Saturday, October 25, 2014

Daily Crime Reports As On 25/10/2014 At 17:00 Hrs

ಅಪಘಾತ ಪ್ರಕರಣ
  • ಕಾರ್ಕಳ: ದಿನಾಂಕ 24/10/2014 ರಂದು 22:30 ಗಂಟೆಗೆ ಕಾರ್ಕಳ ತಾಲೂಕಿನ ಕಾರ್ಕಳ ಕಸ್ಬಾ ಗ್ರಾಮದ ಗೋಮಟೇಶ್ವರ ಬೆಟ್ಟದ ಸಮೀಪ ಇರುವ ಗ್ಯಾಸ್ ಗೋಡೌನ್ ಬಳಿ ಕಾರ್ಕಳ- ಬಜಗೋಳಿ ರಾಷ್ಟ್ರೀಯ ಹೆದ್ದಾರಿ 169 ನೇದರಲ್ಲಿ ಮೋಟಾರು ಸೈಕಲ್ ಸವಾರ ಅಮಿತ್ ಕುಮಾರ್ ಎಂಬವರು ಬಜಗೋಳಿ ಕಡೆಯಿಂದ ಕಾರ್ಕಳ ಕಡೆಗೆ ಮೋಟಾರು ಸೈಕಲ್ ನಂಬ್ರ KA-20-U-7767 ನೇದನ್ನು ರಸ್ತೆಯ ತೀರಾ ಬಲಬದಿಯಲ್ಲಿ ಅತಿವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು, ಪಿರ್ಯಾದಿ ಮಹಮ್ಮದ್ ಷರೀಫ್ ಸೈಪುದ್ದೀನ್ ಬೇಪಾರಿ, ಪ್ರಾಯ 25 ವರ್ಷ, ತಂದೆ: ದಿವಂಗತ ಸೈಪುದ್ದೀನ್, ವಾಸ: ನಾಗೇಶೆಟ್ಟಿ ಕೊಪ್ಪ, ಕೆರೆಓಣಿ, ಉದಯ ನಗರ ಇವರು ಪುಲ್ಕೇರಿ ಕಡೆಯಿಂದ ಬಜಗೋಳಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ಟಾಟಾ ವಿಂಗರ್ ವಾಹನ  ನಂಬ್ರ KA-31-M-5803 ನೇದಕ್ಕೆ ಢಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು, ಮೋಟಾರು ಸೈಕಲ್ ಸವಾರನ ತಲೆಯ ಬಲಬದಿಗೆ ರಕ್ತ ಗಾಯವಾಗಿರುತ್ತದೆ ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 185/2014 U/s 279, 337 IPC ರಂತೆ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ. 

No comments: