Monday, September 22, 2014

Daily Crime Reports as on 22/09/2014 at 17:00 Hrs

ಜುಗಾರಿ ದಾಳಿ ಪ್ರಕರಣ
  • ಹೆಬ್ರಿ: ದಿನಾಂಕ 21.09.14 ರಂದು ಮದ್ಯಾಹ್ನ 2:30 ಗಂಟೆಗೆ ಹೆಬ್ರಿ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಶ್ರೀ ಸೀತಾರಾಮ.ಪಿ ರವರು ಸಿಬ್ಬಂದಿಯವರೊಂದಿಗೆ ನಾಲ್ಕೂರು ಗ್ರಾಮದ ಮುದ್ದೂರುನ ಚಟ್ಟಿಕಟ್ಟೆ ಎಂಬಲ್ಲಿರುವ ಹಾಡಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಂದರ್‌ ಬಾಹರ್‌ ಎಂಬ ಇಸ್ಟೀಟು ಜೂಜಾಟ ಆಟ ಆಡುತ್ತಿದ್ದಲ್ಲಿಗೆ ದಾಳಿ ನಡೆಸಿ ಅಂದರ್‌ ಬಾಹರ್‌ ಇಸ್ಪೀಟು ಜುಗಾರಿ ಆಟದಲ್ಲಿ ನಿರತರಾಗಿದ್ದ ಆರೋಪಿಗಳಾದ  1)ಶೇಖರ ಕುಲಾಲ, 2) ಕೃಷ್ಣ ಕೊಕರ್ಣೆ, 3) ಬಾಬಣ್ಣ ಕೊಕರ್ಣೆ, 4)  ಚಂದ್ರಶೇಖರ ಎಂಬವರನ್ನು ದಸ್ತಗಿರಿ ಮಾಡಿ, ಆರೋಪಿಗಳು ಅಂದರ್‌ ಬಾಹರ್‌ ಇಸ್ಟೀಟು ಜೂಜಾಟಕ್ಕೆ ಉಪಯೋಗಿಸಿದ ನಗದು ರೂಪಾಯಿ 2,750/-ಮತ್ತು ಜುಗಾರಿ ಆಟಕ್ಕೆ ಬಳಸಿದ ಇತರ ಪರಿಕರಗಳನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ದಾಳಿಯ ಸಮಯ ಆರೋಪಿ ರಮೇಶ್ ಪೂಜಾರಿ ಎಂಬಾತನು ತಪ್ಪಿಸಿಕೊಂಡಿರುತ್ತಾನೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 77/2014 ಕಲಂ 87 ಕರ್ನಾಟಕ ಪೊಲೀಸ್ ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಸ್ವಾಭಾವಿಕ ಮರಣ ಪ್ರಕರಣ
  • ಉಡುಪಿ: ಫಿರ್ಯಾದಿದಾರರಾದ ಉದಯ ಶೆಟ್ಟಿ (39) ತಂದೆ: ಸೋಮಯ್ಯ ಶೆಟ್ಟಿ ವಾಸ: ಕೋಟ ಮಣೂರು ಕಾಸಾನುಗುಂದು ಜನ್ನಿ ಮನೆ ಉಡುಪಿ ಎಂಬವರ ಅಕ್ಕನ ಮಗ ಆಶೋಕ ಶೆಟ್ಟಿ (32) ಇವರು 15 ವರ್ಷದಿಂದ ಮನೆ ಬಿಟ್ಟು ಹೋಗಿದ್ದು  ಎಲ್ಲಿರುವವರೆಂದು ತಿಳಿದು ಬಂದಿರುವುದಿಲ್ಲ. ದಿನಾಂಕ 20/09/2014 ರಂದು ಸಂಜೆ 17:30 ಗಂಟೆಗೆ ಪಂಚಾಯತ್‌ ಮೆಂಬರ್‌ ಸುಧಾಕರ ಶೆಟ್ಟಿ ಎಂಬವರಿಗೆ ಪೊಲೀಸ್‌ ಕಂಟ್ರೋಲ್‌‌ ರೂಮ್ ನಿಂದ  ಬಂದ ಮಾಹಿತಿ ಆಧಾರದಲ್ಲಿ ಫಿರ್ಯಾದಿದಾರರ ಅಳಿಯ ಆಶೋಕ ಶೆಟ್ಟಿ ಸಿಟಿ ಬಸ್ಸ್‌‌ ನಿಲ್ದಾಣದಲ್ಲಿ ಬಿದ್ದಿದ್ದವರನ್ನು 108 ವಾಹನದಲ್ಲಿ ಚಿಕಿತ್ಸೆ ಬಗ್ಗೆ ಉಡುಪಿ ಸರಕಾರಿ ಆಸ್ಪತ್ರೆಗೆ ದಾಖಲಿಸಿ ರುವುದಾಗಿ ಸುಧಾಕರ ಶೆಟ್ಟಿಯವರು ಮಾಹಿತಿ ನೀಡಿದ್ದು ಫಿರ್ಯಾದಿದಾರರು ಹೋಗಿ ನೋಡಿದಾಗ ಅಶೋಕ ಶೆಟ್ಟಿಯವರು ತುರ್ತು ಚಿಕಿತ್ಸೆ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ದಿನಾಂಕ: 22/09/2014 ರಂದು 03:10ಗಂಟೆಗೆ ಚಿಕಿತ್ಸೆಗೆ ಸ್ಪಂದಿಸದೇ ಮೃತ ಪಟ್ಟಿರುವುದಾಗಿದೆ ಎಂಬುದಾಗಿ ಅವರ ಆರೋಗ್ಯವನ್ನು ನೋಡಿಕೊಳ್ಳುತ್ತಿದ್ದ ಪ್ರದೀಪ್‌ ರವರು ತಿಳಿಸಿರುತ್ತಾರೆ ಎಂಬುದಾಗಿ ಉದಯ ಶೆಟ್ಟಿ ರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 57/2014 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: