Saturday, October 11, 2014

Daily Crime Reported As On 11/10/2014 At 17:00 Hrs

ಇತರ ಪ್ರಕರಣ
  • ಶಿರ್ವಾ  : ಶ್ರೀಮತಿ ದಿವ್ಯ ಜೋಯಿಷಿ ಎಂಬುವರು ತನ್ನ ಗಂಡನ ಮನೆಯಾದ ಉಡುಪಿ ಜಿಲ್ಲೆಯ ಶಿರ್ವ ಮಂಚಕಲ್ ಎಂಬಲ್ಲಿರುವ ಸಂಗೀತಾ ಕಾಂಪ್ಲ್ ಕ್ಸ್ ಎಂಬಲ್ಲಿ ವಾಸವಾಗಿದ್ದವರು ದಿನಾಂಕ: 8/09/2014 ರಂದು ಸಂಜೆ ಸುಮಾರು 04.30ರ ವೇಳೆಗೆ ಅವರ ಮನೆಯಲ್ಲಿ ಇರುವಾಗ ನಿನ್ನ ಗಂಡನ ಮನೆ ಮತ್ತು ಜಾಗವನ್ನು ಕೂಡಲೇ ಪಾಲು ಮಾಡಿಕೊಡಬೇಕು ಎಂಬುದಾಗಿ ಗಂಡನ  ಅಣ್ಣ ರಮಾನಾಥ ಮತ್ತು ಅವರ ಹೆಂಡತಿ ಮಾಲತಿ ಎಂಬುವರು ಮಾನಸಿಕ ಹಿಂಸೆ ಹಾಗೂ ಕಿರುಕುಳ ನೀಡಿದಲ್ಲದೇ ದಿವ್ಯ ಜೋಯಿಸ್‌‌ ಮತ್ತು ಅವರ ಗಂಡನಿಗೆ ಸಾರ್ವಜನಿಕ ಸ್ಥಳದಲ್ಲಿ ಅವಾಚ್ಯ ಶಬ್ದಗಳಿಂದ ಬೈದು ಮಾನಸಿಕವಾಗಿ ತೊಂದರೆಯನ್ನು ನೀಡಿ ಆತ್ಮಹತ್ಯೆಗೆ ಪ್ರೇರಣೆ ನೀಡಿರುವುದಾಗಿದೆ ಎಂದು ದಿವ್ಯರವರು ನೀಡಿದ ದೂರಿನಂತೆ  ಶಿರ್ವಾ ಠಾಣಾ ಅಪರಾಧ ಕ್ರಮಾಂಕ 153/2014, ಕಲಂ:498(ಎ),116,306  ಐಪಿಸಿರಂತೆ ಪ್ರಕರಣ ದಾಖಲಾಗಿರುತ್ತದೆ.

No comments: