Tuesday, September 23, 2014

Daily Crime Reports as on 23/09/2014 at 19:30 Hrs

ಅಪಘಾತ ಪ್ರಕರಣ
  • ಕಾಪು: ದಿನಾಂಕ 22/09/2014 ರಂದು ಸಂಜೆ 4:10 ಗಂಟೆಗೆ ಉದ್ಯಾವರ ಗ್ರಾಮದ ಉದ್ಯಾವರ ಹಲಿಮಾ ಸಬ್ಜು  ಹಾಲ್‌ ನ ಎದುರು ರಾ ಹೆ 66ರಲ್ಲಿ ಪಿರ್ಯಾದಿದಾರರಾದ ಸುಧಾಕರ ಶೆಟ್ಟಿಗಾರ್ ತಂದೆ: ದಿ ಸುಬ್ಬಣ್ಣ ಶೆಟ್ಟಿಗಾರ್ ವಾಸ: ಸುರಭಿ ನಿಲಯ ವೇದವ್ಯಾಸ ನಗರ ಉದ್ಯಾವರ ಉಡುಪಿ ತಾಲೂಕು ರವರು ತನ್ನ ಮೋಟರು ಸೈಕಲ್ ನಂಬ್ರ ಕೆ.ಎ 20 ವೈ- 1704ನೆದರಲ್ಲಿ  ಉದ್ಯಾವರ ಕಡೆಗೆ ಹೋಗುತ್ತಿರುವಾಗ ಉಡುಪಿ ಕಡೆಯಿಂದ  ಕೆ.ಎ 20 ಎ-7383ನೆ ಆಟೋರಿಕ್ಷಾ ಚಾಲಕ ರವಿ ಎಂಬಾತನು ತನ್ನ ಆಟೋ ರಿಕ್ಷಾವನ್ನು ನಿರ್ಲಕ್ಷ್ಯತನದಿಂದ ಅಡ್ಡಾದಿಡ್ಡಿಯಾಗಿ ಚಲಾಯಿಸಿ ಪಿರ್ಯಾದಿದಾರರ ಮೊಟಾರು ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು ಅವರ ಎಡಬದಿಯ ತೋಳಿಗೆ ಹಾಗೂ ಎಡಕಾಲಿನ ಮೊಣಗಂಟಿಗೆ ಮತ್ತು  ಎಡಕಾಲಿನ ಹೆಬ್ಬೆರಳಿಗೆ ರಕ್ತ ಬರುವ ಗಾಯವಾಗಿದ್ದು, ಈ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ  ಚಿಕಿತ್ಸೆ ಪಡೆಯುತ್ತಿರುವುದಾಗಿದೆ ಎಂಬುದಾಗಿ ಸುಧಾಕರ ಶೆಟ್ಟಿಗಾರ್ ರವರು ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 189/2014 ಕಲಂ 279, 337 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಕ್ರಮ ಗೋಸಾಗಾಟ ಪ್ರಕರಣ

  • ಕೋಟ: ದಿನಾಂಕ 23/09/2014 ರಂದು ಕೋಟ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಶ್ರೀ ಕಮಲಾಕರ ಆರ್‌ ನಾಯ್ಕ್ ರವರು ಸಿಬ್ಬಂದಿಗಳೊಂದಿಗೆ ಕುಂದಾಪುರ ತಾಲೂಕು ತೆಕ್ಕಟ್ಟೆ ಗ್ರಾಮದ ಜಂಕ್ಷನ್ ಬಳಿ ರಾಹೆ 66 ರಲ್ಲಿ ವಾಹನ ತಪಾಸಣೆ ಮಾಡುತ್ತಿರುವಾ12.15 ಗಂಟೆಗೆ ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಬರುತ್ತಿದ್ದ ಟಾಟಾ ಏಸ್ ಗೂಡ್ಸ್ ವಾಹನ ನಂಬ್ರ ಕೆಎ 20 ಸಿ 3003 ನೇದರಲ್ಲಿ ಆರೋಪಿತರಾದ 1) ನಾರಾಯಣ ನಾಯ್ಕ್‌, ತಂದೆ: ಕುಷ್ಟು ನಾಯ್ದ್‌, ತೆಂಕಬೆಟ್ಟು, ಮುದ್ದುಮನೆ, ಶಿರೂರು, ಉಡುಪಿ  2) ಶ್ರೀಧರ ಪೂಜಾರಿ, ತಂದೆ: ಗೋಪಾಲ ಪೂಜಾರಿ, ನೀರ್ಜೆಡ್ಡು, ಹೆಗ್ಗುಂಜೆ, ಉಡುಪಿ ತಾಲೂಕು ಎಂಬವರು 2 ಕಪ್ಪು ಬಣ್ಣದ ಕೋಣವನ್ನು ಯಾವುದೇ ಪರವಾನಿಗೆ ಇಲ್ಲದೇ ಮೇವು ಬಾಯಾರಿಕೆ ನೀಡದೇ ಹಿಂಸಾತ್ಮಕವಾಗಿ ವಧೆ ಮಾಡುವ ಉದ್ದೇಶಕ್ಕಾಗಿ ಕಸಾಯಿಖಾನೆಗೆ ಸಾಗಾಟ ಮಾಡುತ್ತಿದ್ದುದ್ದನ್ನು ಸಿಬ್ಬಂದಿಯವರ ಸಹಾಯದಿಂದ ದಾಳಿ ನಡೆಸಿ 2 ಕೋಣಗಳು, ಕೆಎ 20 ಸಿ 3003 ನೇ ಟಾಟಾ ಏಸ್ ಗೂಡ್ಸ್ ವಾಹನ ಹಾಗೂ ಇಬ್ಬರು ಆರೋಪಿತರನ್ನು ದಸ್ತಗಿರಿ ಮಾಡಿದ್ದಾಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 196/2014 ಕಲಂ 8,11 ಕರ್ನಾಟಕ ಗೋಹತ್ಯಾ ಮತ್ತು ಗೋಸಂರಕ್ಷಣಾ ಕಾಯ್ದೆ 1964 ಮತ್ತು 11,(1) (ಡಿ) ಪ್ರಾಣಿ ಹಿಂಸೆ ನಿಷೇಧ ಕಾಯ್ದೆ 1960 ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: