Wednesday, September 17, 2014

Daily Crime Reports as on 17/09/2014 at 17:00 Hrsಅಕ್ರಮ ಜಾನುವಾರು ಸಾಗಾಟ ಪ್ರಕರಣ

  • ಶಂಕರನಾರಾಯಣ: ದಿನಾಂಕ 17/09/2014 ರಂದು 03:45 ಗಂಟೆ ಸುಮಾರಿಗೆ ಕುಂದಾಪುರ ತಾಲೂಕಿನ ಹೆಂಗವಳ್ಳಿ ಗ್ರಾಮದ ಗರಡಿ ಬಳಿ ಆರೋಪಿ ಚಂದ್ರ ನಾಯ್ಕ ಮಾಂಸ ಮಾಡಲು ಮಾರಾಟಕ್ಕೆ ಶೇಖರಿಸಿಟ್ಟಿದ್ದ 6 ಹಸುಗಳನ್ನು   KA 47 2076 ನಂಬ್ರದ ಓಮ್ನಿ ಕಾರಿನಲ್ಲಿ ಮೇವು ಬಾಯಾರಿಕೆ ನೀಡದೇ ಹಿಂಸಾತ್ಮಕ ರೀತಿಯಲ್ಲಿ ಕಾಲುಗಳನ್ನು ಹಗ್ಗದಿಂದ ಕಟ್ಟಿ ಮಾಂಸ ಮಾಡುವ ಉದ್ದೇಶದಿಂದ ಅಕ್ರಮವಾಗಿ ಕಸಾಯಿಖಾನೆಗೆ ಎಂ 80 ಮೋಟಾರ್‌ ಸೈಕಲ್‌ನೊಂದಿಗೆ  ಸಾಗಾಟ ಮಾಡುತ್ತಿದ್ದು ಈ ಸಮಯ ಪಿರ್ಯಾದಿ ಯೋಗಿಶ್ ಮಡಿವಾಳ  ಹಾಗೂ ಇತರರು ಹೆಂಗವಳ್ಳಿ ಗರಡಿ ಕ್ರಾಸ ಬಳಿ  ನಿಂತಿರುವುದನ್ನು ನೋಡಿ ಎಂ 80 ಮೋಟಾರ್ ಸೈಕಲ್‌‌ನಲ್ಲಿ ಇದ್ದ ಆರೋಪಿಗಳು ಹಾಗೂ ಮಾರುತಿ  ಕಾರಿನಲ್ಲಿದ್ದ ಆರೋಪಿಗಳು ತಪ್ಪಿಸಿಕೊಂಡು ಓಡಿ ಹೋಗಲು ಪ್ರಯತ್ನಿಸಿ ಮಾರುತಿ ಓಮ್ನಿ ಕಾರನ್ನು ವಾಪಾಸು ರಿವರ್ಸ ತೆಗೆದು ಹಿಂದಕ್ಕೆ ಚಲಾಯಿಸಿದಾಗ ಕಾರು ಮೂಡಬೆಟ್ಟು ನಾರಾಯಣ ಪೂಜಾರಿಯವರ ಮನೆಯ ಹತ್ತಿರ ರಬ್ಬರ್‌ ಪ್ಲಾಂಟೇಶನ್‌ ಬೇಲಿಯ ಕಂಬಕ್ಕೆ  ಡಿಕ್ಕಿ ಹೊಡೆದಿದ್ದು ಇದರಿಂದ   ಕಾರಿನ ಹಿಂಬದಿಯ ಗ್ಲಾಸ್‌ ಜಖಂಗೊಂಡಿರುತ್ತದೆ.ಆರೋಪಿತರಾದ ಚಂದ್ರ ನಾಯ್ಕ ಮತ್ತು ಇತರ 5 ಜನರುಗಳು ಸ್ಥಳದಿಂದ ಪರಾರಿಯಾಗಿರುತ್ತಾರೆ.   ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 139/14ಕಲಂ: 8, 9, 11 KARNATAKA PREVNTION OF COW SLAUGHTER AND CATTLE PREVENTION ACT 1964  ನಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ
  • ಹೆಬ್ರಿ: ಪ್ರಸಾದ್ (35 ವರ್ಷ) ರವರು ವಿಪರೀತ ಮದ್ಯಸೇವನೆ ಮಾಡುವ ಚಟವನ್ನು ಹೊಂದಿದ್ದು ಈ ಕುಡಿತದ ಚಟದಿಂದ ಅವರು ಮಾನಸಿಕವಾಗಿ ಖಿನ್ನತೆಯನ್ನು ಹೊಂದಿ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ: 11/09/14 ರಂದು ಸಂಜೆ 5-30 ಗಂಟೆಗೆ ಉಡುಪಿ ಜಿಲ್ಲೆಯ ಹೆಬ್ರಿ ಸರಕಾರಿ ಶಾಲೆಯ ಮೈದಾನದ ಬಳಿ ಯಾವುದೋ ವಿಷ ಪದಾರ್ಥವನ್ನು ಸೇವಿಸಿ ನರಳುತ್ತಿರುವವರನ್ನು ಚಿಕಿತ್ಸೆಯ ಬಗ್ಗೆ ಮಂಗಳೂರು ಎ.ಜೆ ಅಸ್ಪತ್ರೆಗೆ ದಾಖಲು ಮಾಡಿದ್ದು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೇ ದಿನಾಂಕ: 17/09/14 ರ  ಬೆಳಿಗ್ಗೆ 07:45  ಗಂಟೆಯ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ಕ್ರಮಾಂಕ: 23/14 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: