Wednesday, September 24, 2014

Daily Crime Reports as on 24/09/2014 at 07:00 Hrs

ಹಲ್ಲೆ ಪ್ರಕರಣ
  • ಬೈಂದೂರು: ದಿನಾಂಕ 23/09/2014 ರಂದು ಮದ್ಯಾಹ್ನ 2:30 ಗಂಟೆಗೆ ಕುಂದಾಪುರ ತಾಲೂಕು ಹಲಗೇರಿ ಕೆಗಳ್‌ಮಕ್ಕಿ ಎಂಬಲ್ಲಿನ ಪಿರ್ಯಾಧಿದಾರರಾದ ಶ್ರಿಮತಿ ರತ್ನಾ ಪೂಜಾರಿ ಕಂಬದಕೋಣೆ ಗ್ರಾಮ ಕುಂದಾಪುರ ತಾಲೂಕು ಎಂಬವರ ಜಾಗಕ್ಕೆ ಆಪಾದಿತರಾದ ಪಾರ್ವತಿ ಕಂಬದಕೋಣೆ ಗ್ರಾಮ ಎಂಬವವರು ಅಕ್ರಮ ಪ್ರವೇಶ ಮಾಡಿ ಜಾಗದ ಧರೆ ತೆಗೆದು ದಾರಿ ಅಗಲ ಮಾಡಿದ್ದು ಇದನ್ನು ಪಿರ್ಯಾಧಿದರರು ಪ್ರಶ್ನಿಸಿದಾಗ ಆಪಾದಿತಳು ಪಿರ್ಯಾಧಿದಾರನ್ನು ಉದ್ದೇಶಿಸಿ ಅಚಾಚ್ಯ ಶಬ್ದಗಳಿಂದ ಬೈದು, ಆಕೆಯ ಕೈಯಲ್ಲಿದ ಒಂದು ರಾಡ್‌ನಿಂದ ಪಿರ್ಯಾಧಿದಾರರ ಕುತ್ತಿಗೆ ಕಡೆಗೆ ಹೊಡೆದಾಗ ಪಿರ್ಯಾಧಿದಾರರು ಕೈಯನ್ನು ಅಡ್ಡ ಹಿಡಿದು ತಪ್ಪಿಸಿಕೊಂಡಿರುತ್ತಾರೆ. ನಂತರ  ಆಪಾದಿತಳು ಕೆಲಸ ಮಾಡಲು ತಂದಿದ್ದ ಕತ್ತಿಯಿಂದ ಪಿರ್ಯಾಧಿದಾರರ ತಲೆಗೆ ಕಡಿಪರಿಣಾಮ ತಲೆಗೆ ರಕ್ತಗಾಯವಾಗಿರುತ್ತದೆ ಪಿರ್ಯಾಧಿದಾರರು ನೋವಿನಿಂದ ಬೊಬ್ಬೆ ಹೊಡೆದಾಗ ಗಲಾಟೆಯನ್ನು ತಪ್ಪಿಸಲು ಬಂದ ಪಿರ್ಯಾಧಿದಾರರ ತಾಯಿಯನ್ನು ಹಾಗೂ ಪಿರ್ಯಾಧಿದಾರರನ್ನು ಉದ್ದೇಶಿಸಿ ಜಾಗವಿಚಾರದಲ್ಲಿ ಮಾತನಾಡಿದರೆ ನಿಮ್ಮನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿರುತ್ತಾಳೆ ಎಂಬುದಾಗಿ ಶ್ರಿಮತಿ ರತ್ನಾ ಪೂಜಾರಿ ರವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 197/2014 ಕಲಂ 447, 504, 324 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಅಪಘಾತ ಪ್ರಕರಣಗಳು  
  • ಹೆಬ್ರಿ: ದಿನಾಂಕ 21.09.14 ರಂದು ಸಂಜೆ ಪಿರ್ಯಾದಿದಾರರಾದ ಹಾಲೇಶ್‌ (37) ತಂದೆ ಕೊಟ್ರ ಬಸಪ್ಪ ವಾಸ: ಜೈಪುರ, ಶಿವಪುರ ಗ್ರಾಮ, ಕಾರ್ಕಳ ತಾಲೂಕು ಎಂಬವರು ತನ್ನ ಕೆ.ಎ 14. ಇ.ಸಿ 0603 ನೇ ಅಪಾಜಿ ಮೋಟಾರ್ ಸೈಕಲ್ ನಲ್ಲಿ ಪಿರ್ಯಾದಿದಾರರ ಸ್ನೇಹಿತ ಚೇತನ್ ರವರನ್ನು ಸಹ ಸವಾರನಾಗಿ ಕುಳ್ಳಿರಿಸಿಕೊಂಡು ಶಿವಪುರದಿಂದ ಧರ್ಮಸ್ಥಳಕ್ಕೆ ಹೋಗಿ ಅಲ್ಲಿ ಉಳ್ಳಕೊಂಡು ಮರುದಿನ ದಿನಾಂಕ 22.09.14 ರಂದು ಬೆಳಿಗ್ಗೆ ದೇವರ ದರ್ಶನ ಮಾಡಿ ವಾಪಾಸು ದರ್ಮಸ್ಥಳದಿಂದ ಕಾರ್ಕಳ ಮುಖೇನ ಹೆಬ್ರಿಗೆ ಬರುತ್ತಿರುವಾಗ ಸಮಯ ಸಂಜೆ 5-15 ಗಂಟೆಗೆ ಪಿರ್ಯಾದಿದಾರರು ವರಂಗ ಗ್ರಾಮದ ಸೂರಿಮಣ್ಣಿಗೆ ಹೋಗುವ ಕ್ರಾಸ್ ಬಳಿ ತಲುಪಿದಾಗ ಎದುರುಗಡೆಯಿಂದ ಅಂದರೆ ಹೆಬ್ರಿ ಕಡೆಯಿಂದ ಕಾರ್ಕಳ ಕಡೆಗೆ ಅರೋಪಿ ಕೆಎ 21.ಅರ್. 4428 ನೇ ಮೋಟಾರ್ ಸೈಕಲ್ ನ್ನು ಅತೀವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿ ರಸ್ತೆಯ ತೀರಾ ಬಲಬದಿಗೆ ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ಗೆ  ಡಿಕ್ಕಿ ಹೊಡೆದ ಪರಿಣಾಮ ಸಹ ಸವಾರ ಚೇತನ್ ಮತ್ತು ಆರೋಪಿಗೆ ತೀವ್ರ ಸ್ವರೂಪದ ಗಾಯವಾಗಿರುವುದಾಗಿದೆ ಎಂಬುದಾಗಿ ಹಾಲೇಶ್‌ ರವರು ನೀಡಿದ ದೂರಿನಂತೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 78/2014 ಕಲಂ 279, 337 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಹೆಬ್ರಿ: ದಿನಾಂಕ: 23/09/14 ರಂದು ಮುಂಜಾನೆ ಸಮಯ ಪಿರ್ಯಾದಿದಾರರಾದ ಸುಧೀರ್‌ ಶೆಟ್ಟಿ (38) ತಂದೆ ವಸಂತ ಶೆಟ್ಟಿ ವಾಸ: ಕಾಸಗದ್ದೆ ಮನೆ, 74 ಉಳ್ಳೂರು ಗ್ರಾಮ, ಕುಂದಾಪುರ ತಾಲೂಕು ಎಂಬವರ ಮಾವನ ಮಗ ರಂಜಿತ್ ಶೆಟ್ಟಿ (30) ಎಂಬವರು ತನ್ನ ಕೆಎ.20.ಇ.ಬಿ.2647 ನೇ ಮೋಟಾರ್ ಸೈಕಲ್ ನಲ್ಲಿ ಸ್ನೇಹಿತ ಹರೀಶ್ ರವರನ್ನು ಸಹ-ಸವಾರನಾಗಿ ಕುಳ್ಳಿರಿಸಿಕೊಂಡು ಸಿದ್ದಾಪುರ 74 ಉಳ್ಳುರು ನಿಂದ ಧರ್ಮಸ್ಥಳಕ್ಕೆ ಹೋಗುವ ಸಲುವಾಗಿ ಮಾಂಡಿಮೂರುಕೈ ಕುಚ್ಚೂರು ಕಡೆಯ ರಸ್ತೆಯಿಂದಾಗಿ ಸಮಯ ಮುಂಜಾನೆ 03-30  ಗಂಟೆಗೆ ಹೆಬ್ರಿ ಗ್ರಾಮದ ಹೆಬ್ರಿ ಜಂಕ್ಷನ್ ಬಳಿ ತಲುಪಿ ತನ್ನ ಮೋಟಾರ್ ಸೈಕಲ್ ಗೆ ಇಂಡಿಕೇಟರ್ ಹಾಕಿ ಕಾರ್ಕಳ ರಸ್ತೆಗೆ ಹೋಗುತ್ತಿರುವಾಗ ಅಗುಂಬೆ ಕಡೆಯಿಂದ ಉಡುಪಿ ಕಡೆಗೆ ಅರೋಪಿ ರಾಜೇಶ್ ಬೇಳಿಂಜೆ ಗ್ರಾಮ, ಕಾರ್ಕಳ ತಾಲೂಕು ಎಂಬಾತನು ತನ್ನ ಕೆ.ಎ 18.ಬಿ. 5009ನೇ  ಮಹೇಂದ್ರ ಪಿಕಾಪ್ ವಾಹನವನ್ನು ಅತೀವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿ ರಂಜಿತ್ ಶೆಟ್ಟಿ ರವರು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ಗೆ  ಡಿಕ್ಕಿ ಹೊಡೆದ ಪರಿಣಾಮ ಅವರಿಬ್ಬರೂ ಮೋಟಾರ್ ಸೈಕಲ್ ಸಮೇತ  ರಸ್ತೆಗೆ ಬಿದ್ದು ಅವರಿಬ್ಬರಿಗೂ ತೀವ್ರ ಸ್ವರೂಪದ ಗಾಯವಾಗಿದ್ದರನ್ನು ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ.ಎಂ.ಸಿ ಅಸ್ಪತ್ರೆಗೆ ದಾಖಲು ಮಾಡಿದ್ದು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ರಂಜಿತ್ ಶೆಟ್ಟಿ ರವರು ಸಂಜೆ 6-00 ಗಂಟೆಗೆ ಮೃತಪಟ್ಟಿರುವುದಾಗಿದೆ ಎಂಬುದಾಗಿ ಸುಧೀರ್‌ ಶೆಟ್ಟಿ ರವರು ನೀಡಿದ ದೂರಿನಂತೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 79/2014 ಕಲಂ 279, 337, 304(ಎ) ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: