Tuesday, September 16, 2014

Daily Crime Reports as on 16/09/2014 at 17:00 Hrsಹಲ್ಲೆ ಪ್ರಕರಣ
ಗಂಗೊಳ್ಳಿ : ಪಿರ್ಯಾದಿ ಐವನ್ ಗೊನ್ಸಾಲ್ವಿಸ್ ರವರು ಅಪಾದಿತ ರಾಘವೇಂದ್ರ ಎಂಬವರಿಂದ ಸುಮಾರು ಮೂರು ತಿಂಗಳ ಹಿಂದೆ ಕೈ ಸಾಲ ತೆಗೆದು ಕೊಂಡಿದ್ದು ಅದನ್ನು ಪಾವತಿಸಲು ಬಾಕಿ ಉಳಿದಿದ್ದು, ಸದ್ರಿ ಹಣವನ್ನು ಕೂಡಲೇ ಪಾವತಿಸುವಂತೆ ಅಪಾದಿತನು ಪಿರ್ಯಾದಿದಾರರಿಗೆ ಒತ್ತಾಯಿಸುತ್ತಿದ್ದು ಪಿರ್ಯಾದಿದಾರರು ಹಣವನ್ನು ಹಿಂದಕ್ಕೆ ಪಾವತಿಸದೇ ಇರುವ ಕಾರಣ ಅದೇ ದ್ವೇಷದಲ್ಲಿ ದಿನಾಂಕ: 16.09.2014 ರಂದು ಬೆಳಿಗ್ಗೆ 08:00 ಗಂಟೆಗೆ ಅಪಾದಿತ ರಾಘವೇಂದ್ರ ಇವರು ಎಕಾಏಕಿ ಮರವಂತೆಯಲ್ಲಿರುವ  ಪಿರ್ಯದಿದಾರರ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ಪಿರ್ಯಾದಿದಾರರಿಗೆ ಅವಾಚ್ಯ ಶಬ್ದದಿಂದ ಬೈದು ಇಲ್ಲಿಯೇ  ಕೊಂದು ಮುಗಿಸುವುದಾಗಿ ಹೇಳಿ ಪಿರ್ಯಾದಿದಾರರ ಕುತ್ತಿಗೆಯನ್ನು ಹಿಡಿದು ಕೊಂಡು ಕೈಯಿಂದ ಕೆನ್ನೆಗೆ ಹೊಡೆದಿರುತ್ತಾರೆ ಎಂಬಿತ್ಯಾದಿ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 168/14 ಕಲಂ: 448, 323, 504,506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: