Wednesday, October 29, 2014

Daily Crime Reports as on 29/10/2014 at 07:00 Hrsಮನುಷ್ಯ ಕಾಣೆ ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾದ ಶ್ರೀಮತಿ ಸುಜಾತ (34) ಗಂಡ: ಮನೋಜ್ ವಾಸ: ನಾರಾಯಣ ಕಲ್ಯಾಣ ಮಂಟಪದ ರಸ್ತೆ, ಕುಂದಾಪುರ ಕಸಬಾ ಗ್ರಾಮ, ಕುಂದಾಪುರ ತಾಲೂಕು ಎಂಬವರ ಗಂಡನಾದ ಮನೋಜ್ ಪ್ರಾಯ: 35 ವರ್ಷ ಎಂಬವರು ದಿನಾಂಕ 26/10/2014 ರಂದು ಬೆಳಿಗ್ಗೆ 11:00 ಗಂಟೆಗೆ ಮನೆಯಿಂದ ಹೊರಗಡೆ ಹೋದವರು ಈವೆರೆಗೆ ಮನೆಗೆ ಬಾರದೇ ಕಾಣೆಯಾಗಿರುತ್ತಾರೆ. ಅವರ ಮೊಬೈಲ್ ನಂಬ್ರಕ್ಕೆ ಕರೆ ಮಾಡಿದರೆ ಯಾವುದೇ ಪ್ರತಿಕ್ರಿಯೆಯನ್ನು ನೀಡುವುದಿಲ್ಲ. ವ್ಯವಹಾರದ ಬಗ್ಗೆ ಸಾಲವನ್ನು ಮಾಡಿರುತ್ತಾರೆ ಎಂಬುದಾಗಿ ಶ್ರೀಮತಿ ಸುಜಾತ ರವರು ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 352/2014 ಕಲಂ ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಿಸಲಾಗಿದೆ  

ಅಪಘಾತ ಪ್ರಕರಣ

  • ಉಡುಪಿ: ಪಿರ್ಯಾದುದಾರರಾದ ಮೋಹನ (42) ತಂದೆ:ದಿ.ರಾಮ  ವಾಸ: ಬೇಳೂರುಜೆಡ್ಡು, ಬ್ರಹ್ಮಾವರ ಪೋಸ್ಟ್ ಉಡುಪಿ ತಾಲೂಕು ರವರು ದಿನಾಂಕ: 28/10/2014 ರಂದು ನಿಟ್ಟೂರು ಬಳಿಯ ಗಣೇಶ ಹೊಟೆಲಿನ ಹತ್ತಿರ ನಿಂತುಕೊಂಡಿರುವಾಗ ಸಮಯ ಸಂಜೆ 06:45 ಗಂಟೆಗೆ ಒಬ್ಬ ಮೋಟಾರ್ ಸೈಕಲ್‌ ಸವಾರನು ಉಡುಪಿ ಸಂತೆಕಟ್ಟೆ ಕಡೆಯಿಂದ ಕರಾವಳಿ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಎಡಬದಿಯ ಮಣ್ಣು ರಸ್ತೆಯಲ್ಲಿ ನಿಂತಿದ್ದ ಸುನಂದ (45) ಎಂಬಾಕೆಗೆ ಡಿಕ್ಕಿ ಹೊಡೆದ ಪರಿಣಾಮ ಹೆಂಗಸು ರಸ್ತೆ ಬದಿಗೆ ಬಿದ್ದಿದ್ದು ಕೂಡಲೇ ಪಿರ್ಯಾದುದಾರರು ಮತ್ತು ಅಲ್ಲಿ ಸೇರಿದವರು ಮೇಲಕ್ಕೆತ್ತಿ ಉಪಚರಿಸಿ ನೋಡಲಾಗಿ ಆ ಹೆಂಗಸು ಪಿರ್ಯಾಧುದಾರರ ಪರಿಚಯದ ಪಕ್ಕದ ಜೋಪಡಿಯ ಸುನಂದ (45) ಎಂಬಾಕೆಯಾಗಿದ್ದು ಆಕೆಯ ತಲೆಗೆ ತೀವ್ರ ಸ್ವರೂಪದ ರಕ್ತಗಾಯವಾಗಿದ್ದು, ಅಲ್ಲದೇ ಆಕೆಯ ಎಡಕೈ ಮತ್ತು ಎಡಕಾಲಿಗೆ ರಕ್ತಗಾಯವಾಗಿದ್ದು, ಹೆಂಗಸಿಗೆ ಡಿಕ್ಕಿ ಹೊಡೆದ ಮೋಟಾರ್ ಸೈಕಲ್ ಸವಾರನು ರಸ್ತೆಗೆ ಬಿದ್ದಿದ್ದು ಆತನ ಬಲಕೈ ಹಾಗೂ ಎಡಕಾಲಿಗೆ ರಕ್ತಗಾಯವಾಗಿರುತ್ತದೆ, ನಂತರ ಮೋಟಾರ್ ಸೈಕಲಿನ ನಂಬ್ರ ನೋಡಲಾಗಿ ಕೆಎ-20 ಇಜಿ-2560 ಆಗಿದ್ದು ಸವಾರನ ಹೆಸರು ಯಾಸೀನ್ ಆಗಿರುತ್ತದೆ ನಂತರ ಪಿರ್ಯಾದುದಾರರು ಮತ್ತು ಅವರ ಜೊತೆಗಿದ್ದ ಶಂಕರ, ಹಾಗೂ ಅಲ್ಲಿ ಸೇರಿದವರು ಒಂದು ಆಟೋರಿಕ್ಷಾದಲ್ಲಿ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ದಾಖಲಿಸಿದಲ್ಲಿ ವೈದ್ಯಾದಿಕಾರಿಗಳು ಪರೀಕ್ಷಿಸಿ ಸುನಂದಾರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ ಎಂಬುದಾಗಿ ಮೋಹನ ರವರು ನೀಡಿದ ದೂರಿನಂತೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 113/2014 ಕಲಂ 279, 304(ಎ) ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ 

ಹಲ್ಲೆ ನಡೆಸಿ,ಜೀವ ಬೆದರಿಕೆ ನೀಡಿದ ಪ್ರಕರಣ

  • ಅಜೆಕಾರು: ಆರೋಪಿ ನರಸಿಂಹ ಆಚಾರಿ ಪ್ರಾಯ 36 ವರ್ಷ ತಂದೆ: ವಾಸುದೇವ ಆಚಾರಿ ವಾಸ: ಬೊಂಡುಕುಮೇರಿ ಆಶ್ರಯನಗರ ಮರ್ಣೆ ಗ್ರಾಮ ಎಂಬಾತನು ಪಿರ್ಯಾದಿದಾರರಾದ ಶ್ರೀಮತಿ ಆನಂದಿ ಪ್ರಾಯ 65 ವರ್ಷ ಗಂಡ ಜನಾರ್ಧನ ಆಚಾರ್ಯ ವಾಸ: ಗುಡ್ಡೆಯಂಗಡಿ ಮರ್ಣೆ ಗ್ರಾಮ ಕಾರ್ಕಳ ತಾಲೂಕು ಎಂಬವರ ಮಗಳ ಗಂಡನಾಗಿದ್ದು ದಿನಾಂಕ 22/10/2014 ರಂದು ರಾತ್ರಿ 11:30 ಗಂಟೆಗೆ ಕಾರ್ಕಳ ತಾಲೂಕು ಮರ್ಣೆ ಗ್ರಾಮದ ಬೊಂಡುಕುಮೇರಿ ಎಂಬಲ್ಲಿ ಫಿರ್ಯಾಧಿದಾರರು ತನ್ನ ಮಗಳ ಮನೆಯಲ್ಲಿರುವಾಗ ಆರೋಪಿತನು ಅಲ್ಲಿಗೆ ಬಂದು ಫಿರ್ಯಾಧಿದಾರರ ಮಗಳು ಸುಮಿತ್ರಾಳಲ್ಲಿ ಶರಾಬು ಕುಡಿಯಲು ಹಣ ಕೇಳಿದ್ದು ಅದಕ್ಕೆ ಫಿರ್ಯಾಧಿದಾರರ ಮಗಳು ಹಣ ಕೊಡಲು ನಿರಾಕರಿಸಿದ್ದು ಆರೋಪಿತನು ಆಕೆಗೆ ಹೊಡೆಯಲು ಬಂದಿದ್ದು ಅದನ್ನು ಫಿರ್ಯಾಧಿದಾರರು ತಪ್ಪಿಸಲು ಬಂದಿದ್ದು ಆರೋಪಿತನು ಫಿರ್ಯಾಧಿದಾರರಿಗೆ ಕೈಯಿಂದ ಮುಷ್ಠಿ ಕಟ್ಟಿ ಎದೆಗೆ ಗುದ್ದಿ ಕಾಲಿನಿಂದ ತುಳಿದು ನಂತರ ಫಿರ್ಯಾಧಿದಾರರು ಚಿಕಿತ್ಸೆಗೆ ದಾಖಲಾದ ಸಮಯ ಫಿರ್ಯಾಧಿದಾರರ ಮಗಳಿಗೆ ಅವಾಚ್ಯ ಶಬ್ದಗಳಿಂದ ಬೈದು ಆಸ್ಪತ್ರೆಯಿಂದ ಬಂದಲ್ಲಿ ಫಿರ್ಯಾಧಿದಾರರನ್ನು ಜೀವ ಸಹಿತ ಬಿಡುವುದಿಲ್ಲವಾಗಿ ಬೆದರಿಕೆ ಹಾಕಿರುವುದಾಗಿದೆ ಎಂಬುದಾಗಿ ಶ್ರೀಮತಿ ಆನಂದಿ ರವರು ನೀಡಿದ ದೂರಿನಂತೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 48/2014 ಕಲಂ 323, 504, 506 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ  
ಅಸ್ವಾಭಾವಿಕ ಮರಣ  ಪ್ರಕರಣ
  • ಅಜೆಕಾರು: ಫಿರ್ಯಾದುದಾರರಾದ ರಮೇಶ  ಪೂಜಾರಿ ಪ್ರಾಯ 42 ವರ್ಷ ತಂದೆ; ದಿ ಗೋಂಕ್ರ ಪೂಜಾರಿ ವಾಸ; ಆಶಿರ್ವಾದ ನಿಲಯ ಸಿರಿಬೈಲು ಕಡ್ತಲ ಗ್ರಾಮ ಕಾರ್ಕಳ ತಾಲೂಕು ಎಂಬವರ ಅಣ್ಣ ಭೋಜ ಪೂಜಾರಿ ಪ್ರಾಯ 45 ವರ್ಷ, ಎಂಬವರು ಹಲವು  ವರ್ಷಗಳಿಂದ ವಿಪರೀತ ಅಮಲು ಪದಾರ್ಥ ಸೇವನೆ ಮಾಡುವ ಚಟವುಳ್ಳವರಾಗಿದ್ದು ಆರ್ಥಿಕ ಪರಿಸ್ಥಿತಿಯು ಹದಗೆಟ್ಟಿರುವ   ಹಿನ್ನಲೆಯಲ್ಲಿ ಮನನೊಂದು ದಿನಾಂಕ 28-10-2014 ರಂದು ಬೆಳಗ್ಗೆ 5:00 ಗಂಟೆಯಿಂದ 7:00 ಗಂಟೆಯ ಮಧ್ಯೆ ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದ ಅಜೆಕಾರು ಜ್ಯೋತಿ  ಹೈಸ್ಕೂಲ್‌  ಬಳಿಯ ಬಾಡಿಗೆ  ಮನೆಯ  ಅಡುಗೆ ಕೋಣೆಯಲ್ಲಿ ಬೈರಾಸಿನಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಎಂಬುದಾಗಿ ರಮೇಶ  ಪೂಜಾರಿ ರವರು ನೀಡಿದ ದೂರಿನಂತೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 14/2014 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ

No comments: