Tuesday, September 16, 2014

Daily Crime Reports as on 16/09/2014 at 07:00 Hrs

ಅಪಘಾತ ಪ್ರಕರಣಗಳು
  • ಶಂಕರನಾರಾಯಣ: ದಿನಾಂಕ 14/09/2014 ರಂದು 15:00 ಗಂಟೆಗೆ ಕುಂದಾಪುರ ತಾಲೂಕು ಬೆಳ್ವೆ ಗ್ರಾಮದ ಗೋಳಿಯಂಗಡಿ ಪೇಟೆ ಎಂಬಲ್ಲಿ ಆರೋಪಿಯು ಕೆಎ 20 ಡಿ9635 ನಂಬ್ರದ ಮೋಟಾರು ಸೈಕಲ್‌ನ್ನು ಬೆಳ್ವೆ ರಸ್ತೆ ಕಡೆಯಿಂದ ಅತೀ ವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಸ್ಥಳದಲ್ಲಿ ರಸ್ತೆ ದಾಟಲು ರಸ್ತೆಯ ಅಂಚಿನಲ್ಲಿ ನಿಂತಿದ್ದ ಪಿರ್ಯಾದಿದಾರರಾದ ಬೆಳ್ಳಿ ಬಾಯಿ (68) ಗಂಡ ಮಲ್ಲು ನಾಯ್ಕ ವಾಸ ಕೆರಾಡಿ, ಹೆಂಗವಳ್ಳಿ ಗ್ರಾಮ, ಕುಂದಾಪುರ ತಾಲೂಕು  ಎಂಬವರಿಗೆ  ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು, ಹಣೆಗೆ ಎಡ ಮತ್ತು ಬಲಕಣ್ಣಿನ ಕೆಳಗೆ, ತುಟಿಗೆ, ಎದೆಗೆ ರಕ್ತಗಾಯವಾಗಿದ್ದು ಬಲಕೈ ಹೆಬ್ಬೆರಳಿಗೆ ಮತ್ತು ಬಲಕಾಲಿನ ಮೊಣಗಂಟಿಗೆ ಗಾಯವಾಗಿರುತ್ತದೆ ಎಂಬುದಾಗಿ ಬೆಳ್ಳಿ ಬಾಯಿ ರವರು ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 138/2014 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಕೋಟ: ದಿನಾಂಕ 14/09/2014 ರಂದು  11:30 ಗಂಟೆಗೆ ಪಿರ್ಯಾದಿದಾರರಾದ ಅಹಮ್ಮದ್ (51) ತಂದೆ: ದಿವಂಗತ ಇಬ್ರಾಹಿಂ, ವಾಸ: ಕೊಳಗೇರಿ ಅಚಲಾಡಿ ಗ್ರಾಮ, ಉಡುಪಿ ತಾಲೂಕು ರವರು ಉಡುಪಿ ತಾಲೂಕು ಅಚಲಾಡಿ ಗ್ರಾಮದ  ಮಾನಂಬಳ್ಳಿ ಕ್ರಾಸ್ ಹತ್ತಿರ ಆನಂದ ಕುಂದರ್‌ರವರ ರಬ್ಬರ್ ಪ್ಲಾಂಟ್ ಹತ್ತಿರ ರಸ್ತೆಯ ಎಡ ಬದಿಯಲ್ಲಿ ನೆಡೆದು ಕೊಂಡು ಹೋಗುತ್ತಿರುವಾಗ ಕೋಟ ಮೂರು ಕೈ ಕಡೆಯಿಂದ ಸ್ಯಾಬ್ರಕಟ್ಟೆ ಕಡೆಗೆ ಆರೋಪಿಯು ಮೋಟಾರ್ ಸೈಕಲ್‌ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಕೊಂಡು ರಸ್ತೆಯ ತೀರ ಎಡ ಭಾಗಕ್ಕೆ  ಚಲಾಯಿಸಿ ಪಿರ್ಯಾಧಿದಾರರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾಧಿದಾರರು  ರಸ್ತೆ ಮೇಲೆ ಬಿದ್ದು ರಕ್ತ ಗಾಯಗೊಂಡು ಚಿಕಿತ್ಸೆ ಬಗ್ಗೆ ಉಡುಪಿ ಸಿಟಿ ಆಸ್ಪತ್ರೆಗೆ ದಾಖಲುಗೊಂಡಿದ್ದು ಡಿಕ್ಕಿ ಹೊಡೆದ ಮೋಟಾರ್ ಸೈಕಲ್ ನಂಬ್ರ ಹಾಗೂ  ಮೋಟಾರ್ ಸೈಕಲ್ ಸವಾರನ ಹೆಸರು ತಿಳಿದು ಬಂದಿರುವುದಿಲ್ಲ  ಎಂಬುದಾಗಿ ಅಹಮ್ಮದ್ ರವರು ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 195/2014 ಕಲಂ 279, 338 ಐಪಿಸಿ & 134 (ಎ), ಬಿ) ಮೋಟಾರು ವಾಹನ ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 

No comments: