Saturday, October 18, 2014

DAILY CRIME REPORT AS ON 18/10/2014 AT 19:30 HRS

ಅಸ್ವಾಭಾವಿಕ ಮರಣ ಪ್ರಕರಣ  
  • ಮಲ್ಪೆ:ಪಿರ್ಯಾದಿದಾರರಾದ ಅಶೋಕ ಆಚಾರ್ಯ (46), ತಂದೆ:ಅನಂತ ಆಚಾರ್ಯ, ವಾಸ:ಬೈಲು ಮನೆ, ತೊಟ್ಟಂ ಅಂಚೆ, ತೆಂಕನಿಡಿಯೂರು ಗ್ರಾಮ ಇವರ ಮಾವನಾದ ಯು. ಕೃಷ್ಣ ರಾವ್(61) ಎಂಬವರು ದಿನಾಂಕ:14/10/2014 ರಂದು  ರಾತ್ರಿ ಸುಮಾರು 20:00 ಗಂಟೆಗೆ ತೆಂಕನಿಡಿಯೂರು ಗ್ರಾಮದ ತನ್ನ ವಾಸ್ತವ್ಯದ ಮನೆಗೆ ನಡೆದುಕೊಂಡು ಹೋಗುವಾಗ ದಾರಿ ಮಧ್ಯೆ ಯಾವುದೋ ವಿಷಪೂರಿತ ಹಾವು ಕಡಿದು ಮಣಿಪಾಲ ಕೆಎಮ್‌ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು ಈ ದಿನ ದಿನಾಂಕ: 18/10/2014 ರಂದು ಬೆಳಿಗ್ಗೆ ಸುಮಾರು 08:45 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿದೆ ಎಂಬುದಾಗಿ ಅಶೋಕ ಆಚಾರ್ಯರವರು ನೀಡಿದ ದೂರಿನಂತೆ ಮಲ್ಪೆ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 49/2014 ಕಲಂ 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿದೆ. 
  • ಬೈಂದೂರು:ಸರೋಜಾ (31) ಗಂಡ:ನಾಗರಾಜ ವಾಸ:ಮೊಗವೀರ ಗರಡಿ ಸಮೀಪ, ಸೋಮುಮನೆ, ತೆಗ್ಗರ್ಸೆ  ಗ್ರಾಮ  ಕುಂದಾಪುರ ತಾಲೂಕು ಇವರ ತಂದೆ ಸುಮಾರು 73 ವರ್ಷ ಪ್ರಾಯದ ಕೃಷ್ಣ ಮೊಗವೀರ ಎಂಬವರು 2 ವರ್ಷಗಳಿಂದ ಉಬ್ಬಸ ಕಾಯಿಲೆಯಿಂದ ಬಳಲುತ್ತಿದ್ದು, ಅದಕ್ಕೆ ಸೂಕ್ತ ಚಿಕಿತ್ಸೆ ಕೊಡಿಸಿದರೂ ಗುಣಮುಖವಾಗದೇ ಇದ್ದುದರಿಂದ ಈ ಬಗ್ಗೆ ಮಾನಸಿಕವಾಗಿ ನೊಂದು ಜೀವನದಲ್ಲಿ ಜಿಗುಪ್ಸೆ ಹೊಂದಿ ದಿನಾಂಕ:18/10/14 ರಂದು ಬೆಳಿಗ್ಗೆ 08:30 ಗಂಟೆಯಿಂದ 10:30 ಗಂಟೆಯ ಮಧ್ಯಾವಧಿಯಲ್ಲಿ ತೆಗ್ಗರ್ಸೆ ಗ್ರಾಮದ ಮೊಗವೀರ ಗರಡಿ ಸಮೀಪದ ತನ್ನ ಸೋಮುಮನೆ ಎಂಬಲ್ಲಿರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಎಂಬುದಾಗಿ ಸರೋಜಾರವರು ನೀಡಿದ ದೂರಿನಂತೆ ಬೈಂದೂರು ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 40/2014 ಕಲಂ 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ 
  • ಶಂಕರನಾರಾಯಣ:ದಿನಾಂಕ:17/10/2014 ರಂದು ಮದ್ಯಾಹ್ನ 12:30 ಗಂಟೆ ಸಮಯದಿಂದ ದಿನಾಂಕ 18/10/2014 ರಂದು ಬೆಳಿಗ್ಗೆ 8:00 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಉಡುಪಿ ತಾಲೂಕು ಹಿಲಿಯಾಣ ಗ್ರಾಮದ ಶ್ರೀ ಮಹೀಷಮರ್ಧಿನಿ ದುರ್ಗಾಪರಮೇಶ್ವರಿ  ದೇವಸ್ಥಾನದ ದ್ವಾರ ಬಾಗಿಲಿನ ಬೀಗವನ್ನು ಮುರಿದು ದೇವಸ್ಥಾನದ ಪೌಳಿಯಲ್ಲಿ ಇರಿಸಿದ್ದ ಕಾಣಿಕೆ ಡಬ್ಬವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂಬುದಾಗಿ ಅಶೋಕ ಕುಮಾರ್ ಶೆಟ್ಟಿ(46), ತಂದೆ:ದಿವಂಗತ ಎಮ್ ವಿಶ್ವನಾಥ ಶೆಟ್ಟಿ ದೊಡ್ಡಮನೆ, ಹಿಲಿಯಾಣ ಗ್ರಾಮ ಇವರು ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ: 155/14 ಕಲಂ: 454, 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ
  • ಕೊಲ್ಲೂರು:ದಿನಾಂಕ 16/10/2014 ರಂದು ಸಂಜೆ 16:00 ಗಂಟೆಗೆ ಮೋಹನ್‌ದಾಸ ತಂದೆ:ನಾರಾಯಣ ನಾಯ್ಕ ವಾಸ:ನೆಡಿ ಮಕ್ಕಿಮನೆ ಚಿತ್ತೂರು ಗ್ರಾಮ ಕುಂದಾಪುರ ಇವರು ಕೆಲಸಕ್ಕಾಗಿ ಚಿತ್ತೂರಿನಿಂದ ವಂಡ್ಸೆಗೆ ಬೈಕ್‌ನಲ್ಲಿ ಹೋಗುತ್ತಿರುವಾಗ ಎದುರಿನಿಂದ ಶಾರ್ಕೆ ಬೊಬ್ಬರ್ಯ ದೇವಸ್ಥಾನದ ಕ್ರಾಸ್ ಬಳಿ ಕೊಲ್ಲೂರು ಕಡೆಯಿಂದ KA 53 2238 ನೇ ನಂಬ್ರದ ಓಮ್ನಿ ಕಾರೊಂದು ವಂಡ್ಸೆ ಕಡೆಗೆ ಸಾಗಿ ಬರುತ್ತಿರುವಾಗ ಎದುರಿನಿಂದ ಅತ್ಯಂತ ವೇಗವಾಗಿ ತಿರುವಿನ ರಸ್ತೆಯಲ್ಲಿ ರಸ್ತೆಯ ತೀರಾ ಬಲಬದಿಗೆ ಸಾಗಿ ಬಂದ KA 30 R 2320 ನೇ ನಂಬ್ರದ ಬೈಕ್ ಓಮ್ನಿ ಕಾರಿನ ಬಲಬದಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಪಳನಿ ಸ್ವಾಮಿ ಎಂಬುವವನು ಕವಚಿ ರಸ್ತೆಗೆ ಬಿದ್ದು ಆತನ ಮುಖಕ್ಕೆ ತಲೆಗೆ ರಕ್ತ ಗಾಯವಾಗಿ, ಸಹ ಸವಾರ ರಾಜನಿಗೆ ಯಾವುದೇ ಗಾಯಗಳಾಗಿಲ್ಲ. ನಂತರ ಗಾಯಗೊಂಡ ಬೈಕ್ ಸವಾರನನ್ನು ನೆರೆದ ಜನರ ಸಹಾಯದಿಂದ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ಓಮ್ನಿಯಲ್ಲಿ ಕಳಿಸಿದಲ್ಲಿ ಅಲ್ಲಿಂದ ಗಾಯಾಳು ಮಣಿಪಾಲ ಕೆ.ಎಂ.ಸಿಗೆ ದಾಖಲಾಗಿದ್ದು, ಅದೇ ದಿನ ಅವರು ಮಣಿಪಾಲದಿಂದ ಬಿಡುಗಡೆ ಹೊಂದಿ ಯಾರಿಗೂ ಮಾಹಿತಿ ನೀಡದೆ ಮನೆಗೆ ಹೋಗಿರುತ್ತಾರೆ. ಈ ಅಪಘಾತದಲ್ಲಿ ಬೈಕ್ ಹಾಗು ಕಾರು ಎರಡೂ ಹಾನಿಗೊಂಡಿರುತ್ತದೆ. ಅದುದರಿಂದ ಈ ಅಪಘಾತಕ್ಕೆ ಬೈಕ್ ಸವಾರ ಪಳನಿ ಸ್ವಾಮಿ ಎಂಬಾತನ ಅತಿ ವೇಗ ಹಾಗೂ ಅಜಾಗರುಕತೆಯ ಚಾಲನೆಯೇ ಕಾರಣವಾಗಿರುತ್ತದೆ. ಈ ಅಪಘಾತಕ್ಕೆ ಕಾರಣವಾದ ಬೈಕ್ ಸವಾರ ಪಳನಿ ಸ್ವಾಮಿ ಎಂಬಾತನ ವಿರುದ್ದ ಸೂಕ್ತ ಕಾನೂನು ಕ್ರಮಕ್ಕಾಗಿ ಮೋಹನ್‌ದಾಸರವರು ನೀಡಿದ ದೂರಿನಂತೆ ಕೊಲ್ಲೂರು ಠಾಣಾ ಅಪರಾಧ ಕ್ರಮಾಂಕ : 67/2014 ಕಲಂ :279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: