Saturday, September 27, 2014

Daily Crime Reports as on 27/09/2014 at 19:30 Hrs
ಅಸ್ವಾಭಾವಿಕ ಮರಣ ಪ್ರಕರಣ

  • ಬ್ರಹ್ಮಾವರ: ಉಡುಪಿ ತಾಲೂಕು ಪೆಜಮಂಗೂರು ಗ್ರಾಮದ ಮೊಗವೀರ ಪೇಟೆ ದೇವಸ್ಥಾನ ಕಡು ಎಂಬಲ್ಲಿ ಪಿರ್ಯಾದಿದಾರರಾದ ಮಹಾಬಲ ಮರಕಾಲ (58) ತಂದೆ; ದಿ: ರಾಮ ಮರಕಾಲ ಎಂಬವರ ಮಗ ಪ್ರಾಯ ಸುಮಾರು 28 ವರ್ಷದ ಗಣೇಶ ಎಂಬವರು  ದಿನಾಂಕ: 26/09/2014 ರಂದು ಮಧ್ಯಾಹ್ನ 3:00 ಗಂಟೆಯ ಸಮಯಕ್ಕೆ ಮನೆಯ ದನಕರುಗಳಿಗೆ ಹುಲ್ಲು ಕೊಯ್ದು ಅದನ್ನು ಸೀತಾನದಿಯಲ್ಲಿ ತೊಳೆಯುತ್ತಿರುವ ಸಮಯ ಆಕಸ್ಮಿಕವಾಗಿ ಕಾಲು ಜಾರಿ ಹೊಳೆಯ ನೀರಿಗೆ ಬಿದ್ದು ಮೃತ ಪಟ್ಟಿದ್ದು ದಿನಾಂಕ; 27/09/2014 ರಂದು 14:00 ಗಂಟೆಗೆ ಮೃತ ದೇಹ ಪತ್ತೆಯಾಗಿರುವುದಾಗಿದೆ ಎಂಬುದಾಗಿ ಮಹಾಬಲ ಮರಕಾಲ ರವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 51/14 ಕಲಂ 174 ಸಿ,ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.No comments: