Monday, September 22, 2014

Daily Crime Reported As On 22/09/2014 At 07:00 Hrs

ಹಲ್ಲೆ ನಡಸಿ ಜೀವ ಬೆದರಿಕೆ ಪ್ರಕರಣ
  • ಶಿರ್ವಾ: ದಿನಾಂಕ 21.09.2014 ರಂದು ಬೆಳಿಗ್ಗೆ 08:30 ಗಂಟೆಗೆ ಪಿರ್ಯಾದಿದಾರರಾದ ಕೇಶವ ಆಚಾರ್ಯ (59) ತಂದೆ ಪದ್ಮನಾಭ ಆಚಾರ್ಯ, ವಾಸ ಕಿರಣ್‌ ವುಡ್‌ ವರ್ಕ್, ಸುಭಾಸ್‌ನಗರ, ಕುರ್ಕಾಲು ಗ್ರಾಮ ಉಡುಪಿ ತಾಲೂಕು ಎಂಬವರು ಕಿರಣ್‌ ವುಡ್‌  ವರ್ಕ್‌  ಬಳಿ  ಮನೆಗೆ  ಬರುವ ದಾರಿಯಲ್ಲಿ ಅವರ ಮಗ ದನ ಕಟ್ಟಲು ಹೋಗಿ ಹಿಂದಿನ ದಿನ ಇಟ್ಟಿದ್ದ ಕಬ್ಬಿಣದ ಗೂಟ ಹುಡುಕಾಡುತ್ತಿದ್ದಾಗ ಆಪಾದಿತ ರಮೇಶ ಶೆಟ್ಟಿ ಯಾನೆ ಬಾಲು ಶೆಟ್ಟಿ ಎಂಬಾತನು ಬಂದು  ಅವಾಚ್ಯ ಶಬ್ದಗಳಿಂದ  ಬೈದು  ಗಲಾಟೆ  ಮಾಡುತ್ತಿದ್ದು ಇದನ್ನು  ಕೇಳಿದ  ಪಿರ್ಯದಿದಾರರು  ತನ್ನ ಹೆಂಡತಿ  ಮತ್ತು ಸೊಸೆಯೊಂದಿಗೆ  ಹೋದಾಗ  ಆಪಾದಿತ  ಪಿರ್ಯಾದಿದಾರರ   ಹೆಂಡತಿಯ ಕೈಯ್ಯಲ್ಲಿದ್ದ  ಕಬ್ಬಿಣದ ಗೂಟವನ್ನು ಎಳೆದುಕೊಂಡು ಪಿರ್ಯಾದಿದಾರರ ಮಗನನ್ನು ದೂಡಿ  ಹಾಕಿ ಅವರ ಹೆಂಡತಿಯ ಬಲ ಕೈಯ ತಟ್ಟಿಗೆ ಕಬ್ಬಿಣದ ಗೂಟದಲ್ಲಿ ಹೊಡೆದು ರಕ್ತ ಗಾಯ ಗೊಳಿಸಿ  ಪಿರ್ಯಾದಿದಾರರಿಗೆ  ಮತ್ತು  ಅವರ ಮಗನಿಗೆ ಕೈಯಿಂದ ಹೊಡೆದು ಇನ್ನು ಈ ದಾರಿಯಲ್ಲಿ ಬಂದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುವುದಾಗಿದೆ ಎಂಬುದಾಗಿ ಕೇಶವ ಆಚಾರ್ಯ ರವರು ನೀಡಿದ ದೂರಿನಂತೆ ಶಿರ್ವಾ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 146/2014 ಕಲಂ 324, 504, 506 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಅಪಘಾತ ಪ್ರಕರಣ
  • ಕುಂದಾಪುರ: ದಿನಾಂಕ 21/09/2014 ರಂದು ರಾತ್ರಿ 9:00 ಗಂಟೆಗೆ ಕುಂದಾಪುರ ತಾಲೂಕು ಹಂಗಳೂರು ಗ್ರಾಮದ ವಿನಾಯಕ ಟಾಕೀಸ್ ಬಳಿ ರಾ.ಹೆ ರಸ್ತೆಯ ಪೂರ್ವ ಬದಿಯ ಮಣ್ಣಿನ ರಸ್ತೆಯಲ್ಲಿ ಪಿರ್ಯಾದಿದಾರರಾದ ಸಂಜೀವ ಪೂಜಾರಿ (50) ತಂದೆ ದಿ. ವೆಂಕಪ್ಪ ಪೂಜಾರಿ ವಾಸ: ಕಳವಿನ ಬಾಗಿಲು, ಕೋಡಿ ಕಸಬಾ ಗ್ರಾಮ, ಕುಂದಾಪುರ ಎಂಬವರು  ನಡೆದುಕೊಂಡು  ಕೊಡಿಯ ಮನೆ ಕಡೆಗೆ  ಬರುತ್ತಿದ್ದಾಗ ಆಪಾದಿತ  ದಿನೇಶ ಎಂಬವರು KA 209199 ನೇ ಬೈಕ್ ನ್ನು ಕುಂದಾಪುರ ಕಡೆಯಿಂದ ಕೊಟೇಶ್ವರ ಕಡೆಗೆ ಅತೀವೇಗ ಹಾಗೂ ಅಜಾಗರುಕತೆ ಯಿಂದ ಸವಾರಿ ಮಾಡಿಕೊಂಡು ಬಂದು ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಹಾಗೂ  ಬೈಕ್‌  ಸವಾರ  ದಿನೇಶ ಮತ್ತು ಬೈಕಿನ ಸಹ ಸವಾರ ಪ್ರಶಾಂತ ಎಂಬವರು ಬೈಕ ಸಮೇತ  ರಸ್ತೆಗೆ ಬಿದ್ದು ಗಾಯಗೊಂಡು  ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ ಎಂಬುದಾಗಿ ಸಂಜೀವ ಪೂಜಾರಿ ರವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 114/2014 ಕಲಂ 279, 337 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: