Sunday, October 26, 2014

Daily Crime Reports as on 26/10/2014 at 07:00 Hrs



ಅಪಘಾತ ಪ್ರಕರಣ

  • ಗಂಗೊಳ್ಳಿ: ದಿನಾಂಕ 25/10/2014 ರಂದು ಬೆಳಿಗ್ಗೆ 09:30 ಗಂಟೆಗೆ ಪಿರ್ಯಾದಿದಾರರಾದ ಪರಮೇಶ್ವರ (35) ತಂದೆ: ದಿ: ಹನುಮಂತೆ ಮೇಸ್ತಾ ವಾಸ: ಸಚಿನ್ ಶ್ವೇತಾ ರಾಮ ನಗರ ರಸ್ತೆ  ಟೋಂಕಾ ಕಾಸರಗೋಡು ಗ್ರಾಮ ಹೊನ್ನಾವರ ತಾಲೂಕು ಉ.ಕ ಜಿಲ್ಲೆ ಎಂಬವರು ಕೆ.ಎ. 31 ಎ. 7567 ನೇ ಕಾರಿನಲ್ಲಿ ರಾ.ಹೆ. 66 ರಲ್ಲಿ ಮರವಂತೆ ಸೀ ಲ್ಯಾಂಡ್  ಹೋಟೇಲ್ ಸಮೀಪ ಬರುತ್ತಿರುವಾಗ ಎದುರಿನಿಂದ ಅಂದರೆ ಕುಂದಾಪುರದಿಂದ ಬೈಂದೂರು ಕಡೆಗೆ ಬರುತ್ತಿದ್ದ ನಂಬ್ರ ಎಂ ಹೆಚ್. 10 ಝಡ್ 3703 ನೇ ಲಾರಿಯನ್ನು ಅದರ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ತೀರಾ ಎಡ ಭಾಗಕ್ಕೆ ಒಮ್ಮೇಲೆ  ಚಲಾಯಿಸಿ ಪಿರ್ಯಾದಿದಾರರು ಪ್ರಯಾಣಿಸುತ್ತಿದ್ದ ಕಾರಿನ ಎದುರಿನ ಬಲಭಾಗಕ್ಕೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿ ಹಾಗೂ ಕಾರಿನಲ್ಲಿದ್ದ ಇತರೇ ಪ್ರಯಾಣಿಕರಿಗೆ ತೀವ್ರ ಹಾಗೂ ಸಾಮಾನ್ಯ ಗಾಯಗಳಾಗಿದ್ದು ಚಿಕಿತ್ಸೆಯ ಬಗ್ಗೆ ಆಸ್ಪತ್ರಗೆ ದಾಖಲಾಗಿರುವುದಾಗಿದೆ ಎಂಬುದಾಗಿ ಪರಮೇಶ್ವರ ರವರು ನೀಡಿದ ದೂರಿನಂತೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 179/2014 ಕಲಂ 279, 337, 338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಮನುಷ್ಯ ಕಾಣೆ ಪ್ರಕರಣ

  • ಕಾಪು: ಪಿರ್ಯಾದುದಾರರಾದ ಪ್ರಕಾಶ್‌ ರಾವ್‌ (50) ತಂದೆ: ದಿ. ತಿಮ್ಮೋಜಿ ರಾವ್ ವಾಸ: ಉಮ್ಮರ ಬೆಟ್ಟು ಮನೆ ಶ್ರೀ ಕಾಳಿಕಾಂಬ ದೇವಸ್ಥಾನದ ಬಳಿ ಕಾರ್ಕಳ ರವರು ತನ್ನ ಹೆಂಡತಿ ಮತ್ತು ಮಕ್ಕಳೊಂದಿಗೆ ಹಾಗೂ ತನ್ನ ಸಂಬಂಧಿಕರೊಂದಿಗೆ  ದಿನಾಂಕ 25/10/2014 ರಂದು ಕಾರ್ಕಳದಿಂದ ಕಾಪು ಬೀಚ್‌ಗೆ ಬಂದಿದ್ದು ಸಮುದ್ರದ ನೀರಿನಲ್ಲಿ ಜಗದೀಶ್, ಹರ್ಷ್, ಸುನಿಲ್, ಪ್ರಜ್ವಲ್‌ರಾವ್‌, ಹರಿಶ್ಚಂದ್ರ ಎಂಬವರು ಆಟ ಆಡುತ್ತಿರುವಾಗ ಸುಮಾರು ಸಂಜೆ 5:00 ಗಂಟೆ ಸಮಯಕ್ಕೆ ಸಮುದ್ರದ ದೊಡ್ಡ ಅಲೆ ಅಪ್ಪಳಿಸಿ ನೀರಿನಲ್ಲಿ ಆಟಾಡುತ್ತಿದ್ದ ಐವರು ಕೊಚ್ಚಿ ಹೋಗಿದ್ದು ಅವರಲ್ಲಿ ಹರಿಶ್ಚಂದ್ರ ಹಾಗೂ ಪ್ರಜ್ವಲ್‌ರಾವ್‌ ರವರನ್ನು ಸಾರ್ವಜನಿಕರು ರಕ್ಷಿಸಿ ಚಿಕಿತ್ಸೆಯ ಬಗ್ಗೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಉಳಿದ ಜಗದೀಶ್, ಹರ್ಷ್, ಸುನಿಲ್, ನೀರಿನಲ್ಲಿ ಮುಳುಗಿ ಕಾಣೆಯಾಗಿರುತ್ತಾರೆ ಕಾಣೆಯಾದ ಜಗದೀಶ್ ರವರು ಸುಮಾರು 40 ವರ್ಷ ಪ್ರಾಯದವನಾಗಿದ್ದು 6 ಅಡಿ ಎತ್ತರ ಬಿಳಿ ಮೈಬಣ್ಣ ಮತ್ತು ಸುನಿಲ್‌ 33 ವರ್ಷ ಪ್ರಾಯದವರಾಗಿದ್ದು 5.5 ಅಡಿ ಎತ್ತರ  ಬಿಳಿ ಮೈಬಣ್ಣ ಹಾಗೂ ಹರ್ಷ್‌ 14 ವರ್ಷ ಪ್ರಾಯದವನಾಗಿದ್ದು 4 ಅಡಿ ಎತ್ತರ  ಬಿಳಿ ಮೈಬಣ್ಣ ಹೊಂದಿರುತ್ತಾನೆ. ಈ ಬಗ್ಗೆ ಪ್ರಕಾಶ್‌ ರಾವ್‌ ರವರು ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 208/2014 ಕಲಂ ಮನುಷ್ಯರು ಕಾಣೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣಗಳು

  • ಕಾಪು: ಪಿರ್ಯಾದುದಾರರಾದ ಪ್ರಕಾಶ್‌ ರಾವ್‌ (50) ತಂದೆ: ದಿ. ತಿಮ್ಮೋಜಿ ರಾವ್ ವಾಸ: ಉಮ್ಮರ ಬೆಟ್ಟು ಮನೆ ಶ್ರೀ ಕಾಳಿಕಾಂಬ ದೇವಸ್ಥಾನದ ಬಳಿ ಕಾರ್ಕಳ ರವರು ತನ್ನ ಹೆಂಡತಿ ಮತ್ತು ಮಕ್ಕಳೊಂದಿಗೆ ಹಾಗೂ ತನ್ನ ಸಂಬಂಧಿಕರೊಂದಿಗೆ  ದಿನಾಂಕ 25.10.2014 ರಂದು ಕಾರ್ಕಳದಿಂದ ಕಾಪು ಬೀಚ್‌ಗೆ ಬಂದಿದ್ದು, ಸಮುದ್ರದ ನೀರಿನಲ್ಲಿ ಜಗದೀಶ್, ಹರ್ಷ್, ಸುನಿಲ್, ಪ್ರಜ್ವಲ್‌ರಾವ್‌, ಹರಿಶ್ಚಂದ್ರರವರುಗಳು ಆಟ ಆಡುತ್ತಿರುವಾಗ ಸುಮಾರು ಸಂಜೆ 5:00 ಗಂಟೆ ಸಮಯಕ್ಕೆ ಸಮುದ್ರದ ದೊಡ್ಡ ಅಲೆ ಅಪ್ಪಳಿಸಿ ನೀರಿನಲ್ಲಿ ಆಟಾಡುತ್ತಿದ್ದ ಐವರು ಕೊಚ್ಚಿ ಹೋಗಿದ್ದು ಅವರಲ್ಲಿ ಹರಿಶ್ಚಂದ್ರ ಹಾಗೂ ಪ್ರಜ್ವಲ್‌ರಾವ್‌ ರವರನ್ನು ಸಾರ್ವಜನಿಕರು ರಕ್ಷಿಸಿ ಚಿಕಿತ್ಸೆಯ ಬಗ್ಗೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಪೈಕಿ ಜಗದೀಶ್‌ ರವರ ಮೃತ ದೇಹವು ಸಂಜೆ 6:30 ಗಂಟೆಗೆ ಕಾಪು ಲೈಟ್‌ ಹೌಸ್‌ ಬಳಿ ಸಮುದ್ರದ ನೀರಿನಲ್ಲಿ ಪತ್ತೆಯಾಗಿರುತ್ತದೆ. ಉಳಿದ, ಹರ್ಷ್, ಸುನಿಲ್, ರವರ ಮೃತ ದೇಹ ಪತ್ತೆಗೆ ಬಾಕಿ ಇರುತ್ತದೆ ಎಂಬುದಾಗಿ ಪ್ರಕಾಶ್‌ ರಾವ್‌ ರವರು ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 29/2014 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಪಡುಬಿದ್ರಿ: ದಿನಾಂಕ 15/10/2014 ರಂದು ರಾತ್ರಿ 10 ಗಂಟೆಯ ಸುಮಾರಿಗೆ ನಡ್ಸಾಲು ಗ್ರಾಮದ ಕಂಚಿನಡ್ಕದಲ್ಲಿರುವ ಪಿರ್ಯಾದಿ ಭಾಲಪ್ಪ 45 ವರ್ಷ, ತಂದೆ: ಹವಳಪ್ಪ ವಾಸ: ಇನಾಂ ಬೂದಿಹಾಲ ಗ್ರಾಮ ಹುನಗುಂದ ತಾಲೂಕು ಬಾಗಲಕೋಟೆ ಜಿಲ್ಲೆ ಇವರ ತಂಗಿ ರಾಮಕ್ಕ 35 ವರ್ಷ ಎಂಬುವವರು ಮನೆಯಲ್ಲಿ ಕರೆಂಟ್ ಹೋದ ವೇಳೆ ಹಚ್ಚಿದ ಸೀಮೆಎಣ್ಣೆ  ದೀಪವನ್ನು ರಾಮಕ್ಕರವರ ಮಗಳು ಚೈತ್ರ 3 ವರ್ಷ ರವರು ಹೊರಳಾಡಿದಾಗ ಸ್ಟೂಲ್ ಮೆಲೆ ಇರಿಸಿದ್ದ ಚಿಮಣಿ ದೀಪವು ಸ್ಟೂಲ್ ನಿಂದ ಕೆಳಗೆ ರಾಮಕ್ಕಳ  ಮೈಮೇಲೆ ಬಿದ್ದು ಸೀರೆಗೆ ಬೆಂಕಿ ತಗುಲಿ ಮೈಮೇಲೆ ಸುಟ್ಟ ಗಾಯಗಳಾಗಿ ಮಂಗಳೂರಿನ ವೆನ್ಲಾಕ್ ಆಸ್ವತ್ರೆಗೆ ದಾಖಲಾಗಿದ್ದು, ದಿನಾಂಕ 25/10/2014 ರಂದು ಬೆಳಿಗ್ಗೆ 9.40 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್‌ ನಂ.  30/14 ಕಲಂ. 174  ಸಿಆರ್.ಪಿಸಿ. ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
  • ಅಮಾಸೆಬೈಲು: ಮೃತ ಅನಂತ. ಎಂ. ಎಂ ರವರು  ಕೆಪಿಸಿ ಯಲ್ಲಿ  ಭದ್ರತಾ ಕಾವಲುಗಾರನಾಗಿದ್ದು ದಿನಾಂಕ 09.10.2014 ರಂದು  ಕರ್ತವ್ಯಕ್ಕೆ ಬಂದಿದ್ದು  ನಂತರ ದಿನಗಳಲ್ಲಿ  ಕರ್ತವ್ಯಕ್ಕೆ ಬಾರದೇ ಇರುವುದನ್ನು  ನೋಡಿ ದಿನಾಂಕ 25.10.2014 ರಂದು  ಸಂಜೆ 05.00 ಗಂಟೆಗೆ ಮನೆಯ ಹತ್ತಿರದವರಾದ ಚಂದ್ರಪ್ಪ ಮತ್ತು ಶೇಖರಪ್ಪ  ರವರು  ಅನಂತ  ರವರ ಮನೆಗೆ ಹೊಗಿ ನೋಡಿದಾಗ ವಾಸನೆ   ಬರುತ್ತಿದೆ  ಎಂದು  ತಿಳಿಸಿದ ಮೇರೆಗೆ ಪಿರ್ಯಾದಿ ಅಲ್ಪಾನ್ಸ್ ಡಿ ಮೆಲ್ಲೋ (56), ಭದ್ರತಾಧಿಕಾರಿಗಳು, ಕರ್ನಾಟಕ ವಿದ್ಯತ್ ನಿಗಮ ನಿಯಮಿತ, ಹೊಸಂಗಡಿ, ಕುಂದಾಪುರ  ಇವರು  ಹಾಗೂ  ಇತರರು  ಹೋಗಿ  ರೂಮಿನ ಬಾಗಿಲನ್ನು  ಒಡೆದು  ಬಳಗೆ ಹೋಗಿ ನೋಡಿದಾಗ ಬೆಡ್ ರೂಮಿನ ಪ್ಯಾನಿಗೆ ಚೂಡಿದಾರ ಶಾಲಿನಿಂದ ಕುತ್ತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಹೆಣವು ಕೊಳೆತ ಸ್ಥಿತಿಯಲ್ಲಿರುವುದು ಕಂಡು  ಬಂತು  ಆನಂತನು ಕುಡಿತ ಸ್ವಭಾವದನಾಗಿದ್ದು ಸಂಸಾರದಲ್ಲಿ  ಸರಿ ಇಲ್ಲದೇ ಇದ್ದು ಜೀವನದಲ್ಲಿ ಜಿಗುಪ್ಸೆ ಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಗಿದೆ ಎನ್ನುವುದಾಗಿ ಅಲ್ಪಾನ್ಸ್ ಡಿ ಮೆಲ್ಲೋ ರವರು ನೀಡಿದ ದೂರಿನಂತೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್‌ ನಂ. 12/14 ಕಲಂ. 174 ಸಿಆರ್.ಪಿಸಿ. ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

No comments: