Sunday, September 21, 2014

Daily Crime Reported As On 21/09/2014 At 17:00 Hrs


ಅಸ್ವಾಭಾವಿಕ ಮರಣ ಪ್ರಕರಣ
  • ಉಡುಪಿ: ಪಿರ್ಯಾದಿದಾರರಾದ ಸಂತೋಷ್ ಶೆಟ್ಟಿ, ತಂದೆ ಜಯಶಂಕರ ಶೆಟ್ಟಿ, ವಾಸ ಕೆಮ್ತೂರು, ಪಡುತೋಟ ಮನೆ, ಕೊರಂಗ್ರಪಾಡಿ ಉಡುಪಿ ಇವರ ತಾಯಿ ರತ್ನಾ (57) ಇವರು ರಾತ್ರಿ ಊಟ ಮಾಡಿ ಮಲಗಿದ್ದು. ದಿನಾಂಕ 21/09/2014 ರಂದು ಬೆಳಗಿನ ಜಾವ 03:00 ಗಂಟೆ ಸಮಯಕ್ಕೆ ಸಂತೋಷ್ ಶೆಟ್ಟಿರವರ ತಾಯಿಯವರು ಉಸಿರಾಟದ ತೊಂದರೆಯಿಂದ ನರಳುತ್ತಿದ್ದವರನ್ನು ನೋಡಿ ಸಂತೋಷ್ ಶೆಟ್ಟಿರವರ ತಂದೆ ಸಂತೋಷ್ ಶೆಟ್ಟಿರವರಿಗೆ ತಿಳಿಸಿದ್ದು ಹೋಗಿ ನೋಡಲಾಗಿ ತೀವ್ರ ಉಸಿರಾಟದ ತೊಂದರೆ ಬಳಲುತ್ತಿದ್ದವರನ್ನು ಕೂಡಲೇ ಚಿಕಿತ್ಸೆಯ ಬಗ್ಗೆ ಟಿಎಮ್‌ಎ ಪೈ  ಆಸ್ಪತ್ರೆಗೆ ಕರೆತಂದಲ್ಲಿ ಪರೀಕ್ಷಿಸಿದ ವೈಧ್ಯರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ ಸಂತೋಷ್ ಶೆಟ್ಟಿರವರ ತಾಯಿ ಅಸ್ತಮಾ ಖಾಯಿಲೆಯಿಂದ ಬಳಲುತ್ತಿದ್ದು, ಅಸ್ತಮಾ ಖಾಯಿಲೆ ಉಲ್ಬಣಿಸಿ ಮೃತಪಟ್ಟಿರಬಹುದಾಗಿದೆ ಎಂಬುದಾಗಿ ಸಂತೋಷ್ ಶೆಟ್ಟಿ ಇವರು ನೀಡಿದ ದೂರಿನಂತೆ ಉಡುಪಿ ನಗರ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 56/14 ಕಲಂ 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
ದರೋಡೆ ಪ್ರಕರಣ
  • ಶಂಕರನಾರಾಯಣ: ಪಿರ್ಯಾದಿದಾರರಾದ ಕೆ ಸದಾಶಿವ ಶೆಟ್ಟಿ (41), ತಂದೆ ಕೆ. ರಘುರಾಮ ಶೆಟ್ಟಿ, ವಾಸ ಕೆಲ್ಲನಕೆರೆ, ಶಂಕರನಾರಾಯಣ ಗ್ರಾಮ ಮತ್ತು ಅಂಚೆ, ಕುಂದಾಪುರ ಇವರು ದಿನಾಂಕ 20/09/2014 ರಂದು ರಾತ್ರಿ 11:15 ಗಂಟೆ ಸಮಯ ಹೋಟೆಲು ವ್ಯಾಪಾರ ಮುಗಿಸಿ ಮನೆ ಕಡೆಗೆ ಶಂಕರನಾರಾಯಣದ ಅಮ್ಮ ಸಭಾ ಭವನದ ಬಳಿ ಹೋಗುತ್ತಿರುವಾಗ ಆರೋಪಿತರುಗಳಾದ ರಾಘವೆಂದ್ರ ಆಚಾರ್ಯ ಮತ್ತು ಇತರ 4 ಜನರು ಗುಂಪು ಸೇರಿಕೊಂಡು ಕೆ ಸದಾಶಿವ ಶೆಟ್ಟಿರವರ ಬೈಕ್‌ನ್ನು ಅಡ್ಡ ಹಾಕಿ ಹಲ್ಲೆ ನಡೆಸಿ, ಕೆ ಸದಾಶಿವ ಶೆಟ್ಟಿರವರಿಂದ ರೂಪಾಯಿ 50,000/-ನ್ನು ದರೋಡೆ ಮಾಡಿಕೊಂಡು ಹೋಗಿದ್ದು, ಕೆ ಸದಾಶಿವ ಶೆಟ್ಟಿ ರವರು ತನ್ನ ಸ್ನೇಹಿತರಿಗೆ ಪೋನ್‌ಮಾಡಿ ವಿಷಯ ತಿಳಿಸಿ ಸ್ನೇಹಿತರೊಂದಿಗೆ ಹುಡುಕಾಡಿದಾಗ ಆ ವ್ಯಕ್ತಿಗಳು ಅಲ್ಲಿಯ ನಿವಾಸಿ ರಾಘವೇಂದ್ರ ಆಚಾರಿ ಹಾಗೂ ಆತನ ಸ್ನೇಹಿತರು ಎಂಬುದಾಗಿ ತಿಳಿದು ಬಂದಿರುತ್ತದೆ ಎಂಬುದಾಗಿ ಕೆ ಸದಾಶಿವ ಶೆಟ್ಟಿ ಇವರು ನೀಡಿದ ದೂರಿನಂತೆ ಶಂಕರನಾರಾಯಣ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 144/2014 ಕಲಂ 395 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ. 

ಇತರ ಪ್ರಕರಣ

  • ಶಂಕರನಾರಾಯಣ: ಪಿರ್ಯಾದಿದಾರರಾದ ರಾಘವೇಂದ್ರ ಬಳೆಗಾರ (25), ತಂದೆ ಚಂದ್ರ ಶೇಖರ ಬಳೆಗಾರ, ವಾಸ ಶಂಕರನಾರಾಯಣ ಗ್ರಾಮ ಕುಂದಾಪುರ ಇವರು ದಿನಾಂಕ 21/09/2014ರಂದು ರಾತ್ರಿ ಶಂಕರನಾರಾಯಣದಲ್ಲಿ ನಡೆದ ಜಿಸಿಐ ಕಾರ್ಯಕ್ರಮವನ್ನು ವೀಕ್ಷಿಸಿ ಸ್ನೇಹಿತನನ್ನು ಬಿಡಲು ತೆರಳುತ್ತಿದ್ದ ಸಮಯ ರಾತ್ರಿ 00:20 ಗಂಟೆಗೆ ಶಂಕರನಾರಾಯಣ ಅಕ್ಷಯ ಬಾರ್ ಸಮೀಪ ಆರೋಪಿತರುಗಳಾದ ಪ್ರಸಾದ್ ಶೆಟ್ಟಿ ಕಟ್ಟಿನ ಬೈಲು ಹಾಗೂ ಆತನ ಸಂಗಡಿಗರು ರಾಘವೇಂದ್ರ ಬಳೆಗಾರರವರನ್ನು ಅಡ್ಡಕಟ್ಟಿ ಹಲ್ಲೆ ನಡೆಸಿ ಕೊರಳಿನಲ್ಲಿದ್ದ 45 ಸಾವಿರ ರೂಪಾಯಿ ಬೆಲೆಯ 16 ಗ್ರಾಂ ತೂಕದ ಚಿನ್ನದ ಸರವನ್ನು ಕದ್ದು ಪರಾರಿಯಾಗಿರುತ್ತಾರೆ. ಎಂಬುದಾಗಿ ರಾಘವೇಂದ್ರ ಬಳೆಗಾರ ಇವರು ನೀಡಿದ ದೂರಿನಂತೆ ಶಂಕರನಾರಾಯಣ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 145/2014 ಕಲಂ 392 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.

No comments: