Saturday, October 11, 2014

Daily Crime Reported As On 11/10/2014 At 07:00 Hrs

ಅಸ್ವಾಭಾವಿಕ ಮರಣ ಪ್ರಕರಣ
  • ಕಾರ್ಕಳ ಗ್ರಾಮಾಂತರ : ಅರುಣ್ ಕುಮಾರ್ ಹೆಗ್ಡೆ, (50) ತಂದೆ: ಸಂಜೀವ ಹೆಗ್ಡೆ, ವಾಸ: ಜಯ ವಿಜಯಲಕ್ಷ್ಮಿ ನಿವಾಸ, ಮುದ್ರಾಡಿ, ಕಾರ್ಕಳ ತಾಲೂಕು ಇವರು ಕಾರ್ಕಳ ಹೆಬ್ರಿಯ ಬಸ್ ನಿಲ್ದಾಣದ ಬಳಿ ಬೇಕರಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದರು.  ಅವರ ತಂಗಿ ಸೂರ್ಯಕಾಂತಿ(44) ರವರು ತೆಳ್ಳಾರಿನ ನಿವಾಸಿ ರವೀಂದ್ರ ಹೆಗ್ಡೆಯನ್ನು ಸುಮಾರು 20 ವರ್ಷದ ಹಿಂದೆ ಮದುವೆಯಾಗಿದ್ದು ಅವಳ ಗಂಡ ಬಾಂಬೆಯಲ್ಲಿ ಕೆಲಸ ಮಾಡುತ್ತಿದ್ದುದರಿಂದ ಮುದ್ರಾಡಿಯ ಮನೆಯಲ್ಲಿ ವಾಸ ಇದ್ದಳು. ಆದರೆ ಕಳೆದ 1 ವರ್ಷದಿಂದ ಮಗಳ ವಿದ್ಯಾಬ್ಯಾಸದ ಬಗ್ಗೆ ಕಾರ್ಕಳ ದುರ್ಗಾ ಗ್ರಾಮದ ಬಾಸ್ಕರ ಹೆಗ್ಡೆ ಎಂಬವರ ಬಾಡಿಗೆ ಮನೆಯಲ್ಲಿ ವಾಸವಿದ್ದಳು. ದಿನಾಂಕ: 10/10/14 ರಂದು ತಂಗಿ ಮಗ ಸಾಗರ ಪೋನ್ ಮಾಡಿ ತಾಯಿ ಸೂರ್ಯಕಾಂತಿ ಮನೆಯ ಅಡುಗೆ ಕೋಣೆ ಜಂತಿಗೆ ಶಾಲನ್ನು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿದ ಮೇರೆಗೆ ಅರುಣ್ ಕುಮಾರ್ ಹೆಗ್ಡೆಯವರು ಬಂದು ನೋಡಿದ್ದು, ಇವರ ತಂಗಿ ಯಾವುದೋ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಎಂದು ಅರುಣ್ ಕುಮಾರ್ ಹೆಗ್ಡೆ ಯವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಯುಡಿಆರ್‌ ಕ್ರಮಾಂಕ 34 /2014 U/s 174 CrPC ಯಂತೆ ಪ್ರಕರಣ ದಾಖಲಿಸಲಾಗಿದೆ. 
ಹಲ್ಲೆ ಪ್ರಕರಣ
  • ಬೈಂದೂರು : ಆರೋಪಿತರುಗಳಾದ 1) ವೆಂಕಟೇಶ್‌ ದೇವಾಡಿಗ, 2) ಶೇಖರ ಪೂಜಾರಿ ಮತ್ತು 3) ಸೂರಜ್‌ ಪೂಜಾರಿ  ಇವರುಗಳು ತಕ್ಷೀರು ಮಾಡುವ ಸಮಾನ ಉದ್ದೇಶದಿಂದ ದಿನಾಂಕ 09/10/2014 ರಂದು ರಾತ್ರಿ 10:00 ಗಂಟೆಗೆ ಕುಂದಾಪುರ ತಾಲೂಕು ಖಂಬದಕೋಣೆ ಗ್ರಾಮದ ಖಂಬದಕೋಣೆ ಬಸ್‌ ನಿಲ್ದಾಣದ ಬಳಿಯಲ್ಲಿ ಕೆ.ಎ 20 ಯು 1732 ಮತ್ತು ಇನ್ನೊಂದು ಬೈಕಿನಲ್ಲಿ ಬಂದು ಗಣಪತಿ ಪೂಜಾರಿ(34) ತಂದೆ: ವೆಂಕಪ್ಪ ಪೂಜಾರಿ ವಾಸ: ಚಟ್ಟಿಮನೆ ಕಂಬದಕೋಣೆ ಗ್ರಾಮ ಕುಂದಾಪುರ ತಾಲೂಕು ಇವರನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು 1ನೇ ಆರೋಪಿ ವೆಂಕಟೇಶನು ಸೋಂಟೆಯಿಂದ ಗಣಪತಿ ಪೂಜಾರಿಯವರ ಕಾಲು, ಕೈ ಹಾಗೂ ಎದೆಗೆ ಹೊಡೆದು, ನಂತರ ಕೈಯಿಂದ ಎಡಕೆನ್ನೆಗೆ ಹೊಡೆದುದಲ್ಲದೇ ಆರೋಪಿತರಾದ ಶೇಖರ್‌ ಮತ್ತು ಸೂರಜ್‌ ಎಂಬುವವರು ಕೈಯಿಂದ ಹೊಡೆದು ಕಾಲಿನಿಂದ ತುಳಿದು ಹಾಗೂ ಜೀವ ಬೆದರಿಕೆ ಹಾಕಿರುತ್ತಾರೆ. ಹಲ್ಲೆಯಿಂದ ನನ್ನ ಕಿವಿಯ ತಮಟೆಗೆ ತೀವ್ರ ರೀತಿಯ ರಕ್ತಗಾಯವಾಗಿರುತ್ತದೆ ಎಂಬುದಾಗಿ ಗಣಪತಿ ಪೂಜಾರಿಯವರು ನೀಡಿದದೂರಿನಂತೆ ಬೈಂದೂರು ಠಾಣಾ ಅಪರಾಧ ಕ್ರಮಾಂಕ : 209/2014 ಕಲಂ:  341, 504, 324, 326, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕಳವು ಪ್ರಕರಣ
  • ಉಡುಪಿ ನಗರ : ರೇಖಾ ಅರ್ಮೆಡ್‌‌ (49) , ಗಂಡ : ಎಸ್‌ ಅರ್ಮೆಡ್‌ ವಾಸ: ನಂ 342 38ನೇ ಕ್ರಾಸ್‌ 28ನೇ ಮೈನ್‌  ಜಯನಗರ 9ನೇ ಬ್ಲಾಕ್‌‌ ಬೆಂಗಳೂರು ಇವರು ದಿನಾಂಕ: 10/10/2014ರಂದು 19:00ಗಂಟೆಗೆ ಸ್ಕೋರ್ಫಿಯೋ ಕೆಎ 01 ಎಂಇ7542ನ್ನು ಶ್ರೀ ಕೃಷ್ಣ ಮಠದ ರಾಜಾಂಗಣದ ಪಾರ್ಕಿಂಗ್‌ ಸ್ಧಳದಲ್ಲಿ ನಿಲ್ಲಿಸಿದ್ದು ದೇವರ ದರ್ಶನ ಪಡೆದು ವಾಪಸ್ಸು ಬಂದು ನೋಡುವಾಗ ಕಾರಿನ ಬಾಗಿಲನ್ನು ಯಾರೋ ಕಳ್ಳರು ತೆಗೆದು ಅದರ ಒಳಗೆ ಇದ್ದ ಬ್ಯಾಗ್‌ನಲ್ಲಿದ್ದ ನಗದು ಹಣ 12,000 ಎಲ್‌ ಜಿ ನೆಕ್ಸ್‌ಸ್‌-5 ಮೊಬೈಲ್‌- 1,  ಡ್ರೈವಿಂಗ್‌ ಲೈಸೆನ್ಸ್‌, ಆರ್‌ ಸಿ ಪುಸ್ತಕ,  ಡೆಬಿಟ್‌ ಕಾರ್ಡ್‌, ಕ್ರೆಡಿಟ್‌ ಕಾರ್ಡ್‌, ಪಾನ್‌ ಕಾರ್ಡ್‌, ಚುನಾವಣಾ ಗುರುತಿನ ಚೀಟಿಯನ್ನು ತೆಗೆದು ಕೊಂಡು ಹೋಗಿರುತ್ತಾರೆ ಎಂಬುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಠಾಣಾ ಅಪರಾಧ ಕ್ರಮಾಂಕ : 287/14  ಕಲಂ 379 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
  • ಉಡುಪಿ ನಗರ : ಶ್ರೀಮತಿ ರೇವತಿ ಹರಿದಾಸ ಗಂಡ ಹರಿದಾಸ ದೇವಾಡಿಗ ವಾಸ: ಮೇಘನಾ ನಿಲಯ,ಕೋಳದ ಪೇಟೆ ರಸ್ತೆ, ವೆಂಕಟರಮಣ ದೇವಸ್ಥಾನದ ಹತ್ತಿರ ಶಿವಳ್ಳಿ ಗ್ರಾಮ ಉಡುಪಿ ಇವರು ದಿನಾಂಕ 08/10/2014 ರಂದು ಬೆಳಿಗ್ಗೆ 10-30 ಗಂಟೆಗೆ ತಮ್ಮ ಬಾಬ್ತು SUZUKI Access ಮೋಟಾರು ಸೈಕಲ್‌ ನಂಬ್ರ KA20EF0004 ನೇಯದನ್ನು ಒಳಕಾಡು ಶಾಲೆಗೆ ತೆಗೆದುಕೊಂಡು ಹೋಗಿ ವಾಪಾಸು ಮನೆಗೆ 11-25 ಗಂಟೆಗೆ ಬಂದು ಮನೆಯ ಎದುರು ನಿಲ್ಲಿಸಿ ಬೀಗ ಹಾಕಿ ಮನೆಯ ಒಳಗಡೆ ಹೋಗಿ 11-35 ಗಂಟೆಗೆ ಮನೆಯ ಹೊರಗೆ ಬಂದು ನೋಡುವಾಗ ಯಾರೋ ಕಳ್ಳರು ಮೋಟಾರು ಸೈಕಲ್‌ ನ್ನು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ಮೋಟಾರು ಸೈಕಲ್‌ನ ಅಂದಾಜು ಮೌಲ್ಯ 45000/- ಆಗಬಹುದು ಎಂದು ಶ್ರೀಮತಿ ರೇವತಿಯವರು ನೀಡಿದ ದೂರಿನಂತೆ ಉಡುಪಿ ನಗರ ಠಾಣಾ  ಅಪರಾಧ ಕ್ರಮಾಂಕ 285/2014 ಕಲಂ 379 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ

  • ಕಾರ್ಕಳ ನಗರ  : ದಿನಾಂಕ: 10/09/2014 ರಂದು 10:30 ಗಂಟೆಗೆ ನವೀನ್ ಪಿರೇರಾ(28), ತಂದೆ:  ಸವೇರ್ ಪಿರೇರಾ, ವಾಸ: ಹಿರಿಯಂಗಡಿ ಮಿಒತ್ತೊಟ್ಟು  ಕೃಷ್ಣಗಿರಿ  ರೋಡ್ ಕಾರ್ಕಳ ಇವರು  ತನ್ನ ಬಾಬ್ತು ಟಿ ವಿ ಎಸ್ ಮೋಟಾರ್ ಸೈಕಲ್ ನಂಬ್ರ್ರ KA 20 EF 1122 ನೇಯದರಲ್ಲಿ ತನ್ನ ಗೆಳೆಯ ದಿನೇಶ್ ದೇವಾಡಿಗ ಎಂಬವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು  ಬಜಗೋಳಿ ಕಡೆಗೆ ರಾ ಹೆ 169 ನೇಯದರಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಾ ಕಾರ್ಕಳ ತಾಲೂಕು ಮಿಯ್ಯಾರು ಗ್ರಾಮದ ಜೋಡುಕಟ್ಟೆ ಎಂಬಲ್ಲಿ  ತಲುಪುವಾಗ್ಗೆ ಎದುರಿನಿಂದ ಟಿಪ್ಪರ್ ಲಾರಿ ನಂಬ್ರ KA 19 B 8108 ನೇಯದನ್ನು ಅದರ ಚಾಲಕ ಮಕಬುಲ್ ಅತೀವೇಗ ಮತ್ತು ಅಜಾಗರೂಕತೆಯಿಂದ ಲಾರಿಯನ್ನು ಚಲಾಯಿಸಿಕೊಂಡು ರಸ್ತೆಯ ತೀರಾ ಬಲಬದಿಗೆ ಬಂದು ನವೀನ್‌ರವರ ಮೋಟಾರು ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ನವೀನ್‌ ಮತ್ತು  ಸಹಸವಾರರು ಇಬ್ಬರು ಮೋಟಾರು ಸೈಕಲ್ ಸಮೇತ ಡಾಮರು ರಸ್ತೆಗೆ ಬಿದ್ದು ಮೂಳೆ ಮುರಿತದ ರಕ್ತಗಾಯ ಮತ್ತು ಸಹಸವಾರರಿಗೆ ಸಾಮಾನ್ಯ  ಸ್ವರೂಪದ ರಕ್ತಗಾಯವಾಗಿರುತ್ತದೆ ಎಂಬುದಾಗಿ ನವೀನ್‌ರವರು ನೀಡಿದ ದೂರಿನಂತೆ ಕಾರ್ಕಳ ನಗರ ಠಾಣಾ ಅಪರಾಧ ಕ್ರಮಾಂಕ 180/2014 ಕಲಂ. 279,337,338 ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.
ಇತರ ಪ್ರಕರಣ
  • ಉಡುಪಿ: ಕೊರಂಗ್ರಪಾಡಿಯ ರಿಕ್ಷಾ ನಿಲ್ದಾಣದಲ್ಲಿ 2007 ನೇ ಇಸವಿಯಲ್ಲಿ ರಿಕ್ಷಾ ಚಾಲಕ ಮತ್ತು ಮಾಲಕರ ವತಿಯಿಂದ ರಾಷ್ಟ್ರದ್ವಜ ಕಟ್ಟೆಯನ್ನು ನಿರ್ಮಾಣ ಮಾಡಿರುತ್ತಾರೆ ದಿನಾಂಕ 09/10/2014 ರಂದು ರಾತ್ರಿ ಸುಮಾರು 10 ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ಸತೀಶ್ ಕುಮಾರ್ (31) ತಂದೆ: ವಿಠಲ ಮಡಿವಾಳ ವಾಸ: ಗಣೇಶ ಬೇಕರಿ ಹತ್ತಿರ ಕೊರಂಗ್ರಪಾಡಿ ಎಂಬವರು ರಿಕ್ಷಾ ನಿಲ್ದಾಣದಲ್ಲಿ ಇದ್ದು ರಾಷ್ಟ್ರದ್ವಜದ ಕಟ್ಟೆ ಆ ಸಮಯ ಯಾಥಾ ಸ್ಥಿತಿಯಲ್ಲಿದ್ದು ದಿನಾಂಕ 10/10/2014 ರಂದು ಬೆಳಗ್ಗೆ 7:00 ಗಂಟೆಗೆ ಕೃಷ್ಣ ಪೂಜಾರಿ ರಿಕ್ಷಾ ಚಾಲಕರವರು ಹೋಗಿ ನೋಡುವಾಗ ರಾಷ್ಟ್ರದ್ವಜದ ಕಟ್ಟೆ ಹಾಗೂ ಸಿಂಹದ ತಲೆಯನ್ನು ಕಲ್ಲಿನಿಂದ ಜಜ್ಜಿ ಜಖಂ ಗೊಳಿಸರುವುದು ಕಂಡು ಬಂದಿರುವುದನ್ನು ಕೂಡಲೇ ಕೃಷ್ಣ ಪೂಜಾರಿಯವರು ಪಿರ್ಯಾದಿದಾರರಿಗೆ ತಿಳಿಸಿದ್ದು, ಪಿರ್ಯಾದಿದರರು ಹೋಗಿ ನೋಡುವಾಗ ರಾಷ್ಟ್ರದ್ವಜದ ಕಟ್ಟೆಯನ್ನು ರಾತ್ರಿ ವೇಳೆ ಯಾರೋ ಕಿಡಿಗೇಡಿಗಳು ಕಲ್ಲಿನಿಂದ ಜಜ್ಜಿ ಜಖಂಗೊಳಿಸಿ ಸುಮಾರು 8 ಸಾವಿರ ರೂಪಾಯಿ ನಷ್ಟಉಂಟು ಮಾಡಿರುವುದಾಗಿದೆ ಎಂಬುದಾಗಿ ಸತೀಶ್ ಕುಮಾರ್ ರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 284/2014 ಕಲಂ 427 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: