Thursday, October 09, 2014

Daily Crime Reported As On 09/10/2014 At 07:00 Hrsಹಲ್ಲೆ ನಡೆಸಿ ಜೀವ ಬೆದರಿಕೆ ಪ್ರಕರಣ

  • ಪಡುಬಿದ್ರಿ: ದಿನಾಂಕ 08.10.2014 ರಂದು 19:00 ಗಂಟೆಗೆ ದಿನೇಶ್ ಅಮೀನ್ (22), ತಂದೆ ಶೇಖರ ಅಮೀನ್,  ವಾಸ ಲಲಿತ ಸದನ, ಕಾಡಿಪಟ್ನಾ, ಪಡುಬಿದ್ರಿ, ನಡ್ಸಾಲು  ಗ್ರಾಮ, ಉಡುಪಿ  ಇವರು ಹೆಜಮಾಡಿ ಗ್ರಾಮದ ಶಿವನಗರ ಎಂಬಲ್ಲಿರುವ ಸಂತೋಷ ಎಂಬವರ ಗ್ಯಾರೇಜಿನಲ್ಲಿ ಕೆಲಸ ಮಾಡುತ್ತಿರುವ ವೇಳೆ ಆರೋಪಿಗಳಾದ ಪಚ್ಚು @ ಪ್ರಶಾಂತ್, ಶಹಾನ್, ಸುಜಯ್, ಸಂದೇಶ್ ಶೆಟ್ಟಿ ಹೆಜಮಾಡಿ, ಪ್ರವೀಣ್ ಹಾಗೂ ಇತರೇ 15-20 ಜನರು ಸಮಾನ ಉದ್ದೇಶದಿಂದ ಆಕ್ರಮ ಕೂಟ ಸೇರಿ ಕೆಎ 08ಎಂ 3225 ನೇ ರಿಡ್ಜ್ ಕಾರು ಹಾಗೂ ಮೋಟಾರು ಸೈಕಲ್‌‌ನಲ್ಲಿ ಬಂದು ಪಿರ್ಯಾದಿಯನ್ನು ತಡೆದು ನಿಲ್ಲಿಸಿ ಕೈಗಳಿಂದ ಹೊಡೆದು ಕಾಲಿನಿಂದ ತುಳಿದು ಪಿರ್ಯಾದಿದಾರರನ್ನು ಉದ್ದೇಶಿಸಿ ನಿನಗೆ ಬಹಳ ಅಹಂಕಾರ ಇದೆ ಎಂದು ಹೇಳಿ, ನಂತರ ಕಾರಿನೊಳಗೆ  ಬಲತ್ಕಾರವಾಗಿ ಎಳೆದು ಕರೆದುಕೊಂಡು ಹೋಗಿ ಕಾರಿನಲ್ಲಿ ಕೂಡ ಹೊಡೆದು ಬಳಿಕ ಹೆಜಮಾಡಿ ಸುಲ್ತಾನ್ ರಸ್ತೆ ಜಂಕ್ಷನ್ ಬಳಿ ಕಾರಿನಿಂದ ಹೊರಗೆ ಹಾಕಿ ಈ ವಿಚಾರದ ಬಗ್ಗೆ ಪೊಲೀಸ್ ಕಂಪ್ಲೇಟ್ ನೀಡಿದರೆ ನಿನ್ನ ಜೀವ ಸಹಿತ ಬಿಡುವುದಿಲ್ಲವಾಗಿ ಜೀವ ಬೆದರಿಕೆ ಹಾಕಿ ಹೋಗಿರುತ್ತಾರ. ಹಲ್ಲೆಯಿಂದ ಪಿರ್ಯಾದಿಗೆ ಗುದ್ದಿದ ಒಳ ನೋವು ಉಂಟಾಗಿದ್ದು, ಚಿಕಿತ್ಸೆಯ ಬಗ್ಗೆ ಪಡುಬಿದ್ರಿ ಸಿದ್ದಿ ವಿನಾಯಕ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುತ್ತಾರೆ ಎಂಬುದಾಗಿ ದಿನೇಶ್ ಅಮೀನ್ ಇವರು ನೀಡಿದ ದೂರಿನಂತೆ ಪಡುಬಿದ್ರಿ ಠಾಣಾ ಅಪರಾಧ ಕ್ರಮಾಂಕ 104/2014 ಕಲಂ. 143, 147, 341, 363, 323, 504, 506 ಜೊತೆಗೆ 149  ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.

ಅಪಘಾತ ಪ್ರಕರಣ

  • ಹಿರಿಯಡ್ಕ: ದಿನಾಂಕ 08/10/2014 ರಂದು ಬೆಳಿಗ್ಗೆ 06:15 ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ಶ್ರೀ ಬಿ,ದಿನೇಶ್ ಪೈ (60) ತಂದೆ ದಿ. ಸರ್ವೋತ್ತಮ ಪೈ ವಾಸ ಮುಖ್ಯರಸ್ತೆ ಹಿರಿಯಡ್ಕ ಅಂಚೆ ಬೊಮ್ಮರಬೆಟ್ಟು ಗ್ರಾಮ ಉಡುಪಿ ಇವರ ಭಾವ ಜಗನ್ನಾಥ್ ಭಟ್ ಎಂಬವರು ಉಡುಪಿ ತಾಲೂಕು ಬೊಮ್ಮರಬೆಟ್ಟು ಗ್ರಾಮದ ಹಿರಿಯಡ್ಕ-ಕಾರ್ಕಳ ರಾಜ್ಯ ಹೆದ್ದಾರಿಯ ಹಿರಿಯಡ್ಕ ಪ್ರಾಥಮಿಕ ಶಾಲೆಯ ಬಳಿ ನಡೆದುಕೊಂಡು ಹೋಗುತ್ತಿರುವಾಗ ಉಡುಪಿ ಕಡೆಯಿಂದ ಕಾರ್ಕಳ ಕಡೆಗೆ ಓರ್ವ ಕೆಂಪು ಬಣ್ಣದ ಮಾರುತಿ 800 ಕಾರಿನ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿದಾರರ ಭಾವ ಜಗನ್ನಾಥ್ ಭಟ್ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ಜಗನ್ನಾಥ್ ಭಟ್ಟರು ರಸ್ತೆಗೆ ಬಿದ್ದು ಪರಿಣಾಮ ಅವರ ತಲೆಗೆ ಹಾಗೂ ಮುಖಕ್ಕೆ ತೀವೃ ಸ್ವರೂಪದ ಗಾಯವಾಗಿ ಹಿರಿಯಡ್ಕ ಕಾಮತ್ ನರ್ಸಿಂಗ್ ಹೋಮ್ ನಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ,ಎಮ್,ಸಿ ಕರೆದುಕೊಂಡು ಹೋಗಿದ್ದು ಜಗನ್ನಾಥ್ ಭಟ್ಟರವರು ಮಣಿಪಾಲ ಕೆ,ಎಮ್,ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುತ್ತಾ ದಿನಾಂಕ 08/10/2014ರಂದು ಬೆಳಿಗ್ಗೆ 10:00 ಗಂಟೆಗೆ ಮೃತಪಟ್ಟಿರುವುದಾಗಿರುತ್ತದೆ ಎಂಬುದಾಗಿ ಬಿ,ದಿನೇಶ್ ಪೈ ಇವರು ನೀಡಿದ ದೂರನಂತೆ ಹಿರಿಯಡ್ಕ ಠಾಣಾ ಅಪರಾಧ ಕ್ರಮಾಂಕ 97/2014 ಕಲಂ  279, 304(A) ಐ.ಪಿ.ಸಿ & 134(A) (B) IMV Act ನಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.   

No comments: