Wednesday, October 08, 2014

Daily Crime Reports as on 08/10/2014 at 07:00 Hrs


ಹಲ್ಲೆ ಪ್ರಕರಣ
  • ಪಿರ್ಯಾದಿದಾರರಾದ ಸಂದೀಪ ಎಸ್.ಪಿ (20) ತಂದೆ:ಶೇಖರ ಪೂಜಾರಿ.ವಾಸ:ಉಷಾ ನಿಲಯ, ದೇಲಟ್ಟು ಬೇಳೂರು ಗ್ರಾಮ  ಕುಂದಾಪುರ  ತಾಲೂಕು ಮಣೂರುರವರು ಪಡುಕೆರೆ ಲಕ್ಷ್ಮೀ ಸೋಮಬಂಗೇರ ಪ್ರಥಮ ದರ್ಜೆ ಕಾಲೇಜಿನಲ್ಲಿ ತೃತೀಯ ವರ್ಷದ ಬಿ.ಕಾಂ ಓದುತ್ತಿದ್ದು ದಿನಾಂಕ:07/10/2014 ರ ಕಾಲೇಜಿನ ಪ್ರತಿಭಾ ಪ್ರದರ್ಶನ ಕಾಯಕ್ರಮಕ್ಕೆ ತನ್ನ ಸ್ನೇಹಿತರೊಂದಿಗೆ ದಿನಾಂಕ:06/10/2014 ರಂದು ರಾತ್ರಿ ಸುಮಾರು 11:30 ಗಂಟೆಗೆ ಕಾಲೇಜಿನ ಕ್ಯಾಂಪಸ್‌ನಲ್ಲಿ ಅಭ್ಯಾಸ ಮಾಡುತ್ತಿರುವಾಗ ಆರೋಪಿತರುಗಳಾದ ಪ್ರಸನ್ನ, ನವೀನ ಹಾಗೂ ಇನ್ನಿಬ್ಬರು ಸೇರಿಕೊಂಡು ಕಾಲೇಜಿನ ಕ್ಯಾಂಪಸ್ ಒಳಗೆ ಅಕ್ರಮ ಪ್ರವೇಶ ಮಾಡಿ ರಾತ್ರಿ ವೇಳೆ ಅಭ್ಯಾಸ ಮಾಡುತ್ತಿರುವುದನ್ನು ಆಕ್ಷೇಪಿಸಿ ಅವಾಚ್ಯ ಶಬ್ದಗಳಿಂದ ಬೈದು ಸಂದೀಪ ಎಸ್.ಪಿ ರವರಿಗೆ ಕೈಯಿಂದ ಹಲ್ಲೆಮಾಡಿರುವುದಾಗಿದೆ.ಈ ಬಗ್ಗೆ ಸಂದೀಪ ಎಸ್.ಪಿ ರವರು ನೀಡಿದ ದೂರಿನಂತೆ ಕೋಟ ಠಾಣಾ ಅಪರಾಧ ಕ್ರಮಾಂಕ 202/2014 ಕಲಂ:447, 323, 504, 34 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ದರೋಡೆ ಪ್ರಕರಣ
  • ಬೈಂದೂರು:ಪಿರ್ಯಾದಿದಾರರಾದ ದಿವ್ಯಶ್ರೀ (45) ತಂದೆ:ಯು.ಗಣೇಶ್ ಶೇಟ್, ವಾಸ:ಶಿವದುರ್ಗ ನಿಲಯ, ಸೋನಾರಕೇರಿ, ಉಪ್ಪುಂದ ಗ್ರಾಮ ಕುಂದಾಪುರ ತಾಲೂಕುರವರು ದಿನಾಂಕ:07/10/2014 ರಂದು ಸಂಜೆ ಸುಮಾರು 7:30 ಗಂಟೆಗೆ ಉಪ್ಪುಂದಲ್ಲಿರುವ ತನ್ನ ಶ್ರೀ ಮಹಾಲಸ ಜ್ಯುವೆಲ್ಲರ್ಸ್‌ನಲ್ಲಿದ್ದ ಚಿನ್ನದ ಕಿವಿಯ ಆಭರಣಗಳು ಹಾಗೂ ಚಿನ್ನದ ಉಂಗುರಗಳನ್ನು ಒಂದು ಬ್ಯಾಗ್ ನಲ್ಲಿ ಹಾಕಿಕೊಂಡು, ಜ್ಯುವೆಲ್ಲರಿ ಶಾಪ್‌ ಬಂದ್ ಮಾಡಿ ತನ್ನ ತಂದೆ ಗಣೇಶ್ ಶೇಟ್ ಹಾಗೂ ಅಣ್ಣ ಸುಧೀಂದ್ರ ಕುಮಾರ್‌ರೊಂದಿಗೆ ತನ್ನ ಮನೆಯ ಕಡೆಗೆ ಹೊರಟಿದ್ದು, ಸದ್ರಿ ಚಿನ್ನದ ಆಭರಣಗಳಿರುವ ಬ್ಯಾಗನ್ನು ದಿವ್ಯಶ್ರೀರವರ ಅಣ್ಣನಾದ ಸುಧೀಂದ್ರ ಕುಮಾರರವರು ತನ್ನ ಹೆಗಲಿನಲ್ಲಿ ಹಾಕಿಕೊಂಡಿದ್ದು ಸಂಜೆ ಸುಮಾರು 8:00 ಗಂಟೆಯ ವೇಳೆಗೆ ಉಪ್ಪುಂದ ಗ್ರಾಮದ ಸೋನಾರಕೇರಿಯ ಅಣ್ಣೆಮ್ಮಗದ್ದೆ ಎಂಬಲ್ಲಿ ಗದ್ದೆ ಅಂಚಿನಲ್ಲಿ ಕೈಯಲ್ಲಿ ಟಾರ್ಚ್ ಹಿಡಿದುಕೊಂಡು ನಡೆದುಕೊಂಡು ಹೋಗುತ್ತಿರುವಾಗ ಗದ್ದೆಯಲ್ಲಿ ಕುಳಿತ್ತಿದ್ದ 5 ಜನ ಅಪರಿಚಿತ ವ್ಯಕ್ತಿಗಳು ಏಕಾಏಕಿ ದಿವ್ಯಶ್ರೀ, ದಿವ್ಯಶ್ರೀರವರ ತಂದೆ ಹಾಗೂ ಅಣ್ಣನ ಮುಖದ ಮೇಲೆ ಖಾರದ ಪುಡಿ ಎರಚಿ, ಗದ್ದೆಯಲ್ಲಿ ದೂಡಿ ಹಾಕಿ, ಆರೋಪಿತರು ತಮ್ಮ ಕೈಯಲ್ಲಿದ್ದ  ಚೂರಿಯಿಂದ ದಿವ್ಯಶ್ರೀರವರ ತಂದೆ ಹಾಗೂ ಅಣ್ಣನ ಮೇಲೆ ಹಲ್ಲೆ ಮಾಡಿದ್ದು, ಆಗ ದಿವ್ಯಶ್ರೀರವರು ಬೊಬ್ಬೆ ಹೊಡಿದಿದ್ದು, ಸದ್ರಿ ಸಮಯ ದಿವ್ಯಶ್ರೀರವರ ಬೊಬ್ಬೆ ಕೇಳಿ ಅಲ್ಲಿಗೆ ಬಂದ ಅನಿಲ್ ಶೇಟ್ ರವರಿಗೂ ಆರೋಪಿತರು ಚೂರಿಯಿಂದ ಹಲ್ಲೆ ನಡೆಸಿ ಅಣ್ಣನ ಹೆಗಲಿನಲ್ಲಿದ್ದ ಸುಮಾರು 12,00,000/- ರೂಪಾಯಿ ಮೌಲ್ಯದ ಚಿನ್ನದ ಆಭರಣಗಳಿದ್ದ ಚೀಲವನ್ನು ದರೋಡೆ ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ದಿವ್ಯಶ್ರೀರವರು ನೀಡಿದ ದೂರಿನಂತೆ ಬೈಂದೂರು ಠಾಣಾ ಅಪರಾಧ ಕ್ರಮಾಂಕ:208/14 ಕಲಂ:395 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: