Tuesday, September 23, 2014

Daily Crime Reports as on 23/09/2014 at 07:00 Hrs

ಕಳವು ಪ್ರಕರಣ
  • ಉಡುಪಿ: ಪಿರ್ಯಾದಿದಾರರಾದ ಶ್ರೀರಂಗ (18) ತಂದೆ: ದ್ವಾರಕನಾಥ ಅಬಕಾರಿ, ವಿಳಾಸ: ಮನೆ ನಂ 494, 8ನೇ ಕ್ರಾಸ್, ಠಾಶಿ ರೆಸಿಡೆನ್ಸಿ, ಕಡಬಗೆರೆ ಕ್ರಾಸ್, ಮಾಗಿಡ ರೋಡ್ ಬೆಂಗಳೂರು ರವರು ದಿನಾಂಕ 21-09-2014 ರಂದು ಬೆಂಗಳೂರಿನ ಜಾಲಹಳ್ಳಿಯಲ್ಲಿ ಕೆಎಸ್ಆರ್‌‌ಟಿಸಿ ಬಸ್ ನಂ KA 01 F 9344 ನೇದರಲ್ಲಿ ರಾತ್ರಿ 10:25 ಗಂಟೆಗೆ ಉಡುಪಿಗೆ ಹೊರಟಿದ್ದು, ಪಿರ್ಯಾದಿದಾರರು ತನ್ನ 1. HP 440 G2 NOTEBOOK LAPTOP, 2. POWER ADAPTER 3. POWER CABLE 4. SONY HARD DISC 5, YELLOW FILE AND CERTIFICATE, 6, HP BACKPACK WITHMANIPAL SYMBLE ON IT, 7.HP MOUSE, ಗಳನ್ನು ಬಸ್ ನ RACKನಲ್ಲಿ ಇಟ್ಟಿರುತ್ತಾರೆ. ದಿನಾಂಕ 22/09/2014 ರಂದು ಬೆಳಗ್ಗೆ 06:30 ಗಂಟೆಗೆ ಉಡುಪಿ ತಲುಪಿದಾಗ ಪಿರ್ಯಾದಿದಾರರು ಬ್ಯಾಗ್ ತೆಗೆದುಕೊಳ್ಳಲು RACK ನೋಡಿದಾಗ ಪಿರ್ಯಾದಿದಾರರ ಸ್ವತುಗಳು ಬಸ್ಸಿನ RACKನಲ್ಲಿ ಇಲ್ಲದೇ ಇದ್ದುಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದುಕಳವಾದ ಸ್ವತ್ತುಗಳ ಒಟ್ಟು ಮೌಲ್ಯ ಸುಮಾರು 40,000/-ರೂಪಾಯಿಗಳಾಗಿರುತ್ತದೆ ಎಂಬುದಾಗಿ ಶ್ರೀರಂಗ ರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 274/2014 ಕಲಂ 379 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಅಪಘಾತ ಪ್ರಕರಣ
  • ಕಾಪು: ದಿನಾಂಕ 21.09.2014 ರಂದು ಪಿರ್ಯಾದುದಾರರಾದ ಸುಧೀರ್ (26) ತಂದೆ: ಕೃಷ್ಣಮೂರ್ತಿ ವಾಸ: ಕವಿತಾ ನಿಲಯ ಪೊಸಾರ್ ತೋಟ ಕಟಪಾಡಿ ಎಂಬವರು ಯೇಣಗುಡ್ಡೆ ಗ್ರಾಮದ ಸರ್ವಿಸ್‌ ಸ್ಟೇಶನ ಬಳಿ ನಿಂತುಕೊಂಡಿದ್ದಾಗ  ರಾತ್ರಿ 9:30 ಗಂಟೆಗೆ ಆರೋಪಿ ಕೃಷ್ಣಾನಂದ ಎಂಬಾತನು ಕಟಪಾಡಿ ಕಡೆಯಿಂದ ಶಿರ್ವ ಕಡೆಗೆ ತನ್ನ ಕೆಎ 20 ವೈ 5571 ನೇ ಮೋಟಾರ್‌ ಸೈಕಲ್‌ನಲ್ಲಿ ನಿರ್ಲಕ್ಷತನದಿಂದ ಅಡ್ಡಾದಿಡ್ಡಿಯಾಗಿ ಒಮ್ಮೇಲೆ ಬಲಬದಿಗೆ ಬಂದು ಮಣ್ಣು ರಸ್ತೆಯಲ್ಲಿ ನಿಂತುಕೊಂಡಿದ್ದ ಕೃಷ್ಣ ಎಂಬವರಿಗೆ ಡಿಕ್ಕಿ ಹೊಡೆದ ಪರಿಣಾಮ ಕೃಷ್ಣರವರಿಗೆ ಎಡಕಾಲಿನ ಕೋಲು ಕಾಲಿಗೆ ಒಳಗಾಯ ಮತ್ತು ಇತರ ಕಡೆ ತರಚಿದ ಗಾಯವಾಗಿರುತ್ತದೆ. ಹಾಗೂ ಮೋಟಾರ ಸೈಕಲ್‌ ಸವಾರನಿಗೂ ಸಣ್ಣಪುಟ್ಟ ಗಾಯವಾಗಿರುತ್ತದೆ ಎಂಬುದಾಗಿ ಸುಧೀರ್ ರವರು ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 187/2014 ಕಲಂ 279, 337 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: