Tuesday, October 07, 2014

Daily Crime Reports as on 07/10/2014 at 17:00 Hrs



ಅಪಘಾತ ಪ್ರಕರಣಗಳು 
  • ಕೋಟ: ಪಿರ್ಯಾದಿ ಸುಶ್ಮಿತಾ ಇವರು ದಿನಾಂಕ 06/10/2014 ರಂದು ಸಂಜೆ 4:30 ಗಂಟೆಗೆ ಹಳ್ಳಾಡಿ ಗೋಪಾಡಿ ಮನೆ ಎಂಬಲ್ಲಿ ಹಳ್ಳಾಡಿ ಕಡೆಯಿಂದ ನೈಲಾಡಿಗೆ ಹೋಗುವ ತಾರು ರಸ್ತೆಯ ಬದಿಯ ಮಣ್ಣು ರಸ್ತೆಯಲ್ಲಿ ನೆಡೆದು ಕೊಂಡು  ಹೋಗುತಿರುವಾಗ ಎದುರಿನಿಂದ  ಆರೋಪಿ ಜಯರಾಮ ಶೆಟ್ಟಿ ತನ್ನ ಬಾಬ್ತು ಕೆ.ಎ 20.ಪಿ 969 ನೇ ನಂಬ್ರದ ಕಾರನ್ನು  ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಆತನ ತೀರ ಬಲಭಾಗಕ್ಕೆ ಚಲಾಯಿಸಿ ಪಿರ್ಯಾದಿದಾರರಿಗೆ ಎದುರಿನಿಂದ  ಡಿಕ್ಕಿ ಹೊಡೆದ ಪರಿಣಾಮ  ತಾರು ರಸ್ತೆಯ  ಮೇಲೆ  ಬಿದ್ದು ರಕ್ತ ಗಾಯಗೊಂಡು ಉಡುಪಿ ಆದರ್ಶ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ದಾಖಲಾಗಿದ್ದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 201/2014 ಕಲಂ 279,337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಕುಂದಾಪುರ: ದಿನಾಂಕ 07/10/2014 ರಂದು ಸಮಯ ಸುಮಾರು ಬೆಳಿಗ್ಗೆ 09:15 ಗಂಟೆಗೆ ಕುಂದಾಪುರ ತಾಲೂಕು ತಲ್ಲೂರು ಗ್ರಾಮದ, ಗುಲ್ವಾಡಿ ಟ್ರಾರ್ನ್ಸಪೋರ್ಟ್ ಆಫೀಸಿನ ಎದುರುಗಡೆ ರಾಹೆ 66 ರಸ್ತೆಯಲ್ಲಿ ಆಪಾದಿತ ಲಕ್ಷ್ಮೀನಾರಾಯಣ ಪಿ ಭಟ್‌ ರವರು KA20 P 827 ನೇ  ಕಾರನ್ನು  ಕುಂದಾಪುರ ಕಡೆಯಿಂದ ಬೈಂದೂರು  ಕಡೆಗೆ  ಅತೀವೇಗ  ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಯಾವುದೇ ಸೂಚನೆಯನ್ನು ನೀಡದೆ ರಸ್ತೆಯ ಬಲಬದಿಗೆ ಬಂದು ತ್ರಾಸಿ ಕಡೆಯಿಂದ ಕುಂದಾಪುರ ಕಡೆಗೆ KA20 EB 3218 ಬೈಕ್‌ನ್ನು  ಸವಾರಿ ಮಾಡಿಕೊಂಡು ಬರುತ್ತಿದ್ದ ಮಹಮ್ಮದ್‌ ಶಹಜಾನ್‌ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ಮಹಮ್ಮದ್‌ ಶಹಜಾನ್‌ ವಾಹನ ಸಮೇತ ರಸ್ತೆಯಲ್ಲಿ ಬಿದ್ದು ಬಲಕಾಲಿಗೆ ಒಳಜಖಂ ಹಾಗೂ ಕೈಗೆ,ಎದೆಗೆ,ತಲೆಗೆ ಗಾಯಗೊಂಡು ಕುಂದಾಪುರದ ಚಿನ್ಮಯಿ ಆಸ್ಪತ್ರೆಯಲ್ಲಿ  ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಎ.ಜೆ ಆಸ್ಪತ್ರೆ   ಹೋಗಿರುವುದಾಗಿದೆ. ಈ ಬಗ್ಗೆ ಸಂಚಾರ ಪೊಲೀಸ್ ಠಾಣೆ  ಕುಂದಾಪುರ ಇಲ್ಲಿ ಅಪರಾಧ ಕ್ರಮಾಂಕ 124/2014 ಕಲಂ 279,337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಕಾಪು: ದಿನಾಂಕ 06.10.2014 ರಂದು ಪಿರ್ಯಾದಿ ಅಹಮ್ಮದ್ ಸಪ್ವಾನ್ ರವರು ತನ್ನ ಬಾಬ್ತು  ಓಮ್ನಿ ನಂಬ್ರ ಕೆಎ 20 ಝಡ್ 6524 ನೇದನ್ನು ಪಡುಬಿದ್ರೆ ಕಡೆಯಿಂದ  ಉಡುಪಿ ಕಡೆಗೆ  ರಾಹೇ 66 ರಲ್ಲಿ ಚಲಾಯಿಸಿಕೊಂಡು ಬರುತ್ತಾ ರಾತ್ರಿ 10:00 ಗಂಟೆಗೆ ಕಾಪು ಪಡು ಗ್ರಾಮದ ಪೊಲಿಪು ಮಸೀದಿ ಬಳಿ ಪಿರ್ಯಾದುದಾರರು ವಾಹನವನ್ನು ರಸ್ತೆಯ ಪಶ್ಚಿಮ ಬದಿಯಲ್ಲಿ ನಿಲ್ಲಿಸಿ ತಾಯಿಯವರನ್ನು ಕೆಳಗೆ ಇಳಿಸುತ್ತಿದ್ದಾಗ ಓರ್ವ ಲಾರಿ ಚಾಲಕನು ಲಾರಿಯನ್ನು ನಿರ್ಲಕ್ಷತನದಿಂದ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದು ಓಮ್ನಿಯ ಬಲಬದಿಯ ಎದುರಿನ ಬಾಗಿಲಿಗೆ ಡಿಕ್ಕಿ ಹೊಡೆದನು ಅದರ  ಪರಿಣಾಮ ಓಮ್ನಿಯ ಬಾಗಿಲು ಕಿತ್ತು ಪಿರ್ಯಾದುದಾರರ ತಾಯಿಯ ಬಲಬದಿಯ ಹಣೆಗೆ ತಾಗಿ ರಕ್ತ ಬರುವ ಗಾಯವಾಗಿರುತ್ತದೆ. ಪಿರ್ಯಾದುದಾರರ ತಾಯಿಯನ್ನು ಚಿಕಿತ್ಸೆಯ ಬಗ್ಗೆ ಕಾಪು ಪ್ರಶಾಂತ್ ಆಸ್ಪತ್ರಗೆ ಒಳ ರೋಗಿಯಾಗಿ ದಾಖಲಿಸಿರುತ್ತಾರೆ. ಈ ಅಪಘಾತಕ್ಕೆ ಕೆಎ 52-406 ನೇ ಲಾರಿ ಚಾಲಕನಾದ ಪ್ರದೀಪ್‌ ಎಂಬವರು ತನ್ನ ಲಾರಿಯನ್ನು ನಿರ್ಲಕ್ಷತನದಿಂದ ಅಡ್ಡಾದಿಡ್ಡಿಯಾಗಿ ಚಲಾಯಿಸಿರುವುದೇ ಕಾರಣವಾಗಿರುತ್ತದೆ. ಈ ಬಗ್ಗೆ ಕಾಪು ಠಾಣಾ ಅಪರಾಧ ಕ್ರಮಾಂಕ 200/2014 ಕಲಂ 279,337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
ಕಳವು ಪ್ರಕರಣ
  • ಉಡುಪಿ: ಪಿರ್ಯಾದಿ ಶ್ರೀ ಹೆಚ್‌.ಕೆ.ಲೋಕೇಶ್ ಇವರು ಮಣಿಪಾಲ ಕೆಎಮ್‌ಸಿ ಆಸ್ಪತ್ರೆಗೆ ಚಿಕಿತ್ಸೆಗೆ ಬಂದವರು ದಿನಾಂಕ 06/10/2014 ರಂದು ರಾತ್ರಿ 7:15 ಗಂಟೆಗೆ ರೆನಾಲ್ಟ್ ಡಸ್ಟರ್ ಕಾರು ಕೆಎ 45 ಎಮ್ 3045 ನ್ನು ಅದಮಾರು ಹಳೆಯ ಮಠದ ಎದುರು ನಿಲ್ಲಿಸಿ ಲಾಕ್ ಮಾಡಿ ಉಡುಪಿ ಶ್ರೀ ಕೃಷ್ಣ ಮಠದ ಹತ್ತಿರ ಭಂಡಾರಕೇರಿ ಮಠದಲ್ಲಿ ರೂಮ್ ಮಾಡಿ ರಾತ್ರಿ 7-35 ಗಂಟೆಗೆ ವಾಪಾಸು ಬಂದು ನೋಡುವಾಗ ಕಾರಿನ ಎಡಬದಿ ಮಧ್ಯದ ವಿಂಡೋ ಗ್ಲಾಸನ್ನು ಒಡೆದು ಯಾರೋ ಕಳ್ಳರು ಕಾರಿನ ಮಧ್ಯದ ಸೀಟಿನಲ್ಲಿ ಇಟ್ಟಿದ್ದ ಕಾಫಿ ಬಣ್ಣದ ವ್ಯಾನಿಟಿ ಬ್ಯಾಗನ್ನು ಕಳವು ಮಾಡಿದ್ದು ಈ ಬ್ಯಾಗಿನಲ್ಲಿದ್ದ 30 ಗ್ರಾಂ ತೂಕದ ಚಿನ್ನದ ರೋಪ್ ಚೈನ್ ಅಂದಾಜು ಮೌಲ್ಯ ರೂ 75,000/,  6 ಗ್ರಾಂ ತೂಕದ ಹವಳ ಅಳವಡಿಸಿದ ಚಿನ್ನದ ಉಂಗುರ ಅಂದಾಜು ಮೌಲ್ಯ ರೂ 15,000/ , ಹವಳ ಅಳವಡಿಸಿದ 4 ಗ್ರಾಂ ತೂಕದ ಚಿನ್ನದ ಉಂಗುರ ಅಂದಾಜು ಮೌಲ್ಯ 10,000/ , ಸೋನಾಟಾ ಕಂಪೆನಿಯ ಲೇಡೀಸ್ ವಾಚು ಅಂದಾಜು ಮೌಲ್ಯ ರೂ 5,000/, ಸ್ಯಾಮ್‌ಸಂಗ್ ಮೊಬೈಲ್ ಅಂದಾಜು ಮೌಲ್ಯ 1500/, ನಗದು ರೂ 2400/ ಕೆನರಾ ಬ್ಯಾಂಕಿನ 1 ಎಟಿಮ್ ಕಾರ್ಡು,  ಕಾರ್ಪೋರೇಶನ್ ಬ್ಯಾಂಕಿನ  2 ಎಟಿಮ್ ಕಾರ್ಡುಗಳು , ಇನ್‌ಕಮ್ ಟ್ಯಾಕ್ಸ್ ಕಾರ್ಡು ಗಳು -2, ಹೆರಿಟೇಜ್ ಕ್ಲಬ್ ಕಾರ್ಡು, ಡ್ರೈವಿಂಗ್ ಲೈಸನ್ಸ್, ಆಧಾರ್ ಕಾರ್ಡು, ಓರಿಯಂಟಲ್ ರಕ್ಷಾ ಹೆಲ್ತ್ ಇನ್ಸೂರೆನ್ಸ್ ಕಾರ್ಡು -2 ಸೇರಿ ಒಟ್ಟು 1,08,900/ ರೂ ಮೌಲ್ಯದ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 283/14  ಕಲಂ 379  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: