Monday, October 13, 2014

Daily Crimes Reported as On 13/10/2014 at 19:30 Hrs


ಅಸ್ವಾಭಾವಿಕ ಮರಣ ಪ್ರಕರಣ
  • ಗಂಗೊಳ್ಳಿ:ಪಿರ್ಯಾದಿದಾರರಾದ ಚಂದು ಗಂಡ:ದಿವಂಗತ ನಾರಾಯಣ ವಾಸ:ತ್ರಾಸಿ ಬೈಪಾಸ್‌ ಹತ್ತಿರ, ತ್ರಾಸಿ ಗ್ರಾಮ, ಕುಂದಾಪುರ ತಾಲೂಕುರವರಿಗೆ ಒಟ್ಟು 5 ಮಕ್ಕಳಿದ್ದು ಅದರಲ್ಲಿ 2 ಗಂಡು 3 ಹೆಣ್ಣು ಆಗಿದ್ದು, ತನ್ನ ಮೂರು ಹೆಣ್ಣು ಮಕ್ಕಳ ಪೈಕಿ ಸುಶೀಲಾ ಎಂಬವಳಿಗೆ 30 ವರ್ಷವಾಗಿದ್ದು  ಅವಳನ್ನು 9 ವರ್ಷದ ಹಿಂದೆ ತ್ರಾಸಿ ಗ್ರಾಮದ ಮೊವಾಡಿಯ ಜೋಸೆಫ್‌ ಎಂಬವರಿಗೆ ಮದುವೆ ಮಾಡಿ ಕೊಟ್ಟಿದ್ದು, ಅವಳು ಗಂಡನ ಮನೆಯಲ್ಲಿ ಸಂಸಾರ ಮಾಡಿಕೊಂಡಿದ್ದು, ಅವಳಿಗೆ 5 ವರ್ಷದ ಹೆಣ್ಣು ಮಗು ಹಾಗೂ 9 ತಿಂಗಳು ತುಂಬಿದ ಇನ್ನೊಂದು ಹೆಣ್ಣು ಮಗು ಇರುತ್ತದೆ. ದಿನಾಂಕ:28/09/2014 ರಂದು ಸಂಜೆ 6:30 ಗಂಟೆಗೆ ಸುಶೀಲಾ ಮದ್ಯಾಹ್ನ ಮಾಡಿದ ಅನ್ನಕ್ಕೆ ನೀರು ಹಾಕಿ ಬಿಸಿ ಮಾಡುವರೇ ಒಲೆಗೆ ಬೆಂಕಿ ಹಾಕಿ ಉರಿಯದೇ ಇದ್ದಾಗ, ಬಾಟಲಿಯಲ್ಲಿಯ ಸೀಮೆಎಣ್ಣೆಯನ್ನು ಒಲೆಗೆ ಹಾಕಿ ಬೆಂಕಿ ಉರಿಯದೇ  ಇದ್ದಾಗ, ಬಾಯಿಂದ ಊದಿದಾಗ ಬೆಂಕಿ ಒಮ್ಮೇಲೆ ಎದ್ದು ಹತ್ತಿರದಲ್ಲಿಯ ನೈಲಾನ್‌ ನೈಟಿಗೆ ಬೆಂಕಿ ಹತ್ತಿಕೊಂಡು ಬೆಂಕಿಯಿಂದ ಸುಶೀಲಾಳ ಎದೆಗೆ ಮುಖಕ್ಕೆ ಕೈಗಳಿಗೆ ಸುಟ್ಟ ಗಾಯವಾಗಿರುತ್ತದೆ. ನೈಲಾನ್‌ ಬಟ್ಟೆ ಸುಟ್ಟು ಮೈಗೆ ಬೆಂಕಿ ಹತ್ತಿಕೊಂಡು ಅದನ್ನು ತೆಗೆದಾಗ ಮೈ ಸುಟ್ಟು, ಚರ್ಮ ಕಿತ್ತು ಗಾಯವಾಗಿರುತ್ತದೆ. ಆ ಸಮಯ ಸುಶೀಲಾಳು ಕೂಗಿಕೊಂಡಾಗ ಪಕ್ಕದ ಮನೆಯವರು ಬಂದು ನೋಡಿ 108 ಆಂಬುಲೆನ್ಸ್‌ಗೆ ಪೋನ್‌ ಮಾಡಿದರು ಹಾಗೂ ಚಂದು ಮತ್ತು ಇತರರಿಗೆ ವಿಷಯ ತಿಳಿಸಿ ಚಂದುರವರು ಸುಶೀಲಾರವರ ಮನೆಗೆ ಬಂದು ಚಂದು ಮತ್ತು ಜೋಸೆಫ್‌ರವರ ತಮ್ಮ ಪ್ರವೀಣ ಸೇರಿ ಸುಶೀಲಾರವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಫಲಕಾರಿಯಾಗದೇ ಈ ದಿನ ದಿನಾಂಕ:13/10/2014 ರಂದು ಬೆಳಿಗ್ಗೆ 10:30 ಗಂಟೆಗೆ ಮೃತಪಟ್ಟಿರುವುದಾಗಿದ್ದು, ಚಂದುರವರು ತನ್ನ ಮಗಳ ಸಾವಿನ ಬಗ್ಗೆ ಯಾವುದೇ ಸಂಶಯವಿರುವುದಿಲ್ಲ ಎಂಬುದಾಗಿ ನೀಡಿದ ದೂರಿನಂತೆ ಗಂಗೊಳ್ಳಿ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 20/2014 ಕಲಂ:174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.  

No comments: