Wednesday, October 08, 2014

Daily Crime Reported As On 08/10/2014 At 17:00ದರೋಡೆ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ದಿವ್ಯಶ್ರೀ (23), ತಂದೆ ಯು.ಗಣೇಶ್ ಶೇಟ್, ವಾಸ ಶಿವ ದುರ್ಗ ನಿಲಯ, ಸೋನಾರಕೇರಿ ಉಪ್ಪುಂದ ಗ್ರಾಮ ಕುಂದಾಪುರ ಇವರು ದಿನಾಂಕ 07/10/2014ರಂದು ಸಂಜೆ 7:30 ಗಂಟೆಗೆ ಉಪ್ಪುಂದಲ್ಲಿರುವ ತನ್ನ ಬಾಬ್ತು ಶ್ರೀ ಮಹಾಲಸ ಜ್ಯುವೆಲ್ಲರ್ಸ್ ನಲ್ಲಿದ್ದ ಚಿನ್ನದ ಕಿವಿಯ ಆಭರಣಗಳು ಹಾಗೂ ಚಿನ್ನದ ಉಂಗುರಗಳನ್ನು ಒಂದು ಬ್ಯಾಗ್ ನಲ್ಲಿ ಹಾಕಿಕೊಂಡು, ಜ್ಯುವೆಲ್ಲರ್ಸ್ ನ್ನು ಬಂದ್ ಮಾಡಿ ತನ್ನ ತಂದೆ ಗಣೇಶ್ ಶೇಟ್ ಹಾಗೂ ತನ್ನ ಅಣ್ಣ ಸುಧೀಂದ್ರ ಕುಮಾರರವರೊಂದಿಗೆ ತನ್ನ ಮನೆಯ ಕಡೆಗೆ ಹೊರಟಿದ್ದು, ಸದ್ರಿ ಚಿನ್ನದ ಆಭರಣಗಳಿರುವ ಬ್ಯಾಗ್ ನ್ನು ಪಿರ್ಯಾದಿದಾರರ ಅಣ್ಣನಾದ ಸುಧೀಂದ್ರ ಕುಮಾರರವರು ತನ್ನ ಹೆಗಲಿನಲ್ಲಿ ಹಾಕಿಕೊಂಡಿದ್ದು ಸಂಜೆ ಸುಮಾರು 8:00 ಗಂಟೆಯ ವೇಳೆಗೆ ಉಪ್ಪುಂದ ಗ್ರಾಮದ ಸೋನಾರಕೇರಿಯ ಅಣ್ಣೆಮ್ಮಗದ್ದೆ ಎಂಬಲ್ಲಿ ಗದ್ದೆ ಅಂಚಿನಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಗದ್ದೆಯಲ್ಲಿ ಕುಳಿತ್ತಿದ್ದ 5 ಜನ ಅಪರಿಚಿತ ವ್ಯಕ್ತಿಗಳು ಏಕಾಏಕಿ ದಿವ್ಯಶ್ರೀರವರು, ದಿವ್ಯಶ್ರೀರವರ ತಂದೆ ಹಾಗೂ ದಿವ್ಯಶ್ರೀರವರ ಅಣ್ಣನ ಮುಖದ ಮೇಲೆ ಖಾರದ ಪುಡಿ ಎರಚಿ, ಗದ್ದೆಯಲ್ಲಿ ದೂಡಿ ಹಾಕಿ, ಆರೋಪಿತರು ತಮ್ಮ ಕೈಯಲ್ಲಿದ್ದ ಚೂರಿಯಿಂದ ದಿವ್ಯಶ್ರೀರವರ ತಂದೆ ಹಾಗೂ ದಿವ್ಯಶ್ರೀರವರ ಅಣ್ಣನ ಮೇಲೆ ಹಲ್ಲೆ ಮಾಡಿದ್ದು, ಆಗ ದಿವ್ಯಶ್ರೀರವರು ಬೊಬ್ಬೆ ಹೊಡಿದಿದ್ದು, ಸದ್ರಿ ಸಮಯ ದಿವ್ಯಶ್ರೀರವರ ಬೊಬ್ಬೆ ಕೇಳಿ ಅಲ್ಲಿಗೆ ಬಂದ ಅನಿಲ್ ಶೇಟ್ ರವರಿಗೂ ಆರೋಪಿತರು ಚೂರಿಯಿಂದ ಹಲ್ಲೆ ನಡೆಸಿ ದಿವ್ಯಶ್ರೀರವರ ಅಣ್ಣನ ಹೆಗಲಿನಲ್ಲಿದ್ದ ಸುಮಾರು 12,00,000/- ರೂಪಾಯಿ ಮೌಲ್ಯದ ಚಿನ್ನದ ಆಭರಣಗಳಿದ್ದ ಚೀಲವನ್ನು ಆರೋಪಿತರು ದರೋಡೆ ಮಾಡಿಕೊಂಡು ಹೋಗಿರುತ್ತಾರೆ ಎಂಬುದಾಗಿ ದಿವ್ಯಶ್ರೀ ಇವರು ನೀಡಿದ ದೂರಿನಂತೆ ಬೈಂದೂರು ಠಾಣಾ ಅಪರಾಧ ಕ್ರಮಾಂಕ 208/2014 ಕಲಂ  395 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.   
ಯುವತಿ ಕಾಣೆ ಪ್ರಕರಣ
  • ಕೊಲ್ಲೂರು: ದಿನಾಂಕ ೦6/10/2014ರಂದು ಬೆಳಿಗ್ಗೆ 10:30 ಗಂಟೆಗೆ ಪಿರ್ಯಾದಿದಾರರಾದ ರಾಜು ಪೂಜಾರಿ (29), ತಂದೆ: ನಾರಾಯಣ ಪೂಜಾರಿ, ವಾಸ ಮನಿಕೆರೆ ಅಲೂರು ಗ್ರಾಮ ಕುಂದಾಪುರ ತಾಲೂಕು. ಇವರ ಹೆಂಡತಿ ಸುಧಾರವರು ಅವಳ ತಾಯಿ ಮನೆ ಚಿತ್ತೂರು ನೈಕಂಬಳಿ ಯಿಂದ ಹೊರಟು ಕೊಲ್ಲೂರು ಠಾಣಾ ವ್ಯಾಪ್ತಿಯ ಚಿತ್ತೂರು ಗ್ರಾಮದ ಮಾರಣಕಟ್ಟೆ ದೇವಸ್ಥಾನ ಕ್ಕೆ ಬಂದಿದ್ದು, ಆ ಸಮಯ ಪಿರ್ಯಾದಿದಾರರ ಹೆಂಡತಿಯನ್ನು ಒಬ್ಬಾತ ಯುವಕ ಮಾತನಾಡಿಸಿದ್ದು, ಪಿರ್ಯಾದಿದಾರರ ಹೆಂಡತಿ ಸುಧಾಳು ಅವನ ಜೊತೆ ಸಲುಗೆಯಿಂದ ಮಾತನಾಡಿದ್ದು, ಅವರಿಬ್ಬರೂ ಸ್ನೇಹಿತರಾಗಿರಬಹುದೆಂದು ಪಿರ್ಯಾದಿ ಭಾವಿಸಿದ್ದರು, ನಂತರ ಪಿರ್ಯಾದಿ ಹಾಗೂ ಹೆಂಡತಿ ಸುಧಾ ಇಬ್ಬರೂ ದೇವಸ್ಥಾನಕ್ಕೆ ಪ್ರದಕ್ಷಣೆ ಬಂದು ಇಬ್ಬರೂ ದೇವಸ್ಥಾನದಲ್ಲಿಯೇ ಕುಳಿತುಕೊಂಡಿದ್ದು, ನಂತರ ಪಿರ್ಯಾದಿಯ ಹೆಂಡತಿ ಸುಧಾ ರವರು ಅಲ್ಲಿಂದ ಹೊರಗೆ ಹೋಗಿದ್ದು, ಪಿರ್ಯಾದಿಯವರು 11.30 ಗಂಟೆಗೆ ದೇವಸ್ಥಾನದಿಂದ  ಹೊರಗೆ ಬಂದು ನೋಡಿದಾಗ ಸುಧಾಳು ಅಲ್ಲಿ ಇಲ್ಲದೇ ನಂತರ ಪಿರ್ಯಾದಿರವರು ಅವರ ಹೆಂಡತಿಯ ಮೊಬೈಲ್ ಗೆ ಕರೆಮಾಡಿದಾಗ ಸ್ವಿಚ್ ಆಫ್ ಇದ್ದು, ನಂತರ ಪಿರ್ಯಾದಿಗೆ ಅಲ್ಲಿ ತಿಳಿಯಲಾಗಿ ಪಿರ್ಯಾದಿಯ ಹೆಂಡತಿ ಸುಧಾಳು ದೇವಸ್ಥಾನದಲ್ಲಿ ಮಾತನಾಡಿದ ಯುವಕ ನಾಗರಾಜ ಎಂಬವನೊಂದಿಗೆ ಬೈಕಿನಲ್ಲಿ ಹೋಗಿದ್ದು, ಈ ತನಕ ಮನೆಗೆ ಬಾರದೆ ಕಾಣೆಯಾಗಿರುವುದಾಗಿ ಎಂಬುದಾಗಿ ರಾಜು ಪೂಜಾರಿ ಇವರು ನೀಡಿದ ದೂರಿನಂತೆ ಕೊಲ್ಲೂರು ಠಾಣಾ ಅಪರಾಧ ಕ್ರಮಾಂಕ 63/14 ಕಲಂ ಹೆಂಗಸು ಕಾಣೆಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.

No comments: