Sunday, September 28, 2014

Daily Crime Reports as on 28/09/2014 at 07:00 Hrs

ಹಲ್ಲೆ ಪ್ರಕರಣ
  • ಉಡುಪಿ: ದಿನಾಂಕ: 27/09/2014 ರಂದು ಪಿರ್ಯಾದಿದಾರರಾದ ಸಂತೋಷ (34) ತಂದೆ ದಿ: ರಾಮ  ವಾಸ: ಕಸ್ತೂರ್ಬಾ ನಗರ ಚಿಟ್ಪಾಡಿ ಉಡುಪಿ ಗ್ರಾಮ ರವರು ಬನ್ನಂಜೆ ನಾರಾಯಣ ಗುರು ಮಂದಿರಕ್ಕೆ ಕಾರ್ಯಕ್ರಮದ ಬಗ್ಗೆ ಸುರೇಶ, ಕಿರಣ್‌ ಮತ್ತು ಸುಧಾಕರ ಎಂಬವರೊಂದಿಗೆ ಬಂದಿದ್ದು ಊಟ ಮಾಡಿ 14:30 ಗಂಟೆಗೆ  ಅಲ್ಲಯೇ ಹೊರಗೆ ನಿಂತಿದ್ದ ಒಂದು ರಿಕ್ಷಾದಲ್ಲಿ ಡಯಾನಾ ಟಾಕೀಸ್‌ ಹತ್ತಿರ ಹೋಗಲು ರಿಕ್ಷಾದಲ್ಲಿ ಹತ್ತಿ ಕುಳಿತಿದ್ದು ಸ್ವಲ್ಪ ಮುಂದೆ ಹೋಗುವಾಗ ರಿಕ್ಷಾ ಚಾಲಕನು 4 ಜನ ಇದ್ದೀರಲ್ಲ ಡಬ್ಬಲ್‌ ಬಾಡಿಗೆ ಕೊಡಬೇಕೆಂದು ಕೇಳಿದಾಗ ನಾವು ಇಲ್ಲಿಯೇ ಇಳಿಯುತ್ತೇವೆ ಎಂದು ಹೇಳಿದಾಗ ರಿಕ್ಷಾ ನಿಲ್ಲಿಸಿ ರಿಕ್ಷಾ ಚಾಲಕನು ಕಿರಣನಿಗೆ ಹೊಡೆಯುಲು ಬಂದನು ಆಗ ಫಿರ್ಯಾದಿದಾರರು ಮತ್ತು ಸುರೇಶ ರವರು ತಡೆಯಲು ಹೋದಾಗ ಆತನು ಒಂದು ಸಣ್ಣ  ಚೂರಿಯನ್ನು ಕಿಸೆಯಿಂದ ತೆಗೆದು ಬೀಸಿದಾಗ ಫಿರ್ಯಾದಿದಾರರ ಎಡಬದಿಯ ಗಡ್ಡದ ಹತ್ತಿರ ತಾಗಿ ರಕ್ತ ಬರುವ ಗಾಯವಾಯಿತು ಮತ್ತು ಸುರೇಶ ರವರಿಗೆ ಬಲ ಕಣ್ಣಿನ ಕೆಳಗೆ ಸಣ್ಣ ರಕ್ತಗಾಯವಾಯಿತು. ಸದ್ರಿ ರಿಕ್ಷಾ ಚಾಲಕನ ಹೆಸರು ಮ್ಯಾಕ್ಸಿಮ್‌  ಆಟೋ ರಿಕ್ಷ ನಂಬರ್‌ ಕೆಎ 20 ಎ 8292 ಆಗಿರುತ್ತದೆ ಎಂಬುದಾಗಿ ಸಂತೋಷ ರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 279/2014 ಕಲಂ 324 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: