Sunday, October 19, 2014

Daily Crime Reports as on 19/10/2014 at 07:00 Hrs


ಕೊಲೆ ಯತ್ನ ಪ್ರಕರಣ
  • ಉಡುಪಿ ನಗರ:ದಿನಾಂಕ:18/10/2014 ರಂದು 19:45 ಗಂಟೆಗೆ ಪಿರ್ಯಾದಿದಾರರಾದ ಯು. ಲಕ್ಷ್ಮಣ್‌ ಶೇಟ್‌  (46) ತಂದೆ:ಯು. ಗೋವಿಂದ ರಾಮ ಶೇಟ್‌  ವಿಳಾಸ:ಯಮುನ ನಿಲಯ, ಪಿಪಿಸಿ ರಸ್ತೆ, ಒಳಕಾಡು 76 ಬಡಗುಬೆಟ್ಟು ಗ್ರಾಮ ಉಡುಪಿರವರು ತನ್ನ ಮಾರುತಿ ಗೋಲ್ಡ್‌  ಜ್ಯುವೆಲ್ಲರ್ಸ್‌‌ ಅಂಗಡಿಯಲ್ಲಿ ಸಿಸಿ ಟಿವಿಯ ತುಣುಕು ನೋಡುತ್ತಿರುವಾಗ ಹೆಲ್ಮೆಟ್‌ ಧರಿಸಿದ್ದ ವ್ಯಕ್ತಿಯೊಬ್ಬ  ಹೆಲ್ಮೆಟ್‌ನ್ನು ಅರ್ಧ ಧರಿಸಿಕೊಂಡು  ಯು. ಲಕ್ಷ್ಮಣ್‌ ಶೇಟ್‌ರವರ ಬಳಿ ತುಳು ಭಾಷೆಯಲ್ಲಿ ನಿಮ್ಮಲ್ಲಿರುವ ಟಿಕ್ಕಿ ತೋಜಲೆ ಎಂದು  ಹೇಳಿದ್ದ ಅದಕ್ಕೆ ಯು. ಲಕ್ಷ್ಮಣ್‌ ಶೇಟ್‌ ತುಳುವಿನಲ್ಲಿ  ಬಂಗಾರದ  ಆಥವಾ  ಕಲ್ಲಿನದ್ದ  ಎಂದು ಕೇಳಿದರು, ಅದಕ್ಕೆ  ಆ ವ್ಯಕ್ತಿಯು  ಬಂಗಾರದ್ದು ಕೊಡಿ  ಎಂದು ಹೇಳಿದ್ದ, ಅದಕ್ಕೆ ಯು. ಲಕ್ಷ್ಮಣ್‌ ಶೇಟ್‌ ಬಂಗಾರದ್ದನ್ನು ಜೊತೆಯಲ್ಲಿ ತೆಗೆದುಕೊಳ್ಳಬೇಕು  ಎಂದು ಹೇಳಿದರು, ಅದಕ್ಕೆ ಆತನು ಬೊಡ್ಜಿ ಎಂದು ತುಳುವಿನಲ್ಲಿ ಹೇಳಿ ಹೊರಗೆ ಹೋದನು ನಂತರ ಅಂಗಡಿಯಲ್ಲಿ ಕುಳಿತು ಟಿವಿ ನೋಡುತ್ತಿರುವಾಗ ಅದೇ ವ್ಯಕ್ತಿ ಹೆಲ್ಮೆಟ್‌ ಧರಿಸಿಕೊಂಡು ಸುಮಾರು  19:59 ಗಂಟೆಗೆ ಒಮ್ಮೆಲೆ ಅಂಗಡಿ ಒಳಗೆ ನುಗ್ಗಿ ಕಿಸೆಯಿಂದ ಚೂರಿಯನ್ನು ತೆಗೆದು ಯು. ಲಕ್ಷ್ಮಣ್‌ ಶೇಟ್‌ರವರನ್ನು ಕೊಲ್ಲುವ ರೀತಿಯಲ್ಲಿ ಹೊಡೆಯಲು ಬಂದಾಗ ಯು. ಲಕ್ಷ್ಮಣ್‌ ಶೇಟ್‌ ಬಲಗೈಯನ್ನು ಅಡ್ಡ  ಹಿಡಿದಾಗ ಆ ಚೂರಿಯು ಯು. ಲಕ್ಷ್ಮಣ್‌ ಶೇಟ್‌ ಕೈಗೆ ತಾಗಿ ರಕ್ತ ಗಾಯವಾಗಿರುತ್ತದೆ. ಸದ್ರಿ ವ್ಯಕ್ತಿಯು ಯಾವುದೋ ಪೂರ್ವ ಪರ ದ್ವೇಷದಿಂದ ಯು. ಲಕ್ಷ್ಮಣ್‌ ಶೇಟ್‌ರವರನ್ನು ಹತ್ಯೆ ಮಾಡಲು ಬಂದಿದ್ದಾಗಿರುತ್ತದೆ  ನಂತರ ಆರೋಪಿಯು ಹೊರಗೆ ಓಡಿ ಹೋಗಿದ್ದು ಯಾವುದೋ ಬೈಕಿನಲ್ಲಿ ಮತ್ತೊಬ್ಬನೊಂದಿಗೆ ಪರಾರಿಯಾಗಿರುತ್ತಾನೆ.ಈ ಬಗ್ಗೆ ಯು. ಲಕ್ಷ್ಮಣ್‌ ಶೇಟ್‌ರವರು ನೀಡಿದ ದೂರಿನಂತೆಉಡುಪಿ ನಗರ ಠಾಣಾ ಅಪರಾಧ ಕ್ರಮಾಂಕ 303/14  307 ಜೊತೆಗೆ 34  ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಪಘಾತ ಪ್ರಕರಣಗಳು
  • ಬೈಂದೂರು: ದಿನಾಂಕ 18/10/2014 ರಂದು ಮದ್ಯಾಹ್ನ  2:15 ಗಂಟೆಗೆ ಪಿರ್ಯಾದಿದಾರರಾದ ಮಂಜುನಾಥ ಗೋವಿಂದ ಪಟಗಾರ (30) ತಂದೆ: ಗೋವಿಂದ ಪಟಗಾರ ವಾಸ: ಕುಮಟ ಹೊಳಗದ್ದೆ ಅಂಚೆ, ಹೊರಬಾಗ ಗ್ರಾಮ ಕುಮಟಾ ತಾಲೂಕು ಎಂಬವರು ತನ್ನ ಕೆ.ಎ 47 ಕೆ 7215 ಮೋಟಾರ್‌ ಸೈಕಲ್‌ನಲ್ಲಿ ಉಪ್ಪುಂದ ಕಡೆಯಿಂದ ನಾವುಂದ ಕಡೆಗೆ ಕುಂದಾಪುರ ತಾಲೂಕು ನಾವುಂದ ಗ್ರಾಮದ ಬಡಾಕೆರೆ ಕ್ರಾಸ್‌ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಎದುರಿನಿಂದ ಅಂದರೆ ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ಜಿ,06 ಡಿ 9918 ನೇ ಕಾರನ್ನು ಅದರ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮಂಜುನಾಥ ಗೋವಿಂದ ಪಟಗಾರರವರು ಸವಾರಿ ಮಾಡುತ್ತಿದ್ದ ಮೋಟಾರ್‌ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮಂಜುನಾಥ ಗೋವಿಂದ ಪಟಗಾರರವರ ಎಡಕಾಲಿಗೆ ತೀವೃ ತರಹದ ಜಖಂ ಆಗಿರುತ್ತದೆ. ಅಲ್ಲದೇ ಎಡಮೊಣಗಂಟಿಗೆ ಹಾಗೂ ಬಲಕಾಲಿನ ಗಂಟಿಗೆ ತರಚಿದ ಗಾಯಗೊಂಡಿರುತ್ತದೆ. ಮತ್ತು ಮೋಟಾರ್‌ ಸೈಕಲ್‌ ಜಖಂ ಗೊಂಡಿರುತ್ತದೆ ಎಂಬುದಾಗಿ ಮಂಜುನಾಥ ಗೋವಿಂದ ಪಟಗಾರರವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 215/2014 ಕಲಂ:279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ:ದಿನಾಂಕ:18/10/2014 ರಂದು ರಾತ್ರಿ 08:25 ಗಂಟೆಗೆ ಪಿರ್ಯಾದಿದಾರರಾದ ದೀಪಕ್ ಸಿ.ಎನ್ ತಂದೆ:ಎನ್ ನಾರಾಯಣ್ ವಾಸ:ಪೂಜಾ ನಿಲಯ. ಎಮ್.ಜಿ.ಎಮ್ ಕಾಲೇಜ್ ಎದುರು ಉಡುಪಿರವರು ತನ್ನ ಕಾರು ನಂಬ್ರ ಕೆಎ 20 ಎನ್ 4581 ನೇದರಲ್ಲಿ ಮನೆಗೆ ಹೋಗುತ್ತಿರುವಾಗ ಬನ್ನಂಜೆಯ ಬಾಲಭವನದ ಎದುರು ತಲುಪುವಾಗ ಎದುರಿನಿಂದ ಮೋಟಾರ್ ಸೈಕಲ್ ನಂಬ್ರ ಕೆ 47 6532 ನೇದನ್ನು ಅದರ ಸವಾರ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಬೇರೊಂದು ವಾಹನವನ್ನು ಹಿಂದಿಕ್ಕಿ ದೀಪಕ್ ಸಿ.ಎನ್ ಚಲಾಯಿಸುತ್ತಿದ್ದ ಕಾರಿಗೆ ಎದುರಿನಿಂದ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್ ಸವಾರ ಬೈಕ್ ಸಮೇತ ರಸ್ತೆಗೆ ಬಿದ್ದಿದ್ದುದೀಪಕ್ ಸಿ.ಎನ್ ಕಾರನ್ನು ಅಲ್ಲಿಯೇ ನಿಲ್ಲಿಸಿ ಕೆಳಗೆ ಇಳಿದು ನೋಡಲಾಗಿ ಮೋಟಾರ್ ಸೈಕಲ್ ಸವಾರನ ತಲೆಯ ಹಿಂಬಾಗಕ್ಕೆ ರಕ್ತಗಾಯವಾಗಿದ್ದು ಆತನ ಹೆಸರು ಕೇಳಲಾಗಿ ಮಂಜುನಾಥ ಎಂಬುದಾಗಿದ್ದು, ಕೂಡಲೇ ದೀಪಕ್ ಸಿ.ಎನ್ ಮತ್ತು ಅಲ್ಲಿ ಸೇರಿದವರು ಒಂದು ಆಟೋ ರಿಕ್ಷಾದಲ್ಲಿ ಚಿಕಿತ್ಸೆ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ ಎಂಬುದಾಗಿ ದೀಪಕ್ ಸಿ.ಎನ್ ರವರು ನೀಡಿದ ದೂರಿನಂತೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 109/2014 ಕಲಂ:279,337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ
  • ಬ್ರಹ್ಮಾವರ:ದಿನಾಂಕ:18/10/2014 ರಂದು 15:00 ಗಂಟೆಗೆ ಉಪ್ಪೂರು ಗ್ರಾಮದ ಡೆಲ್ಫಿನ್ ಲೂವಿಸ್ ಎಂಬವರು ಪಿರ್ಯಾದಿದಾರರಾದ ಐ.ಚಂದ್ರಶೇಖರ (56) ತಂದೆ:ಐ.ಶ್ರೀನಿವಾಸ ಶ್ಯಾನುಭೋಗ, ಪಿಡಿಓ, ಉಪ್ಪೂರು ಗ್ರಾಮ ಪಂಚಾಯತ್ ರವರಿಗೆ ಕರೆ ಮಾಡಿ ಉಪ್ಪೂರು ಗ್ರಾಮದ ಮಾವಿನ ಕುದ್ರು ಎಂಬಲ್ಲಿ ಸ್ವರ್ಣ ನದಿ ನೀರಿನಲ್ಲಿ ಒಂದು ಮೃತ ದೇಹ ತೇಲುತ್ತಿರುವುದಾಗಿ ತಿಳಿಸಿದ್ದು ಸದ್ರಿ ಮೃತ ದೇಹವು ಸುಮಾರು 40 ರಿಂದ 45 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಕೊಳೆತ ಸ್ಥಿತಿಯಲ್ಲಿರುವ ಮೃತ ದೇಹವಾಗಿದ್ದು ಸುಮಾರು 3-4 ದಿನಗಳ ಹಿಂದೆ ಎಲ್ಲಿಯೋ ಆಕಸ್ಮಿಕವಾಗಿ ಹೊಳೆಗೆ ಬಿದ್ದು ಅಥವಾ ಜೀವನದಲ್ಲಿ ಜಿಗುಪ್ಸೆಗೊಂಡು ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಎಂಬುದಾಗಿ ಐ.ಚಂದ್ರಶೇಖರರವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 53/2014 ಕಲಂ:174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
 

ಈ ಮೇಲಿನ ಚಹರೆಗೆ ಸಂಬಂಧಿಸಿದ ಗಂಡಸು ತಮ್ಮ ಠಾಣಾ ಸರಹದ್ದಿನಲ್ಲಿ ಕಾಣೆಯಾಗಿದ್ದಲ್ಲಿ ಈ ದೂರವಾಣಿಗೆ ಸಂಪರ್ಕಿಸಿರಿ. ಬ್ರಹ್ಮಾವರ ಪೊಲೀಸು ಠಾಣೆ:0820-2561044, ಬ್ರಹ್ಮಾವರ ಪೊಲೀಸ್‌ ವೃತ್ತ ಕಚೇರಿ:0820-2561966 ಹಾಗೂ ಪೊಲೀಸ್ ಕಂಟ್ರೋಲ್ ರೂಮ್:100

No comments: