Monday, September 22, 2014

Daily Crime Reports as on 22/09/2014 at 19:30 Hrs

ಅಪಘಾತ ಪ್ರಕರಣ
  • ಕಾರ್ಕಳ: ದಿನಾಂಕ 20/09/2014 ರಂದು ಬೆಳಿಗ್ಗೆ 7:30 ಗಂಟೆಗೆ ಪಿರ್ಯಾದಿದಾರರಾದ ವಿಧ್ಯಾಧರ (40). ತಂದೆ: ಕುಪ್ಪ ಪೂಜಾರಿ, ವಾಸ: ಕುಂದುಲುಗುಡ್ಡೆ, ದರ್ಖಾಸು ಮನೆ, ಅತ್ತೂರು ನಿಟ್ಟೆಗ್ರಾಮ, ಕಾರ್ಕಳ ತಾಲೂಕು ಎಂಬವರು ತನ್ನ ಬಾವ ಸುಂದರ ಪೂಜಾರಿಯವರ ನಂಬ್ರ KA 20 ED 6978 ನೇ ಆಕ್ಟೀವಾ ಹೋಂಡಾ ಸ್ಕೂಟರ್ ನಲ್ಲಿ ಸಹಸವಾರರಾಗಿ ಸಾಲ್ಮರ ಮಾರ್ಗವಾಗಿ ಕಾರ್ಕಳ ಪೇಟೆಗೆ ಹೋಗುತ್ತಾ ಕಾರ್ಕಳ ಕಸಬಾ ಗ್ರಾಮದ ಕಾರ್ಕಳ ನರ್ಸಿಂಗ್ ಹೋಂ ಎದುರು ತಲುಪುವಾಟೆಂಪೋ ನಂಬ್ರ KA 19 TA 1115 ನೇಯದನ್ನು ಅದರ ಚಾಲಕನು ಅತೀವೇಗ ಮತ್ತು ಅಜಾಗರೂಕತೆಯಿಂದ ಲಾಯಿಸಿಕೊಂಡು ಪಿರ್ಯಾಧಿದಾರರ ವಾಹನವನ್ನು ಹಿಂದಿಕ್ಕಿ ಮಾರ್ಕೇಟಿಗೆ  ಹೋಗುವ ಒಳ ರಸ್ತೆಗೆ ಯಾವುದೇ ಸೂಚನೆ ನೀಡದೇ ಒಮ್ಮೇಲೆ  ಎಡಕ್ಕೆ  ತಿರುಗಿಸಿ ಸ್ಕೂಟರಿನ ಮುಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ  ಪಿರ್ಯಾಧಿದಾರರು ಪ್ರಯಾಣಿಸುತ್ತಿದ್ದ  ಸ್ಕೂಟರ್ ಸಮೇತ ಸವಾರಿಬ್ಬರೂ ರಸ್ತೆಗೆ ಬಿದ್ದು ಸ್ಕೂಟರ್ ಸವಾರ ಸುಂದರ ಪೂಜಾರಿಯವರಿಗೆ ರಕ್ತಗಾಯವಾಗಿರುತ್ತದೆ. ಆರೋಪಿತನು ತನ್ನ ವಾಹನವನ್ನು ನಿಲ್ಲಿಸದೇ ಗಾಯಾಳುವಿಗೆ ಚಿಕಿತ್ಸೆ ಕೊಡಿಸದೇ ಪೊಲೀಸರಿಗೆ ಮಾಹಿತಿ ನೀಡದೇ ಪರಾರಿಯಾಗಿರುತ್ತೇನೆ. ಗಾಯಾಳು ಚಿಕಿತ್ಸೆ ಬಗ್ಗೆ ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾಗಿದೆ ಎಂಬುದಾಗಿ ವಿಧ್ಯಾಧರ ರವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 172/2014 ಕಲಂ 279, 337 ಐ.ಪಿ.ಸಿ ಮತ್ತು 134(ಎ)(ಬಿ) ಮೋಟಾರು ವಾಹನ ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: