Friday, October 24, 2014

Daily Crime Reports as on 24/10/2014 at 19:30 Hrs

ಅಪಘಾತ ಪ್ರಕರಣಗಳು  
  • ಮಣಿಪಾಲ: ದಿನಾಂಕ: 23/10/2014 ರಂದು ಪಿರ್ಯಾದಿದಾರರಾದ ಗಣಪತಿ ನಾಯ್ಕ್‌ (26) ತಂದೆ: ಕೃಷ್ಣ ನಾಯ್ಕ್‌  ವಾಸ; ಕೆಳಬೈಲು ಕುಕ್ಕೆಹಳ್ಳಿ ಗ್ರಾಮ ಉಡುಪಿ ತಾಲೂಕು ಎಂಬವರ ಅಣ್ಣ ಮಾಧವ (35) ಇವರು ತನ್ನ ಮೋಟಾರು ಸೈಕಲ್ ನಂಬ್ರ ಕೆ.ಎ 20 ಎಲ್ 2261 ನೇದರಲ್ಲಿ ಕೆಲಸಕ್ಕೆ ಹೋದವರು ಸಂಜೆಯಾದರೂ ಮನೆಗೆ ವಾಪಾಸು ಬಾರದೇ ಇದ್ದು ಈ ಬಗ್ಗೆ ದಿನಾಂಕ 24/10/2014 ರಂದು ಮದ್ಯಾಹ್ನ 3 ಗಂಟೆಗೆ ಅವರು ಕೆಲಸಕ್ಕೆ ಹೋಗುತ್ತಿದ್ದ  ಪ್ಯಾಕ್ಟರಿಗೆ ಫೋನ್‌ ಮಾಡಿ ವಿಚಾರಿಸಿದಾಗ ನಿನ್ನೆ ಮದ್ಯಾಹ್ನ 3 ಗಂಟೆಗೆ ಪ್ಯಾಕ್ಟರಿ ಪೂಜೆ ಬಳಿಕ ಹೋಗಿರುವುದಾಗಿ ತಿಳಿಸಿದ್ದು, ನಂತರ 3:30 ಗಂಟೆಗೆ ಪಿರ್ಯಾದಿದಾರರಿಗೆ ಅವರ ಅಣ್ಣ ಮಾಧವ ನಾಯ್ಕ್‌ ಕೆಳ ಪರ್ಕಳ ಎಂಬಲ್ಲಿ ಮೋಟಾರು ಸೈಕಲು ಸಮೇತವಾಗಿ ಚರಂಡಿಯಲ್ಲಿ ಬಿದ್ದ ವಿಷಯ ತಿಳಿದು, ಅಲ್ಲಿಗೆ ಬಂದು ನೋಡಿದಾಗ ಅವರ ಅಣ್ಣ ಹಾಗೂ ಅಣ್ಣನ ಜಖಂಗೊಂಡ ಮೋಟಾರು ಸೈಕಲನ್ನು ಗುರುತಿಸಿದ್ದು ದಿನಾಂಕ 23/10/2014 ರಂದು ಪಿರ್ಯಾದಿದಾರರ ಅಣ್ಣ ಮಾಧವ ನಾಯ್ಕ್‌ ಇವರು ಕೆಲಸ ಮುಗಿಸಿ ಮನೆಗೆ ಬರುತ್ತಿರುವಾಗ ಕೆಳ ಪರ್ಕಳ ಎಂಬಲ್ಲಿ ಮೋಟಾರು ಸೈಕಲು ಸ್ಕಿಡ್‌ ಆಗಿ ಚರಂಡಿಯಲ್ಲಿ ಬಿದ್ದು, ಮಳೆ ನೀರು ಹೋಗುವ ಸಮಯ ಮೃತಪಟ್ಟಿರುವುದಾಗಿದೆ ಎಂಬುದಾಗಿ ಗಣಪತಿ ನಾಯ್ಕ್‌ ರವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 182/2014 ಕಲಂ 279, 304(ಎ) ಐ.ಪಿ.ಸಿಯಂತೆ ಪ್ರಕರಣ ದಾಖಲಿಸಲಾಗಿದೆ.  
  • ಬ್ರಹ್ಮಾವರ: ದಿನಾಂಕ 24/10/2014 ರಂದು ಪಿರ್ಯಾದಿದಾರರಾದ ಆನಂದ ಶೆಟ್ಟಿಗಾರ್ (31) ತಂದೆ ಕೃಷ್ಣಯ್ಯ ಶೆಟ್ಟಿಗಾರ್ ವಾಸ: ಶಾಂತಿ ನಿಲಯ ನಾಗರಮಠ ಹೊಸಾಳ ಗ್ರಾಮ ಎಂಬವರು ಡಾ. ಸಂದೀಪ್ ಶೆಟ್ಟಿ ಎಂಬುವರು ಚಲಾಯಿಸುತ್ತಿದ್ದ ಕೆಎ-20 ಜೆಡ್-1708 ಕಾರಿನಲ್ಲಿ ಕುಂದಾಪುರ ದಿಂದ ಉಡುಪಿಗೆ ಹೋಗುತ್ತಿರುವಾಗ ಮದ್ಯಾಹ್ನ 1:15 ಗಂಟೆಗೆ ಎನ್ ಹೆಚ್-66ರ ಬ್ರಹ್ಮಾವರ ಭರಣಿ ಪೆಟ್ರೋಲ್ ಬಂಕ್ ನ ಎದುರು ತಲುಪುವಾಗ ಉಡುಪಿಯಿಂದ ಕುಂದಾಪುರ ಕಡೆಗೆ ಕೆಎ-47-583ನೇ ಬೋಲೆರೋ ಟ್ರಕ್ ಚಾಲಕ ನೀಲೇಶ್ ಎನ್ ಅಂಬಿಗ ಎಂಬಾತನು ವಾಹನವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರು ಇದ್ದ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಕಾರು ಚಲಾಯಿಸುತ್ತಿದ್ದ ಡಾ. ಸಂದೀಪ ಶೆಟ್ಟಿಯವರಿಗೆ ಬಲಕಾಲಿನ ಗಂಟಿಗೆ ಜಖಂ ಆಗಿದ್ದು ಸೊಂಟ ಮತ್ತು ಎದೆಗೆ ಗುದ್ದಿದ ನೋವಾಗಿರುತ್ತದೆ ಎಂಬುದಾಗಿ ಆನಂದ ಶೆಟ್ಟಿಗಾರ್ ರವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 196/2014 ಕಲಂ 279, 337 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಲಾಗಿದೆ.  
  • ಕುಂದಾಪುರ: ದಿನಾಂಕ 24/10/2014 ರಂದು ಬೆಳಿಗ್ಗೆ ಸಮಯ 11:30 ಗಂಟೆಗೆ ಕುಂದಾಪುರ ತಾಲೂಕು ಕೊಟೇಶ್ವರ ಗ್ರಾಮದ ಕಲ್ಪತರು ಫ್ಯಾಕ್ಟರಿಯ ಬಳಿ ಪೂರ್ವ ಬದಿಯ ಸರ್ವಿಸ್ ರಸ್ತೆಯಲ್ಲಿ, ಆಪಾದಿತ ವಿ ಪ್ರಭಾಕರ ಎಂಬವರು KA 20 236 ನೇ ಗೂಡ್ಸ್ ಟೆಂಪೋವನ್ನು ಪೂರ್ವ ಬದಿಯ ಸರ್ವಿಸ್‌ ರಸ್ತೆಯಲ್ಲಿ ಕೊಟೇಶ್ವರ ಕಡೆಯಿಂದ ಕುಂದಾಪುರ ಕಡೆಗೆ ಅತೀ ವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು, ಚೇತನ್ ಬಿ ಎಂಬವರು KA 20-EF-4359  ಬೈಕಿನಲ್ಲಿ  ಗುರುರಾಜ್ ಎಂಬವರನ್ನು  ಕುಳ್ಳಿರಿಸಿಕೊಂಡು ಕುಂದಾಪುರ ಕಡೆಯಿಂದ ಕೊಟೇಶ್ವರ ಕಡೆಗೆ ಸವಾರಿ ಮಾಡಿಕೊಂಡು ಬಂದು, ರಾ.ಹೆ ರಸ್ತೆಯಿಂದ ಸರ್ವಿಸ್ ರಸ್ತೆಗೆ ಹೋಗಲು ಪೂರ್ವಬದಿಯ ಸರ್ವಿಸ್‌  ರಸ್ತೆಯ ಅಂಚಲ್ಲಿ ನಿಲ್ಲಿಸಿಕೊಂಡಿರುವಾಗ ಡಿಕ್ಕಿ ಹೊಡೆದ ಪರಿಣಾಮ ಚೇತನ್‌ ಬಿ  ಹಾಗೂ  ಗುರುರಾಜ್ ರವರು ಬೈಕ್‌ ಸಮೇತ ರಸ್ತೆಗೆ ಬಿದ್ದು ಇಬ್ಬರು ಗಾಯಗೊಂಡು ಕೊಟೇಶ್ವರದ ಎನ್‌.ಆರ್ ಆಚಾರ್ಯ  ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವುದಾಗಿದೆ ಎಂಬುದಾಗಿ ಸೂರಜ್ (22) ತಂದೆ  ರಾಮಚಂದ್ರ ವಾಸ: ಚಿಕ್ಕನ್‌ ಸಾಲ್‌ ರಸ್ತೆ, ಕುಂದಾಪುರ  ಕಸಬಾ ಗ್ರಾಮ  ಕುಂದಾಪುರ ತಾಲೂಕು ರವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 130/2014 ಕಲಂ 279, 337 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಲಾಗಿದೆ.  

No comments: