ್ತಿದ್ದು, ಎದುರಿನಿಂದ ಅಂದರೆ ಕುಕ್ಕಿಕಟ್ಟೆ ಕಡೆಯಿಂದ ಕೊರಂಗ್ರಪಾಡಿ ಕಡೆಗೆ ಕೆಎ 20 ಇಡಿ 8566ನೇ ಟಿವಿಎಸ್‌ ಮೊಫೆಡ್‌ ಸವಾರ ಗೋಪಾಲ ಆಚಾರ್ಯ ರವರು ವಾಸುಕಿ ನಗರ ಜಂಕ್ಷನ್‌ ಬಳಿ ಚಲಾಯಿಸಿಕೊಂಡು ಬರುತ್ತಿರುವಾಗ ಮೊಫೆಡ್‌ ಸವಾರನ ಹಿಂಬದಿ ಅಂದರೆ ಕುಕ್ಕಿಕಟ್ಟೆ ಕಡೆಯಿಂದ ಕೊರಂಗ್ರಪಾಡಿ ಕಡೆಗೆ ಕೆಎ 20 ವೈ 4246ನೇ ಮೋಟಾರ್‌ ಸೈಕಲ್‌ ಸವಾರ ಕೃಷ್ಣ ನಾಯಕ್‌ರವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಟೆವಿಎಸ್‌ ಮೊಫೆಡ್‌ನ್ನು ಓವರಟೇಕ್‌ ಮಾಡುವ ಬರದಲ್ಲಿ ಟೆವಿಎಸ್‌ ಮೊಫೆಡ್‌ನ ಬಲಬದಿಗೆ ಡಿಕ್ಕಿ ಹೊಡೆದ ಪರಿಣಾಮ ಟಿವಿಎಸ್‌ ಮೊಫೆಡ್‌ ಸವಾರ ಗೋಪಾಲ ಆಚಾರ್ಯರವರು ಟಿವಿಎಸ್‌ ಮೊಫೆಡ್‌ ಸಮೇತ ರಸ್ತೆಗೆ ಬಿದ್ದ ಪರಿಣಾಮ ಗೋಪಾಲ ಆಚಾರ್ಯರವರ ಬಲಬದಿಯ ಕಿವಿಯಲ್ಲಿ ರಕ್ತ ಬರುತ್ತಿದ್ದು, ಬಲಭುಜದ ಬಳಿ ಬಳ ಜಖಂ ಆಗಿರುತ್ತದೆ ಹಾಗೂ ಬಲ ಮೊಣಕಾಲಿನ ಬಳಿ ತೀವ್ರ ಒಳಜಖಂ ಆಗಿರುತ್ತದೆ. ಹಾಗೂ ಕೆಎ 20 ವೈ 4246 ನೇ ಮೋ ಟಾರ್‌ಸೈಕಲ್ ಸವಾರ ಕೃಷ್ಣ ನಾಯಕ್‌ರವರಿಗೂ ಸಾದಾ ಸ್ವರೂಪದ ಗಾಯವಾಗಿರುತ್ತದೆ. ಅಪಘಾತವಾದವರನ್ನು ಅಲ್ಲಿ ಸೇರಿದವರೊಂದಿಗೆ ಚಿಕಿತ್ಸೆ ಬಗ್ಗೆ ಟಿ.ಎಮ್‌.. ಆಸ್ಪತ್ರೆ ಉಡುಪಿಗೆ ಸೇರಿಸಿದ್ದು ಟಿವಿಎಸ್‌ ಮೊಫೆಡ್‌ ಸವಾರ ಗೋಪಾಲ ಆಚಾರ್ಯರವರನ್ನು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣೀಪಾಲ ಕೆಎಮ್ ಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಅಫಘಾತಕ್ಕೆ ಕೆಎ 20 ವೈ 4246 ನೇ ಸವಾರ ಕೃಷ್ಣ ನಾಯಕ್‌ರವರ ಅತೀ ವೇಗ ಹಾಗೂ ಅಜಾಗರೂಕತೆಯೇ ಕಾರಣವಾಗಿದ್ದು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದಾಗಿ ದಿನೇಶ್‌ ಭಟ್‌ರವರು ನೀಡಿದ ದೂರಿನಂತೆ ಉಡುಪಿ ಸಂಚಾರ ಠಾಣಾ ಅಪರಾಧ ಕ್ರಮಾಂಕ : 112/2014  ಕಲಂ. 279, 337, 338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇತರ ಪ್ರಕರಣ

  • ಪಡುಬಿದ್ರಿ : ದಿನಾಂಕ. 22.10.2014 ರಂದು ಶಾಂತ ಶೆಟ್ಟಿ, 62 ವರ್ಷ, ಗಂಡ: ಸುರೇಂದ್ರ ಶೆಟ್ಟಿ, ವಾಸ: ಅನುಗ್ರಹ ನಿವಾಸ, ದರ್ಕಾಸ್ ಮನೆ, ಪಾದೆಬೆಟ್ಟು ಗ್ರಾಮ, ಉಡುಪಿ ಇವರ ಚಿಕ್ಕಮ್ಮನ ಮಗನಾದ ಸದಾನಂದ, ಪ್ರಾಯ 55 ವರ್ಷ, ವಾಸ: ಪಾದೆಬೆಟ್ಟು ಎಂಬವರು ದೀಪಾವಳಿ ಹಬ್ಬದ ಪ್ರಯುಕ್ತ ಇವರ ಮನೆಗೆ ಬಂದಿದ್ದು, ಸಂಜೆ 17:00 ಗಂಟೆಗೆ ಶೆಂದಿ ತರಲು ಪೇಟಗೆ ಹೋಗಿ ಸಂಜೆ 19:00 ಗಂಟೆಗೆ ವಾಪಾಸ್ಸು ಬರುವಾಗ ಕತ್ತಲೆಯಲ್ಲಿ ದಾರಿ ತಪ್ಪಿ ಪಂಬದೆಬೆಟ್ಟು ಎಂಬಲ್ಲಿ ರತ್ನ ಆಚಾರ್ತಿ ಮನೆ ಬಳಿ ಬಂದಾಗ ಅಲ್ಲಿರುವ ಆವರಣ ಇಲ್ಲದ ಬಾವಿಗೆ ಆಕಸ್ಮಿಕವಾಗಿ ಬಿದ್ದು, ಬಾವಿಯ ಕೆಳಗಿನ ಗೋಡೆ ತಾಗಿ ಹಣೆ ಬಳಿ ಗಾಯವಾಗಿ ಮೃತ ಪಟ್ಟಿರುತ್ತಾರೆ. ಈ ಘಟನೆಗೆ ರತ್ನ ಆಚಾರ್ತಿಯವರು ಸದ್ರಿ ಬಾವಿಗೆ ನಿರ್ಲಕ್ಷತನದಿಂದ ಸೂಕ್ತ ಆವರಣ ಕಟ್ಟದೇ ಇದ್ದುದ್ದರಿಂದ ಘಟನೆ ಸಂಭವಿಸಿರುವುದಾಗಿದೆ ಎಂಬುದಾಗಿ ನೀಡಿದ ದೂರಿನಂತೆ ಪಡುಬಿದ್ರಿ ಠಾಣಾ ಅಪರಾಧ ಕ್ರಮಾಂಕ: 107/2014 ಕಲಂ, 304 () ಪಿಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: