Saturday, October 25, 2014

Daily Crime Reports as on 25/10/2014 at 07:00 Hrsಅಪಘಾತ ಪ್ರಕರಣ

  • ಕುಂದಾಪುರ: ದಿನಾಂಕ 24/10/2014 ರಂದು ಸಂಜೆ 5:10 ಗಂಟೆಗೆ ಕುಂದಾಪುರ ತಾಲೂಕು ಕೊಟೇಶ್ವರ ಗ್ರಾಮದ ಮೆಜೆಸ್ಟಿಕ್ ಹಾಲ್  ಬಳಿ ರಾ.ಹೆ 66 ರಸ್ತೆಯಲ್ಲಿ ಆಪಾದಿತ ಸೀತಾರಾಮ ವೀರಪ್ಪ ದಾಸ ಎಂಬವರು ಕೆಎ-20 ಬಿ-7663 ನೇ ಬಸ್ಸನ್ನು ಕೊಟೇಶ್ವರ ಕಡೆಯಿಂದ ಕುಂದಾಪುರ ಕಡೆಗೆ ಅತೀ ವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಅದೇ ದಿಕ್ಕಿನಲ್ಲಿ ಅಂದರೆ ಕೊಟೇಶ್ವರ ಕಡೆಯಿಂದ ಕುಂದಾಪುರ ಕಡೆಗೆ ಸತ್ಯಾನಂದ ಶೆಟ್ಟಿಯವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ KA 20 W 7024ನೇ ಬೈಕ್ ನ್ನು ಓವರ್ಟೇಕ್ಮಾಡಿ  ಮುಂದೆ ಹೋಗಿ ಒಮ್ಮಲೆ ರಸ್ತೆಯ ಎಡಬದಿಗೆ ಚಲಾಯಿಸಿ ಅಜಾಗರೂಕತೆಯಿಂದ ಬ್ರೇಕ್ ಹಾಕಿ ನಿಲ್ಲಿಸಿದ ಪರಿಣಾಮ ಹಿಂದುಗಡೆಯಿಂದ ಬರುತ್ತಿದ್ದ ಸತ್ಯಾನಂದ ಶೆಟ್ಟಿರವರ ಬೈಕ್  ಸದ್ರಿ ಬಸ್ಗೆ ಡಿಕ್ಕಿ ಹೊಡೆದು ಅಪಘಾತಕ್ಕೆ ಒಳಗಾಗಿ ಬೈಕ್ ಸಮೇತ ರಸ್ತೆಗೆ ಬಿದ್ದು ಸತ್ಯಾನಂದ ಶೆಟ್ಟಿರವರ ತಲೆಗೆ ಹಾಗೂ ಮೈಕೈಗೆ ಗಾಯವಾಗಿ ಕೊಟೇಶ್ವರದ ಎನ್.ಆರ್ ಆಚಾರ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ ಎಂಬುದಾಗಿ ಶ್ರೀ ಕಾಂತ್ ಆಚಾರ್ಯ (23) ತಂದೆ ರಾಮ ಅಚಾರ್ಯ ವಾಸ: ಹೊದ್ರೊಳಿ, ಕೊಟೇಶ್ವರ ಬೀಜಾಡಿ ಗ್ರಾಮ, ಕುಂದಾಪುರ ತಾಲೂಕು ರವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 132/2014 ಕಲಂ 279, 337 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: