Wednesday, September 03, 2014

Daily Crimes Reported as On 03/09/2014 at 07:00 Hrs.



ಅಪಘಾತ ಪ್ರಕರಣ 
  • ಕೋಟ: ದಿನಾಂಕ  01-09-2014 ರಂದು ಮಧ್ಯಾಹ್ನ ಸುಮಾರು 1:15 ಗಂಟೆಗೆ ಫಿರ್ಯಾದಿ ಧರ್ಮರಾಯ ತಂದೆ: ದಿ. ಕಾಳ ವಾಸ; ಸಲ್ವಾಡಿ ಅಂಚೆ,ಕಾಳಾವರ ಉಡುಪಿ ಎಂಬವರು ತನ್ನ ಕೆ.ಎ.20 ಇ.ಎಫ್.7920 ನೇ ನಂಬ್ರದ ಮೋಟಾರು ಸೈಕಲ್‌ನಲ್ಲಿ  ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಹೋಗುವಾಗ, ಕೋಟ ಪೊಲೀಸ್ ಠಾಣೆ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಹೋಗುತ್ತಿರುವಾಗ ಪಿರ್ಯಾಧಿದಾರರ ಮುಂದೆ ಹೋಗುತ್ತಿದ್ದ, ಕೆ.ಎ 19.ಡಿ.1330 ನೇ ನಂಬ್ರದ ಟಾಟಾ ಏಸ್ ಗಾಡಿಯನ್ನು  ಅದರ ಚಾಲಕ  ವಿನ್ಸಂಟ್ ಎಂಬವನು  ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ, ಯಾವುದೇ ಮುನ್ಸೂಚನೆ ನೀಡದೆ ಒಮ್ಮೆಲೇ ಬಲಕ್ಕೆ ಚಲಾಯಿಸಿದ ಪರಿಣಾಮ ರಸ್ತೆಯ ಬಲ ಬದಿಯಲ್ಲಿ ಹೋಗುತ್ತಿದ್ದ ಪಿರ್ಯಾಧಿದಾರರ ಮೋಟಾರು ಸೈಕಲ್‌ಗೆ  ಹ್ಯಾಂಡ್ಲಿಗೆ ಡಿಕ್ಕಿ ಹೋಡೆದ ಪರಿಣಾಮ ಪಿರ್ಯಾಧಿದಾರರ ಎಡ ಕೈಯ ಕಿರು ಬೆರಳಿಗೆ ಮೂಳೆ ಮುರಿತದ ಗಾಯವಾಗಿದ್ದು.ಚಿಕಿತ್ಸೆ ಬಗ್ಗೆ ಕೋಟೇಶ್ವರ ಎನ್.ಆರ್ ಆಚಾರ್ಯ ಆಸ್ಪತ್ರೆಗೆ ದಾಖಲಿಸಿದಾಗಿದೆ.ಈ ಬಗ್ಗೆ ಧರ್ಮರಾಯ ರವರು ನೀಡಿದ ದೂರಿನಂತೆ ಕೋಟ ಠಾಣಾ ಅಪರಾಧ ಕ್ರಮಾಂಕ 189/14 ಕಲಂ:279,338 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
  • ಉಡುಪಿ: ದಿನಾಂಕ 2.9.2014 ರಂದು ಪಿರ್ಯಾದಿ ಜಗದೀಶ ಶೆಟ್ಟಿ (28) ತಂದೆ: ಸದಾಶಿವ ಶೆಟ್ಟಿ, ವಾಸ: ಶ್ರೀದೇವಿ ನಿವಾಸ, ಪಾಂಡೇಶ್ವರ ಗ್ರಾಮ, ಸಾಸ್ತಾನ ಪೋಸ್ಟ್‌, ಉಡುಪಿ ಎಂಬವರು ತನ್ನ ಸ್ನೇಹಿತ ಹರೀಶ್‌ರವರ ಕೆಎ 20 ಪಿ 2903 ನೇ ಆಲ್ಟೋ ಕಾರಿನಲ್ಲಿ ಹರೀಶ್‌ರವರನ್ನು ಕುಳ್ಳಿರಿಸಿಕೊಂಡು ಉದ್ಯಾವರ ಕಡೆಯಿಂದ ಬ್ರಹ್ಮಾವರ ಕಡೆಗೆ ರಾ.ಹೆ. 66 ರಲ್ಲಿ ಚಲಾಯಿಸುತ್ತಾ ಮದ್ಯಾಹ್ನ 12:15 ಗಂಟೆಯ ಸಮಯ ಬಲಾಯಿಪಾದೆ ಸೆಕೆಂಡ್ಸ್‌ ಸೇಲ್‌ ಕಾರು ಬಜಾರಿನ ಮುಂಭಾಗ ಕೆಎ 47 ಹೆಚ್‌ 5508 ನೇ ಸವಾರ ತನ್ನ ಮೋಟಾರ್‌ ಸೈಕಲನ್ನು ಉದ್ಯಾವರ ಕಡೆಯಿಂದ ಉಡುಪಿ ಕಡೆಗೆ ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿವೈಡರ್‌ಗೆ ಡಿಕ್ಕಿ ಹೊಡೆದು ನಂತರ ಪಿರ್ಯಾದಿದಾರರು ಚಲಾಯಿಸುತ್ತಿದ್ದ ಕಾರಿನ ಹಿಂಭಾಗದ ಎಡಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರು ಜಖಂಗೊಂಡಿದ್ದು, ಮೋಟಾರ್‌ ಸೈಕಲ್‌ ಸವಾರನು ಮೋಟಾರ್‌ ಸೈಕಲ್‌ ಸಮೇತ ರಸ್ತೆಗೆ ಬಿದ್ದು ಆತನ ಬಲತುಟಿಯ ಬಳಿ ಮತ್ತು ಎಡ ತಲೆಯ ಕೆಳಭಾಗದಲ್ಲಿ ರಕ್ತಗಾಯವಾಗಿರುತ್ತದೆ.ಈ ಬಗ್ಗೆ   ಜಗದೀಶ ಶೆಟ್ಟಿ ರವರು ನೀಡಿದ ದೂರಿನಂತೆ ಸಂಚಾರ ಠಾಣಾ ಅಪರಾಧ ಕ್ರಮಾಂಕ 100/14 ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
  • ಕಾರ್ಕಳ: ದಿನಾಂಕ 02/09/2014 ರಂದು 17:30 ಗಂಟೆಗೆ ಫಿರ್ಯಾಧಿದಾರರಾದ ಶ್ರೀ ವಸಂತ ಎಂಬವರು ತನ್ನ ದೂರದ ಸಂಬಂಧಿ ಸುಖೇಶ್‌ ಎಂಬವರು ಸವಾರಿ ಮಾಡಿಕೊಂಡು ಬರುತ್ತಿದ್ದ ಕೆ.ಎ.20.ವಿ.8085 ನೇ ಹೀರೋ ಹೋಂಡಾ ಪ್ಯಾಶನ್‌ ಪ್ರೊ ಮೋಟಾರು ಸೈಕಲಿನಲ್ಲಿ ಸಹಸವಾರರಾಗಿ ಕುಳಿತು ನಿಟ್ಟೆ ಬೋರ್ಗಲ್‌ಗುಡ್ಡೆ ಕಡೆಯಿಂದ ತನ್ನ ಮನೆ ಕಡೆಗೆ ರಾಜ್ಯ ಹೆದ್ದಾರಿ ಸಂಖ್ಯೆ 1 ರಲ್ಲಿ ಬರುತ್ತಿದ್ದ ಸಮಯ ಮೋಟಾರು ಸೈಕಲ್ಲನ್ನು ಸುಖೇಶನು ಅತೀ ವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬರುತ್ತಿದ್ದು, ಮೋಟಾರು ಸೈಕಲ್‌ ಪರ್ಪಲೆ ಕೆ.ಇ.ಬಿ.ಸ್ಟೇಷನ್‌ ಬಳಿ ಸಮೀಪಿಸುತ್ತಿದ್ದಂತೆ ರಸ್ತೆ ಎಡಗಡೆಯಿಂದ ಬೀದಿ ನಾಯಿಯೊಂದು ಏಕಾಏಕಿಯಾಗಿ ರಸ್ತೆ ದಾಟಿದಾಗ ಮೋಟಾರು ಸೈಕಲ್ಲನ್ನು ಹಠಾತ್ತನೆ ಬ್ರೇಕ್‌ ನಿಲ್ಲಿಸಲು ಪ್ರಯತ್ನಿಸಿದ ಸುಖೇಶನು ಮೋಟಾರು ಸೈಕಲ್ಲಿನ ಮೇಲೆ ಹತೋಟಿಯನ್ನು ತಪ್ಪಿದ ಪರಿಣಾಮ ಮೋಟಾರು ಸೈಕಲ್ ರಸ್ತೆಯಲ್ಲಿ ಸವಾರರ ಸಹಿತ ಎಡಗಡೆಗೆ ಮಗುಚಿ ಬಿದ್ದು, ಫಿರ್ಯಾಧಿದಾರರ ಎಡ ಕೈ ಮೋಟಾರು ಸೈಕಲ್ಲಿನ ಅಡಿಯಲ್ಲಿ ಸಿಲುಕಿಕೊಂಡು ಎಡ ಕೈಯ ಕಿರು ಬೆರಳಿನ ತುದಿಗೆ ಮೂಳೆ ಮುರಿತದ ಜಖಂ ಆಗಿರುತ್ತದೆ. ಈ ಬಗ್ಗೆ ಶ್ರೀ ವಸಂತ (30)ತಂದೆ ದಿವಂಗತ ಕುರುಂಬಿಲ ಸೊರ್ಲುಗುರಿ ಮನೆ, ಪರ್ಪಲೆ, ಕುಂಟಲ್ಪಾಡಿ ಅಂಚೆ,  ಸಾಣೂರು ಗ್ರಾಮ, ಕಾರ್ಕಳ ತಾಲೂಕುರವರು ನೀಡಿದ ದೂರಿನಂತೆ ನಗರ ಠಾಣಾ ಅಪರಾಧ ಕ್ರಮಾಂಕ 163/14 ಕಲಂ: 279,338 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
ಮಟ್ಕಾ ಪ್ರಕರಣ  
  • ಕಾರ್ಕಳ: ಕಾರ್ಕಳ ನಗರ ಠಾಣಾ ಪಿ.ಎಸ್.ಐ ಕಬ್ಬಾಳ್‌ರಾಜ್‌ ಹೆಚ್.ಡಿ ಇವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ದಿನಾಂಕ: 02.09.2014 ರಂದು ಸಂಜೆ 18;15 ಗಂಟೆಗೆ ಕಾರ್ಕಳ ತಾಲೂಕು ಮಿಯಾರು ಗ್ರಾಮದ ಹೈವೇ ಬಾರ್‌ ಬಳಿ ಸಾರ್ವಜನಿಕ ಸ್ಥಳದಲ್ಲಿ ತನ್ನ ಸ್ವಂತ ಲಾಭಕ್ಕೋಸ್ಕರ  ಸಾರ್ವಜನಿಕರಿಂದ ಮಟ್ಕಾ ಜೂಜಿನ ಬಗ್ಗೆ ಹಣವನ್ನು ಪಡೆದು ಮಟ್ಕಾ ಚೀಟಿ ಬರೆದುಕೊಡುತ್ತಿದ್ದ ಆರೋಪಿ ಸಂದೀಪ್‌ ಶೆಟ್ಟಿ ಇವರನ್ನು ಸಿಬ್ಬಂದಿಯವರ  ಸಹಾಯದಿಂದ ದಾಳಿ ನಡೆಸಿ, ದಸ್ತಗಿರಿ ಮಾಡಿ, ಆರೋಪಿ ವಶದಿಂದ ಮಟ್ಕಾ ಜೂಜಾಟಕ್ಕೆ ಬಳಸಿದ ರೂ 5315/-  ನೇದನ್ನು ಹಾಗೂ ಆಟಕ್ಕೆ ಬಳಸಿದ ಇತರೆ ಪರಿಕರಗಳನ್ನು ಸ್ವಾಧೀನಪಡಿಸಿ ನಗರ ಠಾಣಾ ಅಪರಾಧ ಕ್ರಮಾಂಕ 162/2014 ಕಲಂ 78(3) ಕೆ.ಪಿ ಆಕ್ಟ್   ನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: