Saturday, October 18, 2014

Daily Crime Reports as on 18/10/2014 at 17:00 Hrsಅಕ್ರಮ ಗೋವು ಸಾಗಾಟ ಪ್ರಕರಣ

 • ಬೈಂದೂರು: ದಿನಾಂಕ: 18/10/14 ರಂದು ಸಮಯ ಸುಮಾರು ಬೆಳಿಗ್ಗೆ 04:15 ಗಂಟೆಗೆ ಸುದರ್ಶನ್ ಎ ಎಸ್ ಐ ಬೈಂದೂರು ಪೊಲೀಸ್ ಠಾಣೆ   ಇವರು ಸಿಬ್ಬಂದಿಯೊಂದಿಗೆ ರಾತ್ರಿರೌಂಡ್ಸ್ ಕರ್ತವ್ಯದಲ್ಲಿ  ಬೈಂದೂರಿನಿಂದ ಒತ್ತಿನೆಣೆ ಕಡೆಗೆ ರಾ ಹೆ 66 ನೇದರಲ್ಲಿ ಹೋಗುತ್ತಿರುವಾಗ್ಗೆ ಪಡುವರಿ ಗ್ರಾಮದ ಒತ್ತಿನೆಣೆ  ಶ್ರೀ ರಾಘವೇಂದ್ರ ಮಠದ ಹತ್ತಿರ ತಲುಪಿದಾಗ್ಗೆ ಬೈಂದೂರಿನಿಂದ ಭಟ್ಕಳ ಕಡೆಗೆ ಕಡು ನೇರಳೆ ಬಣ್ಣದ ಓಮಿನಿ ಕಾರೊಂದು ಅತೀ ವೇಗದಿಂದ ಹೋಗುತ್ತಿದ್ದುದನ್ನು ಕಂಡು ಅನುಮಾನಗೊಂಡು ನಿಲ್ಲಿಸುವರೇ ಸೂಚನೆ ನೀಡಿದಾಗ  ಕಾರಿನಲ್ಲಿದ್ದವರು ಕಾರನ್ನು ದೂರದಲ್ಲಿ ನಿಲ್ಲಿಸಿ ಕತ್ತಲೆಯಲ್ಲಿ ಪರಾರಿಯಾಗಿದ್ದು, ನಂತರ ಕಾರಿನ ಸಮೀಪ ಹೋಗಿ ಪರಿಶೀಲಿಸಿದಲ್ಲಿ ನಸುಕಂದು ಬಣ್ಣದ ಒಂದು ಗಂಡು ಕರುವಿನ ಕಾಲುಗಳನ್ನು ಹಗ್ಗದಿಂದ ಕಟ್ಟಿ ಮೇವು ಬಾಯಾರಿಕೆ ನೀಡದೇ ಹಿಂಸೆಯಿಂದ ಉಸಿರುಗಟ್ಟಿಸುವ ರೀತಿಯಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಎಲ್ಲಿಂದಲೋ ಕಳವು ಮಾಡಿಕೊಂಡು ಕಸಾಯಿಖಾನೆಗೆ ವದೆ ಮಾಡುವ ಉದ್ದೇಶದಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದುದನ್ನು ಖಚಿತಪಡಿಸಿಕೊಂಡು ತಕ್ಷೀರಿಗೆ ಬಳಸಿದ ಕಾರು ನಂಬ್ರ ಕೆ ಎ 20 ಸಿ 3846 ನೇದನ್ನು ಹಾಗೂ 1 ಜಾನುವಾರನ್ನು ಮುಂದಿನ ಕ್ರಮದ ಬಗ್ಗೆ ಸ್ವಾಧೀನಪಡಿಸಿಕೊಂಡು ಬೈಂದೂರು ಠಾಣೆಯಲ್ಲಿ ಅಪರಾಧ ಕ್ರಮಾಂಕ 214/2014 ಕಲಂ: 8,9,11 KARNTAKA PREVENTION OF COW SLANGHTER & CATTLE PREVENTION ACT-1964, ಕಲಂ: 11(1) PREVENTION OF CRUELTY TO ANIMALS ACT 1960 & 379 ಐಪಿಸಿಯಂತೆ ಪ್ರಕರಣ ದಾಖಲಿಸಿರುವುದಾಗಿದೆ.

ಹಲ್ಲೆ ಪ್ರಕರಣ • ಕೋಟ: ಪಿರ್ಯಾದಿ ಶಿವರಾಮ ಶೆಟ್ಟಿ ಇವರು ದಿನಾಂಕ 18/10/2014 ರಂದು ಬೆಳಿಗ್ಗೆ 07:30 ಗಂಟೆಗೆ ತನ್ನ ಮಾಲಕರಾದ ಮಹೇಶ ಶೆಟ್ಟಿಯವರ ಬಾಬ್ತು ಉಡುಪಿ ತಾಲೂಕು ಆವರ್ಸೆ ಗ್ರಾಮದ ಕಿರಾಡಿ ಎಂಬಲ್ಲಿರುವ ಕಲ್ಲು ಕೋರೆಯ ಆಫೀಸಿನಿಂದ ಸೈಟಿಗೆ ನಡೆದುಕೊಂಡು ಹೋಗುವಾಗ ಆರೋಪಿ ಗಣೇಶ ಶೆಟ್ಟಿಯು ಪಿರ್ಯಾದಿದಾರರನ್ನು ಅಡ್ಡ ತಡೆದು ನಿಲ್ಲಿಸಿ ಪಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಪಿರ್ಯಾದಿದಾರರಿಗೆ ಬೆನ್ನಿಗೆ ಹೊಡೆದು, ಎಡಕೈಯನ್ನು ಹಿಡಿದುಕೊಂಡು, ಕಾಲಿನಿಂದ ಪಿರ್ಯಾದಿದಾರರ ಬಲಕಾಲಿಗೆ ತುಳಿದು ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಕೋಟ ಠಾಣೆಯಲ್ಲಿ ಅಪರಾಧ ಕ್ರಮಾಂಕ 206/2014 ಕಲಂ 341, 504, 323. 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
 • ಮಣಿಪಾಲ: ದಿನಾಂಕ 17.10.2014 ರಂದು ಮದ್ಯಾಹ್ನ ಸುಮಾರು 14:15 ಗಂಟೆ ಸಮಯಕ್ಕೆ ಉಡುಪಿ ತಾಲೂಕು 80 ಬಡಗುಬೆಟ್ಟು ಗ್ರಾಮದ ರಾಜೀವ ನಗರ 1 ನೇ ಕ್ರಾಸ್ ಬಳಿಯ ಶ್ರೀಮತಿ ರಾಧಾರವರ  ಮನೆಯ ಎದುರು ಪಿರ್ಯಾದಿ ಧನಶೇಖರ ಇವರ  ಅತ್ತೆಯ ಮಗಳು ರಾಧಾರವರಿಗೂ ಅವರ ನೆರೆಮನೆವಾಸಿ, ರಂಗಸ್ವಾಮಿಯವರ  ಹೆಂಡತಿ ಮತ್ತು ಮಕ್ಕಳಿಗೆ ಜಗಳವಾಗುತ್ತಿದ್ದಾಗ, ಪಿರ್ಯಾದಿದಾರರು ಈ ಬಗ್ಗೆ ವಿಚಾರಿಸಿದಲ್ಲಿ ರಂಗಸ್ವಾಮಿಯ ಮಗ ರಂಗನಾಥ ಪಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು, ರಂಗಸ್ವಾಮಿಯು ಅವನಲ್ಲಿದ್ದ ಕತ್ತಿಯಿಂದ ಪಿರ್ಯಾದಿದಾರರ ಎಡಕೈ ಯ ಮೊಣಗಂಟಿನ ಕೆಳಗೆ ಕತ್ತಿಯಿಂದ ಹೊಡೆದ ಪರಿಣಾಮ ಪಿರ್ಯಾದಿದಾರರಿಗೆ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಅಪರಾಧ ಕ್ರಮಾಂಕ 176/14 ಕಲಂ 324, 504 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
 • ಉಡುಪಿ: ಪಿರ್ಯಾದಿ ಕರುಣಾಕರರವರು ಕುಕ್ಕಿಟ್ಟೆಯ ಮೆಟ್ರಿಕ್ ನಂತರದ ಬಾಲಕರ ವಿಧ್ಯಾರ್ಥಿ ನಿಲಯದಲ್ಲಿ 4 ವರ್ಷಗಳಿಂದ ವಾಸವಾಗಿದ್ದು  ಇದೇ ಹಾಸ್ಟಲ್ ನಲ್ಲಿ ಹಾಸನ ಮತ್ತು ಇತರ ಜಿಲ್ಲೆ ವಿಧ್ಯಾರ್ಥಿಗಳು ವಾಸವಿದ್ದು  ದಿನಾಂಕ 17/10/2014 ರಂದು ರಾತ್ರಿ ಸುಮಾರು  9:00 ಗಂಟೆ ಸಮಯಕ್ಕೆ ಸುನೀಲ್ ಎಂಬವನು ಕುಂದಾಪುರ ಕಡೆಯ ಹುಡುಗರು ದುರಗುಟ್ಟಿ ನೋಡಿದರು ಎಂಬುದಾಗಿ ತಿಳಿದು ಊಟದ ಹಾಲ್ ಬಳಿ ಸುನೀಲನು ಬಂದು  ಫಿರ್ಯಾದಿದಾರರ ಕಡೆ ನೋಡುತ್ತ ಯಾಕೇ  ದುರಗುಟ್ಟಿ ನೋಡಿತ್ತೀರಿ ಎಂದು ಕೇಳಿದಾಗ  ಅದಕ್ಕೆ ನೋಡಿಲ್ಲವಾಗಿ ಹೇಳಿದಾಗ ಸುನೀಲ್ ಹಾಗೂ ಆತನೊಂದಿಗೆ ಇದ್ದ ಪ್ರಶಾಂತ್, ಸತೀಶ್ ರವರು ಇದ್ದು ಪೈಕಿ ಸುನೀಲ್ ನು ಅಲ್ಲೆ ಇದ್ದ ಒಂದು ಕಬ್ಬಿಣದ ಚೇರ್ ನಿಂದ ಫಿರ್ಯಾದಿದಾರರ ಕಾಲಿಗೆ ಹೊಡೆದು ನಿಮ್ಮನ್ನು ಮುಂದಕ್ಕೆ ನೋಡಿಕೊಳ್ಳುವುದಾಗಿ ಆರೋಪಿತರು ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 302/2014 ಕಲಂ: ಕಲಂ: 324, 506 ಜೊತೆಗೆ 34   ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ವಂಚನೆ ಪ್ರಕರಣ


 • ಶಿರ್ವಾ: ಮೆ| ದೇಶಿ ಎಜೆನ್ಸಿ ಪಾಲುದಾರ ಆರೋಪಿಗಳಾದ ಡೆಂಜಿಲ್‌ ಪಿ ಕಸ್ತಲಿನೋ, ಶಿವ ಪ್ರಸಾದ್‌‌, ಕುಮಾರ ಸ್ವಾಮಿ ಇವರು ಕುರ್ಕಾಲು ಕಾಪೋರೇಶನ್‌ ಬ್ಯಾಂಕಿನಿಂದ 15 ಲಕ್ಷ ರೂ ಸಾಲ ಪಡೆದಿದ್ದು ಅದಕ್ಕೆ ಹಾಜರು ಪಡಿಸಿದ ಅಡಮಾನ ಪತ್ರದಲ್ಲಿ ಜಾಮೀನುದಾರರಾದ ಕೆ. ಕುಮಾರ ಸ್ವಾಮಿಯವರೊಂದಿಗೆ   ಸೇರಿ  ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕಿಗೆ ನೀಡಿ ಸಾಲ ಪಡೆದು  ಬ್ಯಾಂಕಿಗೆ ಮತ್ತು ಅವರ ಸಂಬಂಧಿಕರಿಗೆ ಮೋಸ ಮಾಡುವ ದೃಷ್ಟಿಯಿಂದ ಸಾಲ ಪಡೆದಿರುವುದಾಗಿದೆ. ಈ ಬಗ್ಗೆ ಶಿರ್ವಾ ಠಾಣೆಯಲ್ಲಿ ಅಪರಾಧ ಕ್ರಮಾಂಕ 154/2014, ಕಲಂ:468,471, 420,ಜೊತೆಗೆ 34  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ

 • ಕುಂದಾಪುರ: ದಿನಾಂಕ 18/10/2014 ರಂದು ಸಮಯ  ಸುಮಾರು ಬೆಳಿಗ್ಗೆ  09:15 ಗಂಟೆಗೆ ಕುಂದಾಪುರ ತಾಲೂಕು ಹೆಮ್ಮಾಡಿ ಗ್ರಾಮದ, ಕಟ್‌ಬೆಲ್ತೂರ್‌ ರೈಲ್ವೆ ಬ್ರೀಡ್ಜ್‌ ಮೇಲೆ ರಸ್ತೆಯಲ್ಲಿ ಪಿರ್ಯಾದಿ ಅಕ್ಷಯ ಇವರು KA20 EF 6536 ನೇ ಬೈಕ್ ನಲ್ಲಿ  ಹೆಮ್ಮಾಡಿ   ಕಡೆಯಿಂದ ಕಟ್‌ಬೆಲ್ತೂರ್‌ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಆಪಾದಿತ ಪಿ. ಅಬ್ದುಲ್‌ ಖಾದರ್‌  ಎಂಬವರು KA20 9321 ನೇ ಜೀಪನ್ನು ವಂಡ್ಸೆ ಕಡೆಯಿಂದ ಹೆಮ್ಮಾಡಿ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು,ರಸ್ತೆಯಲ್ಲಿನ ಹೊಂಡ ತಪ್ಪಿಸಲು ರಸ್ತೆಯ ತೀರ ಬಲಬದಿಗೆ ಚಲಾಯಿಸಿ ಪಿರ್ಯಾದಿದಾರರ ಬೈಕ್ ಗೆ ಎದುರಿನಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಕ್ತಗಾಯಗೊಂಡು ಕುಂದಾಪುರದ ಚಿನ್ಮಯಿ ಆಸ್ಪತ್ರೆಯಲ್ಲಿ  ಒಳ ರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ  ಠಾಣೆಯಲ್ಲಿ ಅಪರಾಧ ಕ್ರಮಾಂಕ 128/2014 ಕಲಂ: 279, 337  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಅಸ್ವಾಭಾವಿಕ ಮರಣ ಪ್ರಕರಣ
  ಗಂಗೊಳ್ಳಿ: ಆಕ್ಷಯ ಪ್ರಾಯ:  17ವರ್ಷ   ಈತನು ದಿನಾಂಕ: 18.10.2014ರಂದು ಬೆಳ್ಳಿಗ್ಗೆ 08:00 ಗಂಟೆಗೆ ತನ್ನ ಸ್ನೇಹಿತರೊಂದಿಗೆ  ತಿರುಗಾಡಲು ಮತ್ತು ಹೊಳೆಯಲ್ಲಿ ಸ್ನಾನಮಾಡಿ ಬರುವುದಾಗಿ ಹೇಳಿ ಹೋದವನು ಸುಮಾರು 11:00 ಗಂಟೆಗೆ ಆತನ ಸ್ನೇಹಿತರೊಂದಿಗೆ ನಾಡಾ ಗ್ರಾಮದ  ನಾಡ ಸೌಪರ್ಣಿಕ ನದಿಯಲ್ಲಿ ಸ್ನಾನ ಮಾಡುತ್ತಿರುವಾಗ ಆಕಸ್ಮಿಕವಾಗಿ ಅಳವಾದ ನೀರಿನ ಗುಂಡಿಗೆ ಹೋಗಿ ಮುಳುಗಿದ್ದು ಮೇಲೆ ಬರುಲು ಆಗದೆ ನೀರಿನಲ್ಲಿ ಮುಳುಗಿ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಠಾಣಾ ಅಸ್ವಾಭಾವಿಕ ಮರಣ ಪ್ರಕರಣ ಕ್ರಮಾಂಕ: 22/2014  ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    
   


No comments: