Tuesday, September 30, 2014

Daily Crime Reported As On 30/09/2014 At 17:00 Hrs


ಇತರ ಪ್ರಕರಣ
  • ದಿನಾಂಕ 29/09/2014 ರಂದು 16.00 ಗಂಟೆಗೆ ಬೈಂದೂರು ಠಾಣಾ ಉಪನಿರೀಕ್ಷಕರಾದ ಸಂತೋಷ ಎ ಕಾಯ್ಕಿಣಿ ಇವರಿಗೆ  ದೊರೆತ ಖಚಿತ ವರ್ತಮಾನದಂತೆ ಸಿಬ್ಬಂದಿಯವರೊಂದಿಗೆ ಕುಂದಾಪುರ ತಾಲೂಕು ಯಡ್ತರೆ ಗ್ರಾಮದ ಕಡ್ಕೆ ಎಂಬಲ್ಲಿನ   ಸರಕಾರಿ ಪ್ರಾಥಮಿಕ ಶಾಲೆ ಬಳಿಯ ಸಾರ್ವಜನಿಕ ರಸ್ತೆ ಬದಿಯ ಸ್ಥಳಕ್ಕೆ ಸಂಜೆ 5.00 ಗಂಟೆಗೆ ಪಂಚರೊಂದಿಗೆ ದಾಳಿ ಮಾಡಿ ಆರೋಪಿತರುಗಳಾದ 1). ದೇವಯ್ಯ ಗೊಂಡ, ವಾಸ ಕಡ್ಕೆ ಯಡ್ತರೆ ಗ್ರಾಮ ಕುಂದಾಪುರ ತಾಲೂಕು, 2). ಪಂಜು ಪೂಜಾರಿ ದೊರಗದ್ದೆಮನೆ ಬೈಂದೂರು ಗ್ರಾಮ ಕುಂದಾಪುರ ತಾಲೂಕು ಇವರುಗಳು ಹಣವನ್ನು ಪಣವಾಗಿಟ್ಟು ಕೋಳಿಗಳ ಕಾಲುಗಳಿಗೆ ಹರಿತವಾದ ಚೂರಿಯನ್ನು ಕಟ್ಟಿ ಅವುಗಳಿಗೆ ಹಿಂಸೆ ನೀಡಿ ಕೋಳಿ ಅಂಕ ಜೂಜಾಟ ನಿರತರಾಗಿದ್ದ 2 ಜನ ಆರೋಪಿತರನ್ನು ದಸ್ತಗಿರಿ ಮಾಡಿ ಕೋಳಿ ಅಂಕ ಜೂಜಾಟಕ್ಕೆ ಉಪಯೋಗಿಸಿದ ನಗದು ರೂಪಾಯಿ 300/- , ಕೋಳಿ ಹುಂಜ - 2, ಮೋಟಾರು ಸೈಕಲ್ - 3, ಹರಿತವಾದ ಚೂರಿ -2, ಹರಿತವಾದ ಚೂರಿಗೆ ಕಟ್ಟಿದ ಹಗ್ಗ- 2 ನ್ನು ಸ್ವಾಧೀನ ಪಡಿಸಿಕೊಂಡಿದ್ದಾಗಿರುತ್ತದೆ. ಸ್ವಾದೀನಪಡಿಸಿದ ಸೊತ್ತುಗಳ ಒಟ್ಟು ಮೌಲ್ಯ 76,300/ ಆಗಿರುತ್ತದೆ ಎಂಬುದಾಗಿ ಈ ಬಗ್ಗೆ ಠಾಣಾ ಅಪರಾಧ ಕ್ರಮಾಂಕ 201/2014 ಕಲಂ 87, 93 ಕೆ ಪಿ ಕಾಯಿದೆಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
ಹಲ್ಲೆ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಚಿತ್ತರಂಜನ್ ಪೂಜಾರಿ (35), ತಂದೆ ಶೀನ ಪೂಜಾರಿ, ವಾಸ ಉಬ್ಜೇರಿಮನೆ ಬಿಜೂರು ಗ್ರಾಮ ಕುಂದಾಪುರ ತಾಲೂಕು ಇವರು ದಿನಾಂಕ 30/09/2014ರಂದು ಬೆಳಿಗ್ಗೆ 11:00 ಗಂಟೆಗೆ ಅವರ ತಮ್ಮ ರಾಜು ಪೂಜಾರಿಯವರೊಂದಿಗೆ ಕುಂದಾಪುರ ತಾಲೂಕು ಬಿಜೂರು ಗ್ರಾಮದ ಉಬ್ಜೇರಿ ಮನೆ ಎಂಬಲ್ಲಿ ಅವರ ಬಾಬ್ತು ಜಾಗದಲ್ಲಿ ಕೆಲಸ ಮಾಡಿಕೊಂಡಿರುವಾಗ ಆರೋಪಿತರುಗಳಾದ ಕೃಷ್ಣಯ್ಯ ಪೂಜಾರಿ, ಪ್ರಭಾವತಿ, ಮಾಲತಿ ಹಾಗೂ ಅವರ ಗಂಡ, ಸುರೇಶ್‌, ರಮೇಶ್‌, ಸುಮತಿ, ಯವರು ತಕ್ಷೀರು ಮಾಡುವ ಸಮಾನ ಉದ್ದೇಶದಿಂದ ಅಕ್ರಮ ಕೂಟ ಸೇರಿ ಮಾರಕಾಯುಧಗಳನ್ನು ಹಿಡಿದುಕೊಂಡು ಬಂದು ಪಿರ್ಯಾಧಿದಾರರ ಜಾಗದಲ್ಲಿ ಮನೆಯನ್ನು ಕಟ್ಟುತ್ತಿದ್ದ  ಬಗ್ಗೆ ಪಿರ್ಯಾಧಿದಾರರು ವಿಚಾರಿಸಿ ಈ ಜಾಗ ತಮಗೆ ಸೇರಿದ್ದು ಇಲ್ಲಿ ಮನೆಯನ್ನು ಕಟ್ಟಬೇಡಿ ಎಂದು ಹೇಳಿದ್ದಕ್ಕೆ ಆಪಾದಿತರೆಲ್ಲರು ಸೇರಿ ಬಂದು ಪಿರ್ಯಾಧಿದಾರರಿಗೆ ಹಾಗೂ ಅವರ ತಮ್ಮ ರಾಜುವಿಗೆ ಆವಾಚ್ಯ ಶಬ್ದಗಳಿಂದ ಬೈದು ಆಪಾದಿತರ ಪೈಕಿ ಮಾಲತಿ ಮತ್ತು ಸುಮತಿ ರಮೇಶ್‌ ಇವರು ಕಲ್ಲಿನಿಂದ ಹಾಗೂ ಉಳಿದವರು ಕೈಯಿಂದ ಪಿರ್ಯಾಧಿದಾರರಿಗೆ ಹಾಗೂ ಅವರ ತಮ್ಮನಿಗೆ ಹಲ್ಲೆ ನಡೆಸಿರುತ್ತಾರೆ ಹಾಗೂ ಪ್ರಭಾವತಿ ಎಂಬುವವರು ರಾಜು ಪೂಜಾರಿಯವರ ಎಡಕೈಗೆ ಹಲ್ಲಿನಿಂದ ಕಚ್ಚಿರುತ್ತಾಳೆ ಹಾಗೂ ಕೃಷ್ಣಯ್ಯ ಪೂಜಾರಿ ಎಂಬುವವರು ಪಿರ್ಯಾದಿದಾರರನ್ನು ಕತ್ತಿಯಿಂದ ಕಡಿಯಲು ಬಂದಿರುತ್ತಾರೆ ಎಂಬುದಾಗಿ ಚಿತ್ತರಂಜನ್ ಪೂಜಾರಿ ಇವರು ನೀಡಿದ ದೂರಿನಂತೆಬೈಂದೂರು ಠಾಣಾ ಅಪರಾಧ ಕ್ರಮಾಂಕ 202/14  ಕಲಂ 143, 147, 148, 504, 324, 323 ಜೊತೆಗೆ 149  ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.  
ಅಸ್ವಾಭಾವಿಕ ಮರಣ ಪ್ರಕರಣ
  • ಮಲ್ಪೆ: ಕಡೆಕಾರು ಗ್ರಾಮದ ಕಿನ್ನಿಮೂಲ್ಕಿ ಪರಿಸರದಲ್ಲಿ ಭಿಕ್ಷೆ ಬೇಡಿಕೊಂಡಿದ್ದ ಅಪರಿಚಿತ ಗಂಡಸೊಬ್ಬ ಕಿನ್ನಿಮೂಲ್ಕಿ ಹೆದ್ದಾರಿಯ ಬದಿಯಲ್ಲಿ ಸತ್ತು ಬಿದ್ದಿರುವ ಬಗ್ಗೆ ಸಾರ್ವಜನಿಕರಿಂದ ಬಂದ ಮಾಹಿತಿಯಂತೆ ಪಿರ್ಯಾದಿದಾರರಾದ ನವೀನ್ ಶೆಟ್ಟಿ (33), ತಂದೆ ರವಿ ಶೆಟ್ಟಿ, ವಾಸ ಒಡ್ಡಾಡಿ ಹೌಸ್, ಕಿನ್ನಿಮೂಲ್ಕಿ, ಕಡೆಕಾರು ಗ್ರಾಮ, ಉಡುಪಿ ಇವರು ಹೋಗಿ ನೋಡಿದ್ದು, ಸದ್ರಿ ಅಪರಿಚಿತ ಗಂಡಸು ದಿನಾಂಕ 29/09/2014 ರಿಂದ ರಾತ್ರಿ 8:0 ಗಂಟೆಯಿಂದ ದಿನಾಂಕ 30/09/2014 ರಂದು ಬೆಳಿಗ್ಗೆ 09:00 ಗಂಟೆ ಮದ್ಯಾವಧಿಯಲ್ಲಿ ಹೆದ್ದಾರಿ ಬದಿಯಲ್ಲಿ ಸ್ವಾಭಾವಿಕವಾಗಿ ಮರಣಪಟ್ಟಿರುವುದಾಗಿದೆ ಎಂಬುದಾಗಿ   ನವೀನ್ ಶೆಟ್ಟಿ ಇವರು  ನೀಡಿದ ದೂರಿನಂತೆ ಮಲ್ಪೆ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 46/2014 ಕಲಂ 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.

No comments: