Sunday, September 21, 2014

Daily Crime Reported As On 21/09/2014 At 19:30 Hrsಇತರ ಪ್ರಕರಣ
  • ಬೈಂದೂರು: ಪಿರ್ಯಾದಿದಾರರಾದ ಕೆ.ಜಿ ಭದ್ರಿನಾರಾಯಣ ಭಟ್‌ @ ದತ್ತಾತ್ರೇಯ ಭಟ್‌ ಕಂಬದಕೋಣೆ ಗ್ರಾಮ ಕುಂದಾಪುರ ತಾಲೂಕು ಕುಂದಾಪುರ ತಾಲುಕು ಇವರು ಕಂಬದಕೋಣೆ ಗ್ರಾಮದಲ್ಲಿ ಸರ್ವೇ ನಂ 6/7ರಲ್ಲಿ 0.72 ಎಕ್ರೆ,  ಸರ್ವೇ ನಂ: 6/5ಪಿ1 ರಲ್ಲಿ 0.38 ಎಕ್ರೆ ಕೃಷಿ ಭೂಮಿಯನ್ನು ಹೊಂದಿರುವುದಾಗಿದೆ. ದಿನಾಂಕ 15/09/2014 ರಂದು ಸಂಜೆ 07:00 ಗಂಟೆಯ ಸಮಯಕ್ಕೆ 1.) ನಾರಾಯಣ ಪೂಜಾರಿ, 2.) ಸುರೇಂದ್ರ, 3.) ನರೇಶ್, 4.) ಹರೀಶ್‌, 5.) ಮಣಿಕಂಠ, 6.) ರೇಣುಕಾ, 7.) ಹೆರಿಯಾ, 8.) ಚಂದು, 9.) ಲಿಂಗಮ್ಮ, 10.) ಕಮಲ, 11.) ನೀಲು, ಹಾಗೂ ಇತರರು ಸೇರಿಕೊಂಡು ಸಮಾನ ಉದ್ದೇಶದಿಂದ ಅಕ್ರಮ ಕೂಟ ಸೇರಿಕೊಂಡು ಕೆ.ಜಿ ಭದ್ರಿನಾರಾಯಣ ಭಟ್‌ ಇವರ ಬಾಬ್ತು ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ನೀರು ತುಂಬಿದ ಗದ್ದೆಯ ಕಂಠ ಕಡಿದು ಸುಮಾರು 70,000 ರೂಪಾಯಿಷ್ಟು  ಕೃಷಿ ಭೂಮಿಗೆ ಹಾನಿ ಉಂಟು ಮಾಡಿರುವುದಾಗಿದೆ ಹಾಗೂ ಈ ಕೃತ್ಯಕ್ಕೆ ಆರೋಪಿತರಗಳಾದ ಲಿಂಗಮ್ಮ, ಕಮಲ ಮತ್ತು ನೀಲು ಹಾಗೂ ಇತರರು ಪ್ರೋತ್ಸಾಹ ನೀಡಿರುವುದಾಗಿದೆ ಎಂಬುದಾಗಿ ಕೆ.ಜಿ ಭದ್ರಿನಾರಾಯಣ ಭಟ್‌ ಇವರು ನೀಡಿದ ದೂರಿನಂತೆ ಬೈಂದೂರು ಠಾಣಾ ಅಪರಾಧ ಕ್ರಮಾಂಕ 196/2014 ಕಲಂ 143, 147, 447, 427, 109 ಜೊತೆಗೆ 149  ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ. 

ಜೀವ ಬೆದರಿಕೆ ಪ್ರಕರಣ
  • ಬ್ರಹ್ಮಾವರ: ದಿನಾಂಕ 22/05/2014 ರಂದು 16:00 ಗಂಟೆಗೆ ಆರೋಪಿತರುಗಳಾದ 1). ಸೋಮ ಪೂಜಾರಿ ತಂದೆ ದಿ. ಬಸವ ಪೂಜಾರಿ ವಾರಂಬಳ್ಳಿ ಗ್ರಾಮ 2). ಜಯ ಪೂಜಾರಿ (29) ತಂದೆ ಗಣಪ ಪೂಜಾರಿ ಹೆರಿಂಜೆ ಕ್ರಾಸ್ ಚಾಂತಾರು ಗ್ರಾಮ ಇವರುಗಳು ಪಿರ್ಯಾದಿದಾರರಾದ ಶ್ರೀಮತಿ ಪ್ರೀತಿ (32) ಗಂಡ ದಿ. ಲಕ್ಷ್ಮಣ ಕುಂದರ್ ವಾಸ ಬಿ.ಎನ್ ನಾಯರಿ ಕಾಂಪ್ಲೆಕ್ಷ್ ಉಪ್ಪಿನಕೋಟೆ ವಾರಂಬಳ್ಳಿ ಗ್ರಾಮ ಇವರ ಗಂಡನ ಮಾಲಿಕತ್ವದಲ್ಲಿರುವ ಇನ್ನೋವಾ ಕಾರು ನಂಬ್ರ ಕೆಎ 02ಎಎ 8985ನೇದನ್ನು ಪ್ರೀತಿರವರ ಹೆಸರಿಗೆ ಮಾಡಿಸಿಕೊಡುವುದಾಗಿ ನಂಬಿಸಿ ಸಹಿ ಪಡೆದು ಸುಳ್ಳು ಕರಾರು ಪತ್ರಗಳನ್ನು ಸೃಷ್ಟಿಸಿ ಕಾರನ್ನು 2ನೇ ಆರೋಪಿ ಜಯ ಪೂಜಾರಿರವರ ಹೆಸರಿಗೆ ಮಾಡಿದುದಲ್ಲದೇ ದಿನಾಂಕ 21/08/2014 ರಂದು 18:00 ಗಂಟೆಗೆ ಆರೋಪಿಗಳು ಪ್ರೀತಿರವರ ಮನೆಗೆ ಬಂದು ನೀನು 2ನೇ ಆರೋಪಿಗೆ 6 ಲಕ್ಷ ರೂಪಾಯಿ ಕೊಡಬೇಕು ಇಲ್ಲದಿದ್ದರೆ ನಿನ್ನ ಮೇಲೆ ಸುಳ್ಳು ಕೇಸು ಹಾಕಿ ಹಣ ವಸೂಲಿ ಮಾಡುತ್ತೇವೆ, ಮತ್ತು ಹಣ ಕೊಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿದೆ ಎಂಬುದಾಗಿ ಪ್ರೀತಿರವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣಾ ಅಪರಾಧ ಕ್ರಮಾಂಕ 174/2014 ಕಲಂ 420, 506 ಜೊತೆಗೆ 34 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.  

No comments: