Friday, October 10, 2014

Press Noteನಾಗರೀಕ ಆರೋಗ್ಯ ವೇದಿಕೆ ಮತ್ತು ಉಡುಪಿ ಜಿಲ್ಲಾ ಪೊಲೀಸ್ ಸಂಯುಕ್ತ ಆಶ್ರಯದಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ಕುಟುಂಬ ವರ್ಗದವರಿಗೆ ಉಚಿತ ಚರ್ಮ ರೋಗ ತಪಾಸಣಾ ಶಿಬಿರವನ್ನು ದಿನಾಂಕ:10/10/2014 ರಂದು ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆ ಕೇಂದ್ರ ಸ್ಥಾನ ಚಂದು ಮೈದಾನ ಉಡುಪಿ ಇಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮ ವನ್ನು ಪಶ್ಚಿಮ ವಲಯ ಐಜಿಪಿರವರಾದ ಮಾನ್ಯ ಶ್ರೀ ಅಮ್ರಿತ್ ಪಾಲ್, ಐಪಿಎಸ್ ಇವರು ಉದ್ಗಾಟಿಸಿರುತ್ತಾರೆ. ಈ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ರಾಜೇಂದ್ರ ಪ್ರಸಾದ್, ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಸಂತೋಷ್ ಕುಮಾರ್, ನಾಗರೀಕ ಆರೋಗ್ಯ ವೇದಿಕೆ ಗೌರವ ಅಧ್ಯಕ್ಷರಾದ ಡಾ.ಆರ್ ಎನ್ ಭಟ್ ಹಾಗೂ ತಜ್ಞ ವೈದ್ಯರಾದ ಡಾ. ಸುರೇಶ್ ಶೆಣೈ, ಡಾ. ಸತೀಶ್ ಪೈ, ನಾಗರೀಕ ಆರೋಗ್ಯ ವೇದಿಕೆ ಕಾರ್ಯದರ್ಶೀಯಾದ ಮಧುಸೂದನ ಹೇರೂರು, ಸದಸ್ಯರಾದ ರವಿರಾಜ್ ಹೆಚ್.ಪಿ ಉಪಸ್ಥಿತರಿದ್ದರು. ಈ ಶಿಬಿರದಲ್ಲಿ ಮೂಳೆ ಸಾಂದ್ರತೆ, ಚರ್ಮರೋಗ, ಅಸ್ತಮಾ ತಪಾಸಣೆ ನಡೆಸಿ ಉಚಿತವಾಗಿ ಜೌಷಧ ವಿತರಿಸಲಾಯಿತು.

No comments: