Tuesday, October 28, 2014

Daily Crime Report as on 28/10/2014 at 19:30 Hrs.
ಅಪಘಾತ ಪ್ರಕರಣ : 

  • ಹಿರಿಯಡ್ಕ: ದಿನಾಂಕ 27/10/14 ರಂದು ರಾತ್ರಿ 08-30 ಗಂಟೆಗೆ ಫಿರ್ಯಾದಿ ಪ್ರದೀಪ ಪೂಜಾರಿ  [25] ಬಿನ್‌ದಿ. ಲಕ್ಷ್ಮಣ ಪೂಜರಿ  ವಾಸ; ಜನತಾಕಾಲೊನಿ, ಕಾವಡಿ ಗ್ರಾಮ ಉಡುಪಿ ಇವರು ತನ್ನ ಕೆಎ 20 ಇಜಿ  5156 ನೇ ಬೈಕಿನಲ್ಲಿ   ತನ್ನ ಮಿತ್ರರಾದ ಪ್ರಕಾಶ್‌ರವರನ್ನು ಹಿಂಬದಿ  ಕುಳ್ಳಿರಿಸಿಕೊಂಡು ಪೆರ್ಡೂರು ಕಡೆಯಿಂದ ಕುಕ್ಕೆಹಳ್ಳಿ ಕಡೆಗೆ   ಹೋಗುವಾಗ ಪೆರ್ಡೂರು ಗ್ರಾಮದ ಬುಕ್ಕಿಗುಡ್ಡೆಯ ಗೋರೆಲ್‌ಎಂಬಲ್ಲಿ ತಲುಪುವಷ್ಟರಲ್ಲಿ ,  ಅವರ ಎದುರು ಬದಿಯಿಂದ ಕೆಎ 20 ಇಡಿ 1167 ನೇ ಬೈಕನ್ನು , ಅದರ ಸವಾರ ಆರೋಪಿ ಗಣೇಶ್‌ಆಚಾರಿ ಎಂಬವರು,   ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಕೊಂಡು ಬಂದ ಪರಿಣಾಮ ಸದ್ರಿ ಬೈಕ್‌ರಸ್ತೆ ಬದಿಯ ದಿಣ್ಣೆಗೆ ಡಿಕ್ಕಿಯಾಗಿ ರಸ್ತೆಯಲ್ಲಿ ಜಾರಿ ಬಳಿಕ ತಮ್ಮ ಬೈಕಿಗೆ ಡಿಕ್ಕಿಯಾಗಿರುವುದಾಗಿಯೂ ಬೈಕ್‌ಸವಾರ ಹಾಗೂ ಹಿಂಬದಿ ಸವಾರ ಧೀರಜ್‌ಇಬ್ಬರೂ ತೀವ್ರ ಜಖಂ ಗೊಂಡಿದ್ದು ಅವರನ್ನು 108 ಅಂಬ್ಯುಲೆನ್ಸ್‌ನಲ್ಲಿ  ಚಿಕಿತ್ಸೆಗೆ ಕಳುಹಿಸಿದ್ದು ಪ್ರಸ್ತುತ ಮಣಿಪಾಲದ ಕಸ್ತೂರ್‌ಬಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಠಾಣೆಯಲ್ಲಿ ಅಪರಾಧ ಕ್ರಮಾಂಕ 100/14 U/s 279, 338   IPC ರಂತೆ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.

No comments: