Wednesday, September 24, 2014

Daily crime report as on 24/09/2014 at 17:00 Hrsಅಪಘಾತ ಪ್ರಕರಣ
  • ಉಡುಪಿ: ಪಿರ್ಯಾದಿದಾರರಾದ ಕರಿಬಸಪ್ಪ (40), ತಂದೆ ಹನುಮಂತಪ್ಪ, ವಾಸ ಲಕ್ಷ್ಮೀನಗರ, 2 ನೇ ಕ್ರಾಸ, ಕೊಡವೂರು ಗ್ರಾಮ, ಉಡುಪಿ ಇವರು ದಿನಾಂಕ 19/09/2014 ರಂದು ಸಂಜೆ 7:35 ಗಂಟೆ ಸುಮಾರಿಗೆ ತನ್ನ ಮನೆಯಿಂದ ನರ್ಸಿಂಗ್ ಕಾಲೇಜಿನ ಕಡೆಗೆ  ಪುತ್ತೂರು ಗ್ರಾಮದ ಶಾಂತಿವನದ ಬಳಿ ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ತನ್ನ ಹಿಂದಿನಿಂದ ಕೆಎ 20ಕ್ಯೂ 4802ನೇ ಹೊಂಡಾ ಆಕ್ಟಿವಾದ ಸವಾರನು ತನ್ನ ಬಾಬ್ತು ವಾಹನವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು ಪಿರ್ಯಾದಿದಾರಿಗೆ ಬಲಭುಜಕ್ಕೆ ಮತ್ತು ಸೊಂಟಕ್ಕೆ ಗುದ್ದಿದ ತೀವ್ರ ನೋವು, ತಲೆಯ ಬಲಬದಿಗೆ ರಕ್ತ ಗಾಯ ಹಾಗೂ ಎಡಕಾಲಿನ ಮೊಣಗಂಟಿನ ಹತ್ತಿರ, ಬಲ ಕೈ ಕಿರುಬೆರಳಿನ ಹತ್ತಿರ ತರಚಿದ ಗಾಯವಾಗಿದ್ದು ಚಿಕಿತ್ಸೆಯ ಬಗ್ಗೆ ಉಡುಪಿಯ ಗಾಂಧಿ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ. ಈ ಘಟನೆಗೆ ಕೆಎ 20ಕ್ಯೂ 4802ನೇ ಹೊಂಡಾ ಆಕ್ಟಿವಾದ ಸವಾರನ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ ಎಂಬುದಾಗಿ ಕರಿಬಸಪ್ಪ ಇವರು ನೀಡಿದ ದೂರಿನಂತೆ ಉಡುಪಿ ಸಂಚಾರ ಠಾಣಾ ಅಪರಾಧ ಕ್ರಮಾಂಕ 104/2014  ಕಲಂ 279, 337  ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.

ಹಲ್ಲೆ ಪ್ರಕರಣ
  • ಉಡುಪಿ: ಉಡುಪಿ ಸರಕಾರಿ ಆಸ್ಪತ್ರೆಯ ಸರ್ಚಿಕಲ್‌‌ ವಾರ್ಡಿನಲ್ಲಿ ಒಳರೋಗಿಯಾಗಿ ದಾಖಲಾಗಿದ್ದ ಪಿರ್ಯದಿದಾರರಾದ ಸದಾನಂದ ಕುಂದರ್‌, (58) ತಂದೆ ಮುಂಜುನಾಥ ಬಂಗೇರ, ವಾಸ: ಮನೆ ನಂಬರ್‌‌ 6-2-15ಎ ನಾರಾಯಣ ಕಾಂಪೌಂಡ್‌‌ ಒಳಕಾಡು ಉಡುಪಿ ಇವರ ಹೇಳಿಕೆಯ ಸಾರಾಂಶವೆನೆಂದರೆ ದಿನಾಂಕ 23/09/2014ರಂದು ರಾತ್ರಿ 09:00ಗಂಟೆಗೆ ಪಿರ್ಯಾದಿದಾರರ ತಮ್ಮ ಆರೋಪಿತ ನಿತ್ಯಾನಂದರವರು ಪಿರ್ಯಾದಿದಾರರ ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ಬೈದು ಅಲ್ಲದೇ ಕೈಯಲ್ಲಿ ಒಂದು ಸಣ್ನ ಕೊಡಲಿಯನ್ನು ಹಿಡಿದು  ಕೊಂಡು ಬಂದು  ಪಿರ್ಯಾದಿದಾರರ ಕಡೆ ಬೀಸಿದಾಗ ಪಿರ್ಯಾದಿದಾರರು ಬಲ ಕೈಯನ್ನು ಅಡ್ಡ ಹಿಡಿದಿದ್ದು ಪರಿಣಾಮ ಕೊಡಲಿ ಪಿರ್ಯಾದಿದಾರರ ಬಲ ಕೈ ಮೊಣಗಂಟಿನ ಬಳಿ ತಾಗಿ ರಕ್ತ ಗಾಯವಾಗಿರುತ್ತದೆ ಎಂಬುದಾಗಿ  ಸದಾನಂದ ಕುಂದರ್‌ ಇವರು ನೀಡಿದ ದೂರಿನಂತೆ ಉಡುಪಿ ನಗರ ಠಾಣಾ ಅಪರಾಧ ಕ್ರಮಾಂಕ 276/14 ಕಲಂ 428, 504 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.

ಹಲ್ಲೆ ನಡೆಸಿ ಜೀವ ಬೆದರಿಕೆ ಪ್ರಕರಣ
  • ಉಡುಪಿ:ದಿನಾಂಕ 23-09-2014ರಂದು ಪಿರ್ಯಾದಿದಾರರಾದ ನಿತ್ಯಾನಂದ ಕುಂದರ್‌‌ (54), ತಂದೆ ಮುಂಜುನಾಥ ಬಂಗೇರ, ವಾಸ ಮನೆ ನಂಬರ್‌‌ 6-2-15 ಶ್ರೀದೇವಿ ನಾರಾಯಣ ಕಾಂಪೌಂಡ್‌‌ ಒಳಕಾಡು ಉಡುಪಿ ಇವರ ಅಣ್ಣ  ಸದಾನಂದ ಕುಂದರ್ ರವರು ರಾತ್ರಿ ಸುಮಾರು 8:45ಗಂಟೆಗೆ ಪಿರ್ಯಾದಿದಾರರ ಹೆಂಡತಿಯನ್ನು ಉದ್ದೇಶಿಸಿ ಎಲ್ಲಾ ಮಾಡುವುದು ನೀನೆ ನಿಮ್ಮಬ್ಬರನ್ನು ಕೊಂದು ಹಾಕುತ್ತೇನೆ ಎಂಬುದಾಗಿ ಬೆದರಿಕೆ ಹಾಕಿದ್ದು ಒಂದು ಹಾರೆಯನ್ನು ಹಿಡಿದು ಕೊಂಡು ಪಿರ್ಯಾದಿದಾರರ ಕಡೆಗೆ ಬೀಸಿದ್ದು ಅದು ಪಿರ್ಯಾದಿದಾರರ ಎಡ ಕೈಯ ತೊಳಿನ ಬಳಿ ತಾಗಿ ರಕ್ತ ಗಾಯವಾಗಿರುತ್ತದೆ ಹಾಗೂ ತೆಂಗಿನ ಕಾಯಿ ಬಿಸಾಡಿದ್ದು ಅದು ಹಣೆಯ ಬಳಿ ತಾಗಿ ರಕ್ತ ಗಾಯವಾಗಿರುತ್ತದೆ ಪಿರ್ಯಾದಿದಾರರು ಬೇಡವಾದ ವಿಚಾರವನ್ನು ಅವರ ಮನೆಯಲ್ಲಿ ಹೇಳುತ್ತೇನೆಂದು ಪಿರ್ಯಾದಿದಾರರ ಮೇಲೆ ವೈಮನಸ್ಸಿನಿಂದ ಈ ರೀತಿ ಮಾಡಿರುವುದಾಗಿದೆ ಎಂಬುದಾಗಿ ನಿತ್ಯಾನಂದ ಕುಂದರ್‌‌ ಇವರು ನೀಡಿದ ದೂರಿನಂತೆ ಉಡುಪಿ ನಗರ ಠಾಣಾ ಅಪರಾಧ ಕ್ರಮಾಂಕ 277/14 ಕಲಂ 504, 506, 324 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.

ಇತರ ಪ್ರಕರಣ
  • ಕಾಪು: ಪಿರ್ಯಾದುದಾರರಾದ ಶ್ರೀಮತಿ ಹಸೀನ (36), ಗಂಡ ಮುಸ್ತಾಕ್ ಅಹಮದ್, ವಾಸ  ಎನ್‌ಹೆಚ್‌ಆರ್‌ ಮಂಜಿಲ್ ಮಲ್ಲಾರು ಅಣ್ಣನ ಇವರ ಮಗಳು ನೌಶೀನಳಿಗೆ ಬೆಳಪುವಿನ ಆರೋಪಿ ಫರ್ವೇಜ್ ಎಂಬವರೊಂದಿಗೆ ಅಗಸ್ಟ್ 15 ರಂದು ಮದುವೆ ಮಾಡುವ ಬಗ್ಗೆ ಮಾತುಕತೆಯಾಗಿರುತ್ತದೆ. ದಿನಾಂಕ 27.07.2014 ರಂದು ಫರ್ವೇಜ್ ನ ತಾಯಿ ಹಾಗೂ ಫರ್ವೇಜ್‌ನ ತಮ್ಮ ಬೆಳಿಗ್ಗೆ 10:30 ಗಂಟೆಗೆ ಪಿರ್ಯಾದುದಾರರು ವಾಸವಿದ್ದ ಮನೆಗೆ ಬಂದಿದ್ದು ಸಂಜೆ 4:30 ಗಂಟೆಯ ತನಕ ಮನೆಯಲ್ಲಿ ಮದುವೆ ಬಗ್ಗೆ ಮಾತುಕತೆ ನಡೆಸಿ ನೌಶೀನಳ ಜೊತೆಯಲ್ಲಿ ಪ್ರತ್ಯೇಕ ವಾಗಿ ಕರೆದು ಅವಳಲ್ಲಿ ಗುಪ್ತವಾಗಿ ಮಾತನಾಡಿ ಅವರ ಮನೆಯಿಂದ ಹೋಗಿರುತ್ತಾರೆ. ನೌಶೀನಳ ದಿನಾಂಕ 26.07.2014 ರಂದು ರಾತ್ರಿ 11:00 ಗಂಟೆಗೆ ಯಾವುದೋ ವಿಷಯುಕ್ತ ಪದಾರ್ಥ  ಸೇವಿಸಿದ್ದು ಆಕೆಯನ್ನು ಚಿಕಿತ್ಸೆ ಬಗ್ಗೆ ಉಡುಪಿಯ ಮಿತ್ರ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಪರಿಶೀಲಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಯ ಬಗ್ಗೆ  ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ್ದರಿಂದ ಮಂಗಳೂರಿನ ಯುನಿಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು, ಅಲ್ಲಿ ಚಿಕಿತ್ಸೆಯಲ್ಲಿರುತ್ತಾ. ದಿನಾಂಕ 29.07.2014 ರಂದು ಬೆಳಿಗ್ಗೆ 3:50 ಗಂಟೆಗೆ ನೌಶೀನಳು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿದೆ. ಇದಕ್ಕೆ ಕಾರಣವೆನೇಂದರೆ ಫರ್ವೇಜ್‌ ಎಂಬವರು ನೌಶೀನಗೆ ಪೋನ್ ಮಾಡಿ ನನ್ನ ತಂದೆ ತಾಯಿಗೆ ನಿನ್ನನು ಮದುವೆ ಆಗುವುದು ಇಷ್ಟವಿಲ್ಲವೆಂದು ಮದುವೆಯಾಗಲು ನಿರಾಕರಿಸಿದ್ದು ಅಲ್ಲದೆ ಇನ್ನು ಮುಂದಕ್ಕೆ ನೀನು ಪೋನ್‌ ಮಾಡಬಾರದು ನನ್ನನು ಮರೆತು ಬಿಡು ಇದಕ್ಕೆ ತಪ್ಪಿದರೆ ನಿನ್ನನು ಸುಮ್ಮನೆ ಬಿಡುವುದಿಲ್ಲಿ ನಿನ್ನ ಮಾನ ಹರಾಜು ಮಾಡುತ್ತೇನೆ ಎಂಬುದಾಗಿ ತಿಳಿಸಿದ್ದು  ಅಲ್ಲದೆ ಫರ್ವೇಜ್‌ರ ತಂದೆ ಆರೋಪಿ ಅಜ್ಗರ ಕೂಡ ನೌಶೀನಳ ಮೊಬೈಲ್‌ಗೆ ಪೋನ್‌ ಮಾಡಿ ಮದುವೆಯ ವಿಚಾರ ತೆಗೆದರೆ ನಿನ್ನನ್ನು ಕೊಲ್ಲದೇ ಬೀಡುವುದಿಲ್ಲ ಎಂಬುದಾಗಿ ಬೆದರಿಕೆ ಹಾಕಿದ ಕಾರಣ ನೌಶೀನ ಎಂಬವಳು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಗಿರುತ್ತದೆ. ಎಂಬುದಾಗಿ ಶ್ರೀಮತಿ ಹಸೀನ ಇವರು ನೀಡಿದ ದೂರಿನಂತೆ ಕಾಪು ಠಾಣಾ ಅಪರಾಧ ಕ್ರಮಾಂಕ 191/2014 ಕಲಂ 306 ಮತ್ತು 34 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.

No comments: