Wednesday, September 17, 2014

Daily Crime Reports as on 17/09/2014 at 07:00 Hrs

ಅನೈತಿಕ ಚಟುವಟಿಕೆ - ಲಾಡ್ಜ್ ಗೆ ದಾಳಿ -  ಆರೋಪಿಗಳ ಬಂಧನ
  • ಮಣಿಪಾಲ: ದಿನಾಂಕ 16/9/2014 ರಂದು ಕಾರ್ಕಳ ಉಪವಿಭಾಗದ ಎ.ಎಸ್.ಪಿ ಶ್ರೀ ಅಣ್ಣಾ ಮಲೈ ಐ.ಪಿ.ಎಸ್ ಇವರಿಗೆ ಸಿಕ್ಕಿದ ಖಚಿತ ಮಾಹಿತಿಯಂತೆ ಮಣಿಪಾಲ ಠಾಣಾ ಪೊಲೀಸ್ ನಿರೀಕ್ಷಕರು ಮತ್ತು ಸಿಬ್ಬಂದಿಯವರೊಂದಿಗೆ 17:25 ಗಂಟೆಗೆ  ಮಣಿಪಾಲ ಈಶ್ವರ ನಗರ ಎಂಬಲ್ಲಿರುವ ಬ್ರಾಡ್ ವೇ ಬೋರ್ಡಿಂಗ್ ಮತ್ತು ಲಾಡ್ಜಿಂಗ್ ಗೆ  ದಾಳಿ ನಡೆಸಿ ಅನೈತಿಕ ವೇಶ್ಯಾವಟಿಕೆ ನಡೆಸುತ್ತಿದ್ದ ಆಪಾದಿತರಾದ 1. ಸಚ್ಚಿನ್‌ @ ಸಂತೋಷ ಕೋಟ್ಯಾನ್‌ (34), ತಂದೆ:ಶ್ಯಾಮ ಪೂಜಾರಿ@ ರವಿ ಕುಮಾರ್‌, ವಾಸ: ರಾಜು ಶೆಟ್ಟಿಯವರ ಬಾಡಿಗೆ ಮನೆ, ಕುಂಜಾಲು, ಬ್ರಹ್ಮಾವರ, ಉಡುಪಿ, 2. ಜಾಫರ್‌ ಸೈಯದ್‌ ಖಾನ್‌‌(39), ತಂದೆ: ಸೈಯದ್‌ಖಾನ್‌, ವಾಸ: ಸ್ವಲಾತ್‌ ಕಾಲನಿ, 3ನೇ ಕ್ರಾಸ್‌, ಭದ್ರಾವತಿ, ಶಿವಮೊಗ್ಗ ಜಿಲ್ಲೆ, 3. ಸಂಶುದ್ದೀನ್‌(39), ತಂದೆ: ಅಬ್ದುಲ್ ಖಾದರ್‌, ವಾಸ: ಆನಂಬಿ ರಸ್ತೆ, ವಾರ್ಡ್‌ ನಂಬ್ರ 23, ನೆಹರುನಗರ, ಸಾಗರ ತಾಲೂಕು, ಶಿವಮೊಗ್ಗ ಜಿಲ್ಲೆ, 4.ಎನ್‌.ವಿ ಕೃಷ್ಣ, ತಂದೆ: ಟಿ.ಕೃಷ್ಣನ್‌, ವಾಸ: ಈಶ್ವರನಗರ, ಮಣಿಪಾಲ, 5. ಭೋಜ, ತಂದೆ: ಮೂಡುರ ದೇವಾಡಿಗ, ವಾಸ: ಪಡುವರಿ, ಯಡ್ತಾರೆ ಗ್ರಾಮ, ಉಡುಪಿ, 6. ಅನಿಲ್‌ ಕುಮಾರ್‌, ತಂದೆ: ಶೀನಪ್ಪ, ವಾಸ: ಜೈಪುರ, ಕೊಪ್ಪ ತಾಲೂಕು, ಚಿಕ್ಕಮಗಳೂರು ಜಿಲ್ಲೆ, 7. ಶ್ರೀರಾಜ್‌, ಈಶ್ವರನಗರ, ಮಣಿಪಾಲ, ಉಡುಪಿ ಎಂಬವರನ್ನು ಹಾಗೂ ಅನೈತಿಕ ವೇಶ್ಯಾವಟಿಕೆಗೆ ಪ್ರೋತ್ಸಾಹ ನೀಡುತ್ತಿದ್ದವರನ್ನು  ದಸ್ತಗಿರಿ ಮಾಡಿ ಇವರಿಂದ ವೇಶ್ಯಾವಟಿಕೆಗೆ ಬಳಸಿರುವ ಮೊಬೈಲ್ ಹಾಗೂ ಮಾರುತಿ ಓಮಿನಿ ವ್ಯಾನ್‌, ನಗದು, ಮೊಬೈಲ್‌ ಹಾಗೂ ಇನ್ನಿತರ ಸ್ವತ್ತುಗಳನ್ನು ಮಹಜರು ಮುಖೇನ ಸ್ವಾಧೀನ ಪಡಿಸಿದ್ದಾಗಿದೆ ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 162/2014 ಕಲಂ 3,4,5A, 5C, 6 ITP ಕಾಯಿದೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
ಅಸ್ವಾಭಾವಿಕ ಮರಣ ಪ್ರಕರಣ
  • ಉಡುಪಿ: ಪಿರ್ಯಾದಿದಾರರಾದ ಸಂಪ್ರೀತ ಕುಮಾರ್ (20) ತಂದೆ ಸಂತೋಷ್ ಶೆಣೈ ವಾಸ: ನೈಲಿಪಾದೆ ಅಲೆವೂರ್ ಉಡುಪಿ ತಾಲೂಕು ಎಂಬವರ ತಂದೆ ತಾಯಿಯವರು ಯಾವುದೋ ಕ್ಷುಲ್ಲಕ ಕಾರಣಕ್ಕೆ ಚರ್ಚೆ ಮಾಡಿಕೊಂಡಿದ್ದು ದಿನಾಂಕ 16-09-2014 ರಂದು ಬೆಳಗಿನ ಜಾವ ಸುಮಾರು 03:00 ಗಂಟೆ ಸಮಯಕ್ಕೆ ಪಿರ್ಯಾದಿದಾರರ ತಂದೆಯವರಿಗೆ  ಮನೆಯ ಬಾಗಿಲು ತೆರೆದ ಶಬ್ದ ಕೇಳಿ ಎದ್ದು ನೋಡುವಾಗ ಪಿರ್ಯಾದಿದಾರರ ತಾಯಿ ವಿಜಯ ಲಕ್ಷ್ಮೀ ಶೆಣೈ (42) ಕಾಣದೇ ಇದ್ದು ಆಸುಪಾಸಿನಲ್ಲಿ ಹುಡುಕಿದರೂ ಕಾಣದೇ ಇದ್ದು. ಈ ಬಗ್ಗೆ ದಿನಾಂಕ 16-09-2014 ರಂದು ಪಿರ್ಯಾದಿದಾರರ ತಾಯಿ ಕಾಣೆಯಾದ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪಿರ್ಯಾದಿದಾರರ ತಂದೆ ದೂರು ನೀಡಿರುತ್ತಾರೆ ದಿನಾಂಕ 16-09-2014 ರಂದು ಸಂಜೆ 5:30 ಗಂಟೆಗೆ ಪಿರ್ಯಾದಿದಾರರ ತಂದೆಗೆ ಯಾರೋ ಸಾವಜನಿಕರು ಫೋನ್ ಮಾಡಿ ಕೆಮ್ತೂರು ಅಣೆಕಟ್ಟಿನ ಬಳಿ ಹೊಳೆಯಲ್ಲಿ ಒಂದು ಮಹಿಳೆಯ ಮೃತ ದೇಹ ಇರುವುದಾಗಿ ತಿಳಿಸಿದ್ದು. ಕೂಡಲೇ ಹೋಗಿ ನೋಡುವಾಗ ಪಿರ್ಯಾದಿದಾರರ ತಾಯಿಯಾದ ವಿಜಯ ಲಕ್ಷ್ಮೀ ಶೆಣೈ ಯವರ ಮೃತದೇಹವಾಗಿರುತ್ತದೆ ಪಿರ್ಯಾದಿದಾರರ ತಾಯಿಯವರು ಯಾವುದೋ ಕ್ಷುಲ್ಲಕ ಕಾರಣಕ್ಕಾಗಿ ಮನನೊಂದು  ಆತ್ಮಹತ್ಯೆ  ಮಾಡಿಕೊಂಡಿರುವುದಾಗಿದೆ ಎಂಬುದಾಗಿ ಸಂಪ್ರೀತ ಕುಮಾರ್ ರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 55/2014 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 

No comments: