Tuesday, September 30, 2014

Daily Crime Reports as on 30/09/2014 at 19:30 Hrs

ಅನುಮಾನಾಸ್ಪದ ವ್ಯಕ್ತಿಯ ಬಂಧನ
  • ಬ್ರಹ್ಮಾವರ: ದಿನಾಂಕ 30/09/2014 ರಂದು ಬೆಳಗ್ಗಿನ ಜಾವ 03.45 ಗಂಟೆಗೆ ಉಡುಪಿ ತಾಲೂಕು ಹೊಸೂರು ಗ್ರಾಮದ ಮೇಲ್ ಕರ್ಜೆ ಬಸ್ಸು ನಿಲ್ದಾಣದ ಬಳಿ ಆರೋಪಿ ಬರ್ಮಪ್ಪ (22) ತಂದೆ ಬಸಪ್ಪ ಕುರುಬ ವಾಸ: ಬೆಣಕಲ್ ಯಲಬುರ್ಗಾ ತಾಲೂಕು ಕೊಪ್ಪಳ ಜಿಲ್ಲೆ ಎಂಬಾತನು ಯಾವುದೋ ಬೇವಾರಂಟು ತಕ್ಷೀರು ಮಾಡುವ ಇರಾದೆಯಿಂದ ಕೈಯಲ್ಲಿ ಕಬ್ಬಿಣದ ಉಳಿ, ಸಣ್ಣ ಕಬ್ಬಿಣದ ರಾಡು ಮತ್ತು ಟಾರ್ಚನ್ನು ವಶದಲ್ಲಿಟ್ಟುಕೊಂಡಿದ್ದು ಸಮವಸ್ತ್ರದಲ್ಲಿದ್ದ ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕರಾದ ಶ್ರೀ ಅರುಣ್ ಬಿ.ನಾಯಹಾಗೂ ಸಿಬ್ಬಂದಿಯವರನ್ನು ಕಂಡು ಇರುವಿಕೆಯನ್ನು ಮರೆಮಾಚಲು ಪ್ರಯತ್ನಿಸಿದ್ದು ಆತನು ತನ್ನ ಇರುವಿಕೆಯ ಬಗ್ಗೆ ಸಮರ್ಪಕವಾದ ಉತ್ತರ ನೀಡದೇ ಇದ್ದುದರಿಂದ ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ಆತನ ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 180/2014 ಕಲಂ 96(ಸಿ) ಕರ್ನಾಟಕ ಪೊಲೀಸ್ ಕಾಯ್ದೆಯಂತೆ ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ನಡೆಸಿ ಜೀವ ಬೆದರಿಕೆ ನೀಡಿದ ಪ್ರಕರಣ
  • ಬೈಂದೂರು: ದಿನಾಂಕ 30/09/2014 ರಂದು ಬೆಳಿಗ್ಗೆ 11:00 ಗಂಟೆಗೆ ಪಿರ್ಯಾಧಿದಾರರಾದ ಪ್ರಬಾವತಿ  ತಾಯಿ ದಿ| ಗಣಪು ಪೂಜಾರ್ತಿ  ವಾಸ: ಉಬ್ಜೇರಿ ಮನೆ ನಾಯ್ಕನ ಕಟ್ಟೆ ಕೆರ್ಗಾಲ್ ಗ್ರಾಮ  ಕುಂದಾಪುರ ತಾಲೂಕು ಎಂಬವರು ತಮ್ಮ ಕೃಷ್ಣ ಪೂಜಾರಿ ಮತ್ತು ತಂಗಿ ಮಾಲತಿ ಹಾಗೂ ಕೆಲಸದವರೊಂದಿಗೆ  ಕುಂದಾಪುರ ತಾಲೂಕು ಕೆರ್ಗಾಲು ಗ್ರಾಮದ ನಾಯ್ಕನ ಕಟ್ಟೆ ಎಂಬಲ್ಲಿ ಅವರ ಹಳೆಯ ಮನೆಯನ್ನು ರಿಪೇರಿ ಮಾಡುತ್ತಿರುವಾಗ ಆಪಾಧಿತರಾದ ಚಿತ್ತರಂಜನ್‌ ಪೂಜಾರಿ, ರೋಹಿತ್‌ ಪೂಜಾರಿ, ಮನೋಹರ ಪೂಜಾರಿ, ಯತೀಶ್‌ ಪೂಜಾರಿ, ಗಿರೀಶ್‌ ಪೂಜಾರಿ, ರಾಜು ಪೂಜಾರಿ, ಪ್ರದೀಪ, ಶೀನ ಗಾರ್ಡ, ರಾಧಾ ಹಾಗೂ ಇತರರು  ತಕ್ಷೀರು ಮಾಡುವ ಉದ್ದೇಶದಿಂದ ಮಾರಕ ಆಯುಧ ಹಿಡಿಕೊಂಡು ಅಕ್ರಮ ಕೂಟವನ್ನು ಸೇರಿಕೊಂಡು ಪಿರ್ಯಾಧಿದಾರರು ಇತರರೊಂದಿಗೆ ಕೆಲಸ ಮಾಡುತ್ತಿರುವ ಸ್ಥಳಕ್ಕೆ ಬಂದು ದೌರ್ಜನ್ಯ ಮತ್ತು ದಬ್ಬಾಳಿಕೆಯ ಮೂಲಕ ಏಕಾಏಕಿಯಾಗಿ  ಪಿರ್ಯಾಧಿದಾರರು ಹಾಗೂ ಅವರೊಂದಿಗೆ ಕೆಲಸ ಮಾಡುತ್ತಿದ್ದವರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು  ಹೊಡೆದು ಗಲಾಟೆ ಮಾಡಿ ಪಿರ್ಯಾಧಿದಾರರನ್ನು ಹಾಗೂ ಅವರೊಂದಿಗೆ ಇದ್ದವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರೆ. ಈ ಘಟನೆಯಲ್ಲಿ ಪಿರ್ಯಾಧಿದಾರರಿಗೆ ಹಾಗೂ ಅವರ ಅಣ್ಣ ಕೃಷ್ಣ ಪೂಜಾರಿಯವರಿಗೆ ಗಾಯವಾಗಿರುತ್ತದೆ ಎಂಬುದಾಗಿ ಪ್ರಬಾವತಿ ರವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 203/2014 ಕಲಂ: 143,147,448,148,504,324,506, ಜೊತೆಗೆ 149  .ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಪಘಾತ ಪ್ರಕರಣಗಳು 
  • ಬ್ರಹ್ಮಾವರ: ದಿನಾಂಕ 29/09/2014 ರಂದು ಸಂಜೆ 5:00 ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ರವೀಂದ್ರ (38) ತಂದೆ; ಕುಂಜಿರ ಮೂಲ್ಯ ಕೊಲ್ಯ ಮನೆ, ತೆಳ್ಳಾರು ಗ್ರಾಮ ಕಾರ್ಕಳ ರವರು ಟಿಪ್ಪರ್ ನಂಬ್ರ ಕೆಎ-15-4944 ರಲ್ಲಿ ತಮ್ಮ ರಾಜಾರಾಮ್ ರವರೊಂದಿಗೆ ಟಿಪ್ಪರ್ ನಲ್ಲಿ ಹಾವಂಜೆ ಕಡೆಯಿಂದ ಕೆ,ಜಿ ರೋಡ್ ಕಡೆಗೆ ಬರುತ್ತಾ ಆಪಾದಿತ ಜಯಂತ್ ನು ಟಿಪ್ಪರ್ ನ್ನು ಅತೀ ವೇಗ ಮತ್ತು ಅಜಾಗೂರುಕತೆಯಿಂದ ಚಲಾಯಿಸಿ ಕೊಳಲಗಿರಿ ಶಾಲೆ ಎದುರು ತಲುಪುವಾಗ ಟಿಪ್ಪರ್ ಮಗುಚಿ ಬಿದ್ದು ಟಿಪ್ಪರ್ ನಲ್ಲಿದ್ದ ಪಿರ್ಯಾದಿದಾರರ ತಮ್ಮ ರಾಜಾರಾಮ್ ನಿಗೆ  ಹಣೆಗೆ ರಕ್ತಗಾಯ ಉಂಟಾಗಿದ್ದು ಟಿಪ್ಪರ್ ಕೂಡಾ ಜಖಂ ಆಗಿರುತ್ತದೆ ಎಂಬುದಾಗಿ ರವೀಂದ್ರ ರವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 181/2014 ಕಲಂ 279, 337 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಬ್ರಹ್ಮಾವರ: ದಿನಾಂಕ 29/09/29014 ರಂದು ಉಡುಪಿ ತಾಲೂಕು 52 ನೇ ಹೇರೂರು ಗ್ರಾಮದ ಸುಪ್ರೀಮ್ ಫೀಡ್ಸ್ ಬಳಿ ರಾ.ಹೆ 66 ರಲ್ಲಿ ಆರೋಪಿ ರವಿ ಹೆಗ್ಡೆ ಎಂಬಾತನು ತನ್ನ ಲಾರಿ ನಂಬ್ರ ಜಿಜೆ-25-ಟಿ-9981 ನ್ನು ಬ್ರಹ್ಮಾವರ ಕಡೆಯಿಂದ ಉಡುಪಿ ಕಡೆಗೆ ಅತಿ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ಎಡಬದಿಗೆ ಚಲಾಯಿಸಿಕೊಂಡು ಬಂದು ರಸ್ತೆಯ ಬದಿಯಲ್ಲಿ ರಸ್ತೆ ದಾಟಲು ನಿಂತುಕೊಂಡಿದ್ದ ಪಿರ್ಯಾದಿದಾರರಾದ ಸಂತೋಷ್ ನಾಯ್ಕ (28) ತಂದೆ: ಬೆಳ್ಳ ನಾಯ್ಕ ವಾಸ: ಮಾರಾಳಿ ದೇವಸ್ಥಾನದ ಹತ್ತಿರ ಕೆಂಜೂರು ಮುದ್ದೂರು ನಾಲ್ಕೂರು ಗ್ರಾಮ ಉಡುಪಿ ತಾಲೂಕು ಎಂಬವರ ತಮ್ಮನಾದ ಪ್ರಭಾಕರ ನಾಯ್ಕ ಎಂಬವರಿಗೆ ಡಿಕ್ಕಿ ಹೊಡೆದ ಪರಿಣಾಮ ಆತನ ತಲೆಗೆ, ಮೂಗಿಗೆ, ಬೆನ್ನಿಗೆ ರಕ್ತಗಾಯವಾಗಿರುವುದಾಗಿದೆ ಎಂಬುದಾಗಿ ಸಂತೋಷ್ ರವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 182/2014 ಕಲಂ 279, 338 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: