Tuesday, October 14, 2014

Daily Crime Reported As On 14/10/2014 At 07:00Hrs

ಗಂಡಸು ಕಾಣೆ ಪ್ರಕರಣ
  • ಕಾರ್ಕಳ ಗ್ರಾಮಾಂತರ ಕಾರ್ಕಳ ತಾಲೂಕು ಮಾಳ ಗ್ರಾಮದ ಗುಡ್ರ ಬೆಟ್ಟು ವಾಸಿ ಪಿರ್ಯಾದಿ ಶ್ರೀಮತಿ ವಸಂತಿ ಶೆಟ್ಟಿ ಪ್ರಾಯ 39 ವರ್ಷ ಗಂಡ: ಮಧುಕರ ಶೆಟ್ಟಿ ವಾಸ ಗುಡ್ರೆಬೆಟ್ಟು ಮಾಳ ಗ್ರಾಮ ಕಾರ್ಕಳ ಇವರ ಗಂಡ ಮದುಕರ ಶೆಟ್ಟಿ (47) ಇವರು ಸುಮಾರು 3 ವರ್ಷದಿಂದ ಪೇರಡ್ಕ ದುರ್ಗಾ ಪರಮೇಶ್ವರಿ ಬಸ್ಸಿನಲ್ಲಿ ಕಂಡೆಕ್ಟರ್ ಕೆಲಸ ಮಾಡುತ್ತಿದ್ದು ಇವರು 15 ದಿನಗಳಿಂದ ಕೆಲಸಕ್ಕೆ ಹೋಗದೆ ಮನೆಯಲ್ಲಿ ಇದ್ದು ದಿನಾಂಕ 7.10.2014 ರಂದು  ಮಧ್ಯಾಹ್ನ 1:30 ಗಂಟೆ ಸುಮಾರಿಗೆ  ಅವರು ಕೆಲಸ ಮಾಡುವ ಸ್ಥಳಕ್ಕೆ ಬಂದು ಸಾಲ ನೀಡಲು ಹಣ ಬೇಕು ಎಂದು ಹೇಳಿ ರೂ 10000 ಹಣವನ್ನು ಪಡೆದು ಹೋದವರು ಈ ವರಗೆ ವಾಪಾಸ್ಸು ಮನೆಗೆ ಬಾರದೇ ಕಾಣೆಯಾಗಿರುತ್ತಾರೆ ಎನ್ನುವುದಾಗಿ ಶ್ರೀಮತಿ ವಸಂತಿ ಶೆಟ್ಟಿ ರವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಅಪರಾಧ ಕ್ರಮಾಂಕ 116/14 ಕಲಂ ಗಂಡಸು ಕಾಣೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.
ಕಳವು ಪ್ರಕರಣ
  • ಮಲ್ಪೆ: ಪಿರ್ಯಾದಿ ರಮೇಶ ಕಾಂಚನ್ (41), ತಂದೆ ದಿ. ತೊಗ್ಗು ಸುವರ್ಣ, ವಾಸ ಕಾಂಚನ್, ಬೀಚ್ ರೋಡ, ಕೊಡವೂರು ಗ್ರಾಮ, ಉಡುಪಿ.ಇವರು ತಮ್ಮ KA 20 EE 5003 ನೇ ನಂಬ್ರದ ಹೀರೋ ಹೋಂಡಾ ಶೈನ್‌ ಮೋಟಾರು ಸೈಕಲನ್ನು ದಿನಾಂಕ 07-10-2014 ರಂದು ಕೊಡವೂರು ಗ್ರಾಮದ ಮಲ್ಪೆ ಬೀಚ್‌ ಪಾರ್ಕಿಂಗ್‌ನಲ್ಲಿ ಸಮಯ ಸುಮಾರು ಬೆಳಿಗ್ಗೆ 10.00 ಗಂಟೆಗೆ ನಿಲ್ಲಿಸಿ ಮನೆಗೆ ಹೋಗಿ ವಾಪಸ್ಸು ಸಮಯ ಸುಮಾರು ಸಂಜೆ 4.00 ಗಂಟೆಗೆ ಬೀಚ್‌ ಪಾರ್ಕಿಂಗ್‌ ಬಳಿ ಬಂದು ನೋಡಿದಾಗ ಇಟ್ಟ ಸ್ಥಳದಲ್ಲಿ ಸದ್ರಿ ಬೈಕ್‌ ಇಲ್ಲದೇ ಇದ್ದು, ಪರಿಸರದಲ್ಲಿ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ. ಸದ್ರಿ KA 20 EE 5003 ಮೋಟಾರ್‌ ಸೈಕಲನ್ನು ಯಾರೋ ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಮೋಟಾರ್‌ ಸೈಕಲ್‌ನ ಅಂದಾಜು ಮೌಲ್ಯ ರೂ.30,000/- ಆಗಬಹುದು ಎನ್ನುವುದಾಗಿ ರಮೇಶ್‌‌ ಕಾಂಚನ್‌ರವರು ಮಲ್ಪೆ ಠಾಣೆಗೆ ದೂರು ನೀಡಿದ್ದು ಠಾಣೆಯಲ್ಲಿ ಅಪರಾಧ ಕ್ರಮಾಂಕ 115140/2014 ಕಲಂ 379 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.
  • ಕಾರ್ಕಳ ಗ್ರಾಮಾಂತರ ಪಿರ್ಯಾಧಿ ಶ್ರೀಮತಿ ಸುಮ ಮಧು ಶೆಟ್ಟಿಯವರು ದಿನಾಂಕ 28/09/2014ರಂದು ತನ್ನ ಗಂಡ ಮುಂಬೈಗೆ ಹೋಗಿರುವುದರಿಂದ ಅದೇ ದಿನ ನಿಟ್ಟೆ  ಪಂಚಾಯತ್ ಕಛೇರಿ ಬಳಿ ಇರುವ  ತನ್ನ ವಾಸದ  ಮನೆಗೆ ಬೀಗ ಹಾಕಿ ಕಾಪುವಿನಲ್ಲಿರುವ ತನ್ನ ತಾಯಿ ಮನೆಗೆ ಹೋಗಿದ್ದು ದಿನಾಂಕ 07/10/2014 ರಂದು ಮದ್ಯಾಹ್ನ 12 ಗಂಟೆ ಸುಮಾರಿಗೆ ನಿಟ್ಟೆಯಲ್ಲಿರುವ ತನ್ನ ಮನೆಗೆ ವಾಪಸ್ಸು ಬಂದು ಮನೆ ಸುಚಿಗೊಳಿಸಿ ಸಂಜೆ ತನ್ನ ತಾಯಿ ಮನೆಯಾದ ಕಾಪುವಿಗೆ ಹೋಗಿದ್ದು ದಿನಾಂಕ 07/10/2014 ರ ಸಂಜೆಯ ಬಳಿಕ ದಿನಾಂಕ 12/10/2014ರ ಬೆಳಗಿನ ಮಧ್ಯವಧಿಯಲ್ಲಿ ಯಾರೋ ಕಳ್ಳರು ಪಿರ್ಯಾಧಿದಾರರ ಮನೆಯ ಬಾಗಿಲಿನ ಬೀಗ ಮುರಿದು ಒಳಪ್ರವೇಸಿಸಿ ಮನೆಯ ಬೆಡ್ಡ್ ರೂಮಿನಲ್ಲಿರುವ  ಸೂಟ್ಕೇಸಿನಲ್ಲಿರಿಸಿದ್ದ ಒಂದು ಪವನ್ ತೂಕದ ಬಂಗಾರದ ಉಂಗುರವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳುವದ ಸೊತ್ತನ ಮೌಲ್ಯ ಸುಮಾರು 15000/- ರೂಪಾಯಿ ಆಗಬಹುದು ಎನ್ನುವುದಾಗಿ ಸುಮಾ ಮಧು ಶೆಟ್ಟಿ ರವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಅಪರಾಧ ಕ್ರಮಾಂಕ 115/2014 ಕಲಂ: 454. 457. 380, IPC ಯಂತೆ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.

No comments: